ಎಎಪಿ ಸಂಸದೆ ಸ್ವಾತಿ ಮಲಿವಾಲ್ ಮೇಲೆ ಹಲ್ಲೆ ನಡೆದ ಪ್ರಕರಣದಲ್ಲಿ ಅವರಿಗೆ ನ್ಯಾಯ ಸಿಗುವಂತೆ ನೋಡಿಕೊಳ್ಳಿ ಎಂದು ನಿರ್ಭಯಾ ಪ್ರಕರಣ ಎಂದೇ ಕರೆಯಲಾಗುವ 2012ರ ದೆಹಲಿಯ ಸಾಮೂಹಿಕ ಅತ್ಯಾಚಾರ ಸಂತ್ರಸ್ತೆಯ ತಾಯಿ ಆಶಾ ದೇವಿ ಅವರು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಮನವಿ ಮಾಡಿದ್ದಾರೆ.
ಸುದ್ದಿ ಸಂಸ್ಥೆ ಐಎಎನ್‌ಎಸ್‌ನೊಂದಿಗೆ ಮಾತನಾಡಿದ ಆಶಾದೇವಿ ಅವರು, “ದೆಹಲಿಯ ಮಹಿಳಾ ಆಯೋಗದ ಮಾಜಿ ಮುಖ್ಯಸ್ಥರಾಗಿ ಎಎಪಿ ನಾಯಕಿ ಮಹಿಳೆಯರ ಮೇಲಿನ ದೌರ್ಜನ್ಯದ ವಿರುದ್ಧ ಹೋರಾಡಿದ್ದಾರೆ. ಕೇಜ್ರಿವಾಲ್ ಆರೋಪಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದನ್ನು ಖಚಿತಪಡಿಸಿಕೊಳ್ಳಬೇಕು” ಎಂದು ಹೇಳಿದ್ದಾರೆ.
निर्भया की माता जी ने देश में इंसाफ़ की लंबी लड़ाई लड़ी है। जब मैं बच्चों के रेपिस्ट को सज़ा दिलाने के लिए अनशन कर रही थी, तब भी उन्होंने मेरा साथ दिया था।
आज उन्होंने मेरे समर्थन में ये वीडियो बनाई तो दिल बड़ा भावुक हुआ।
पर कोई बड़ी बात नहीं, अभी कुछ नेता मेरा समर्थन करने के… pic.twitter.com/yal14Mp7Ai
— Swati Maliwal (@SwatiJaiHind) May 23, 2024
“ನಿರ್ಭಯಾ ಪ್ರಕರಣದಲ್ಲಿ ಜನರ ಕೋಪ ಮತ್ತು ಆಕ್ರೋಶದಿಂದಾಗಿಯೇ ದೆಹಲಿಯಲ್ಲಿ ಎಎಪಿ ಅಧಿಕಾರಕ್ಕೆ ಬಂದಿದೆ. ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ಸುರಕ್ಷಿತವಾಗಿಲ್ಲದಿದ್ದರೆ, ಸಾಮಾನ್ಯ ಮಹಿಳೆಯರ ಸ್ಥಿತಿ ಏನು” ಎಂದು ಪ್ರಶ್ನಿಸಿದರು.
ಇದನ್ನು ಓದಿದ್ದೀರಾ? ಸಿಸೋಡಿಯಾ ಇಲ್ಲಿ ಇದ್ದಿದ್ದರೆ ನನಗೆ ಈ ರೀತಿ ಆಗುತ್ತಿರಲಿಲ್ಲ: ಸ್ವಾತಿ ಮಲಿವಾಲ್
ಇನ್ನು ಈ ವಿಡಿಯೋವನ್ನು ಟ್ವೀಟ್ ಮಾಡಿರುವ ಸ್ವಾತಿ ಮಲಿವಾಲ್, “ನಿರ್ಭಯಾ ತಾಯಿ ದೇಶದಲ್ಲಿ ನ್ಯಾಯಕ್ಕಾಗಿ ಸುದೀರ್ಘ ಹೋರಾಟ ನಡೆಸಿದ್ದಾರೆ. ಮಕ್ಕಳ ಅತ್ಯಾಚಾರಿಗಳನ್ನು ಶಿಕ್ಷಿಸಲು ಆಗ್ರಹಿಸಿ ನಾನು ಉಪವಾಸ ಮಾಡುತ್ತಿದ್ದಾಗಲೂ ಅವರು ನನ್ನನ್ನು ಬೆಂಬಲಿಸಿದರು” ಎಂದು ಹೇಳಿದ್ದಾರೆ.
“ಇಂದು ಅವರು ನನ್ನನ್ನು ಬೆಂಬಲಿಸಿ ಈ ವಿಡಿಯೋ ಮಾಡಿರುವುದು ನೋಡಿ ನಾನು ತುಂಬಾ ಭಾವುಕನಾಗಿದ್ದೇನೆ. ಆದರೆ ಅದೇನು ದೊಡ್ಡ ವಿಷಯವಲ್ಲ, ಈಗ ಕೆಲವು ನಾಯಕರು ನನ್ನನ್ನು ಬೆಂಬಲಿಸಿದಕ್ಕೆ ಅವರನ್ನು ಬಿಜೆಪಿ ಏಜೆಂಟ್ ಎಂದು ಕರೆಯುತ್ತಾರೆ” ಎಂದಿದ್ದಾರೆ.