ಸಂಸತ್ತಿನಲ್ಲಿ ಪ್ರಶ್ನೆಗಳನ್ನು ಕೇಳಲು ಲಂಚ ಪಡೆದ ಆರೋಪಕ್ಕೆ ಸಂಬಂಧಿಸಿದಂತೆ ಟಿಎಂಸಿ ರಾಜ್ಯಸಭೆ ಸದಸ್ಯೆ ಮಹುವಾ ಮೊಯಿತ್ರಾ ಅವರನ್ನು ಲೋಕಸಭೆ ಸದಸ್ಯತ್ವದಿಂದ ಉಚ್ಚಾಟಿಸುವಂತೆ ಲೋಕಸಭೆ ನೈತಿಕ ಸಮಿತಿಯು ಶಿಫಾರಸು ಮಾಡಿರುವುದಾಗಿ ಅದಾನಿ ಮಾಲೀಕತ್ವದ ‘ಎನ್‌ಡಿಟಿವಿ’ ವರದಿ ಮಾಡಿದೆ.
500 ಪುಟಗಳ ಈ ವರದಿಯನ್ನು ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಸಲ್ಲಿಸಲಾಗುತ್ತದೆ. ಚರ್ಚೆಯ ಬಳಿಕ ಪೂರಕ ಕ್ರಮ ತೆಗೆದುಕೊಳ್ಳಲಾಗುತ್ತದೆ. ಮೊಯಿತ್ರಾ ಅವರು ಮತ್ತೆ ಗುರುವಾರ ಸಮಿತಿ ಮುಂದೆ ಹಾಜರಾಗುವ ನಿರೀಕ್ಷೆ ಇದೆ.
ಲೋಕಸಭೆ ನೈತಿಕ ಸಮಿತಿ ಶಿಫಾರಸು ವಿಚಾರಕ್ಕೆ ಸಂಬಂಧಿಸಿ ಟ್ವೀಟ್ ಮಾಡಿರುವ ಸಂಸದೆ ಮಹುವಾ ಮೊಯಿತ್ರಾ, ಲೋಕಸಭೆಗೆ ಅನೈತಿಕ ಸಮಿತಿಯು ಶಿಫಾರಸು ವರದಿ ಸಲ್ಲಿಸುವ ಮುನ್ನವೇ ಅದಾನಿ ಮಾಲೀಕತ್ವದ ‘ಎನ್‌ಡಿಟಿವಿ’ಗೆ ಈ ವರದಿಯ ಪ್ರತಿ ಸಿಕ್ಕಿರುವುದನ್ನು ನೋಡುವಾಗ ಖುಷಿಯಾಗುತ್ತದೆ. ಮೋದಿ-ಅದಾನಿ ಭಾಯ್-ಭಾಯ್, ಎಲ್ಲ ಸಂಸ್ಥೆಗಳು ಬೈ-ಬೈ’ ಎಂದು ಆಕ್ರೋಶ ಹೊರಹಾಕಿದ್ದಾರೆ.
Have not received any replies from my previous letter to Hon’ble @loksabhaspeaker but am placing this on record anyway. pic.twitter.com/StZ23qf9AK
— Mahua Moitra (@MahuaMoitra) November 9, 2023
ಈ ನಡುವೆ ಅದಾನಿ ಮಾಲೀಕತ್ವದ ಎನ್‌ಡಿಟಿವಿಗೆ ನೈತಿಕ ಸಮಿತಿಯ ಶಿಫಾರಸು ವರದಿಯ ಕರಡು ಪ್ರತಿಯಲ್ಲಿರುವ ಅಂಶಗಳು ಹೇಗೆ ತಿಳಿಯಿತು ಎಂಬುದರ ಬಗ್ಗೆ ಉತ್ತರ ನೀಡುವಂತೆ ಸಂಸದೆ ಮಹುವಾ ಮೊಯಿತ್ರಾ, ಲೋಕಸಭಾ ಸ್ಫೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿರುವುದಾಗಿ ತಿಳಿಸಿದ್ದಾರೆ.
Glad to see Adani TV has a copy of Unethical Standing Committee Report BEFORE it is placed before Committee tomorrow.
Just like Lok Pal referrals announced via the hired helpModi Adani Bhai Bhai
Sabh Institutions Bye Bye pic.twitter.com/JMigoZKCOc— Mahua Moitra (@MahuaMoitra) November 8, 2023
‘ಕರಡು ಪತ್ರಿಯಲ್ಲಿನ ಅಂಶಗಳು ಹೇಗೆ ಎನ್‌ಡಿಟಿವಿಗೆ ಸಿಕ್ಕಿತು. ಈ ಬಗ್ಗೆ ಲೋಕಸಭಾ ಸ್ಫೀಕರ್ ಓಂ ಬಿರ್ಲಾ ಅವರಿಂದ ಈವರೆಗೆ ನನಗೆ ಯಾವುದೇ ಉತ್ತರ ಬಂದಿಲ್ಲ ಎಂದು ಕೂಡ ‘ಎಕ್ಸ್’ನಲ್ಲಿ ಪತ್ರದ ಪ್ರತಿಯನ್ನು ಹಂಚಿಕೊಂಡು ತಿಳಿಸಿದ್ದಾರೆ.
ಬಿಜೆಪಿ ಸಂಸದ ನಿಶಿಕಾಂತ್ ದುಬೆ ಟ್ವೀಟ್ ಬೆನ್ನಲ್ಲೇ ಉಚ್ಚಾಟನೆ ಬೆಳವಣಿಗೆ
ಬಿಜೆಪಿ ಸಂಸದ ನಿಶಿಕಾಂತ್ ದುಬೆ ಟ್ವೀಟ್ ಮಾಡಿದ ಬೆನ್ನಲ್ಲೇ ಸಂಸದೆ ಮಹುವಾ ಮೊಯಿತ್ರಾ ಉಚ್ಚಾಟಿಸುವ ವಿಚಾರವು ಹೊರಗೆ ಬಂದಿದೆ.
‘ಮಹುವಾ ಮೊಯಿತ್ರಾ ವಿರುದ್ಧದ ತನಿಖೆಯನ್ನು ಲೋಕಪಾಲ ಸಂಸ್ಥೆಯು ಸಿಬಿಐಗೆ ಶಿಫಾರಸು ಮಾಡಿದೆ,” ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಬುಧವಾರ ‘ಎಕ್ಸ್’ನಲ್ಲಿ ಪೋಸ್ಟ್ ಮಾಹಿತಿ ಹಂಚಿಕೊಂಡ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಆದರೆ, ಮೊಯಿತ್ರಾ ವಿಚಾರದಲ್ಲಿ ಲೋಕಪಾಲ ಸಂಸ್ಥೆಯಾಗಲೀ, ಸಿಬಿಐನಿಂದಾಗಲೀ ಯಾವುದೇ ಅಧಿಕೃತ ಹೇಳಿಕೆಗಳು ಹೊರಬಿದ್ದಿಲ್ಲ.
लोकपाल ने आज मेरे कम्प्लेन पर आरोपी सांसद महुआ जी के राष्ट्रीय सुरक्षा को गिरवी रखकर भ्रष्टाचार करने पर CBI inquiry का आदेश दिया
— Dr Nishikant Dubey (@nishikant_dubey) November 8, 2023
ನಿಶಿಕಾಂತ್ ದುಬೆಯ ಪೋಸ್ಟ್‌ನ ಬೆನ್ನಲ್ಲೇ ಟ್ವೀಟ್ ಮಾಡಿದ್ದ ಸಂಸದೆ ಮಹುವಾ ಮೊಯಿತ್ರಾ, ‘ನನಗೆ ಕರೆ ಮಾಡುವ ಮಾಧ್ಯಮಗಳಿಗೆ ನನ್ನ ಉತ್ತರ 13,000 ಕೋಟಿ ರೂ. ಅದಾನಿ ಕಲ್ಲಿದ್ದಲು ಹಗರಣದ ಕುರಿತು ಸಿಬಿಐ ಮೊದಲು ಎಫ್‌ಐಆರ್ ದಾಖಲಿಸಬೇಕಾಗಿದೆ. ಕೇಂದ್ರ ಗೃಹ ಇಲಾಖೆಯ ಕ್ಲಿಯರೆನ್ಸ್‌ನೊಂದಿಗೆ ಭಾರತೀಯ ಬಂದರು ಮತ್ತು ವಿಮಾನ ನಿಲ್ದಾಣಗಳನ್ನು ಖರೀದಿಸುವ ಅದಾನಿ ಸಂಸ್ಥೆಗಳು ಎಫ್‌ಪಿಐ ಮಾಲೀಕತ್ವವನ್ನು ಹೇಗೆ ಹೊಂದಿದ್ದವು ಎಂಬುದು ರಾಷ್ಟ್ರೀಯ ಭದ್ರತಾ ಸಮಸ್ಯೆಯಾಗಿದೆ. ನನ್ನ ಶೂಗಳನ್ನು ಎಣಿಸಲು ಸಿಬಿಐಗೆ ಸ್ವಾಗತ” ಎಂದು ಛೇಡಿಸಿದ್ದರು.
ಸಂಸತ್ತಿನಲ್ಲಿ ಕೈಗಾರಿಕೋದ್ಯಮಿ ಗೌತಮ್ ಅದಾನಿ ವಿರುದ್ಧ ಪ್ರಶ್ನೆಗಳನ್ನು ಕೇಳುವುದಕ್ಕೆ ಬದಲಾಗಿ ಉದ್ಯಮಿ ದರ್ಶನ್ ಹಿರಾನಂದನಿ ಅವರಿಂದ ನಗದು ಮತ್ತು ಉಡುಗೊರೆಗಳ ರೂಪದಲ್ಲಿ ಮೊಯಿತ್ರಾ ಲಂಚ ಪಡೆದಿದ್ದಾರೆ ಎಂದು ಬಿಜೆಪಿ ಸಂಸ ದುಬೆ ಆರೋಪಿಸಿದ್ದರು.
What next for #MahuaMoitra after panel files its report in #CashForQueryCase? @Vasudha156 reports pic.twitter.com/aeLCfyurtm
— NDTV (@ndtv) November 9, 2023
ಪ್ರಶ್ನೆಗಳನ್ನು ಅಪ್ಲೋಡ್ ಮಾಡಲು ಮೊಯಿತ್ರಾ ಅವರ ಲೋಕಸಭೆ ಖಾತೆಗೆ ದುಬೈನಿಂದ ಲಾಗ್ ಇನ್ ಆಗಿರುವುದಾಗಿ ಹಿರಾನಂದನಿ ಅಫಿಡವಿಟ್‌ನಲ್ಲಿ ಹೇಳಿಕೊಂಡಿದ್ದಾರೆ. ಆದರೆ, ಲಂಚದ ಆರೋಪವನ್ನು ಟಿಎಂಸಿ ಸಂಸದೆ ನಿರಾಕರಿಸಿದ್ದರು. ಸಂಸತ್ತಿನ ಲಾಗಿನ್ ಮತ್ತು ಪಾಸ್‌ವರ್ಡ್ ವಿವರಗಳನ್ನು ಸ್ನೇಹಿತ ಮತ್ತು ಉದ್ಯಮಿ ದರ್ಶನ್ ಹಿರಾನಂದನಿಗೆ ನೀಡಿದ್ದಾಗಿ ನಂತರ ಒಪ್ಪಿಕೊಂಡಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ದಿನಗಳ ಹಿಂದಷ್ಟೇ ಲೋಕಸಭೆಯ ನೈತಿಕ ಸಮಿತಿಯ ಮುಂದೆ ಮೊಯಿತ್ರಾ ವಿಚಾರಣೆಗೆ ಹಾಜರಾಗಿದ್ದರು. ಉದ್ಯಮಿ ದರ್ಶನ್ ಹಿರಾನಂದನಿ ಅವರೊಂದಿಗೆ ಸಂಸತ್ತಿನ ಲಾಗಿನ್ ವಿವರಗಳನ್ನು ಹಂಚಿಕೊಳ್ಳುವಾಗ ತಾನು ಯಾವುದೇ ಸಂಸದೀಯ ನಿಯಮಗಳನ್ನು ಉಲ್ಲಂಘಿಸಿಲ್ಲ ಎಂದು ಸಮಿತಿಗೆ ಮೊಯಿತ್ರಾ ತಿಳಿಸಿದ್ದರು. ಈ ನಡುವೆ ವಿಚಾರಣೆಯಿಂದ ಅರ್ಧದಲ್ಲೇ ಹೊರನಡೆದಿದ್ದ ಸಂಸದೆ, ತೀರಾ ವೈಯಕ್ತಿಕ ಹಾಗೂ ಕೊಳಕು ಪ್ರಶ್ನೆಗಳನ್ನು ಕೇಳಿದ್ದರು ಎಂದು ಬಹಿರಂಗವಾಗಿ ಆರೋಪಿಸಿದ್ದರು.