ಉತ್ತರಾಖಂಡದ ಕಾನ್ಪುರ ಶಾಸಕ ಉಮೇಶ್ ಕುಮಾರ್ ಅವರ ಅಧಿಕೃತ ನಿವಾಸದೆಡೆ ಮಾಜಿ ಬಿಜೆಪಿ ಶಾಸಕ ಕುನ್ವರ್ ಪ್ರಣವ್ ಸಿಂಗ್ ಚಾಂಪಿಯನ್ ಗುಂಡು ಹಾರಿಸಿದ್ದು ಸದ್ಯ ಕುನ್ವರ್ ಅನ್ನು ಬಂಧಿಸಲಾಗಿದೆ. ಹಾಲಿ ಶಾಸಕ ಮತ್ತು ಮಾಜಿ ಶಾಸಕನ ನಡೆದಿದ್ದು, ದಿಡೀರ್ ಆಗಿ ಕುನ್ವರ್ ಗುಂಡು ಹಾರಿಸಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಕಾನ್ಪುರ ಶಾಸಕರ ಕಚೇರಿಗೆ ಮಾಜಿ ಶಾಸಕರು ತಮ್ಮ ಬೆಂಬಲಿಗರೊಂದಿಗೆ ಆಗಮಿಸುತ್ತಿರುವುದನ್ನು ತೋರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ವಿಡಿಯೋದಲ್ಲಿ ಕುನ್ವರ್ ಹಲವು ಸುತ್ತು ಗುಂಡು ಹಾರಿಸುತ್ತಿರುವುದನ್ನು ಮತ್ತು ಅಲ್ಲಿದ್ದ ಸಿಬ್ಬಂದಿಯನ್ನು ಥಳಿಸುತ್ತಿರುವುದನ್ನು ಕಾಣಬಹುದು.
ಇದನ್ನು ಓದಿದ್ದೀರಾ? ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಅತ್ಯಾಚಾರ, ಹನಿಟ್ರ್ಯಾಪ್ ಆರೋಪ ಸಾಬೀತು: ಆರೋಪಪಟ್ಟಿ ಸಲ್ಲಿಕೆ
ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಹಾಲಿ ಶಾಸಕ, “ನಿನ್ನೆ ನಡೆದ ನಾಗರಿಕ ಚುನಾವಣೆಯಲ್ಲಿ ಸೋತ ನಂತರ, ಮಾಜಿ ಬಿಜೆಪಿ ಶಾಸಕ ಪ್ರಣವ್ ಸಿಂಗ್ ಚಾಂಪಿಯನ್ ಇಂದು ನನ್ನ ಅಧಿಕೃತ ನಿವಾಸದ ಮೇಲೆ ಡಜನ್‌ಗಟ್ಟಲೆ ಜನರೊಂದಿಗೆ ಶಸ್ತ್ರಾಸ್ತ್ರಗಳನ್ನು ತಂದು ನೂರಾರು ಸುತ್ತು ಗುಂಡು ಹಾರಿಸಿದರು” ಎಂದು ಬರೆದುಕೊಂಡಿದ್ದಾರೆ. ಇನ್ನು ಉಮೇಶ್ ಕುಮಾರ್ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿದ್ದಾರೆ.
कल निकाय चुनाव में औंधे मुंह हारने के बाद आज मेरे सरकरी आवास पर भाजपा के पूर्व विधायक प्रणव सिंह चैंपियन ने हथियारबंद बदमाशों के साथ दर्जनों हथियारों से चलायी कई सौ राउंड गोलियां।@AmitShah जी @PMOIndia @narendramodi @JPNadda @aajtak @ZeeNews @ndtv @IndiaToday @AmarUjalaNews… pic.twitter.com/NW3faBbn5z
— Umesh Kumar (@Umeshnni) January 26, 2025
ಇನ್ನು ಕುನ್ವರ್ ಗುಂಡು ಹಾರಿಸುತ್ತಿದ್ದಂತೆ ಶಾಸಕ ಉಮೇಶ್ ಕುಮಾರ್ ತಮ್ಮ ಪಿಸ್ತೂಲ್ ತೆಗೆದುಕೊಂಡು ಗುಂಡು ಹಾರಿಸಲು ಹೋಗಿದ್ದು, ಪೊಲೀಸರು ತಡೆದಿದ್ದಾರೆ. ಸದ್ಯ ಪೊಲೀಸರು ಪ್ರಣವ್ ಸಿಂಗ್ ಚಾಂಪಿಯನ್ ಅವರನ್ನು ವಶಕ್ಕೆ ಪಡೆದಿದ್ದಾರೆ. ಈ ನಡುವೆ ಕುಮಾರ್ ವಿರುದ್ಧ ಪ್ರಣವ್ ಪತ್ನಿ ದೂರು ದಾಖಲಿಸಿದ್ದು, ತನ್ನ ಪತಿಗೆ ಬೆದರಿಕೆ ಹಾಕಿದ್ದಾರೆ. ಮಕ್ಕಳ ಮೇಲೆ ಆಯುಧ ಬೀಸಿದ್ದಾರೆ ಎಂದು ಆರೋಪಿಸಿದ್ದಾರೆ.
यह हैं खानपुर विधायक उमेश कुमार हाथ में बंदूक लेकर मुंह में मां बहन की गालियों से सुशोभित, जिन लोगों ने जनता का कल्याण करना था वे फेसबुक लड़ाई से लेकर सड़कों पर बंदूक लिए फिर रहे हैं। ये दशक उत्तराखंड का दशक है। गिरफ्तार करो इन दोनों को ताकि जनता शांतिपूर्वक रहे https://t.co/QvO7dT9wws pic.twitter.com/1GUpx57gep
— Uttarakhandi (@UttarakhandGo) January 26, 2025
“ಹಾಲಿ ಶಾಸಕ ಮತ್ತು ಮಾಜಿ ಶಾಸಕರ ವಿರುದ್ಧ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ” ಎಂದು ಹರಿದ್ವಾರದ ಎಸ್‌ಎಸ್‌ಪಿ ಪ್ರಮೋದ್ ದೋಬಲ್ ಇಂದು ಬೆಳಿಗ್ಗೆ ವೀಡಿಯೊದಲ್ಲಿ ತಿಳಿಸಿದ್ದಾರೆ. ಹಾಗೆಯೇ ಇಬ್ಬರ ಪಿಸ್ತೂಲ್ ರವಾನಗಿಗಳನ್ನು ರದ್ದುಗೊಳಿಸಲಾಗುವುದು ಎಂದು ತಿಳಿಸಿದ್ದಾರೆ. ಇಬ್ಬರನ್ನು ಕೂಡಾ ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
विधायक विवाद प्रकरण में पुलिस कार्यवाही पर SSP हरिद्वार श्री प्रमेन्द्र डोबाल की बाइट।
— Uttarakhand Police (@uttarakhandcops) January 27, 2025
🔘 मौजूदा व पूर्व विधायकों के खिलाफ विभिन्न धाराओं में मुकदमे दर्ज
🔘 सुरक्षा में दिए गए गनर होंगे वापस
🔘 दोनों पक्षों के असलहाधारियों के लाइसेंस होंगे निरस्त@haridwarpolice pic.twitter.com/KZEqlptDUg
