ಕೇರಳದ ಮಾಜಿ ಸಚಿವ ಎಂ ಎ ಬೇಬಿ ಅವರನ್ನು ತಮಿಳುನಾಡಿನ ಮದುರೈನಲ್ಲಿ ನಡೆಯುತ್ತಿರುವ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) 24ನೇ ಅಖಿಲ ಭಾರತ ಮಹಾ ಅಧಿವೇಶನದಲ್ಲಿ ಸಿಪಿಐಎಂ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಗಿದೆ.
ಇನ್ನು ಕೆಲವು ಸಿಪಿಐಎಂ ನಾಯಕರು ಅಖಿಲ ಭಾರತ ಕಿಸಾನ್ ಸಭಾ (ಎಐಕೆಎಸ್) ಅಧ್ಯಕ್ಷ ಅಶೋಕ್ ಧಾವಳೆ ಅವರಿಗೆ ಬೆಂಬಲ ಸೂಚಿಸಿದ್ದರು ಎಂದು ವರದಿಯಾಗಿದೆ.
ಇದನ್ನು ಓದಿದ್ದೀರಾ? ಕ್ರೈಸ್ತ ಸಮುದಾಯದ ಮೇಲೆ ಬಿಜೆಪಿಯ ಪ್ರಭಾವ ಹೆಚ್ಚಳ; ತುರ್ತು ಕ್ರಮ ಅಗತ್ಯ: ಸಿಪಿಐಎಂ
1954ರಲ್ಲಿ ಕೇರಳದ ಪ್ರಾಕುಲಂನಲ್ಲಿ ಪಿ.ಎಂ. ಅಲೆಕ್ಸಾಂಡರ್ ಮತ್ತು ಲಿಲ್ಲಿ ಅಲೆಕ್ಸಾಂಡರ್ ದಂಪತಿಗೆ ಜನಿಸಿದ ಬೇಬಿ ಅವರು, ತಮ್ಮ ಶಾಲಾ ದಿನಗಳಲ್ಲಿ ಭಾರತ ವಿದ್ಯಾರ್ಥಿ ಫೆಡರೇಶನ್ನ (ಎಸ್ಎಫ್ಐ) ಕೇರಳ ವಿದ್ಯಾರ್ಥಿ ಫೆಡರೇಶನ್ಗೆ ಸೇರಿದ್ದರು. ಬಳಿಕ ಸಿಪಿಐಎಂ ಸೇರಿದ್ದಾರೆ.
ಅವರು 1986ರಿಂದ 1998ರವರೆಗೆ ರಾಜ್ಯಸಭೆಯ ಸದಸ್ಯರಾಗಿದ್ದರು. ಬೇಬಿ 2012ರಿಂದ ಸಿಪಿಐಎಂನ ಪಾಲಿಟ್ಬ್ಯೂರೋ ಸದಸ್ಯರಾಗಿದ್ದಾರೆ.
ಕಳೆದ ವರ್ಷ ಸೀತಾರಾಮ್ ಯೆಚೂರಿ ಅವರ ನಿಧನದ ನಂತರ ಸಿಪಿಐಎಂ ಪ್ರಧಾನ ಕಾರ್ಯದರ್ಶಿ ಹುದ್ದೆ ಖಾಲಿಯಾಗಿದೆ. ನಂತರ ಪ್ರಕಾಶ್ ಕಾರಟ್ ಮಧ್ಯಂತರ ಪ್ರಧಾನ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡಿದ್ದರು.
ಇದೀಗ ತಮಿಳುನಾಡಿನ ಮದುರೈನಲ್ಲಿ ನಡೆದ ಸಿಪಿಐಎಂನ 24ನೇ ಕಾಂಗ್ರೆಸ್ನಲ್ಲಿ (ಮಹಾ ಅಧಿವೇಶನ) ಬೇಬಿ ಅವರನ್ನು ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಗಿದೆ. ಏಪ್ರಿಲ್ 2ರಂದು ಮಹಾ ಅಧಿವೇಶನ ಆರಂಭವಾಗಿದ್ದು, ಭಾನುವಾರ (ಏಪ್ರಿಲ್ 6) ಕೊನೆಯಾಗಲಿದೆ.
