ಅಮೆರಿಕದ ಚಿಕಾಗೋ ಸಮೀಪ ಮುಸ್ಲಿಂ ಎಂಬ ಕಾರಣಕ್ಕೆ ಮನೆಯ ಮಾಲೀಕನಿಂದಲೇ 26 ಬಾರಿ ಚಾಕು ಇರಿತಕ್ಕೊಳಗಾಗಿ ಮೃತಪಟ್ಟಿದ್ದ ಪ್ಯಾಲೆಸ್ತೀನ್ ಮೂಲದ ಮುಸ್ಲಿಂ ಬಾಲಕನ ಅಂತ್ಯಕ್ರಿಯೆಯು ಭಾರೀ ಜನಸ್ತೋಮದೊಂದಿಗೆ ನೆರವೇರಿತು.
ಚಿಕಾಗೋದಿಂದ 65 ಕಿಮೀ ದೂರದಲ್ಲಿರುವ ಇಲಿನಾಯ್ಸ್ ಪ್ರದೇಶದ ಮಸೀದಿಯೊಂದರಲ್ಲಿ ಆರು ವರ್ಷದ ಪ್ಯಾಲೆಸ್ತೀನಿಯನ್ ಮೂಲದ ಅಮೆರಿಕನ್ ಬಾಲಕ ವಾದಿಯಾ ಅಲ್ ಫಯೋಮಿ ಅಂತ್ಯಕ್ರಿಯೆ ನೆರವೇರಿತು.
ಕಳೆದ ಶನಿವಾರದಂದು ಬಾಲಕ ಮತ್ತು ಆತನ 32 ವರ್ಷದ ತಾಯಿ ವಾಸಿಸುತ್ತಿದ್ದ ಮನೆಯ ಮಾಲೀಕ, 71 ವರ್ಷದ ಜೋಸೆಫ್ ಝೂಬಾ ಎಂಬುವವನ ಅಮಾನವೀಯ ಕೃತ್ಯಕ್ಕೆ ಬಾಲಕ ಫಯೋಮಿ ಮೃತಪಟ್ಟರೆ, 12 ಬಾರಿ ಇರಿತಕ್ಕೊಳಗಾಗಿರುವ ತಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಘಟನೆಯು ಇಸ್ರೇಲ್-ಹಮಾಸ್ ನಡುವಿನ ಸಂಘರ್ಷದ ನಡುವೆಯೇ ನಡೆದಿದ್ದು, ಇಡೀ ಜಗತ್ತಿನ ಗಮನ ಸೆಳೆದಿತ್ತು.
ಬಾಲಕನ ಅಂತ್ಯಕ್ರಿಯೆಯ ಮಾಹಿತಿ ಪಡೆದ ಸ್ಥಳೀಯರು ಹಾಗೂ ಅಮೆರಿಕದಲ್ಲಿ ನೆಲೆಸಿರುವ ಪ್ಯಾಲೆಸ್ತೀನ್ ಸಹಿತ ವಿವಿಧ ದೇಶಗಳ ನೂರಾರು ನಿರಾಶ್ರಿತರು ಬಾಲಕನ ಅಂತಿಮ ದರ್ಶನಕ್ಕೆ ಆಗಮಿಸಿ, ಇಲಿನಾಯ್ಸ್ ಪ್ರದೇಶದ ಬ್ರಿಡ್ಜ್ವ್ಯೂನಲ್ಲಿರುವ ಮಸೀದಿಯಲ್ಲಿ ಅಂತಿಮ ನಮಾಝ್ ನೆರವೇರಿಸಿದರು. ಅಂತ್ಯಕ್ರಿಯೆಯಲ್ಲಿ ನೆರೆದಿದ್ದವರ ಕಣ್ಣಾಲಿಗಳು ತುಂಬಿಕೊಂಡಿತ್ತು.
ಇದನ್ನು ಓದಿದ್ದೀರಾ? ಅಮೆರಿಕದಲ್ಲಿ ಆಘಾತಕಾರಿ ಘಟನೆ: ಆರು ವರ್ಷದ ಪ್ಯಾಲೆಸ್ತೀನ್ ಮೂಲದ ಬಾಲಕನಿಗೆ 26 ಬಾರಿ ಇರಿದು ಕೊಲೆ
ಇದೇ ವೇಳೆ ಬಾಲಕನ ಮೃತದೇಹದ ಪೆಟ್ಟಿಗೆಯ ಮೇಲೆ ಪ್ಯಾಲೆಸ್ತೀನ್ ಧ್ವಜವನ್ನು ಹಾಸಲಾಗಿತ್ತು. ನೆರೆದಿದ್ದ ಹಲವರು ‘ಫ್ರೀ ಪ್ಯಾಲೆಸ್ತೀನ್’ ಎಂದು ಘೋಷಣೆ ಕೂಗಿದರು.
ಈ ವೇಳೆ ನೆರೆದಿದ್ದವರನ್ನುದ್ದೇಶಿಸಿ ಮಾತನಾಡಿದ ಬಾಲಕನ ಚಿಕ್ಕಪ್ಪ ಯೂಸೆಫ್ ಹ್ಯಾನನ್, “ನಾವು ಪ್ರಾಣಿಗಳಲ್ಲ, ನಾವು ಮನುಷ್ಯರು. ಜನರು ನಮ್ಮನ್ನು ಮನುಷ್ಯರಂತೆ ನೋಡಬೇಕು. ನಮ್ಮೊಂದಿಗೆ ಮನುಷ್ಯರಂತೆಯೇ ವ್ಯವಹರಿಸಬೇಕು ಎಂದು ನಾವು ಬಯಸುತ್ತೇವೆ” ಎಂದು ಕಣ್ಣೀರಿಡುತ್ತಾ ಹೇಳಿದರು.
‘ಈ ಘಟನೆಯಿಂದ ನಾನು ಆಘಾತಕ್ಕೊಳಗಾಗಿದ್ದೇನೆ. ಆತ ಎಲ್ಲರ ಪ್ರೀತಿಯ ಹುಡುಗನಾಗಿದ್ದ. ನಾವು ನಮ್ಮ ಮಕ್ಕಳ ಬಗ್ಗೆ ಚಿಂತಿತರಾಗಿದ್ದೇವೆ. ಈಗ ಪ್ಯಾಲೆಸ್ತೀನ್ನಲ್ಲಿರುವ, ಗಾಝಾದಲ್ಲಿರುವ ಮಕ್ಕಳ ಬಗ್ಗೆಯೂ ಹೆಚ್ಚು ಚಿಂತಿತನಾಗಿದ್ದೇನೆ’ ಎಂದು ಮಸೀದಿಯ ಬಳಿ ವಾಸಿಸುವ ಸಾದಿಯಾ ನವಾಬ್ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ತಿಳಿಸಿದ್ದಾರೆ.
ಬಾಲಕ ವಾದಿಯಾ ಅಲ್ ಫಯೋಮಿ
ಚಿಕಿತ್ಸೆಗಾಗಿ ಹಣ ಸಂಗ್ರಹ : ಜೋಸೆಫ್ ಝೂಬಾನಿಂದ ಇರಿತಕ್ಕೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮೃತ ಬಾಲಕನ ತಾಯಿಯ ಆಸ್ಪತ್ರೆಯ ಚಿಕಿತ್ಸೆಯ ವೆಚ್ಚವನ್ನು ಭರಿಸಲು ಕೆಲವು ಸ್ಥಳೀಯ ಸಾಮಾಜಿಕ ಸಂಘಟನೆಗಳು ಮುಂದಾಗಿದ್ದು, ನೆರವು ನೀಡುವಂತೆ ಅಮೆರಿಕನ್ನರನ್ನು ಕೋರಿದೆ.
ಆರೋಪಿಗೆ ನ್ಯಾಯಾಂಗ ಬಂಧನ: ಇದೇ ವೇಳೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕನನ್ನು ಕೊಲೆಗೈದಿರುವ 71 ವರ್ಷದ ಆರೋಪಿ, ಮನೆ ಮಾಲೀಕ ಜೋಸೆಫ್ ಝೂಬಾನನ್ನು ಕೌಂಟಿ ಶೆರೀಫ್ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ವರದಿಯಾಗಿದೆ.
He killed baby so please I recvest yangh in pyblicle
He killed baby so please I recvest America yangh in pyblicle