ಆಫ್ರಿಕನ್​ ಒಕ್ಕೂಟ ಸೇರ್ಪಡೆಯೊಂದಿಗೆ ಜಿ20 ಇನ್ನು ಮುಂದೆ ಜಿ21

Date:

Advertisements

ಆಫ್ರಿಕನ್ ಒಕ್ಕೂಟ (ಎಯು) ಜಿ20 ಭಾಗವಾಗಿದ್ದು, ಇನ್ನು ಮುಂದೆ ಈ ಗುಂಪು ಜಿ21 ಆಗಲಿದೆ. ಶನಿವಾರ (ಸೆಪ್ಟೆಂಬರ್ 9) ದೆಹಲಿಯಲ್ಲಿ ಜಿ20 ಶೃಂಗಸಭೆಯ ಆರಂಭದಲ್ಲಿಯೇ ಪ್ರಧಾನಿ ನರೇಂದ್ರ ಮೋದಿ ಒಕ್ಕೂಟದ ಸೇರ್ಪಡೆಯನ್ನು ಅಧಿಕೃತವಾಗಿ ಘೋಷಿಸಿದ್ದಾರೆ.

ಶೃಂಗಸಭೆಯಲ್ಲಿ ಕೊಮೊರೊಸ್‌ನ ಅಧ್ಯಕ್ಷ ಅಜಲಿ ಅಸ್ಸೌಮಾನಿ ಭಾಗವಹಿಸಿದ್ದಾರೆ. ಆಫ್ರಿಕನ್ ಒಕ್ಕೂಟ ಅಧಿಕೃತವಾಗಿ ಜಿ 20ಗೆ ಸೇರ್ಪಡೆಯಾಗುವ ಮೂಲಕ ಇನ್ನು ಮುಂದೆ ಜಿ21 ಎಂದು ಮರುನಾಮಕರಣವಾಗಲಿದೆ.

ಆಫ್ರಿಕನ್ ಒಕ್ಕೂಟ 55 ರಾಷ್ಟ್ರಗಳನ್ನು ಒಳಗೊಂಡಿದೆ. ಜಿ20 ರಾಷ್ಟ್ರಗಳಲ್ಲಿ ಆಫ್ರಿಕನ್ ಒಕ್ಕೂಟ ಸೇರ್ಪಡೆಯು ಮಹತ್ವದ ಮೈಲಿಗಲ್ಲನ್ನು ಗುರುತಿಸುತ್ತದೆ. ಇದು ಐರೋಪ್ಯ ಒಕ್ಕೂಟವನ್ನು ಅನುಸರಿಸಿ ಜಿ20 ಯೊಳಗಿನ ರಾಷ್ಟ್ರಗಳ ಎರಡನೇ ದೊಡ್ಡ ಗುಂಪು ಇದಾಗಿದೆ.

Advertisements

ಈ ಸುದ್ದಿ ಓದಿದ್ದೀರಾ? ಭಾರತ, ಟರ್ಕಿಯಲ್ಲಿ ನಕಲಿ ಯಕೃತ್ತಿನ ಔಷಧಿ ಮಾರಾಟ: ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ

ಕೊಮೊರೊಸ್ ವೆನಿಲ್ಲಾ ದ್ವೀಪಗಳ ಭಾಗವಾಗಿದೆ. ಹಿಂದೂ ಮಹಾಸಾಗರದ ವ್ಯಾಪ್ತಿಯಲ್ಲಿ ಭಾರತಕ್ಕೆ ಬಹಳ ಅಗತ್ಯವಾದ ದ್ವೀಪಗಳಾಗಿವೆ. ವೆನಿಲ್ಲಾ ದ್ವೀಪಗಳು, 2010 ರಲ್ಲಿ ಕೈಜೋಡಿಸಿದ ಆರು ದೇಶಗಳ ಗುಂಪು ನೈಋತ್ಯ ಹಿಂದೂ ಮಹಾಸಾಗರದಲ್ಲಿ ನೆಲೆಗೊಂಡಿದೆ. ಕೊಮೊರೊಸ್, ಮಾರಿಷಸ್, ಮಯೊಟ್ಟೆ, ಸೀಶೆಲ್ಸ್, ಮಡಗಾಸ್ಕರ್ ಮತ್ತು ರಿಯೂನಿಯನ್.

ಆಫ್ರಿಕಾ ಒಕ್ಕೂಟ ಜಿ20 ಕ್ಕೆ ಸೇರ್ಪಡೆ ಬಗ್ಗೆ ಈ ವಾರದ ಆರಂಭದಲ್ಲಿ, ಜಿ20 ರಾಷ್ಟ್ರಗಳ ಪ್ರಮುಖ ನಾಯಕರು ಮೂರು ದಿನಗಳ ಕಾಲ ನಿರ್ಣಾಯಕ ಸಭೆಯನ್ನು ನಡೆಸಿದರು. ಈ ಸಮಯದಲ್ಲಿ ಸದಸ್ಯ ರಾಷ್ಟ್ರಗಳು ಆಫ್ರಿಕನ್ ಒಕ್ಕೂಟವನ್ನು ಒಪ್ಪಿಕೊಳ್ಳುವ ಬಗ್ಗೆ ಒಮ್ಮತಕ್ಕೆ ಬಂದವು.

ಆಫ್ರಿಕನ್ ಒಕ್ಕೂಟ ರಾಷ್ಟ್ರಗಳು ಒಟ್ಟಾರೆಯಾಗಿ ಸುಮಾರು 2.26 ಟ್ರಿಲಿಯನ್ ಅಮೆರಿಕನ್ ಡಾಲರ್ ಜಿಡಿಪಿಯನ್ನು ಹೊಂದಿವೆ. ಇದು ಆಫ್ರಿಕನ್‌ ಒಕ್ಕೂಟವನ್ನು ವಿಶ್ವದ 11ನೇ ಅತಿದೊಡ್ಡ ಆರ್ಥಿಕತೆಯಾಗಿ ಇರಿಸುತ್ತದೆ. ಜಿ20 ನಲ್ಲಿ ಎಯು ಸೇರ್ಪಡೆಗೆ ಬೆಂಬಲವನ್ನು ಈಗಾಗಲೇ ಬಾಲಿ ಶೃಂಗಸಭೆಯಲ್ಲಿ ರಷ್ಯಾ ಮತ್ತು ಅಮೆರಿಕ ದೇಶಗಳು ಬೆಂಬಲಿಸಿದ್ದವು.

ಜಿ20 ಶೃಂಗಸಭೆಯ ಮೊದಲ ದಿನ ಕಾರ್ಯಕ್ರಮದ (ಸೆ.09) ವೇಳಾಪಟ್ಟಿ

ಬೆಳಗ್ಗೆ– 9.30: ವಿದೇಶಿ ಅತಿಥಿಗಳು ಭಾರತ ಮಂಟಪಕ್ಕೆ ಆಗಮನ. ಎಲ್ಲ ಅತಿಥಿಗಳ ಸ್ವಾಗತ

ಬೆಳಗ್ಗೆ– 10.00: ಪ್ರಧಾನಿ ಮೋದಿ ಅವರೊಂದಿಗೆ ಗ್ರೂಪ್ ಫೋಟೊ

ಬೆಳಗ್ಗೆ– 10.30: ‘ಒಂದು ಭೂಮಿ’ ಸಮ್ಮೇಳನದ ಮೊದಲ ಅಧಿವೇಶನ

ಮಧ್ಯಾಹ್ನ– 1.30: ಊಟದ ವಿರಾಮ

ಮಧ್ಯಾಹ್ನ–3.00: ‘ಒಂದು ಕುಟುಂಬ’ ಸಮ್ಮೇಳನದ ಎರಡನೇ ಅಧಿವೇಶನ

ಸಂಜೆ – 4.45: ಒಂದು ಕುಟುಂಬ ಎರಡನೇ ಅಧಿವೇಶನ ಮುಕ್ತಾಯ

ಸಂಜೆ –7.00: ಎಲ್ಲ ನಾಯಕರು ರಾತ್ರಿಯ ಭೋಜನಕ್ಕೆ ಆಗಮನ

ರಾತ್ರಿ – 8.00: ನಾಯಕರ ಔಪಚಾರಿಕ ಚರ್ಚೆ

ರಾತ್ರಿ –9.45: ಅತಿಥಿ ನಾಯಕರು ತಮ್ಮ ವಾಸ್ತವ್ಯದ ಹೊಟೇಲ್‌ಗಳಿಗೆ ತೆರಳಲಿದ್ದಾರೆ

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

ಅಯೋಧ್ಯೆ | ಆಸ್ಪತ್ರೆಗೆ ದಾಖಲಿಸಲು ನಿರಾಕರಣೆ, ತಂದೆಯ ತೋಳಿನಲ್ಲಿ ಮೃತಪಟ್ಟ ಬಾಲಕ

ತೀವ್ರವಾಗಿ ಅಸ್ಪಸ್ಥಗೊಂಡಿದ್ದ ತನ್ನ 12 ವರ್ಷದ ಪುತ್ರನನ್ನು ಸರ್ಕಾರಿ ಆಸ್ಪತ್ರೆಗೆ ಕರೆ...

ಹಿಂಸಾಚಾರ ಪ್ರಕರಣ: ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್‌ಗೆ ಜಾಮೀನು

ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ಇಮ್ರಾನ್ ಖಾನ್‌ಗೆ ಮೇ 9, 2023ರ ಹಿಂಸಾಚಾರ...

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

Download Eedina App Android / iOS

X