ಮುಂಬೈನಲ್ಲಿ ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಮತ್ತು ಎನ್‌ಸಿಪಿ (ಎಸ್‌ಪಿ) ಅಧ್ಯಕ್ಷ ಶರದ್ ಪವಾರ್ ಅವರನ್ನು ಶುಕ್ರವಾರ ಭೇಟಿಯಾದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ‘ಆಟ ಆರಂಭವಾಗಿದೆ, ಅದು ಮುಂದುವರಿಯುತ್ತದೆ” ಎಂದು ಹೇಳಿದ್ದಾರೆ.
ಇಂಡಿಯಾ ಒಕ್ಕೂಟದ ಇಬ್ಬರು ಪ್ರಮುಖ ನಾಯಕರುಗಳನ್ನು ಭೇಟಿಯಾದ ಬಳಿಕ ಠಾಕ್ರೆ ಜೊತೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ, “ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಸ್ಥಿರವಾಗಿಲ್ಲ ಮತ್ತು ಅದರ ಅವಧಿಯನ್ನು ಪೂರ್ಣಗೊಳಿಸದಿರಬಹುದು” ಎಂದು ಅಭಿಪ್ರಾಯಿಸಿದರು.
“ಈ ಸರ್ಕಾರ ಮುಂದುವರೆಯದಿರಬಹುದು. ಇದು ಸ್ಥಿರ ಸರ್ಕಾರವಲ್ಲ. ನಮ್ಮ ಆಟ ಆರಂಭವಾಗಿದೆ. ಅದು ಮುಂದುವರಿಯಲಿದೆ” ಎಂದು ತಿಳಿಸಿದರು.
“ಇಂಡಿಯಾ ಒಕ್ಕೂಟವು ತುಂಬಾ ಪ್ರಬಲವಾಗಿದೆ. ವಿವಿಧತೆಯಲ್ಲಿ ಏಕತೆ ಎಂಬ ನಮ್ಮ ನಿಲುವು ಬಹಳ ಸ್ಪಷ್ಟವಾಗಿದೆ” ಎಂದ ಬ್ಯಾನರ್ಜಿ, “ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದೆ. ಕಡಿಮೆ ಅಂತರದಲ್ಲಿ ಹಲವಾರು ಸ್ಥಾನಗಳನ್ನು ಗೆದ್ದಿದೆ” ಎಂದು ಆರೋಪಿಸಿದರು.
ಇದನ್ನು ಓದಿದ್ದೀರಾ? ವಿಶ್ವಾಸಾರ್ಹತೆಯನ್ನು ಕಳೆದುಕೊಂಡ ಮೋದಿ ರಾಜೀನಾಮೆ ನೀಡಬೇಕು: ಮಮತಾ ಬ್ಯಾನರ್ಜಿ
“ಮುಂಬೈನಲ್ಲಿಯೂ ಬಿಜೆಪಿ ಅಧಿಕಾರವನ್ನು ದುರುಪಯೋಗ ಮಾಡಿದೆ. ಬಿಜೆಪಿಯ ಮೈತ್ರಿ ಅಭ್ಯರ್ಥಿ ಬರೀ 48 ಮತಗಳ ಅಂತರದಲ್ಲಿ ಗೆದ್ದಿದ್ದಾರೆ” ಎಂದು ಅನುಮಾನ ವ್ಯಕ್ತಪಡಿಸಿದರು.
1975ರಲ್ಲಿ ತುರ್ತು ಪರಿಸ್ಥಿತಿಯನ್ನು ವಿಧಿಸಿದ ದಿನವಾದ ಜೂನ್ 25 ಅನ್ನು ‘ಸಂವಿಧಾನ ಹತ್ಯೆ ದಿವಸ’ವಾಗಿ ಆಚರಿಸಲು ಕೇಂದ್ರ ಘೋಷಣೆ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಮತಾ, “ತುರ್ತು ಪರಿಸ್ಥಿತಿಯ ಸಂದರ್ಭಗಳು ಪ್ರಧಾನಿ ನರೇಂದ್ರ ಮೋದಿಯವರ ಅಧಿಕಾರಾವಧಿಯಲ್ಲಿ ಹೆಚ್ಚಾಗಿ ಕಂಡುಬಂದಿದೆ” ಎಂದು ಹೇಳಿದರು.
“ನಾವು ತುರ್ತು ಪರಿಸ್ಥಿತಿಯನ್ನು ಬೆಂಬಲಿಸುವುದಿಲ್ಲ. ಅವರು (ಇಂದಿರಾ ಗಾಂಧಿ) ಕನಿಷ್ಠ ಅದನ್ನು ಘೋಷಿಸಿದರು. ಆದರೆ ಮೋದಿ ಆಡಳಿತದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ. ಇನ್ನು ಅಂತಹ ಯಾವುದೇ ನಿರ್ಧಾರ ಕೈಗೊಳ್ಳುವಾಗ ಆಡಳಿತ ಪಕ್ಷವು ವಿಪಕ್ಷಗಳನ್ನು ಸಂಪರ್ಕಿಸಬೇಕು. ಆದರೆ ಬಿಜೆಪಿ ಏಕಪಕ್ಷೀಯ ನಿರ್ಧಾರವನ್ನು ತೆಗೆದುಕೊಳ್ಳುತ್ತಿದೆ” ಎಂದರು.
After meeting with Uddhav Thackeray, Bengal CM Mamata Banerjee warns that the NDA government’s foundation is shaky & its collapse is imminent. Her words echo the sentiments of a nation tired of the BJP’s divisiveness & incompetence.
Watch the historic press conference of… pic.twitter.com/Ep2kbf0i69
— Nilanjan Das (@NilanjanDasAITC) July 12, 2024