ಹರಿಯಾಣದ ಬಿಜೆಪಿ ಅಧ್ಯಕ್ಷ ಮೋಹನ್ ಲಾಲ್ ಬಡೋಲಿ, ಬಿಜೆಪಿ ವಿಶೇಷ ಪ್ರಚಾರ ಘಟಕದ ಮಾಜಿ ನಿರ್ದೇಶಕ, ಗಾಯಕ ರಾಕಿ ಮಿತ್ತಲ್ ಅಲಿಯಾಸ್ ಜೈ ಭಗವಾನ್ ವಿರುದ್ಧ ಸಾಮೂಹಿಕ ಅತ್ಯಾಚಾರ ಮತ್ತು ಬೆದರಿಕೆ ಪ್ರಕರಣ ದಾಖಲಾಗಿದೆ. ಇಬ್ಬರ ವಿರುದ್ಧವೂ ಹಿಮಾಚಲ ಪ್ರದೇಶ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ನಟಿಯೊಬ್ಬರು ಹಿಮಾಚಲ ಪ್ರದೇಶದ ಕಸೌಲಿ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ. ಕಳೆದ ವರ್ಷ ಆರೋಪಿಗಳು ತನ್ನ ಮೇಲೆ ಕಸೌಲಿಯಲ್ಲಿ ಸಾಮೂಹಿಕ ಅತ್ಯಾಚಾರ ಎಸಗಿದ್ದು, ಕೊಲೆ ಬೆದರಿಕೆ ಹಾಕಿದ್ದರು ಎಂದು ಸಂತ್ರಸ್ತ ನಟಿ ಅರೋಪಿಸಿದ್ದಾರೆ. ಅವರ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ.
ಪೊಲೀಸರ ಪ್ರಕಾರ, 2024ರ ಜುಲೈ 3ರಂದು ಘಟನೆ ನಡೆದಿದೆ. ಬಿಜೆಪಿ ಅಧ್ಯಕ್ಷ ಬಡೋಲಿ ಮತ್ತು ಗಾಯಕ ಮಿತ್ತಲ್ ಕಸೌಲಿಯಲ್ಲಿರುವ ಪ್ರವಾಸೋದ್ಯಮ ಇಲಾಖೆಯ ರೋಸ್ ಕಾಮನ್ ಹೋಟೆಲ್‌ನಲ್ಲಿ ನಟಿಯ ಮೇಲೆ ಕೃತ್ಯ ಎಸಗಿದ್ದಾರೆ. ಮಿತ್ತ್ ನಿರ್ದೇಶಿಸುತ್ತಿದ್ದ ಹಾಡಿಗೆ ಸಂತ್ರಸ್ತ ನಟಿಯನ್ನು ನೃತ್ಯ ಮಾಡಲು ಕೇಳಲಾಗಿತ್ತು. ಆ ಬಗ್ಗೆ ಚರ್ಚಿಸಲು ಹೋಟೆಲ್‌ಗೆ ಕರೆಸಿಕೊಂಡು ಅತ್ಯಾಚಾರ ಎಸಗಿದ್ದಾರೆ.
2024ರ ಡಿಸೆಂಬರ್ 23ರಂದು ಸಂತ್ರಸ್ತ ನಟಿ ಪೊಲೀಸರಿಗೆ ದೂರು ನೀಡಿದ್ದಾರೆ. “ಬಡೋಲಿ ಮತ್ತು ಮಿತ್ತಲ್ ತಮಗೆ ಮದ್ಯ ಸೇವಿಸುವಂತೆ ಒತ್ತಾಯಿಸಿ ಕಿರುಕುಳ ನೀಡಲು ಆರಂಭಿಸಿದರು. ನಾನು ಆಕ್ಷೇಪ ವ್ಯಕ್ತಪಡಿಸಿದೆ. ನಿರಾಕರಿಸಿದರೆ ನನ್ನ ಸ್ನೇಹಿತನಿಗೆ ಅನಾಹುತ ಮಾಡುವುದಾಗಿ ಬೆದರಿಕೆ ಹಾಕಿದರು. ತಾವು ಹೇಳಿದಂತೆ ಕೇಳದಿದ್ದರೆ ಕೊಲ್ಲುವುದಾಗಿಯೂ ಬೆದರಿಕೆ ಹಾಕಿದರು. ಇಬ್ಬರೂ ಸರದಿಯಲ್ಲಿ ತನ್ನ ಮೇಲೆ ಅತ್ಯಾಚಾರ ಎಸಗಿದರು. ಅತ್ಯಾಚಾರ ಕೃತ್ಯವನ್ನು ಆರೋಪಿಗಳು ವಿಡಿಯೋ ಮಾಡಿಕೊಂಡಿದ್ದಾರೆ” ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.
“ಎರಡು ತಿಂಗಳ ಹಿಂದೆ ಪಂಚಕುಲದಲ್ಲಿರುವ ಮಿತ್ತಲ್ ಅವರ ನಿವಾಕ್ಕೆ ಕರೆಸಿಕೊಂಡು ನಮ್ಮನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸುವುದಾಗಿ ಆರೋಪಿಗಳು ಬೆದರಿಕೆ ಹಾಕಿದ್ದಾರೆ” ಎಂದು ಸಂತ್ರಸ್ತೆ ತಿಳಿಸಿದ್ದಾರೆ.
ಸಂತ್ರಸ್ತೆಯ ದೂರಿನ ಆಧಾರದ ಮೇಲೆ, ಬಡೋಲಿ ಮತ್ತು ಮಿತ್ತಲ್ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 376 ಡಿ (ಸಾಮೂಹಿಕ ಅತ್ಯಾಚಾರ) ಮತ್ತು 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈವರೆಗೆ ಯಾರನ್ನೂ ಬಂಧಿಸಲಾಗಿಲ್ಲ. ತನಿಖೆ ನಡೆಯುತ್ತಿದೆ. ಸಂತ್ರಸ್ತೆಯ ಹೇಳಿಕೆಯನ್ನು ದಾಖಲಿಸಿಕೊಳ್ಳುವುದು ಬಾಕಿ ಇದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆರೋಪವನ್ನು ಬಡೋಲಿ ಮತ್ತು ಮಿತ್ತಲ್ ನಿರಾಕರಿಸಿದ್ದಾರೆ. ತಮ್ಮ ವಿರುದ್ಧದ ಆರೋಪಗಳು ಆಧಾರರಹಿತ ಮತ್ತು ರಾಜಕೀಯ ಪ್ರೇರಿತ ಎಂದು ಹೇಳಿದ್ದಾರೆ.
ಕಳೆದ ವರ್ಷ, ಬ್ರಾಹ್ಮಣ ಸಮುದಾಯದ ಬಡೋಲಿ ಅವರನ್ನು ಬಿಜೆಪಿ ಹರಿಯಾಣ ಘಟಕದ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ಬಡೋಲಿ 2019ರಲ್ಲಿ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ರಾಯ್ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಅಯ್ಕೆಯಾಗಿದ್ದರು. 2024ರ ಚುನಾಣೆಯಲ್ಲಿ ಅವರು ಸ್ಪರ್ಧೆಯಿಂದ ಹಿಂದೆ ಸರಿದಿದ್ದರು. ಆಗಿದ್ದಾರೆ.
ಮಧ್ಯಪ್ರದೇಶ: ಬಿಜೆಪಿ ಮುಖಂಡೆ ಮೇಲೆ ಅತ್ಯಾಚಾರ – ಬಿಜೆಪಿ ನಾಯಕ ಉಚ್ಛಾಟನೆ
ಮಧ್ಯಪ್ರದೇಶದ ಸಿಧಿಯಲ್ಲಿ ಚುನಾವಣಯಲ್ಲಿ ಟಿಕೆಟ್ ಕೊಡಿಸುವುದಾಗಿ ಹೇಳಿ ಬಿಜೆಪಿ ಮುಖಂಡೆ ಮೇಲೆ ಅತ್ಯಾಚಾರ ಎಸಗಿ, ಹಣ ಸುಲಿಗೆ ಮಾಡಿದ್ದಾನೆಂಬ ಆರೋಪದ ಮೇಲೆ ಬಿಜೆಪಿ ನಾಯಕ ಅಜಿತ್‌ಪಾಲ್ ಸಿಂಗ್ ಚೌಹಾಣ್ ಎಂಬಾತನನ್ನು ಬಂಧಿಸಲಾಗಿದೆ. ಆತನನ್ನು ಬಂಧಿಸಿದ ಬಳಿಕ ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ.
ಆರೋಪಿ ಸಿಂಗ್ ತನ್ನ ಮೇಲೆ ಅತ್ಯಾಚಾರ ಎಸಗಿದ್ದು, ಕೃತ್ಯವನ್ನು ವಿಡಿಯೋ ಮಾಡಿಕೊಂಡಿದ್ದಾನೆ. ವಿಡಿಯೋವನ್ನು ಹರಿಬಿಡುವುದಾಗಿ ಬ್ಲಾಕ್‌ಮೇಲ್ ಮಾಡಿ ಹಣ ವಸೂಲಿ ಮಾಡಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.
ಈ ದಿನ ಸುದ್ದಿ ಸಂಪಾದಕರಿಗೆ ತುಂಬು ಹೃದಯದ ಧನ್ಯವಾದಗಳು, ತಾವು ಪ್ರಕಟಿಸುವ ವಿಷಯ ಈಗಿನ ಕಾಲಮಾನದಲ್ಲಿ ಯಾವ ಸುದ್ಧಿ ವಾಹಿನಿಗಳು ಪ್ರಕಟಿಸುವುದಿಲ್ಲ ತಾವು ಸಮಾಜಕ್ಕೆ ಒಳ್ಳೆಯ ಸಂದೇಶ ಹಾಗು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೀರಿ ಮತ್ತೊಮ್ಮೆ ತಮಗೆ ಹಾಗೂ ತಮ್ಮ ತಂಡಕ್ಕೆ ಧನ್ಯವಾದಗಳು 💐🙏