ಲೋಕ ಚುನಾವಣೆ | 4ನೇ ಹಂತದ ಮತದಾನದಲ್ಲೂ ಕುಸಿತ; ಬಿಜೆಪಿಗೆ ಗೆಲ್ಲುತ್ತೇವೆಂಬ ಹುಂಬತನವೇಕೆ?

Date:

Advertisements

ಲೋಕಸಭಾ ಚುನಾವಣೆ ಅಬ್ಬರ ಹೆಚ್ಚಾಗಿದೆ. ದ್ವೇಷ ಭಾಷಣದಲ್ಲಿ ಪ್ರಧಾನಿ ಮೋದಿ ತೇಲುತ್ತಿದ್ದಾರೆ. ಬಹಿರಂಗ ಚರ್ಚೆಗೆ ಕಾಂಗ್ರೆಸ್‌ ಸವಾಲು ಹಾಕುತ್ತಿದೆ. ಈ ನಡುವೆ, ಸೋಮವಾರ 4ನೇ ಹಂತದ ಮತದಾನ ಮುಗಿದಿದೆ. ಯಥಾಪ್ರಕಾರ, ಮತದಾನ ಕುಸಿತವಾಗಿದೆ. ಅದಾಗ್ಯೂ, ಬಿಜೆಪಿ ನಾವೇ ಗೆಲ್ಲುತ್ತೇವೆ. ಗೆದ್ದು ಅಧಿಕಾರ ಹಿಡಿಯುತ್ತೇವೆಂದು ಬೊಬ್ಬೆ ಹೊಡೆಯುತ್ತಿದೆ. ಬಿಜೆಪಿಯಲ್ಲಿ ಯಾಕಿಷ್ಟು ವಿಶ್ವಾಸವಿದೆ. ಅದರ ಹಿಂದಿನ ಊರವೇನು?

ಸೋಮವಾರ, 10 ರಾಜ್ಯಗಳ 96 ಕ್ಷೇತ್ರಗಳಿಗೆ ಮತದಾನ ನಡೆದಿದೆ. 2 ರಾಜ್ಯಗಳನ್ನು ಹೊರತು ಪಡಿಸಿ, ಉಳಿದೆಲ್ಲ ರಾಜ್ಯಗಳಲ್ಲಿ ಮತದಾನವು 2019ಕ್ಕಿಂತ ಕಡಿಮೆಯಾಗಿದೆ. 2019ರಲ್ಲಿ ಇದೇ 10 ರಾಜ್ಯಗಳಲ್ಲಿ ನಡೆದಿದ್ದು, 4ನೇ ಹಂತದ ಮತದಾನಲ್ಲಿ ಒಟ್ಟು 69.6% ಮತದಾನವಾಗಿತ್ತು. ಆದರೆ, ಈಗ 67.3% ಮತದಾನವಾಗಿದೆ. ಒಟ್ಟು ಮತದಾನ ಕುಸಿದಿದ್ದರೂ, ಬಿಜೆಪಿಗೆ ನೆಲೆಯೇ ಇಲ್ಲದ ಮತ್ತು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಸಿಟ್ಟಾಗಿರುವ ಎರಡು – ತೆಲಂಗಾಣ, ಜಮ್ಮು ಮತ್ತು ಕಾಶ್ಮೀರ – ರಾಜ್ಯಗಳಲ್ಲಿ ಮತದಾನ ಹೆಚ್ಚಾಗಿದೆ. ಇದು ವಿಪಕ್ಷಗಳ ಪರವಾಗಿ ಆ ರಾಜ್ಯಗಳಲ್ಲಿರುವ ಅಲೆಯನ್ನು ಸೂಚಿಸುತ್ತದೆ.

ಉಳಿದಂತೆ, 8 ರಾಜ್ಯಗಳ ಪೈಕಿ 4 ರಾಜ್ಯಗಳಲ್ಲಿ – ಪಶ್ಚಿಮ ಬಂಗಾಳ, ಆಂಧ್ರಪ್ರದೇಶ, ಒಡಿಶಾ ಹಾಗೂ ಜಾರ್ಖಂಡ್‌ – ಬಿಜೆಪಿ ಅಧಿಕಾರದಲ್ಲಿಲ್ಲ. ಇನ್ನುಳಿದ ನಾಲ್ಕರ ಪೈಕಿ 2ರಲ್ಲಿ – ಮಧ್ಯಪ್ರದೇಶ, ಉತ್ತರ ಪ್ರದೇಶ – ಬಿಜೆಪಿಯೇ ಅಧಿಕಾರದಲ್ಲಿದ್ದರೆ, ಮತ್ತೆರಡರಲ್ಲಿ – ಮಹಾರಾಷ್ಟ್ರ, ಬಿಹಾರ – ವಿಪಕ್ಷಗಳ ಸರ್ಕಾರವನ್ನು ಉರುಳಿಸಿ, ಬಿಜೆಪಿ ಅನೈತಿಕವಾಗಿ ಸರ್ಕಾರ ರಚಿಸಿದೆ. ಈ ರಾಜ್ಯಗಳಲ್ಲಿ ಮತದಾನ ಕುಸಿತವು, ಬಿಜೆಪಿ ಅಥವಾ ಕೇಂದ್ರ ಸರ್ಕಾರದ ಮೇಲಿನ ಸಿಟ್ಟಿನ ಪ್ರತೀಕವಾಗಿವೆ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ.

Advertisements

ಈ 10 ರಾಜ್ಯಗಳಲ್ಲಿ ತೆಲಂಗಾಣ, ಆಂಧ್ರಪ್ರದೇಶ ಹಾಗೂ ಜಮ್ಮು ಕಾಶ್ಮೀರದಲ್ಲಿ ಬಿಜೆಪಿ ಗಟ್ಟಿ ನೆಲೆ ಇಲ್ಲ. ಈ ಪೈಕಿ, ಎರಡು ರಾಜ್ಯಗಳಲ್ಲಿ ಮತದಾನ ಏರಿಕೆಯಾಗಿದ್ದರೆ, ಒಂದು ರಾಜ್ಯದ ಮತದಾನದಲ್ಲಿ ಕೊಂಚ ಕಡಿಮೆಯಾಗಿದೆ. ಅದರಲ್ಲೂ, 370ನೇ ವಿಧಿಯನ್ನು ಕೇಂದ್ರ ಸರ್ಕಾರ ರದ್ದುಪಡಿಸಿದ್ದ ಜಮ್ಮು-ಕಾಶ್ಮೀರದಲ್ಲಿ ಹೆಚ್ಚಿನ ಮತದಾರರು ಮತ ಚಲಾಯಿಸದಿದ್ದರೂ, 275%ರಷ್ಟು ಹೆಚ್ಚಾಗಿದೆ. 370ನೇ ವಿಧಿಯ ರದ್ದತಿಯ ವಿರುದ್ಧ ಪ್ರತಿಭಟನೆಯಲ್ಲಿದ್ದ ಜಮ್ಮು-ಕಾಶ್ಮೀರದ ಜನರು ತಮ್ಮ ಆಕ್ರೋಶವನ್ನು ಮತದಾನದ ಮೂಲಕ ವ್ಯಕ್ತಪಡಿಸಲು ಮತಗಟ್ಟೆಗಳಿಗೆ ಧಾವಿಸಿದ್ದಾರೆ. 2019ರಲ್ಲಿ ಇಲ್ಲಿನ ಜನರು ಮತಗಟ್ಟೆಗಳತ್ತ ಸುಳಿದೇ ಇರಲಿಲ್ಲ. ಆಗ ಕೇವಲ, 14.4% ಮಾತ್ರವೇ ಮತದಾನವಾಗಿತ್ತು. ಇದೀಗ, 38.0% ಮತದಾನವಾಗಿದೆ. ಅವರೆಲ್ಲರೂ, ಮತದಾನದ ಮೂಲಕ ಬಿಜೆಪಿ ವಿರುದ್ಧದ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

370ನೇ ವಿಧಿ ರದ್ದಾದಾಗ, ಕಾಶ್ಮೀರಿ ಪಂಡಿತರು 370 ವಿಧಿಯ ರದ್ದತಿಯಿಂತ ಖುಷಿಯಾಗಿದ್ದಾರೆ. ನಮಗೆ ಅಭಿನಂದನೆ ಸಲ್ಲಿಸಿದ್ದಾರೆ. ನಮ್ಮ ಜೊತೆಗಿದ್ದಾರೆ ಎಂದು ಬಿಜೆಪಿ ಹಿಂದಿನಿಂದಲೂ ಹೇಳಿಕೊಂಡೇ ಬಂದಿತ್ತು. ಆದರೆ, ಅಲ್ಲಿನ ಜನರು ತಮ್ಮ ವಿರುದ್ಧವಿದ್ದಾರೆ ಎಂಬುದು ಬಿಜೆಪಿಗೆ ಚೆನ್ನಾಗಿಯೇ ಗೊತ್ತಿತ್ತು. ಆದರೂ, ಜನರು ನಮ್ಮ ಪರವಾಗಿದ್ದಾರೆ ಎಂದು ಹೇಳಿಕೊಳ್ಳುತ್ತಲೇ ಇತ್ತು. ಅದೇ ರೀತಿ, ಈಗಲೂ ಗೆಲ್ಲುವುದು ಅನುಮಾನವೆಂಬುದನ್ನು ತಿಳಿಸಿದ್ದರೂ, ಗೆಲ್ಲುತ್ತೇವೆಂದೇ ಬಿಜೆಪಿ ನಾಯಕರು ಹೇಳಿಕೊಳ್ಳುತ್ತಿದ್ದಾರೆ.

ಅದೇನೆ ಇರಲಿ, ಜಮ್ಮು-ಕಾಶ್ಮೀರದಲ್ಲಿ ತಮಗೆ ಸೋಲು ಖಚಿತವೆಂದು ಮೊದಲೇ ಅರಿತಿದ್ದ ಬಿಜೆಪಿ, ಸ್ಪರ್ಧಿಸಿ ಸೋತರೆ ಅವಮಾನವಾಗುತ್ತದೆ ಎಂದು ತನ್ನ ಅಭ್ಯರ್ಥಿಗಳನ್ನೇ ಕಳಕ್ಕಿಳಿಸಿಲ್ಲ. ಬದಲಾಗಿ, ತಮ್ಮ ಮಿತ್ರ ಪಕ್ಷಕ್ಕೆ ಸಂಪೂರ್ಣ ಬೆಂಬಲ ನೀಡಿದೆ. ಚುನಾವಣಾ ಕಣದಿಂದಲೇ ಕಾಲ್ಕಿತ್ತಿದೆ.

ಸ್ಪರ್ಧೆ ಎಂದ ಮೇಲೆ ಗೆಲುವು-ಸೋಲು ಇದ್ದೇ ಇರುತ್ತದೆ. ಆದರೆ, ಸೋಲಿಗೆ ಹೆದರಿ ಕಾಲ್ಕೀವುದು ಹೇಡಿತನ. ಅದನ್ನೇ ಬಿಜೆಪಿ ಪ್ರದರ್ಶಿಸುತ್ತಿದೆ. ಎರಡನೇ ಮಹಾಯುದ್ಧದಲ್ಲಿ ಹಿಟ್ಲರ್ ಸೋಲಿಗೆ ಹೆದರಿ, ಆತ್ಮಹತ್ಯೆ ಮಾಡಿಕೊಂಡಿದ್ದ. ಇಲ್ಲಿ ಬಿಜೆಪಿ ಸೋಲಿಗೆ ಹೆದರಿ ಓಡಿಹೋಗುತ್ತಿದೆ. ಅಲ್ಲಿನ ಆರು ಕ್ಷೇತ್ರಗಳಲ್ಲಿ ಒಂದನ್ನೂ ಎನ್‌ಡಿಎ ಗೆಲ್ಲಲಾರದು ಎಂಬ ಅಭಿಪ್ರಾಯಗಳಿವೆ.

ಸದ್ಯ, ಕಣಿವೆ ರಾಜ್ಯದಲ್ಲಿ ಈ ಪರಿಸ್ಥಿತಿಯಾದರೆ, ತೆಲಂಗಾಣ, ಆಂಧ್ರಪ್ರದೇಶದಲ್ಲಿ ಬಿಜೆಪಿಗೆ ನೆಲೆಯೇ ಇಲ್ಲ. ಅಲ್ಲಿ, ಹಿಂದುತ್ವವೂ ಬಿಜೆಪಿಗೆ ಕೈಹಿಡಿಯುತ್ತಿಲ್ಲ. ತೆಲಂಗಾಣದಲ್ಲಿ ಕಾಂಗ್ರೆಸ್‌ – ಬಿಆರ್‌ಎಸ್‌ ನಡುವೆ ಹೋರಾಟವಿದ್ದರೆ, ಆಂಧ್ರದಲ್ಲಿ ವೈಎಸ್‌ಆರ್‌ ಕಾಂಗ್ರೆಸ್ ಮತ್ತು ಟಿಡಿಪಿ ನಡುವೆ ಹಣಹಣಿ ಇದೆ. ಇಲ್ಲಿ, ಬಿಜೆಪಿ ಖಾತೆ ತೆರೆಯುವುದೂ ಕಷ್ಟ.

ಇನ್ನು, ಪಶ್ಚಿಮ ಬಂಗಾಳದಲ್ಲಿ 2019ರಲ್ಲಿ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಬಿಜೆಪಿಯೇ ಗೆದ್ದಿತ್ತು. ಆದರೆ, ಈಗ ಅಲ್ಲಿನ ರಾಜಕೀಯ ಚಿತ್ರಣ ಬದಲಾಗಿದೆ. ಸಂದೇಶ್‌ಖಾಲಿ ಪ್ರಕರಣವೂ ಟಿಎಂಸಿ ವಿರುದ್ಧ ಬಿಜೆಪಿಗೆ ಹೆಚ್ಚಿನ ಅನುಕೂಲ ಮಾಡಿಕೊಡುವ ವಾತಾವರಣ ಇಲ್ಲವೆಂಬ ಮಾತುಗಳಿವೆ. ಮಮತಾ ಬ್ಯಾನರ್ಜಿ ‘ಇಂಡಿಯಾ’ ಮೈತ್ರಿಕೂಟದ ಭಾಗವಾಗಿರುವ ಸೂಚನೆಯನ್ನೂ ಇತ್ತೀಚೆಗೆ ನೀಡಿದ್ದಾರೆ. ಮೇಲ್ನೋಟಕ್ಕೆ ಟಿಎಂಸಿ, ಬಿಜೆಪಿ ಹಾಗೂ ‘ಇಂಡಿಯಾ’ ಒಕ್ಕೂಟದ ನಡುವೆ ತ್ರಿಕೋನ ಸ್ಪರ್ಧೆಯಿದೆ ಎನ್ನಲಾದರೂ, ಅಲ್ಲಿ, ಬಿಜೆಪಿ ವರ್ಸಸ್‌ ಟಿಎಂಸಿ-‘ಇಂಡಿಯಾ’ ಎಂಬ ದ್ವಿಕೋನ ಸ್ಪರ್ಧೆಯೇ ಇದೆ. ಇದು ಬಿಜೆಪಿಗೆ ಸವಾಲಾಗಿದೆ.

ಒಡಿಶಾದಲ್ಲಿ ಬಿಜೆಪಿಯ ಮೈತ್ರಿಪಕ್ಷವೇ ಆಗಿದ್ದ ನವೀನ್ ಪಟ್ನಾಯಕ್ ಅವರ ಬಿಜು ಜನತಾದಳ ಕೂಡ ಎನ್‌ಡಿಎ ತೊರೆದಿದೆ. ಬಿಜೆಪಿಯನ್ನು ನೇರಾನೇರಾ ಎದುರಿಸುತ್ತಿದೆ. ಹೀಗಾಗಿ, ಅಲ್ಲಿಯೂ ಬಿಜೆಪಿಗೆ ಹೆಚ್ಚಿನ ನೆಲೆ ಇಲ್ಲ. ಜಾರ್ಖಂಡ್‌ನಲ್ಲಿ ಸ್ಥಳೀಯ ಪಕ್ಷಗಳದ್ದೇ ಪಾರುಪತ್ಯ ಹೆಚ್ಚಾಗಿದೆ. ಅದರಲ್ಲೂ, ‘ಇಂಡಿಯಾ’ ಕೂಟ ಭಾಗವಾಗಿರುವ ಜೆಎಂಎಂ ಅಧಿಕಾರದಲ್ಲಿದೆ. ಹೀಗಾಗಿ, ಅಲ್ಲಿಯೂ ಬಿಜೆಪಿಗೆ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ಸಾಧ್ಯವಿಲ್ಲ ಎಂಬುದು ಸಷ್ಟವಾಗಿ ಕಾಣುತ್ತಿದೆ.

ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದಲ್ಲಿ ಬಿಜೆಪಿಯೇ ಅಧಿಕಾರದಲ್ಲಿದೆ. ಈ ಎರಡೂ ರಾಜ್ಯಗಳಲ್ಲಿ ಹೆಚ್ಚಿನ ಸ್ಥಾನಗಳನ್ನು ಬಿಜೆಪಿಯೇ ಗೆಲ್ಲಬಹುದು. ಆದರೂ, ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ ಪ್ರಬಲ ಪೈಪೋಟಿ ನೀಡುತ್ತಿದ್ದು, ಕೊನೆ ಕ್ಷಣದಲ್ಲಿ ಫಲಿತಾಂಶ ಬದಲಾಗಲೂಬಹುದು.

ಮಹಾರಾಷ್ಟ್ರ ಮತ್ತು ಬಿಹಾರದಲ್ಲಿ ಅಧಿಕಾರದಲ್ಲಿದ್ದ ಮೈತ್ರಿ ಸರ್ಕಾರಗಳನ್ನು ಕೆಡವಿ ಬಿಜೆಪಿ ಅಧಿಕಾರಕ್ಕೇರಿದೆ. ಮಹಾರಾಷ್ಟ್ರದಲ್ಲಿ ಶಿವಸೇನೆ ಮತ್ತು ಎನ್‌ಸಿಪಿ ಪಕ್ಷಗಳನ್ನೇ ಒಡೆದು ಇಬ್ಬಾಗ ಮಾಡಿದೆ. ಇದು, ಮಹಾರಾಷ್ಟ್ರದ ಜನರಿಗೆ ಕಿರಿಕಿರಿ ತಂದೊಡ್ಡಿದೆ. ಅಲ್ಲದೆ, ಶಿವಸೇನೆ ಮತ್ತು ಎಸ್‌ಸಿಪಿಯಿಂದ ಹೊರ ನಡೆದು ಬಿಜೆಪಿ ಜೊತೆ ಕೈಜೋಡಿಸಿರುವ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಉಪ ಮುಖ್ಯಮಂತ್ರಿ ಅಜಿತ್ ಪವಾರ್‌ಗೆ ರಾಜ್ಯಾದ್ಯಂತ ಹೆಚ್ಚಿನ ಜನಮನ್ನಣೆ ಇಲ್ಲ. ಕಾಂಗ್ರೆಸ್‌ ಜೊತೆಗಿರುವ ಉದ್ದವ್ ಮತ್ತು ಶರದ್ ಪವಾರ್ ಅವರ ಶಿವಸೇನೆ ಮತ್ತು ಎನ್‌ಸಿಪಿ ಪ್ರಬಲ ನೆಲೆಯನ್ನು ಹೊಂದಿವೆ. ಕಾಂಗ್ರೆಸ್‌ ಕೂಡ ತನ್ನದೇ ಪ್ರಾಬಲ್ಯ ಇಟ್ಟುಕೊಂಡಿದೆ. ಹೀಗಾಗಿ, ಚುನಾವಣೆಯಲ್ಲಿ ಬಿಜೆಪಿಗೆ ವ್ಯತಿರಿಕ್ತ ಫಲಿತಾಂಶ ನೀಡಲಿದೆ ಎಂದು ರಾಜಕೀಯ ತಜ್ಞರು ಅಭಿಪ್ರಾಯ.

ನಾಲ್ಕನೇ ಹಂತದ ಮತದಾನ ಮಾತ್ರವಲ್ಲದೆ, ಕಳೆದ 3 ಹಂತಗಳ ಮತದಾನವೂ ಕುಸಿದಿದೆ. ಮೊದಲ ಹಂತದ ಮತದಾನ ನಡೆದಾಗಲೇ ಬಿಜೆಪಿಗೆ ಸೋಲಿನ ಆತಂಕ ಹೆಚ್ಚಾಗಿತ್ತು. ಹೀಗಾಗಿಯೇ, ಪ್ರಧಾನಿ ಮೋದಿ ಅವರು ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಕಾಂಗ್ರೆಸ್‌ ವಿರುದ್ಧ ದ್ವೇಷಪೂರಿತ ಸುಳ್ಳುಗಳ ಆರೋಪಗಳ ಸುರಿಮಳೆ ಸುರಿಸುತ್ತಿದ್ದಾರೆ. ಕೋಮು ದ್ವೇಷ ಹರಡುತ್ತಿದ್ದಾರೆ.

ನಾಲ್ಕನೇ ಹಂತದ ಚುನಾವಣೆಯಲ್ಲಿ ಮತದಾನ ಕಡಿಮೆ ಆಗಿರುವುದು ಮಾತ್ರವಲ್ಲದೆ. ಬಿಜೆಪಿಗೆ ವಿರುದ್ಧದ ಮತಗಳು ಹೆಚ್ಚಾಗಿವೆ ಎಂಬುದು ಕೂಡ ಕಂಡುಬರುತ್ತಿದೆ. ಮೋದಿ ಅಲೆ, ಗುಜರಾತ್ ಮಾಡೆಲ್, ರಾಮಮಂದಿರ, ದ್ವೇಷ ಭಾಷಣ ಯಾವುದೂ ನಿರುದ್ಯೋಗ, ಬಡತನ, ಬೆಲೆ ಏರಿಕೆಯಂತಹ ಮೂಲಭೂತ ಸಮಸ್ಯೆಗಳನ್ನು ನೀಗಿಸುವುದಿಲ್ಲ ಎಂಬುದನ್ನು ಜನರು ಅರಿತುಕೊಂಡಿದ್ದಾರೆ. ಇದು, ಈಗ ನಡೆದಿರುವ ನಾಲ್ಕೂ ಹಂತದ ಮತದಾನಗಳಲ್ಲೂ ಗೋಚರಿಸಿದೆ.

ಈ ಬಾರಿ, ಬಿಜೆಪಿ ಮತ್ತು ಮಿತ್ರಪಕ್ಷಗಳು 200 ಸ್ಥಾನಗಳನ್ನು ದಾಟುವುದಿಲ್ಲ ಎಂಬುದು ದೇಶಾದ್ಯಂತ ಪ್ರಚಲಿತದಲ್ಲಿದೆ. ಅದು, ವಾಸ್ತವಾಂಶವನ್ನು ಬಿಂಬಿಸುತ್ತಿದೆ. ಹೀಗಾಗಿ, ಮೋದಿ ಅವರ ‘ಚಾರ್‌ ಸೋ ಪಾರ್’ ಘೋಷಣೆ ನಾಪತ್ತೆಯಾಗಿದೆ. ಬಿಜೆಪಿ ನಾಯಕರು ‘ಜಟ್ಟಿ ಮಣ್ಣಿಗೆ ಬಿದ್ರೂ, ಮೀಸೆ ಮಣ್ಣಾಗಿಲ್ಲ’ ಎಂಬಂತೆ ನಾವೇ ಗೆಲ್ಲುತ್ತೇವೆಂದು ಹೇಳಿಕೊಳ್ಳುತ್ತಿದ್ದಾರೆ. ಇದು, ಮೋದಿ ಅವರ ಕೊನೆಯ ಜುಮ್ಲಾ ಆಗಲಿದೆಯೇ ಎಂಬುದನ್ನು ಜೂನ್ 4ರ ಫಲಿತಾಂಶ ತಿಳಿಸಲಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

Download Eedina App Android / iOS

X