ಅನ್ನಭಾಗ್ಯ ಯೋಜನೆಯಡಿ 10 ಕೆ.ಜಿ ಅಕ್ಕಿ ಕೊಡುತ್ತೇವೆಂದು ಭರವಸೆ ನೀಡಿ, ಈಗ ಐದು ಕೆ.ಜಿ ಕೊಡುತ್ತೇವೆ ಎನ್ನುವುದು ಸರಿಯಲ್ಲ. ಈಗಾಗಲೇ ಕೇಂದ್ರ ಸರ್ಕಾರ ಐದು ಕೆ.ಜಿ ಅಕ್ಕಿ ಕೊಡುತ್ತಿದೆ. ಕಾಂಗ್ರೆಸ್ ಭರವಸೆ ನೀಡಿರುವ 10 ಕೆ.ಜಿ ಅಕ್ಕಿಯ ಬದಲಿಗೆ 340 ರೂ. ಪಡಿತರ ಖಾತೆಗೆ ಹಾಕಬೇಕು ಎಂದು ಬಿಜೆಪಿ ಸಂಸದ ಎಸ್ ಮುನಿಸ್ವಾಮಿ ಹೇಳಿದ್ದಾರೆ.
ಕೋಲಾರ ಜಿಲ್ಲೆಯ ಮಾಲೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ಪಡಿತರದಾರರಿಗೆ ತಲಾ 10 ಕೆ.ಜಿ ಕೊಟ್ಟರೆ ನುಡಿದಂತೆ ನಡೆದ ಸರ್ಕಾರ ಎಂದು ನಾವೂ ಹೇಳುತ್ತೇವೆ” ಎಂದಿದ್ದಾರೆ.
ವಿಧಾನಸಭಾ ಚುನಾವಣೆ ಸಮಯದಲ್ಲಿ ಪಕ್ಷವು ಅಧಿಕಾರಕ್ಕೆ ಬಂದರೆ ಅನ್ನಭಾಗ್ಯ ಯೋಜನೆಯಡಿ ಪಡಿತರದಾರರಿಗೆ ತಲಾ 10 ಕೆ.ಜಿ ಅಕ್ಕಿ ಕೊಡುತ್ತೇವೆಂದು ಕಾಂಗ್ರೆಸ್ ಘೋಷಿಸಿತ್ತು. ಕಾಂಗ್ರೆಸ್ ಸರ್ಕಾರ ರಚಿಸಿದ ಬಳಿಕ, 10 ಕೆ.ಜಿ ಅಕ್ಕಿ ಕೊಡಲು ಕಸರತ್ತು ನಡೆಸಿತ್ತು. ಆದರೆ, ಕೇಂದ್ರವು ಹೆಚ್ಚುವರಿ ಅಕ್ಕಿ ಕೊಡಲು ಸಾಧ್ಯವಿಲ್ಲವೆಂದು ಹೇಳಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತರ ರಾಜ್ಯಗಳ ಮುಖ್ಯಮಂತ್ರಿಗಳನ್ನು ಸಂಪರ್ಕಿಸಿ, ಅಕ್ಕಿ ಖರೀದಿ ಬಗ್ಗೆ ಮಾತನಾಡಿದ್ದರು. ಆದರೆ, ಯಾವ ರಾಜ್ಯಗಳಿಂದಲೂ ಅಗತ್ಯ ಅಕ್ಕಿ ಸಿಗದ ಪರಿಣಾಮ, ಐದು ಕೆ.ಜಿ ಅಕ್ಕಿ ಕೊಡುತ್ತೇವೆ. ಉಳಿದ ಐದು ಕೆ.ಜಿ ಅಕ್ಕಿ ಬದಲಿಗೆ 170 ರೂ. ಹಣವನ್ನು ಪಡಿತರದಾರರ ಖಾತೆ ಹಾಕುತ್ತೇವೆಂದು ಸರ್ಕಾರ ಹೇಳಿದೆ.
ಸರಕಾರ ಅಕ್ಕಿ ಕೊಟ್ಟು ಜನರು ತೃಪ್ತಿ ಆದರೆ ನಿಮ್ಮ ಪ್ರಶಂಸೆಗೆ ಯಾವುದೇ ಬೆಲೆ ಇಲ್ಲ.