ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ ಚುನಾವಣೆಗೂ ಹಿಂದಿನ ಕೇವಲ ನಾಲ್ಕು ತಿಂಗಳಲ್ಲಿ ಮಾಧ್ಯಮಗಳಿಗೆ ಸರ್ಕಾರವು ಬರೋಬರಿ 44.42 ಕೋಟಿ ಸಂದಾಯ ಮಾಡಿದೆ ಎಂದು ತಿಳಿದುಬಂದಿದೆ.
ಬಿಜೆಪಿ ಸರ್ಕಾರ ತನ್ನ ಜಾಹೀರಾತುಗಳಿಗಾಗಿ ಕಳೆದ ನಾಲ್ಕು ತಿಂಗಳಲ್ಲಿ ಪತ್ರಿಕಾ ಮತ್ತು ವಿದ್ಯುನ್ಮಾನ ಮಾಧ್ಯಮಗಳಿಗೆ ಭರಸಿರುವ ಮೊತ್ತವೆಷ್ಟು? ಎಂದು ಮಾಹಿತಿ ಕೋರಿ ‘ಮಾಹಿತಿ ಹಕ್ಕು ಕಾಯ್ದೆ’ಯಡಿ ಆರ್‌ಟಿಐ ಕಾರ್ಯಕರ್ತ ರಾಜೇಶ್ ಕೃಷ್ಣ ಪ್ರಸಾದ್ ಎಂಬುವವರು ಅರ್ಜಿ ಸಲ್ಲಿಸಿದ್ದರು.
ಅವರ ಅರ್ಜಿಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉತ್ತರ ನೀಡಿದೆ. ಕಳೆದ ನಾಲ್ಕು ತಿಂಗಳಲ್ಲಿ ಬರೋಬರಿಗೆ 44.42 ಕೋಟಿ ರೂ.ಗಳನ್ನು ಜಾಹೀರಾತುಗಳಿಗಾಗಿ ಮಾಧ್ಯಮಗಳಿಗೆ ಸಂದಾಯ ಮಾಡಿರುವುದಾಗಿ ಹೇಳಿದೆ.
ಇದರಲ್ಲಿ ಪತ್ರಿಕಾ ಮಾಧ್ಯಮಗಳಿಗೆ 27.46 ಕೋಟಿ, ವಿದ್ಯುನ್ಮಾನ ಮಾಧ್ಯಮಗಳಿಗೆ 16.96 ಕೋಟಿ ರೂ. ಸಂದಾಯ ಮಾಡಿರುವುದಾಗಿ ಹೇಳಿದೆ.
