ಚಂದ್ರಯಾನ-3 ಯಶಸ್ವಿಯಾದ ಹಿನ್ನೆಲೆಯಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಶುಕ್ರವಾರ ಇಸ್ರೋಗೆ ಭೇಟಿ ನೀಡಿ, ಅಧ್ಯಕ್ಷ ಎಸ್ ಸೋಮನಾಥ್ ಮತ್ತು ಅವರ ತಂಡದ ಮುಖ್ಯ ಸದಸ್ಯರನ್ನು ಸನ್ಮಾನಿಸಿದರು.
“ಅಧ್ಯಕ್ಷ ಎಸ್ ಸೋಮನಾಥ್ ಮತ್ತು ಅವರ ತಂಡದ ಬಾಹ್ಯಾಕಾಶ ಪರಿಶೋಧನೆ ಮತ್ತು ಸಂಶೋಧನೆ ಹೀಗೆ ಮುಂದುವರಿಯಲಿ. ಅವರ ನಿರಂತರ ಅನ್ವೇಷಣೆಗಾಗಿ ಹಾಗೂ ಅವರ ಅಚಲ ಬದ್ಧತೆಯು ರಾಷ್ಟ್ರಕ್ಕೆ ಹೆಮ್ಮೆ ತಂದಿದೆ. ಅಷ್ಟೇ ಅಲ್ಲದೆ ಜಾಗತಿಕ ಬಾಹ್ಯಾಕಾಶ ವೇದಿಕೆಯಲ್ಲಿ ಭಾರತ ತನ್ನ ಪರಾಕ್ರಮ ಪ್ರದರ್ಶಿಸುವಂತಾಗಿದೆ” ಎಂದು ರಾಜ್ಯಪಾಲರು ಶ್ಲಾಘಿಸಿದರು.
“ಇಸ್ರೋ ತಂಡದ ನಿರಂತರ ಪ್ರಯತ್ನಗಳು ಭವಿಷ್ಯದ ಪೀಳಿಗೆಗೆ ಸ್ಫೂರ್ತಿ ನೀಡಲಿ ಮತ್ತು ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ ಭಾರತದ ಸ್ಥಾನಮಾನವನ್ನು ಹೆಚ್ಚಿಸುವ ಪ್ರಯತ್ನ ಮುಂದುವರೆಯಲಿದೆ” ರಾಜ್ಯಪಾಲರು ಇದೇ ವೇಳೆ ವಿಶ್ವಾಸ ವ್ಯಕ್ತಪಡಿಸಿದರು.