ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯ ಪೋಸ್ಟರ್‌ನಲ್ಲಿ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಮಹಾತ್ಮ ಗಾಂಧಿ, ಭಗತ್ ಸಿಂಗ್ ಮತ್ತು ಸುಭಾಷ್ ಚಂದ್ರ ಬೋಸ್‌ಗಿಂತ ದೊಡ್ಡದಾಗಿ ಹಿಂದುತ್ವ ಸಿದ್ಧಾಂತವಾದಿ, ಬ್ರಿಟೀಷರಲ್ಲಿ ಕ್ಷಮೆ ಕೋರಿದ್ದ ವಿ ಡಿ ಸಾವರ್ಕರ್ ಚಿತ್ರವನ್ನು ಬಳಸಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದೆ. ರಾಷ್ಟ್ರಪಿತ ಮಹಾತ್ಮ ಗಾಂಧಿ ಹತ್ಯೆ ಆರೋಪ ಹೊಂದಿರುವವರನ್ನೇ ಕೇಂದ್ರ ಸರ್ಕಾರ ವೈಭವೀಕರಿಸುತ್ತಿರುವುದಕ್ಕೆ ವಿರೋಧ ಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಎಕ್ಸ್‌ನಲ್ಲಿ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ, ಮಹಾತ್ಮಗಾಂಧಿ, ಬೋಸ್, ಭಗತ್ ಸಿಂಗ್ ಮತ್ತು ಸಾವರ್ಕರ್ ಅವರ ಛಾಯಾಚಿತ್ರಗಳು, ಕೆಂಪು ಕೋಟೆ, ತ್ರಿವರ್ಣ ಧ್ವಜ ಮತ್ತು ಅಶೋಕ ಚಕ್ರವನ್ನು ಹೊಂದಿರುವ ಚಿತ್ರವನ್ನು ಪೋಸ್ಟರ್ ಮಾಡಿದ್ದು, “ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು” ಎಂದು ಬರೆದುಕೊಂಡಿದೆ. ಆದರೆ ಈ ಚಿತ್ರವು ತೀವ್ರ ವಿವಾದಕ್ಕೆ ಕಾರಣವಾಗಿದೆ.
ಇದನ್ನು ಓದಿದ್ದೀರಾ? ಭಗತ್ ಸಿಂಗ್ ಹೆಸರಿಡಲು ಆಗ್ರಹಿಸಿ ಸಾವರ್ಕರ್ ಫ್ಲೈ ಓವರ್‌ಗೆ ಮಸಿ ಬಳಿದ NSUI ಕಾರ್ಯಕರ್ತರು: ಮೂವರ ಬಂಧನ
ಈ ಪೋಸ್ಟರ್ ಬಗ್ಗೆ ವಿರೋಧ ವ್ಯಕ್ತಪಡಿಸಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಸಿಪಿಐಎಂ ಸಂಸದ ಜಾನ್ ಬ್ರಿಟಾಸ್, “ವಿ.ಡಿ. ಸಾವರ್ಕರ್ ಅವರನ್ನು ಉದ್ದೇಶಪೂರ್ವಕವಾಗಿ ಮಹಾತ್ಮ ಗಾಂಧಿಯವರ ಮೇಲೆ ಹಾಕಿರುವುದು ಕಾಕತಾಳೀಯವಲ್ಲ, ಬದಲಾಗಿ ಒಂದು ಉದ್ದೇಶಪೂರ್ವಕ ಕೃತ್ಯ. ಸರ್ಕಾರದ ಕ್ರಮಗಳು ದೇಶದ ಜಾತ್ಯತೀತ ಸಂವಿಧಾನದ ಬದ್ಧತೆಯನ್ನು ದುರ್ಬಲಗೊಳಿಸುತ್ತವೆ” ಎಂದು ದೂರಿದ್ದಾರೆ.
As we celebrate our nation’s independence, let’s remember — liberty thrives when we nurture it every day, through unity, empathy, and action. 🇮🇳
— Ministry of Petroleum and Natural Gas #MoPNG (@PetroleumMin) August 15, 2025
Happy #IndependenceDay #MoPNG pic.twitter.com/oeb39NlZBb
“ಸಾವರ್ಕರ್ ಗಾಂಧಿಯವರ ಹತ್ಯೆಯಲ್ಲಿ ಆರೋಪಿಯಾಗಿದ್ದರು. ಆದರೆ ಸಾಕಷ್ಟು ಸಾಕ್ಷ್ಯಾಧಾರಗಳಿಲ್ಲದ ಕಾರಣ ಅವರನ್ನು ಖುಲಾಸೆಗೊಳಿಸಲಾಯಿತು. ಆದಾಗ್ಯೂ ಕಪೂರ್ ಆಯೋಗವು ಸಾವರ್ಕರ್ ಅವರು ಅಪರಾಧಿ ಎಂಬ ಸಾಂದರ್ಭಿಕ ಸಾಕ್ಷ್ಯಗಳನ್ನು ಎತ್ತಿ ತೋರಿಸಿದೆ. ಸಂವಿಧಾನವನ್ನು ಎತ್ತಿಹಿಡಿಯುವವರಿಂದ ನ್ಯಾಯ ಮತ್ತು ಜಾತ್ಯತೀತ ಮೌಲ್ಯಗಳ ಈ ಅಣಕವನ್ನು ನಿಸ್ಸಂದಿಗ್ಧವಾಗಿ ಖಂಡಿಸಬೇಕು” ಎಂದು ಹೇಳಿದ್ದಾರೆ.
The deliberate elevation of V.D. Savarkar over Mahatma Gandhi is not a coincidence but a calculated act. The government’s actions undermine the nation’s commitment to its secular constitution. It is pertinent to note that Savarkar was an accused in Gandhi’s assassination, though… pic.twitter.com/hSZ6mpkW4G
— John Brittas (@JohnBrittas) August 15, 2025
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ(ಸಂಘಟನೆ) ಕೆ.ಸಿ. ವೇಣುಗೋಪಾಲ್, “ಇದು Orwellian(ಇತಿಹಾಸದ ಬದಲಾವಣೆ) ಪ್ರತಿರೂಪ. ಬ್ರಿಟೀಷರಿಗೆ ದಯಾ ಅರ್ಜಿ ಬರೆದ ಸಾವರ್ಕರ್‌ನಂತಹ ವ್ಯಕ್ತಿಯ ಚಿತ್ರವನ್ನು ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರು ಮತ್ತು ಸರ್ದಾರ್ ವಲ್ಲಭಭಾಯಿ ಪಟೇಲ್ ಜೊತೆ ಹಾಕಿರುವುದು ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಸರ್ಕಾರಕ್ಕಿರುವ ತಿರಸ್ಕಾರದ ಮನೋಭಾವವನ್ನು ಎತ್ತಿತೋರಿಸುತ್ತದೆ” ಎಂದು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
“ಪ್ರತಿ ಸ್ವಾತಂತ್ರ್ಯ ದಿನದಂದು, ಮೋದಿ ನೇತೃತ್ವದ ಬಿಜೆಪಿ ಇತಿಹಾಸವನ್ನು ವಿರೂಪಗೊಳಿಸಿ ದೇಶದ್ರೋಹಿಗಳನ್ನು ವೀರರನ್ನಾಗಿ ಮಾಡುವುದನ್ನು ಒಂದು ಗುರಿಯನ್ನಾಗಿಸಿಕೊಂಡಿದೆ. ದ್ವೇಷದ ಬೀಜಗಳನ್ನು ಬಿತ್ತಲು ಬ್ರಿಟಿಷರೊಂದಿಗೆ ಸಹಕರಿಸಿದವರಿಂದ ನಾವು ಏನು ಬಯಸಲು ಸಾಧ್ಯ” ಎಂದು ಪ್ರಶ್ನಿಸಿದ್ದಾರೆ.
