ಉತ್ತರಾಖಂಡ | ಹಿಂಸಾತ್ಮಕವಾಗಿ ಬದಲಾದ ಹಲ್ದ್‌ವಾನಿ ಅತಿಕ್ರಮಣ ತೆರವು ಕಾರ್ಯಾಚರಣೆ; ಇಬ್ಬರ ಸಾವು

Date:

Advertisements
ಹಿಂಸಾತ್ಮಕವಾಗಿ ಬದಲಾದ ಹಲ್ದ್‌ವಾನಿ ಅತಿಕ್ರಮಣ ತೆರವು ಕಾರ್ಯಾಚರಣೆಗೆ ಇಬ್ಬರು ಮೃತಪಟ್ಟು ಹಲವರು ಗಾಯಗೊಂಡಿದ್ದಾರೆ

ಉತ್ತರಾಖಂಡದ ಹಲ್ದ್‌ವಾನಿ ಅತಿಕ್ರಮಣ ತೆರವು ಸಂದರ್ಭದಲ್ಲಿ ನಡೆದ ಹಿಂಸಾಚಾರದಲ್ಲಿ ಅಧಿಕೃತ ಮಾಹಿತಿಯ ಪ್ರಕಾರ ಇಬ್ಬರು ಮೃತಪಟ್ಟು ಪೊಲೀಸ್ ಸಿಬ್ಬಂದಿ ಸೇರಿದಂತೆ ಅನೇಕರು ಗಾಯಗೊಂಡಿದ್ದಾರೆ. ಆದರೆ ಮಾಧ್ಯಮ ವರದಿಗಳು ಐವರು ಮೃತಪಟ್ಟು 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವುದಾಗಿ ತಿಳಿಸಿದೆ.

ಹಲ್ದ್‌ವಾನಿ ಜಿಲ್ಲೆಯ ಬನ್‌ಭೂಲ್‌ಪುರದಲ್ಲಿ ಗುರುವಾರ ಸಂಜೆ ಸರ್ಕಾರಿ ಭೂಮಿಯನ್ನು ಅತಿಕ್ರಮಿಸಿರುವ ಆರೋಪದಲ್ಲಿ ಸ್ಥಳೀಯ ಆಡಳಿತ ಮಸೀದಿ ಮತ್ತು ಮದರಸಾ ನೆಲಸಮಗೊಳಿಸಲು ಮುಂದಾದಾಗ ಹಿಂಸಾಚಾರ ಭುಗಿಲೆದ್ದಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. 

ಪ್ರತ್ಯಕ್ಷದರ್ಶಿಗಳು ತಿಳಿಸಿರುವ ಮಾಧ್ಯಮ ವರದಿಗಳ ಪ್ರಕಾರ, ಗುರುವಾಗ (ಫೆಬ್ರವರಿ 8) ಸಂಜೆ 3.30ಕ್ಕೆ ಅಧಿಕಾರಿಗಳು ಬುಲ್ದೋಜರ್‌ಗಳ ಸಮೇತ ‘ಮಾಲಿಕ್‌ ಕೆ ಬಗೀಚೇ’ ಮದ್ರಾಸವನ್ನು ಕೆಡವಲು ಆಗಮಿಸಿದ್ದರು. ಆದರೆ ಅಧಿಕಾರಿಗಳು ಸ್ಥಳದಲ್ಲಿದ್ದವರಿಗೆ ಯಾವುದೇ ತೆರವು ಆದೇಶವನ್ನು ತೋರಿಸಿರಲಿಲ್ಲ ಎಂದು ಆರೋಪಿಸಲಾಗಿದೆ. ಮಸೀದಿ ಮಂಡಳಿಯ ಜೊತೆಗೆ ಮಾತುಕತೆಗೂ ಅವರು ಸಿದ್ಧರಿರಲಿಲ್ಲ. “ಮಹಿಳೆಯರಿಗೆ ಪೊಲೀಸರು ಲಾಠಿಗಳಿಂದ ಹೊಡೆದಿದ್ದಾರೆ. ಪ್ರದೇಶದಲ್ಲಿ ಕನಿಷ್ಠ ನಾಲ್ವರಿಗೆ ಗುಂಡು ತಗಲಿದೆ” ಎಂದು ಸ್ಥಳೀಯರು ಹೇಳಿದ್ದಾರೆ. 

Advertisements

ಮದ್ರಸಾ ಕೆಡವುವ ಮೊದಲು ಧಾರ್ಮಿಕ ಗ್ರಂಥಗಳನ್ನು ಸಂಗ್ರಹಿಸಲು ಇಬ್ಬರಿಗೆ ಮಾತ್ರ ಕಟ್ಟಡದ ಒಳಗೆ ಹೋಗಲು ಅಧಿಕಾರಿಗಳು ಅನುವು ಮಾಡಿಕೊಟ್ಟಿದ್ದರು. ಜನರ ಪ್ರಯತ್ನಗಳು ಮತ್ತು ಬೇಡಿಕೆಯ ಹೊರತಾಗಿಯೂ ತೆರವು ಕಾರ್ಯಾಚರಣೆಗೆ ನೀಡಲಾಗಿರುವ ಆದೇಶವನ್ನು ತೋರಿಸಿರಲಿಲ್ಲ. ಹೀಗಾಗಿ ಪರಿಸ್ಥಿತಿ ಬಿಗುವಾಗಿತ್ತು. ಸ್ಥಳದಲ್ಲಿದ್ದವರು ಹಿಂಸೆಗೆ ಇಳಿದಾಗ ಕೆಲವು ಪೊಲೀಸ್ ಅಧಿಕಾರಿಗಳಿಗೂ ಗಾಯಗಳಾಗಿದ್ದವು. ಆದರೆ ಮಹಿಳೆಯರು ಏನು ತಪ್ಪು ಮಾಡಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಪ್ರಶ್ನಿಸಿರುವುದಾಗಿ ವರದಿಯಾಗಿದೆ.

ಸ್ಥಳೀಯ ಆಡಳಿತ ಕೆಡವಿದ ಮದರಸಾ ರೈಲ್ವೇ ಕಾಲನಿಯಲ್ಲಿದ್ದು, 4000ಕ್ಕೂ ಅಧಿಕ ಕುಟುಂಬಗಳು ನೆಲೆಸಿದ್ದವು. ರೈಲ್ವೇ ವಿಸ್ತರಣೆಗೆ ಕೇಂದ್ರ ಸರ್ಕಾರಕ್ಕೆ ಈ ಭೂಮಿಯ ಅಗತ್ಯವಿದೆ ಮತ್ತು ಈ ವಿಚಾರವಾಗಿ ಸುಪ್ರೀಂಕೋರ್ಟ್‌ನಲ್ಲಿ ಈಗಾಗಲೇ ವಿಚಾರಣೆಯೂ ನಡೆದಿದೆ.

ವಿವಾದಿತ ಸ್ಥಳ ನಾಜೂಲ್ ಭೂಮಿಯಾಗಿದೆ. ಕೃಷಿಯೇತರ ಉದ್ದೇಶಕ್ಕಾಗಿ ರಸ್ತೆ, ಮಾರುಕಟ್ಟೆ, ಮೈದಾನದಂತಹ ಇತರ ಸಾರ್ವಜನಿಕ ಉದ್ದೇಶದ ಸರ್ಕಾರಿ ಆಸ್ತಿಗಳ ನಿರ್ಮಾಣಕ್ಕೆ ಬಳಸಲಾಗುವ ನಾಜೂಲ್ ಭೂಮಿಯನ್ನು ಅತಿಕ್ರಮಿಸಿ ಮಸೀದಿ ಮತ್ತು ಮದರಸಾ ನಿರ್ಮಿಸಲಾಗಿದೆ ಎಂದು ಆಡಳಿತ ಆರೋಪಿಸಿದೆ. ಅತಿಕ್ರಮಣ ತೆರವು ಕಾರ್ಯಾಚರಣೆ ಆರಂಭವಾದಾಗ ಜನರು ಕಲ್ಲುಗಳನ್ನು ಎಸೆದು, ಕಾರುಗಳಿಗೆ ಬೆಂಕಿ ಹಚ್ಚಿದ್ದರು. ಪೊಲೀಸ್ ಠಾಣೆಗೂ ಮುತ್ತಿಗೆ ಹಾಕಿದ್ದರು. ಈ ವಿರೋಧವನ್ನು ತಣಿಸಲು ಮುಖ್ಯಮಂತ್ರಿ ಪುಷ್ಕರ್ ಧಾಮಿ ಗಲಭೆನಿರತರಿಗೆ ಸ್ಥಳದಲ್ಲೇ ಗುಂಡು ಹಾರಿಸಲು ಆದೇಶಿಸಿದ್ದರು.

ಅತಿಕ್ರಮಣ ತೆರವು ಬಗ್ಗೆ ಶುಕ್ರವಾರ ಸ್ಪಷ್ಟನೆ ನೀಡಿರುವ ನೈನಿತಾಲ್ ಜಿಲ್ಲಾಧಿಕಾರಿ ವಂದನಾ ಸಿಂಗ್, “ನಿರ್ದಿಷ್ಟ ಆಸ್ತಿಯನ್ನು ಕೆಡವಲು ಈ ತೆರವು ಯೋಜನೆ ಹಾಕಿಕೊಂಡಿರಲಿಲ್ಲ. ಕಳೆದ 15-20 ದಿನಗಳಿಂದ ರಸ್ತೆಗಳ ಸಾರಿಗೆದಟ್ಟಣೆಯನ್ನು ತಪ್ಪಿಸಲು ಹಲ್ದ್‌ವಾನಿಯಲ್ಲಿ ನಗರ ನಿಗಮದ ಆಸ್ತಿಗಳಿಗೆ ಸಂಬಂಧಿಸಿದ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಪ್ರತಿಯೊಬ್ಬರಿಗೂ ಮೊದಲೇ ನೊಟೀಸ್ ನೀಡಿ ಕುಂದುಕೊರತೆ ತಿಳಿಸಲು ಅವಕಾಶ ಕೊಡಲಾಗಿದೆ. ಹೆಚ್ಚು ಕಾಲಾವಕಾಶ ನೀಡದ ಸ್ಥಳದಲ್ಲಿ ತೆರವು ಕಾರ್ಯಾಚರಣೆ ನಡೆಸಲಾಗಿದೆ. ಈಗ ತೆರವು ಮಾಡಿರುವ ಸ್ಥಳದಲ್ಲಿ ಮದರಸಾ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವುದು ಮತ್ತು ಮಸೀದಿಯಲ್ಲಿ ನಮಾಜ್ ಮಾಡುತ್ತಿರುವ ಬಗ್ಗೆ ಕಾನೂನು ದಾಖಲೆಗಳು ಇರಲಿಲ್ಲ. ಮೂರು ದಿನಗಳಲ್ಲಿ ಅತಿಕ್ರಮಣ ಬಿಡುವಂತೆ ತಿಳಿಸಲಾಗಿದೆ” ಎಂದು ಹೇಳಿದ್ದಾರೆ.

“ಜನರು ಗುಂಪುಗೂಡಿ ಠಾಣೆಗೆ ಮುತ್ತಿಗೆ ಹಾಕಿರುವುದರಿಂದ ಪೊಲೀಸರು ಬಲಪ್ರಯೋಗಿಸಬೇಕಾಗಿ ಬಂದಿತ್ತು. ಹೀಗಾಗಿ ಸಾವು ನೋವು ಸಂಭವಿಸಿದೆ. ಪೊಲೀಸ್ ಠಾಣೆಯ ಭದ್ರತೆಗಾಗಿ ಕಾರ್ಯಾಚರಣೆ ನಡೆಸಲಾಗಿದೆ. ಸಾವಿಗೆ ಕಾರಣವೇನೆಂದು ತನಿಖೆ ನಡೆಸುತ್ತಿದ್ದೇವೆ. ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಒಬ್ಬರಿಗೆ ಗುಂಡು ತಗಲಿ ಗಾಯವಾಗಿದೆ. ಮುತ್ತಿಗೆ ಸಮಯದಲ್ಲಿ ಹಲ್ದ್‌ವಾನಿಯಲ್ಲಿ 100 ಪೊಲೀಸ್ ಸಿಬ್ಬಂದಿಗಳಿದ್ದರು” ಎಂದು ಅವರು ತಿಳಿಸಿದ್ದಾರೆ.

ರಾಜ್ಯ ಕಾನೂನು ಮತ್ತು ಸುವ್ಯವಸ್ಥೆಯ ಎಡಿಜಿ ಎಪಿ ಅಂಶುಮನ್ ಮಾಧ್ಯಮಗಳಿಗೆ ತಿಳಿಸಿರುವ ಪ್ರಕಾರ, “ಆರಂಭದಲ್ಲಿ ಬನ್‌ಭೂಲ್‌ಪುರ ಹಿಂಸೆಗೆ ನಾಲ್ವರು ಮೃತಪಟ್ಟಿದ್ದಾರೆ ಮತ್ತು 100ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿದ್ದಾರೆ ಎಂದು ಸುದ್ದಿ ಬಂದಿತ್ತು. ನಂತರ ಜಿಲ್ಲಾಧಿಕಾರಿ ಸ್ಪಷ್ಟನೆ ನೀಡಿ, ಆರಂಭದಲ್ಲಿ ನಾಲ್ವರು ಮೃತಪಟ್ಟ ಸುದ್ದಿ ಬಂದಿತ್ತು. ಆದರೆ ಮೃತಪಟ್ಟ ಇಬ್ಬರನ್ನು ಎರಡು ಆಸ್ಪತ್ರೆಗಳಿಗೆ ತೆಗೆದುಕೊಂಡು ಹೋಗಿದ್ದ ಕಾರಣ ಸಂಖ್ಯೆಯಲ್ಲಿ ಗೊಂದಲವಾಗಿದೆ ಎಂದು ತಿಳಿಸಿದ್ದರು.”

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೀರತ್ ಗಡಿಯಾರ ಗೋಪುರ ಹತ್ತಿ ವಿಡಿಯೋ ಮಾಡುವ ಸಾಹಸ ಮಾಡಿದ ‘ಸ್ಪೈಡರ್‌ಮ್ಯಾನ್’ ಬಂಧನ!

'ಸ್ಪೈಡರ್‌ಮ್ಯಾನ್' ವೇಷಭೂಷಣವನ್ನು ಧರಿಸಿ ಮೀರತ್‌ನ ಐತಿಹಾಸಿಕ ಗಡಿಯಾರ ಗೋಪುರವನ್ನು ಹತ್ತಿ ಅಪಾಯಕಾರಿ...

ಸರ್ಕಾರದಿಂದ ನಷ್ಟ ಸರಿದೂಗಿಸಲಾಗದು, ರೈತರೇ ಕಷ್ಟಕ್ಕೆ ಒಗ್ಗಿಕೊಳ್ಳಬೇಕು: ಬಿಜೆಪಿ ನಾಯಕನ ಹೇಳಿಕೆಗೆ ತೀವ್ರ ಆಕ್ರೋಶ

ಇತ್ತೀಚಿಗೆ ಆದ ಅತಿವೃಷ್ಟಿಯಿಂದ ರೈತರಿಗೆ ಆಗಿರುವ ನಷ್ಟಕ್ಕೆ ಸರ್ಕಾರ ಪರಿಹಾರ ನೀಡಲು...

ಏನಿದು ಅನಿಲ್ ಅಂಬಾನಿ ಬ್ಯಾಂಕ್ ವಂಚನೆ? ಕ್ರಮ ಕೈಗೊಳ್ಳುತ್ತಾರ ಮೋದಿ?

ತನ್ನನ್ನು ತಾನು ದಿವಾಳಿ ಎಂದು ಘೋಷಿಸಿಕೊಂಡಿರುವ ಭಾರತದ ಭಾರೀ ಶ್ರೀಮಂತ ಉದ್ಯಮಿ...

Download Eedina App Android / iOS

X