ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಮತ್ತು ಬಿಜೆಪಿ ಮುಖ್ಯಸ್ಥ ಮೋಹನ್ ಲಾಲ್ ಬಡೋಲಿ ಬಗ್ಗೆ ಹೇಳಿಕೆಯನ್ನು ನೀಡಿದ ಹರಿಯಾಣ ಸಚಿವ ಅನಿಲ್ ವಿಜ್‌ಗೆ ಬಿಜೆಪಿ ಶೋಕಾಸ್ ನೋಟಿಸ್ ಜಾರಿ ಮಾಡಿದೆ.
“ಇತ್ತೀಚೆಗೆ ನೀವು ಪಕ್ಷದ ಅಧ್ಯಕ್ಷರ ವಿರುದ್ಧ ಮತ್ತು ಮುಖ್ಯಮಂತ್ರಿ ವಿರುದ್ಧ ಬಹಿರಂಗವಾಗಿ ಹೇಳಿಕೆ ನೀಡಿದ್ದೀರಿ. ಇದು ಗಂಭೀರವಾದ ಆರೋಪವಾಗಿದೆ ಮತ್ತು ಪಕ್ಷ ನಿಯಮ, ಆಂತರಿಕ ಶಿಸ್ತಿನ ಉಲ್ಲಂಘನೆಯಾಗಿದೆ” ಹಿಂದಿಯಲ್ಲಿ ನೀಡಿದ ಶೋಕಾಸ್ ನೋಟಿಸ್‌ನಲ್ಲಿ ಮೋಹನ್ ಲಾಲ್ ಬಡೋಲಿ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಹರಿಯಾಣ ಮುಖ್ಯಮಂತ್ರಿಯಾಗಿ ನಯಾಬ್ ಸಿಂಗ್ ಸೈನಿ ಪ್ರಮಾಣ ವಚನ ಸ್ವೀಕಾರ
ಹಾಗೆಯೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಸೂಚನೆಯಂತೆ ಈ ಶೋಕಾಸ್ ನೋಟಿಸ್ ನೀಡಲಾಗಿದೆ ಎಂದು ಬಡೋಲಿ ತಿಳಿಸಿದ್ದಾರೆ. “ಮೂರು ದಿನದ ಒಳಗಾಗಿ ಈ ವಿಚಾರದಲ್ಲಿ ಲಿಖಿತ ಸ್ಪಷ್ಟನೆಯನ್ನು ನೀಡಬೇಕು” ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ.
ಈ ಹೇಳಿಕೆಯು ಪಕ್ಷದ ಸಿದ್ಧಾಂತಕ್ಕೆ ವಿರುದ್ಧವಾಗಿದೆ. ಹಾಗೆಯೇ ನೆರೆಯ ರಾಜ್ಯದಲ್ಲಿ (ದೆಹಲಿ) ಚುನಾವಣಾ ಪ್ರಚಾರ ಮಾಡುತ್ತಿರುವ ಸಂದರ್ಭದಲ್ಲಿ ಇಂತಹ ಹೇಳಿಕೆಗಳು ಸರಿಯಲ್ಲ ಎಂದು ಬಿಜೆಪಿ ಶೋಕಾಸ್ ನೋಟಿಸ್‌ನಲ್ಲಿ ಹೇಳಿದೆ.
ಅಂಬಾಲ ಕ್ಷೇತ್ರದಲ್ಲಿ ಒಟ್ಟು ಏಳು ಬಾರಿ ಶಾಸಕರಾಗಿ ಆಯ್ಕೆಯಾಗಿರುವ 71 ವರ್ಷದ ಅನಿಲ್ ವಿಜ್ ನಿರಂತರವಾಗಿ ಸಿಎಂ ಸೈನಿ ವಿರುದ್ಧ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ವಿಚಾರವನ್ನು ಸೈನಿ ಸಮರ್ಥನೆ ಮಾಡಿಕೊಂಡಿದ್ದರು. ಸಚಿವರಾಗಿರುವ, ಹಿರಿಯ ನಾಯಕರಾಗಿರುವ ಅನಿಲ್ ವಿಜ್ ಅವರಿಗೆ ಏನು ಅನಿಸುತ್ತದೆಯೋ ಅದನ್ನು ಹೇಳುವ ಹಕ್ಕಿದೆ ಎಂದು ಹೇಳಿಕೊಂಡಿದ್ದರು.
