ಹಾಸನ ಲೋಕಸಭೆ ಚುಣಾವಣೆ ಹತ್ತಿರ ಬರುತ್ತಿದ್ದಂತೆ ಹಾಸನ ಕ್ಷೇತ್ರದಲ್ಲಿ ಪೈಪೋಟಿ ಜೋರಾಗಿಯೇ ನಡೆದಿದೆ. ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಹಾಗೂ ಮಾಜಿ ಸಚಿವ ದಿ.ಪುಟ್ಟಸ್ವಾಮಿಗೌಡರ ಕುಟುಂಬದ ತಲೆಮಾರಿನ ನಡುವೆ ಲೋಕಸಭಾ ಚುನಾವಣೆ ಸಜ್ಜಾಗಿದೆ.
ಮಾಜಿ ಸಚಿವ ದಿ.ಪುಟ್ಟಸ್ವಾಮಿಗೌಡರ ಮೊಮ್ಮಗ ಶ್ರೇಯಸ್ ಪಟೇಲ್ ಕಾಂಗ್ರೆಸ್ ಪಕ್ಷದಿಂದ ಹಾಸನ ಲೋಕಸಭೆ ಕ್ಷೇತ್ರದ ಅಧಿಕೃತ ಅಭ್ಯರ್ಥಿ ಎಂದು ಘೋಷಣೆ ಮಾಡಲಾಗಿದೆ. ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ಬಹುತೇಕ ಟಿಕೆಟ್ ನಿಶ್ಚಿತವಾಗಿದ್ದು, ಮಾಜಿ ಪ್ರಧಾನಿ ಹಾಗೂ ಮಾಜಿ ಸಚಿವರ ಮೊಮ್ಮಕ್ಕಳ ನಡುವೆ ಹಾಸನ ಲೋಕಸಭೆ ಚುನಾವಣೆ ಮುಖಾಮುಖಿಗಳಾಗುವುದು ಬಹುತೇಕ ನಿಶ್ಚಿತ ಎನ್ನಲಾಗುತ್ತಿದೆ.
ಹಾಸನ ಜಿಲ್ಲಾ ಪಂಚಾಯತಿ ಸದಸ್ಯ ಆಗಿದ್ದ ಶ್ರೇಯಸ್ ಪಾಟೀಲ್ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಎಚ್. ಡಿ ರೇವಣ್ಣ ಅವರ ವಿರುದ್ಧ 3500 ಮತಗಳ ಅಂತರದಲ್ಲಿ ಸೋತಿದ್ದರು. ಅವಾಗಿನಿಂದಲೇ ಶ್ರೇಯಸ್ ಪಟೇಲ್ ಹಾಸನ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಎಂದು ಕ್ಷೇತ್ರದಲ್ಲಿ ಬಿಂಬಿಸಲಾಗಿತ್ತು.
ಎಚ್ ಡಿ ದೇವೆಗೌಡ ಹಾಗೂ ಮಾಜಿ ಸಚಿವ ಪುಟ್ಟಸ್ವಾಮಿಗೌಡರ ನಡುವಿನ ಸ್ನೇಹ ಮುರಿದುಕೊಂಡ ಮೇಲೆ ಪ್ರತಿ ಚುಣಾವಣೆಯಲ್ಲೂ ಪ್ರತಿ ಸ್ಪರ್ಧಿಗಳಾಗಿ ಕಣಕ್ಕಿಳಿಯುತ್ತಿದ್ದರು. ಮತ್ತೆ ಈಗ ಎರಡು ಕುಟುಂಬಗಳ ಮಧ್ಯೆ ಹಾಸನ ಲೋಕಸಭೆ ಚುನಾವಣೆ ಸಾಕ್ಷಿಯಾಗಲಿದೆ.
2013 ಹಾಗೂ 2018ರ ವಿಧಾನಸಭೆ ಚುಣಾವಣೆಯಲ್ಲಿ ಎಚ್ ಡಿ ರೇವಣ್ಣ ಅವರ ವಿರುದ್ದ ದಿ. ಪುಟ್ಟಸ್ವಾಮಿಗೌಡರ ಸೊಸೆ ಅನುಪಮಾ ಸ್ಪರ್ಧೆ ಮಾಡಿ ಸೋಲನ್ನು ಅನುಭವಿಸಿದ್ದರು. 2023ರ ವಿಧಾನ ಸಭೆ ಚುಣಾವಣೆಯಲ್ಲಿ ಎಚ್ ಡಿ ರೇವಣ್ಣ ಅವರ ವಿರುದ್ದ ಶ್ರೇಯಸ್ ಪಟೇಲ್ ಅವರು 3500 ಮತಗಳ ಅಂತರದಲ್ಲಿ ಸೋತಿದ್ದರು. ಈಗ ಮತ್ತೆ 2024 ಹಾಸನ ಲೋಕಸಭೆ ಚುಣಾವಣೆಗೆ ಶ್ರೇಯಸ್ ಪಟೇಲ್ ಕಾಂಗ್ರೆಸ್ ಅಭ್ಯರ್ಥಿ ಘೋಷನೆಯಾಗಿದ್ದರಿಂದ, ಇದೀಗ ಹಾಲಿ ಸಂಸದ ಪ್ರಜ್ವಲ್ ರೇವಣ್ಣ ಅವರ ವಿರುದ್ದ ಕಣಕ್ಕೆ ಇಳಿಯಲಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ ಪ್ರಜ್ವಲ್ ರೇವಣ್ಣರನ್ನು ಸೋಲಿಸಲು ಪ್ರಭಲ ಸ್ಪರ್ಧಿ ಶ್ರೇಯಸ್ ಪಟೇಲ್ ಅವರನ್ನೆ ಕಣ್ಣಕ್ಕೆ ಇಳಿಬೇಕೆಂದು ಕಾಂಗ್ರೆಸ್ ಲೆಕ್ಕಾಚಾರ ಮೊದಲಿನಿಂದಲೂ ಇತ್ತು. ಅದೇ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ಹೈಕಮಾಂಡ್ ಟಿಕೆಟ್ ನೀಡಿದ್ದಾರೆ.
ಟಿಕೆಟ್ ಘೋಷಣೆ ಆಗುತ್ತಿದ್ದಂತೆ ಶ್ರೇಯಸ್ ಪಟೇಲ್ ಕ್ಷೇತ್ರದಲ್ಲಿ ಓಡಾಟ ಆರಂಭಿಸಿದ್ದಾರೆ. ಕ್ಷೇತ್ರದ ಕಾಂಗ್ರೆಸ್ ನಾಯಕರು, ಮುಖಂಡರರನ್ನು ಭೇಟಿ ಮಾಡಿ ಪ್ರಚಾರದ ಕುರಿತು ಮಾತುಕತೆ ನಡೆಸಿದ್ದಾರೆ.
ಹಾಸನ ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಘೋಷಣೆ ಮಾಡಿದ್ದರು. ಬಿಜೆಪಿ- ಜೆಡಿಎಸ್ ಮೈತ್ರಿ ಕೂಟದಲ್ಲಿ ಎರಡು ಪಕ್ಷಗಳ ನಡುವೆ ಹಗ್ಗ ಜಗ್ಗಾಟ ನಡೆಯುತ್ತಿದೆ. ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ನಾಯಕರು ಯಾವುದೇ ಮಾತ್ರ ಮೈತ್ರಿಯ ಬಗ್ಗೆ ಯಾವುದೇ ಸೂಚನೆ ಬಂದಿಲ್ಲ. ಎನ್ನುತ್ತಿದ್ದು, ಬಿಜೆಪಿ ಅಭ್ಯರ್ಥಿಗೆ ಟಿಕೆಟ್ ಕೊಡಬೇಕೆಂದು ಹೇಳುತ್ತಿದ್ದಾರೆ.
ಹಾಸನ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದೇಶ ನಾಗೇಂದ್ರ ಅವರು, ಜಿಲ್ಲೆಯಲ್ಲಿ ಪಕ್ಷ ಇನ್ನೂ ಬಲಿಷ್ಠವಾಗಿದೆ. ಜೆಡಿಎಸ್ ಬಿಟ್ಟು ಬಿಜೆಪಿ ಸೇರಿರುವ ಎ ಟಿ ರಾಮಸ್ವಾಮಿ ಸಮರ್ಥ ಅಭ್ಯರ್ಥಿ ಆಗಲಿದ್ದಾರೆ. ಅವರಿಗೆ ಟಿಕೆಟ್ ನೀಡದರೆ ಒಳ್ಳೆದು ಎಂದು ವರಿಷ್ಠರಿಗೂ ಹೇಳಿದ್ದೇನೆ ಎನ್ನುತ್ತಾರೆ.

ಗಿರಿಜಾ ಎಸ್ ಜಿ
ಪತ್ರಕರ್ತೆ, ಸಾಮಾಜಿಕ ಕಾರ್ಯಕರ್ತೆ, ಮಹಿಳಾ ಪರ ಹೋರಾಟಗಾರ್ತಿ.