“ಕುಟುಂಬಗಳಲ್ಲಿನ ಬಿರುಕುಗಳನ್ನು ಸಮಾಜವು ಇಷ್ಟಪಡುವುದಿಲ್ಲ. ನನ್ನ ತಪ್ಪಿನ ಅರಿವು ನನಗಾಗಿದೆ” ಎಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಹೇಳಿದ್ದಾರೆ. ಇತ್ತೀಚಿನ ಲೋಕಸಭೆ ಚುನಾವಣೆಯಲ್ಲಿ ಪತ್ನಿ ಸುನೇತ್ರಾ ಮತ್ತು ಸೋದರಸಂಬಂಧಿ ಸುಪ್ರಿಯಾ ಸುಳೆ ನಡುವಿನ ಸ್ಪರ್ಧೆಯನ್ನು ಉಲ್ಲೇಖಿಸಿ ಈ ಮಾತನ್ನು ಹೇಳಿದ್ದಾರೆ.
ಎನ್‌ಸಿಪಿ ನಾಯಕ ಪವಾರ್ “ನನ್ನ ಚಿಕ್ಕಪ್ಪ ಶರದ್ ಪವಾರ್ ಅವರ ಪುತ್ರಿ ಎನ್‌ಸಿಪಿ (ಎಸ್‌ಪಿ) ನಾಯಕಿ ಸುಳೆ ವಿರುದ್ಧ ನನ್ನ ಪತ್ನಿಯನ್ನು ಕಣಕ್ಕಿಳಿಸುವ ಮೂಲಕ ತಪ್ಪು ಮಾಡಿದ್ದೇನೆ. ರಾಜಕೀಯವು ಮನೆಯೊಳಗೆ ಪ್ರವೇಶಿಸಬಾರದು” ಎಂದು ಹೇಳಿದ ಒಂದು ತಿಂಗಳೊಳಗೆ ಎರಡನೇ ಬಾರಿಗೆ ಅಜಿತ್ ಪವಾರ್ ತನ್ನ ತಪ್ಪಿನ ಬಗ್ಗೆ ಪ್ರಸ್ತಾಪಿಸಿದ್ದಾರೆ.
ಮಹಾಯುತಿ ಮೈತ್ರಿಕೂಟದ ಭಾಗವಾಗಿರುವ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿಯು ಮೂಲ ಎನ್‌ಸಿಪಿಯಿಂದ ವಿಭಜನೆಯಾಗಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದೆ. ಆದರೆ ಕಳಪೆ ಪ್ರದರ್ಶನವನ್ನು ನೀಡಿದ್ದು, ಈಗ ಅಜಿತ್ ಪವಾರ್ ಕಳಪೆ ಪ್ರದರ್ಶನಕ್ಕೆ ಕಾರಣವಾದ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾರೆ.
ಶುಕ್ರವಾರ ಗಡ್ಚಿರೋಲಿ ನಗರದಲ್ಲಿ ಎನ್‌ಸಿಪಿ ಆಯೋಜಿಸಿದ್ದ ಜನಸಮ್ಮಾನ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಪವಾರ್, ಪಕ್ಷದ ನಾಯಕ ಮತ್ತು ರಾಜ್ಯ ಸಚಿವ ಧರ್ಮರಾವ್ ಬಾಬಾ ಆತ್ರಂ ಅವರ ಪುತ್ರಿ ಭಾಗ್ಯಶ್ರೀ ಶರದ್ ಪವಾರ್ ನೇತೃತ್ವದ ಎನ್‌ಸಿಪಿಗೆ ಸೇರದಂತೆ ತಡೆಯುವ ಪ್ರಯತ್ನವನ್ನು ಮಾಡಿದ್ದಾರೆ.
ಮಹಾರಾಷ್ಟ್ರದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಭಾಗ್ಯಶ್ರೀ ಮತ್ತು ಅವರ ತಂದೆ ನಡುವೆ ಸ್ಪರ್ಧೆ ನಡೆಯುವ ಬಗ್ಗೆ ಊಹಾಪೋಹಗಳು ನಡೆಯುತ್ತಿವೆ.
ಇದನ್ನು ಓದಿದ್ದೀರಾ? ಸಿಗದ ಸಚಿವ ಸ್ಥಾನ: ಮೋದಿ ನೇತೃತ್ವದ ಮೊದಲ ಮೈತ್ರಿ ಸರ್ಕಾರದಲ್ಲಿ ಅಜಿತ್ ಪವಾರ್ ಬಣಕ್ಕೆ ಹಿನ್ನಡೆ
“ಯಾರೂ ಮಗಳನ್ನು ತನ್ನ ತಂದೆಗಿಂತ ಹೆಚ್ಚು ಪ್ರೀತಿಸುವುದಿಲ್ಲ. ಬೆಳಗಾವಿಯಲ್ಲಿ ಮದುವೆ ಮಾಡಿಕೊಟ್ಟರೂ ಗಡ್ಚಿರೋಲಿಯಲ್ಲಿ ಆಕೆಗೆ ಬೆಂಬಲವಾಗಿ ನಿಂತು ಜಿಲ್ಲಾ ಪರಿಷತ್ತಿನ ಅಧ್ಯಕ್ಷರನ್ನಾಗಿ ಮಾಡಿದರು. ಈಗ ನೀವು (ಭಾಗ್ಯಶ್ರೀ) ನಿಮ್ಮ ಸ್ವಂತ ತಂದೆಯ ವಿರುದ್ಧ ಹೋರಾಡಲು ಸಜ್ಜಾಗಿದ್ದೀರಿ. ಇದು ಸರಿಯೇ” ಎಂದು ಅಜಿತ್ ಪ್ರಶ್ನಿಸಿದರು.
“ನೀವು ನಿಮ್ಮ ತಂದೆಯನ್ನು ಬೆಂಬಲಿಸಬೇಕು ಮತ್ತು ಅವರು ಗೆಲ್ಲಲು ಸಹಾಯ ಮಾಡಬೇಕು. ಏಕೆಂದರೆ ಅವರಿಗೆ ಮಾತ್ರ ಈ ಪ್ರದೇಶವನ್ನು ಅಭಿವೃದ್ಧಿಪಡಿಸುವ ಸಾಮರ್ಥ್ಯ ಮತ್ತು ಸಂಕಲ್ಪವಿದೆ. ಸ್ವಂತ ಕುಟುಂಬವನ್ನು ಒಡೆಯುವುದನ್ನು ಸಮಾಜ ಎಂದಿಗೂ ಒಪ್ಪಿಕೊಳ್ಳುವುದಿಲ್ಲ” ಎಂದು ಅಭಿಪ್ರಾಯಿಸಿದರು.
“ಸಮಾಜ ಇದನ್ನು ಇಷ್ಟಪಡುವುದಿಲ್ಲ. ನಾನು ಅದನ್ನೇ ಅನುಭವಿಸಿದ್ದೇನೆ ಮತ್ತು ನನ್ನ ತಪ್ಪನ್ನು ಒಪ್ಪಿಕೊಂಡಿದ್ದೇನೆ” ಎಂದು ಪವಾರ್ ಹೇಳಿದರು.
ಲೋಕಸಭೆ ಚುನಾವಣೆಯಲ್ಲಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಸ್ಪರ್ಧಿಸಿದ್ದ ಬಾರಾಮತಿ ಸೇರಿದಂತೆ ನಾಲ್ಕು ಕ್ಷೇತ್ರಗಳ ಪೈಕಿ ಮೂರರಲ್ಲಿ ಸೋಲು ಅನುಭವಿಸಿದೆ. ಇದಕ್ಕೆ ವ್ಯತಿರಿಕ್ತವಾಗಿ ಶರದ್ ಪವಾರ್ ನೇತೃತ್ವದ ಬಣ 10ರಲ್ಲಿ ಸ್ಪರ್ಧಿಸಿ 8 ಸ್ಥಾನಗಳನ್ನು ಗೆದ್ದಿದೆ.
STORY | Society doesn't like anybody breaking own family; have realised my mistake: Ajit Pawar
— Press Trust of India (@PTI_News) September 8, 2024
READ: https://t.co/CpYqEwTLXL pic.twitter.com/DG8up9WCPZ

ಇಂತವರ ಮಾತನ್ನು ನಂಬಬಾರದು ಸಂದರ್ಭ ತಕ್ಕಂತೆ ಮಾತು ಬದಲಾಯಿಸುತ್ತಾರ ಅಧಿಕಾರವೇ ಮುಖ್ಯ ಇವರಿಗೆ ೋಈಗ ಹೇಳಿದೆಲ್ಲ ನಾಟಕ