ಗೃಹಲಕ್ಷ್ಮಿ ಯೋಜನೆ ಬಗ್ಗೆ ಮಾತನಾಡುವ ಮೂಲಕ ಮಾಜಿ ಮುಖ್ಯಮಂತ್ರಿ, ಮಂಡ್ಯ ಲೋಕಸಭಾ ಅಭ್ಯರ್ಥಿ ಎಚ್.ಡಿ ಕುಮಾರಸ್ವಾಮಿ ಮತ್ತೆ-ಮತ್ತೆ ವಿವಾದಕ್ಕೆ ಸಿಲುಕುತ್ತಿದ್ದಾರೆ. ಈ ಹಿಂದೆ, ಗೃಹಲಕ್ಷ್ಮಿ ಯೋಜನೆಯಿಂದ ಮಹಿಳೆಯರು ದಾರಿ ತಪ್ಪುತ್ತಿದ್ದಾರೆ ಎಂದಿದ್ದ ಕುಮಾರಸ್ವಾಮಿ, ಇದೀಗ, ಯೋಜನೆಯ ಫಲಾನುಭವಿಗಳಿರುವ ಕುಟುಂಬದ ಪುರುಷರು ಕುಡುಕರು ಎಂಬ ರೀತಿಯಲ್ಲಿ ಹೇಳಿಕೆ ನೀಡಿದ್ದಾರೆ.
ತುಮಕೂರು ಜಿಲ್ಲೆಯ ಮಧುರಿಯಲ್ಲಿ ನಡೆದ ವಿ ಸೋಮಣ್ಣ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಕುಮಾರಸ್ವಾಮಿ, “ಇವತ್ತು ನಮ್ಮ ತಾಯಂದಿರಿಗೆ 2,000 ರೂ. ಕೊಡ್ತಿದ್ದಾರೆ. ಅದೇ ಕುಟುಂಬದಲ್ಲಿ ಬೆಳಗ್ಗೆಯಿಂದ ಸಂಜೆವರೆಗೆ ದುಡಿದು ಬರುವ ಯಜಮಾನ್ರು (ಗಂಡಸರು) ತಮ್ಮ ದುಡಿಮೆಯಲ್ಲಿ 80ರಿಂದ 90% ಹಣವನ್ನು ಕುಡಿತಕ್ಕೆ ಬಳಸುತ್ತಿದ್ದಾರೆ” ಎಂದು ಹೇಳಿಕೆ ನೀಡಿದ್ದಾರೆ.
“ಮೊದಲೆಲ್ಲ ಗಂಡಸರು ಸಂಜೆ ವೇಳೆ ಸ್ನೇಹಿತರ ಜೊತೆ ಹೋದ್ರೆ 25 ರೂಪಾಯಿಯಲ್ಲಿ ಕುಡಿತ ಮುಗಿಸಿಕೊಂಡು ಬರುತ್ತಿದ್ದರು. ಈಗ ಸಣ್ಣ ಬಾಟಲ್‌ಗೆ 250, 300 ರೂ. ಕೊಡಬೇಕು. ಅಂದರೆ, ತಿಂಗಳಿಗೆ ಐದಾರು ಸಾವಿರ ರೂಪಾಯಿ ಆಗುತ್ತದೆ. ಇದು ಪಿಕ್ ಪಾಕೆಟ್ ಸರ್ಕಾರ” ಎಂದು ಟೀಕಿಸಿದ್ದಾರೆ.
ನಿನ್ನೆ ತಾನೇ ಹಳ್ಳಿ ತಾಯಂದಿರು ಸ್ವಲ್ಪ ದಾರಿ ತಪ್ಪಿದ್ದಾರೆ ಎಂದಿದ್ದರು. ಈಗ ತಮ್ಮ ಹೇಳಿಕೆಯಿಂದ ಗಂಡಸರನ್ನ ಹಾಳು ಮಾಡೋದಕ್ಕೆ ಹೊರಟ್ಟಿದ್ದಾರೆ ನಮ್ಮ ಕುಮಾರಣ್ಣ. ಬಡವರ ಗ್ಯಾರಂಟಿ ಯೋಜನೆಗಳ ಮೇಲೆ ಏಕೆ ನಿಮ್ಮ ವಕ್ರದೃಷ್ಟಿ.