ಎರಡು ದಿನದಲ್ಲಿ ಬಿಬಿಎಂಪಿ ಪೇಪರ್‌ಗಳನ್ನು ಮಾಧ್ಯಮಗಳ ಮುಂದಿಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದರು.
ಜೆಡಿಎಸ್ ಕಚೇರಿಯಲ್ಲಿ 77ನೇ ಸ್ವಾತಂತ್ರ‍್ಯ ದಿನಾಚರಣೆಯ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, “ಹೊಸ ಟೆಂಡರ್ ಕೊಟ್ಟಿಲ್ಲ ಎಂದು ಮಂತ್ರಿಗಳು ಹೇಳುತ್ತಾರೆ. ನಾವು ಹೇಳುತ್ತಿರುವುದು ಹಳೆಯ ಟೆಂಡರ್ ವಿಚಾರ. ಅದನ್ನು ಯಾಕೆ ಕೊಟ್ಟಿಲ್ಲ ಅಂತ ಕೇಳುತ್ತಿದ್ದೇವೆ. ಬಿಬಿಎಂಪಿ ಪೇಪರ್‌ಗಳು ನನ್ನ ಬಳಿ ಇವೆ. ಅವುಗಳನ್ನು ಮುಂದೆ ಇಡುತ್ತೇವೆ” ಎಂದರು.
“ಉದ್ದೇಶಪೂರ್ವಕವಾಗಿ ಜಾತಿ ಸಂಗತಿ ಎಳೆದು ತರಲಾಗುತ್ತಿದೆ. ನನಗೆ ಹೊಟ್ಟೆ ಉರಿ ಅಂತಾರೆ. ಜನ ಅವರಿಗೆ ಅಧಿಕಾರ ಕೊಟ್ಟಿದ್ದಾರೆ. ನಾನು ವಿರೋಧ ಪಕ್ಷವಾಗಿ ಕೆಲಸ ಮಾಡುತ್ತಿರುವೆ” ಎಂದು ಹೇಳಿದರು.
“ವಿದೇಶದಲ್ಲಿ ಪರ್ಮನೆಂಟ್ ಆಗಿ ಕೂರಲು ಹೋಗಿರಲಿಲ್ಲ. ನಾನು ಹಳ್ಳಿ ಮಗನೇ. ಪ್ರಪಂಚ ಹೇಗಿದೆ ಎಂದು ನೋಡಲು ಹೋಗಿದ್ದೆ. ನಮ್ಮ ದೇಶದಲ್ಲಿ ನೂರಾರು ಈಸ್ಟ್ ಇಂಡಿಯಾ ಕಂಪನಿ ಹುಟ್ಟಿಕೊಂಡಿವೆ. ಸ್ವಾತಂತ್ರ‍್ಯ ಬಂದ ನಂತರವೂ ಈಸ್ಟ್ ಇಂಡಿಯಾ ಕಂಪನಿಯ ಪಳೆಯುಳಿಕೆಯನ್ನು ಎರಡು ಪಕ್ಷಗಳು ಪಡೆದಿವೆ. ಇದೊಂದು ಅನಾಗರಿಕ ಸರ್ಕಾರ” ಎಂದು ವಾಗ್ದಾಳಿ ನಡೆಸಿದರು.