ಆಡಳಿತ-ಪ್ರತಿಪಕ್ಷ ಸದಸ್ಯರಿಂದ ಸದನದೊಳಗೆ ಹನಿಟ್ರ್ಯಾಪ್ ಕಿಡಿ, ತನಿಖೆಗೆ ಪರಮೇಶ್ವರ್ ಆದೇಶ

Date:

Advertisements

ಆಡಳಿತ ಮತ್ತು ಪ್ರತಿಪಕ್ಷ ಸೇರಿದಂತೆ ಹಲವರನ್ನು ಗುರಿಯಾಗಿಸಿಕೊಂಡು ನಡೆದಿರುವ ಹನಿಟ್ರ್ಯಾಪ್ ಯತ್ನದ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶಿಸುವುದಾಗಿ ಗೃಹಮಂತ್ರಿ ಡಾ.ಜಿ. ಪರಮೇಶ್ವರ್ ಪ್ರಕಟಿಸಿದರು.

ಸಹಕಾರ ಮಂತ್ರಿ ಕೆ ಎನ್ ರಾಜಣ್ಣ ಸೇರಿದಂತೆ ರಾಜ್ಯದ ಕೆಲವು ಮಂತ್ರಿಗಳು ಮತ್ತು ಪ್ರಭಾವಿ ನಾಯಕರನ್ನು ಹನಿಟ್ರ್ಯಾಪ್ ಮಾಡಲು ಯತ್ನಿಸಿದ ಪ್ರಕರಣ ವಿಧಾನಸಭೆಯಲ್ಲಿ ಗುರುವಾರ ಪ್ರತಿಧ್ವನಿಸಿ, ದೊಡ್ಡ ಚರ್ಚೆಯೇ ನಡೆಯಿತು.

ಸದನದಲ್ಲಿ ಆಡಳಿತ ಪಕ್ಷ ಮತ್ತು ಪ್ರತಿಪಕ್ಷದ ಸದಸ್ಯರ ಎಲ್ಲ ಆರೋಪಗಳಿಗೆ ಉತ್ತರಿಸಿದ ಗೃಹ ಮಂತ್ರಿ ಪರಮೇಶ್ವರ್, “ಇದೊಂದು ಅತ್ಯಂತ ಗಂಭೀರ ಸ್ವರೂಪದ ಆರೋಪ. ಗೌರವಾನ್ವಿತ ಮಂತ್ರಿಗಳೇ ತಮ್ಮ ಮೇಲೆ ಈ ಪ್ರಯೋಗ ನಡೆದಿದೆ 48 ಮಂದಿಯ ಸಿಡಿ ಮತ್ತು ಪೆನ್ ಡ್ರೈವ್ ಗಳಿವೆ ಎಂದಿದ್ದಾರೆ. ಈ ಬಗ್ಗೆ ತಾವು ಉನ್ನತ ಮಟ್ಟದ ತನಿಖೆಗೆ ಆದೇಶಿಸುವೆ” ಎಂದು ತಿಳಿಸಿದರು.

Advertisements

“ರಾಜ್ಯದ ವಿಧಾನ ಮಂಡಲಕ್ಕೆ ಇಡೀ ದೇಶದಲ್ಲೇ ಉನ್ನತ ಸ್ಥಾನವಿದೆ ಇಲ್ಲಿ ಸದಸ್ಯರಾಗಿದ್ದವರು ತಮ್ಮ ಸಜ್ಜನಿಕೆ ಮತ್ತು ಮೇರು ವ್ಯಕ್ತಿತ್ವದಿಂದ ದೇಶದಲ್ಲಿಯ ಅತ್ಯಂತ ಗೌರವಕ್ಕೆ ಪಾತ್ರರಾಗುವ ಮೂಲಕ ಪೂಜನೀಯರಾಗಿದ್ದಾರೆ ಇಂತಹವರು ಸದಸ್ಯರಾಗಿದ್ದ ಈ ಸದನದಲ್ಲಿ ನಾಗರಿಕ ಸಮಾಜಕ್ಕೆ ಕಳಂಕ ತರುವ ರೀತಿಯಲ್ಲಿ ಹನಿ ಟ್ರ್ಯಾಪ್, ಪ್ರಕರಣ ನಡೆದಿದೆ ಇದನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ. ಹೀಗಾಗಿ ಈ ಬಗ್ಗೆ ಉನ್ನತ‌ ತನಿಖೆಗೆ ಆದೇಸಿವೆ” ಎಂದು ಪ್ರಕಟಿಸಿದರು.

ಬಜೆಟ್ ಕುರಿತಂತೆ ನಡೆಯುತ್ತಿರುವ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಬಿಜೆಪಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಹನಿಟ್ರ್ಯಾಪ್ ಪ್ರಕರಣ ಮೊದಲು ಪ್ರಸ್ತಾಪಿಸಿ, “ಸದ್ಯಕ್ಕೆ ಯಾರೋ ಮುಖ್ಯಮಂತ್ರಿ ಆಗಬೇಕು ಎಂದು ಬಯಸುತ್ತಾ ಅದಕ್ಕೆ ವಿರುದ್ಧವಾಗಿರುವವರನ್ನು ಹನಿಟ್ರ್ಯಾಪ್ ಜಾಲದಲ್ಲಿ ಸಿಲುಕಿಸಲು ಪ್ರಯತ್ನ ನಡೆಸಿದ್ದಾರೆ. ಮುಂದೆ ಯಾರೋ ಮುಖ್ಯಮಂತ್ರಿ ಆಗಬೇಕು, ತಮ್ಮ ಕುಟುಂಬದವರೇ ರಾಜಕೀಯವಾಗಿ ಪ್ರವರ್ಧ‌ಮಾನಕ್ಕೆ ಬರಬೇಕು ಎಂದು ಹನಿ ಟ್ರ್ಯಾಪ್ ಮಾಡುತ್ತಿದ್ದಾರೆ. ಈ ರಾಜ್ಯದಲ್ಲಿ ಸಿಡಿ ಮತ್ತು ಪೆನ್ ಡ್ರೈವ್ ಕಾರ್ಖಾನೆಗಳಿವೆ. ಸಚಿವ ರಾಜಣ್ಣ ಇದಕ್ಕೆ ಬಲಿಪಶುವಾಗುತ್ತಿದ್ದಾರೆ” ಎಂದು ಚರ್ಚೆಗೆ ದಾರಿಮಾಡಿದರು.

ಮಧ್ಯ ಪ್ರವೇಶಿಸಿದ ಕೆ.ಎನ್.ರಾಜಣ್ಣ, “ಕಳೆದ ಎರಡು ದಿನಗಳಿಂದ ವಿಧಾನಸೌಧದಲ್ಲಿ ಹನಿಟ್ರ್ಯಾಪ್ ಕುರಿತಂತೆ ಚರ್ಚೆಗಳು ನಡೆಯುತ್ತಿದೆ. ಇದೊಂದು ದೊಡ್ಡ ಪಿಡುಗಾಗಿ ಪರಿಣಿಮಿಸಿದೆ. ತುಮಕೂರು ಜಿಲ್ಲೆಯ ಪ್ರಭಾವಿ ಮಂತ್ರಿಯನ್ನು ಈ ಜಾಲದಲ್ಲಿ ಸಿಲುಕಿಸಲು ಪ್ರಯತ್ನ ಮಾಡಲಾಗಿದೆ ಎಂಬ ವರದಿಗಳು ಹರಡಿವೆ. ತುಮಕೂರು ಜಿಲ್ಲೆಯಿಂದ ನಾನು ಮತ್ತು ಪರಮೇಶ್ವರ್ ಮಂತ್ರಿಗಳಾಗಿದ್ದೇವೆ. ನಮ್ಮಿಬ್ಬರಲ್ಲಿ ಯಾರಿಗೆ ಈ ಪ್ರಯೋಗ ಮಾಡಲಾಗಿದೆ ಎಂಬ ಕುತೂಹಲವಿದೆ” ಎಂದು ಹೇಳಿದರು.‌

“ಇಂತಹ ಪ್ರಯೋಗ ತಮ್ಮ ಮೇಲೆ ನಡೆದಿದೆ ಈ ಬಗ್ಗೆ ತಾವು ಗೃಹ ಮಂತ್ರಿಗಳಿಗೆ ಲಿಖಿತವಾಗಿ ದೂರು ನೀಡುತ್ತೇನೆ. ಅದಕ್ಕೆ ಸಂಬಂಧಿಸಿದ ಸಾಕ್ಷಿಗಳು ನನ್ನ ಬಳಿ ಇವೆ. ಅವುಗಳನ್ನು ಕೂಡ ನೀಡುತ್ತಿದ್ದು ಈ ಬಗ್ಗೆ ಒಂದು ಉನ್ನತ ಮಟ್ಟದ ತನಿಖೆ ನಡೆಸಬೇಕು, ಇದರ ನಿರ್ಮಾಪಕ, ನಿರ್ದೇಶಕ, ನಟ-ನಟಿಯರು ಯಾರು ಎಂದು ಜನರಿಗೆ ಗೊತ್ತಾಗಬೇಕು” ಎಂದು ಆಗ್ರಹಿಸಿದರು.

“ಕರ್ನಾಟಕ ಸಿಡಿ ಮತ್ತು ಪೆನ್ ಡ್ರೈವ್ ಕಾರ್ಖಾನೆಯಾಗಿ ಪರಿಣಮಿಸಿದೆ. ರಾಜ್ಯದ ಆಡಳಿತ ಮತ್ತು ಪ್ರತಿಪಕ್ಷದ ನಾಯಕರು ಮಾತ್ರವಲ್ಲ ರಾಷ್ಟ್ರೀಯ ಮಟ್ಟದ ನಾಯಕರು ಹನಿಟ್ರ್ಯಾಪ್‌ಗೆ ಒಳಗಾಗಿದ್ದಾರೆ. ಇಂತಹ ಒಟ್ಟು 48 ಜನರ ಪೆನ್ ಡ್ರೈವ್ ಮತ್ತು ಸಿಡಿಗಳು ಇವೆ. ಇವುಗಳ ಪೈಕಿ ಕೆಲವರು ತಮ್ಮ ಸಿಡಿ ಮತ್ತು ಪೆನ್ ಡ್ರೈವ್ ಪ್ರಸಾರವಾಗದಂತೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ” ಎಂದು ಹೇಳುವ ಮೂಲಕ ಸದನದಲ್ಲಿ ಅಚ್ಚರಿ ಮೂಡಿಸಿದರು.

“ಹನಿಟ್ರ್ಯಾಪ್ ಜಾಲದಲ್ಲಿ ಸಿಲುಕಿರುವ 48 ಮಂದಿ ಯಾರು ಎನ್ನುವ ಹೆಸರುಗಳು ತಮ್ಮ ಬಳಿ ಇವೆ. ಅವಶ್ಯಕತೆ ಎನಿಸಿದರೆ ಅವರ ಹೆಸರುಗಳನ್ನು ಬಹಿರಂಗಪಡಿಸಲು ಸಿದ್ಧ. ಇಂತಹ ಸಿಡಿ ಮತ್ತು ಪೆನ್ ಡ್ರೈವ್ ತಯಾರಿಸುವ ಮಂದಿ ಆಡಳಿತ ಮತ್ತು ಪ್ರತಿಪಕ್ಷದ ಸಾಲಿನಲ್ಲೂ ಇದ್ದಾರೆ. ಇದೊಂದು ಕೆಟ್ಟ ಪರಂಪರೆಯಾಗಿದೆ” ಎಂದರು.

“ಸಾರ್ವಜನಿಕ ಜೀವನದಲ್ಲಿ ಇರುವವರು ಇಂತಹ ಜಾಗದಲ್ಲಿ ಸಿಲುಕಿಕೊಂಡು ಮರ್ಯಾದೆಯಿಂದ ಬದುಕಲು ಸಾಧ್ಯವಿಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ. ನನ್ನ ಮೇಲೆ ನಡೆದ ಪ್ರಯೋಗಕ್ಕೆ ಪುರಾವೆಗಳಿವೆ. ಆ ಎಲ್ಲವುಗಳನ್ನು ಗೃಹ ಮಂತ್ರಿಗಳಿಗೆ ನೀಡುತ್ತೇನೆ. ಈ ಬಗ್ಗೆ ತನಿಖೆ ನಡೆಸಿ ಒಂದು ಪೂರ್ಣ ವಿರಾಮ ಹಾಕಬೇಕು” ಎಂದು ಒತ್ತಾಯಿಸಿದರು.

ಶಾಪ ಹಾಕಿದ ಶಾಸಕ ಮುನಿರತ್ನ

ಬಿಜೆಪಿಯ ಶಾಸಕ ಮುನಿರತ್ನ ಮಧ್ಯ ಪ್ರವೇಶಿಸಿ, “ನನ್ನ ಜೀವನ ಹಾಳು ಮಾಡಲು ಎಷ್ಟು ಬೇಕೋ ಅಷ್ಟು ನಡೆಯುತ್ತಿದೆ. ನಾನು ಹಾಳಾಗಿ ಹೋದರೂ ಪರವಾಗಿಲ್ಲ, ಬೇರೆ ಯಾರಿಗೂ ಇಂತಹ ಅನ್ಯಾಯ ಆಗಬಾರದು. ಶನಿ ಮಹಾತ್ಮ ಪೂಜಿಸುವ ಅಜ್ಜಯ್ಯ ಮೊದಲಾದ ದೇವರಗಳ ಮುಂದೆ ಪ್ರಮಾಣ ಮಾಡಿ ಹೇಳುತ್ತೇನೆ ಈ ಪ್ರಕರಣದಲ್ಲಿ ನನ್ನನ್ನು ಸಿಲುಕಿಸಲಾಗಿದೆ, ನನ್ನ ವಿರುದ್ಧ ರಾಮನಗರದಲ್ಲಿ ಅತ್ಯಾಚಾರದ ಆರೋಪ ದೂರು ಸಲ್ಲಿಸಲಾಗುತ್ತದೆ. ನನ್ನ ಮಕ್ಕಳು ದೊಡ್ಡವರಾಗಿದ್ದಾರೆ. ಮೊಮ್ಮಕ್ಕಳು 15 ವರ್ಷದವರಾಗಿದ್ದು ಅವರು ಹೇಗೆ ಸಮಾಜದಲ್ಲಿ ತಲೆ ಎತ್ತಿ ಓಡಾಡಲು ಸಾಧ್ಯ. ಇಂತಹ ಪ್ರಯೋಗ ಮಾಡಿದವರ ಮನೆ ಮಠ ಹಾಳಾಗಿ ಹೋಗಲಿ” ಎಂದು ಶಪಿಸಿದರು.

ತನಿಖೆಗೆ ಆಗ್ರಹ

ಬಿಜೆಪಿಯ ಸುನಿಲ್ ಕುಮಾರ್ ಎದ್ದು ನಿಂತು, “ಇದೊಂದು ಗಂಭೀರ ಸ್ವರೂಪದ ಪ್ರಕರಣ. ಆಡಳಿತ ಮತ್ತು ಪ್ರತಿ ಪಕ್ಷದ 48 ಜನರು ಹನಿಟ್ರ್ಯಾಪ್‌ನಲ್ಲಿ ಸಿಲುಕಿದ್ದಾರೆ ಎಂಬ ವಿಷಯ ಕೇಳಿ ಆಘಾತವಾಗಿದೆ ಇದು ಆಡಳಿತ ಮತ್ತು ಪ್ರತಿಪಕ್ಷದ ವಿಷಯವಲ್ಲ ಈ ಶಾಸನಸಭೆಯ ಘನತೆ ಮತ್ತು ಶಾಸಕರ ಗೌರವದ ಪ್ರಶ್ನೆಯಾಗಿದೆ. ರಾಜಕೀಯ ಎದುರಾಳಿಗಳನ್ನು ಸೈದ್ಧಾಂತಿಕವಾಗಿ ಅಥವಾ ಕಾರ್ಯಕ್ರಮಗಳ ಮೂಲಕ ಎದುರಿಸಬೇಕು ಅದನ್ನು ಬಿಟ್ಟು ಹಾನಿ ಟ್ರಾಪ್ ನಂತಹ ಸಂಪೂರ್ಣ ಅನೈತಿಕ ಮಾರ್ಗದಿಂದ ಮಟ್ಟ ಹಾಕುವ ಪ್ರಯತ್ನ ಯಾರೂ ಕೂಡ ಸಹಿಸಬಾರದು ಎಂದು ಹೇಳಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬ್ರಹ್ಮಾವರ | ಮಹೇಶ್ ಶೆಟ್ಟಿ ತಿಮರೋಡಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ವಿರುದ್ಧ ಅವಹೇಳನಾಕಾರಿ ಹೇಳಿಕೆ...

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

ಒಳಮೀಸಲಾತಿ | ಅಲೆಮಾರಿ ಸಮುದಾಯಗಳಿಗೆ ಸರ್ಕಾರದಿಂದ ನ್ಯಾಯ ಸಿಗಲಿ: ಬರಗೂರು ರಾಮಚಂದ್ರಪ್ಪ

ರಾಜ್ಯ ಸರ್ಕಾರವು ಜಾರಿಗೊಳಿಸಿರುವ ಒಳಮೀಸಲಾತಿಯಲ್ಲಿ ಅಲೆಮಾರಿ ಸಮುದಾಯಗಳಿಗೆ ನ್ಯಾಯ ಸಿಗಬೇಕು ಎಂದು...

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

Download Eedina App Android / iOS

X