ಭೀಕರ ಸಾವುಗಳು: ‘ದೇವರ ಸಂದೇಶ’ ಎಂಬ ಮೋದಿ ವಿಕೃತಿ

Date:

Advertisements

‘ಧರ್ಮ ಎಂಬುದು ಒಂದು ಅಫೀಮು. ಅದು ಹೃದಯಹೀನ ಸಮಾಜದ ಹೃದಯ’ ಎಂದು ಎಡಪಂಥೀಯ ಹೋರಾಟಗಾರ, ರಷ್ಯಾ ಕ್ರಾಂತಿಯ ಪ್ರಮುಖ ನಾಯಕ, ವಾರ್ಕ್ಸ್‌ವಾದದ ನೇತಾರ ಕಾರ್ಲ್‌ ಮಾರ್ಕ್ಸ್‌ ಹೇಳಿದ್ದರು. ಅವರ ಮಾತು ಭಾರತದಲ್ಲಿ ಬಿಜೆಪಿ ಮತ್ತು ಮೋದಿ ರಾಜಕಾರಣಕ್ಕೆ ಕನ್ನಡಿ ಹಿಡಿದಿದೆ. ಆಗ್ಗಾಗ್ಗೆ, ಪ್ರಧಾನಿ ಮೋದಿ ಅವರ ಹೇಳಿಕೆ-ಧೋರಣೆಗಳನ್ನು ಗಮನಿಸಿದಾಗ ಮಾರ್ಕಸ್‌ ಅವರ ಈ ಹೇಳಿಕೆ ಕಣ್ಣಮುಂದೆ ಬರುತ್ತದೆ.

2016ರಲ್ಲಿ ಕೋಲ್ಕತ್ತಾದಲ್ಲಿ ಸೇತುವೆಯೊಂದು ಕುಸಿದು ಬಿದ್ದಿತ್ತು. ಆಗ, ಪ್ರಧಾನಿ ಮೋದಿ ಅವರು ಘಟನೆಯನ್ನು ‘ದೇವರ ಸಂದೇಶ’ ಎಂದಿದ್ದರು. ಈಗ, ಅಹಮದಾಬಾದ್‌ನಲ್ಲಿ ಸಂಭವಿಸಿರುವ ವಿಮಾನದುರಂತ ಸಮಯದಲ್ಲಿ ಮೋದಿ ಅವರ ‘ದೇವರ ಸಂದೇಶ’ ಹೇಳಿಕೆ ಮತ್ತು ಧರ್ಮದ ಕುರಿತಾದ ಮಾರ್ಕ್ಸ್‌ ಅವರ ಹೇಳಿಕೆಗಳು ನೆನಪಾಗುತ್ತಿವೆ.

ಅಂದಹಾಗೆ, 2016ರ ಮಾರ್ಚ್ 31 ರಂದು ಕೋಲ್ಕತ್ತಾದ ವಿವೇಕಾನಂದ ಮೇಲ್ಸೇತುವೆಯ ಒಂದು ಭಾಗ ಕುಸಿದುಬಿದ್ದಿತ್ತು. ಆ ದುರ್ಘಟನೆಯಲ್ಲಿ  26 ಜನರು ಸಾವನ್ನಪ್ಪಿದರು, ನೂರಾರು ಜನರು ಗಾಯಗೊಂಡಿದ್ದರು. ಈ ದುರಂತವು ಪಶ್ಚಿಮ ಬಂಗಾಳದ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗುರಿಯಾಗಿತ್ತು. ಆಗಲೂ ಪ್ರಧಾನಿಯಾಗಿದ್ದ ಮೋದಿ ಅವರು ಘಟನೆ ಬಗ್ಗೆ ಪ್ರತಿಕ್ರಿಯಿಸಿ, “ಇದು ದೇವರ ಸಂದೇಶ. ತೃಣಮೂಲ ಕಾಂಗ್ರೆಸ್ (TMC) ಆಡಳಿತದಿಂದ ಬಂಗಾಳವನ್ನು ರಕ್ಷಿಸಲು ಜನರಿಗೆ ದೇವರು ನೀಡಿರುವ ಎಚ್ಚರಿಕೆ” ಎಂದು ಹೇಳಿದ್ದರು.

Advertisements

ಮೋದಿ ಅವರ ಈ ಹೇಳಿಕೆ ದೇಶಾದ್ಯಂತ ವಿವಾದವನ್ನು ಸೃಷ್ಟಿಸಿತ್ತು. ವಿರೋಧಕ್ಕೆ ಗುರಿಯಾಗಿತ್ತು. ಇಂತಹ ದುರಂತವನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುವುದು, ದೇವರಿಗೆ ಸಂಬಂಧಿಸಿ ಮಾತನಾಡುವುದು ಆಡಳಿತದಲ್ಲಿರುವವರ ನೈತಿಕತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿತ್ತು.

ದುರಂತಗಳು ಸಂಭವಿಸಿದಾಗ, ಜನರ ಜೀವ, ಜೀವನ ಹಾಗೂ ಕುಟುಂಬಗಳ ನಷ್ಟಕ್ಕೆ ಶೋಕ ವ್ಯಕ್ತಪಡಿಸಬೇಕು. ಒಗ್ಗಟ್ಟು, ಸಾಂತ್ವನ ಹಾಗೂ ಪರಿಹಾರ ಕ್ರಮಗಳ ಭರವಸೆ ನೀಡಬೇಕು. ಆದರೆ, ಅವುಗಳ ಬದಲಾಗಿ, ಘಟನೆಯನ್ನು ರಾಜಕೀಯವಾಗಿ ದುರ್ಬಳಕೆ ಮಾಡಿಕೊಳ್ಳುವುದು ಸಂವೇದನಾಶೀಲತೆಗೆ ಕನ್ನಡಿ ಹಿಡಿದಿತ್ತು. ಆಗ, ಮೋದಿಯವರ ಹೇಳಿಕೆಯನ್ನು ಖಂಡಿಸಿದ್ದ TMC ನಾಯಕ ಡೆರೆಕ್ ಒ’ಬ್ರಿಯನ್, “ಮೋದಿ ಅವರ ಹೇಳಿಕೆಯು ಪ್ರಧಾನಮಂತ್ರಿಯ ಸ್ಥಾನಕ್ಕೆ ಶೋಭೆಯಲ್ಲ” ಎಂದು ಟೀಕಿಸಿದ್ದರು.

ಈಗ, ಮೋದಿ ಅವರ ಆ ‘ದೇವರ ಸಂದೇಶ’ ಎಂಬ ಹೇಳಿಕೆ ಮತ್ತೆ ಮುನ್ನೆಲೆ ಬಂದಿದೆ. ಬಿಜೆಪಿಯೇ ಆಡಳಿತದಲ್ಲಿರುವ ಗುಜರಾತ್‌ನ ಅಹಮದಾಬಾದ್‌ನಲ್ಲಿ ಸಂಭವಿಸಿದ ವಿಮಾನ ದುರಂತದಲ್ಲಿ 245+7 ಮಂದಿ ಮೃತಪಟ್ಟಿದ್ದಾರೆ. ಆ ಘಟನೆ ಮೋದಿ ಅವರು ಹೇಳಿಕೆಯನ್ನು ತಳುಕು ಹಾಕಿ ‘ದೇವರ ಸಂದೇಶ’ವೇ, ಬಿಜೆಪಿಯನ್ನು ಅಧಿಕಾರದಿಂದ ಕಿತ್ತೆಸೆಯುವ ಎಚ್ಚರಿಕೆಯೇ ಎಂದು ಹಲವರು ಈಗ ಪ್ರಶ್ನಿಸುತ್ತಿದ್ದಾರೆ.

ಮೋದಿ ಅವರ ಹೇಳಿಕೆಯ ವರದಿಗಳ ಸ್ಕ್ರೀನ್‌ ಶಾಟ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ನೆಟ್ಟಿಗರು, “ಮೋದಿ ಅವರ ಲಾಜಿಕ್ ಪ್ರಕಾರ, ಅಹಮದಾಬಾದ್‌ನಲ್ಲಿ ವಿಮಾನ ಪತನಗೊಂಡು 245 ಜನ ಸತ್ತಿದ್ದು, ಇದೇ ಗುಜರಾತ್‌ನಲ್ಲಿ ಮೋರ್ಬಿ ಸೇತುವೆ ಬಿದ್ದು, 135 ಜನರು ಮೃತಪಟ್ಟಿದ್ದು, ಕಳೆದ 11 ವರ್ಷಗಳಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ನೂರಾರು ಜನರು ಸಾವನ್ನಪ್ಪಿದ್ದು,  ಗುಜರಾತ್‌ನಲ್ಲಿ ನಡೆದ ಕೋಮು ನರಮೇಧದಲ್ಲಿ ಹಲವಾರು ಜನ ಸತ್ತಿದ್ದು – ಯಾವ ದೇವರ ಸಂದೇಶ. ಈ ದೇಶದ ಯಾವ ಪ್ರಧಾನಿಯೂ ಇಷ್ಟು ವಿಕೃತ ಮಟ್ಟಕ್ಕೆ ಇಳಿದಿರಲಿಲ್ಲ. ಆದರೆ, ಮೋದಿ ಇಳಿದಿದ್ದಾರೆ. ಮನುಷ್ಯ ತನ್ನ ಸ್ವಾರ್ಥಕ್ಕೆ ಸೃಷ್ಟಿಸಿದ ದೇವರು-ಧರ್ಮವನ್ನು ಮೋದಿಯಷ್ಟು ಹೀನ ರಾಜಕಾರಣಕ್ಕೆ ಬಳಸಿಕೊಂಡವರು ಯಾರೂ ಇಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ವರದಿ ಓದಿದ್ದೀರಾ?: ‘ಮೋದಿ ಶರಣಾಗಿದ್ದಾರೆ’ ಎಂಬ ರಾಹುಲ್ ಹೇಳಿಕೆಯು ಹಲವು ಪ್ರಶ್ನೆಗಳನ್ನು ಎತ್ತುತ್ತದೆ

2022ರಲ್ಲಿ ಗುಜರಾತ್‌ನ ಮೋರ್ಬಿಯಲ್ಲಿ ಮಚ್ಚು ನದಿಗೆ ಕಟ್ಟಲಾಗಿರುವ ಸೇತುವೆ ಕುಸಿದು ಬಿದ್ದು, 134 ಜನರು ಸಾವನ್ನಪ್ಪಿದ್ದರು. ಆಗ, ಟಿಎಂಸಿ ಮತ್ತು ಇತರ ವಿಪಕ್ಷಗಳು ಮೋದಿ ಅವರ ‘ದೇವರ ಸಂದೇಶ’ ಹೇಳಿಕೆಯನ್ನು ಬಳಸಿಕೊಂಡು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದವು. ಘಟನೆಯು ‘ಮೋಸದ ಕೃತ್ಯ’ ಎಂದು ಟೀಕಿಸಿದ್ದವು. ಈಗ, ಅದೇ ಗುಜರಾತ್‌ನಲ್ಲಿ ವಿಮಾನದುರಂತ ನಡೆದಿದೆ. ವಿಮಾನ ತಾಂತ್ರಿಕ ಸಮಸ್ಯೆ ಬಗ್ಗೆ ತಿಳಿದಿದ್ದರೂ ಹಾರಾಟಕ್ಕೆ ಅನುಮತಿಸಲಾಗಿದೆ. ಇದು ಕೂಡ ‘ಮೋಸದ ಕೃತ್ಯ’ವೆಂದು ಹಲವರು ಹೇಳುತ್ತಿದ್ದಾರೆ. ಅಂತೆಯೇ, ಹಲವರು, ಇದು ಗುಜರಾತ್‌ಅನ್ನು ಬಿಜೆಪಿಯಿಂದ ರಕ್ಷಿಸಲು ‘ದೇವರ ಸಂದೇಶ’ವೇ ಎಂದು ಮೋದಿ ಮತ್ತು ಬಿಜೆಪಿಯನ್ನು ಪ್ರಶ್ನಿಸಿದ್ದಾರೆ. ಟ್ರೋಲ್ ಮಾಡುತ್ತಿದ್ದಾರೆ.

ಮೋದಿ ಅಂತಹ ಕೊಳಕು ರಾಜಕೀಯದ ಹೇಳಿಕೆ ನೀಡಿದರೆಂದು ಉಳಿದವರೂ ಅದನ್ನೇ ಮಾಡುವುದು ತಪ್ಪು. ದುರಂತಗಳು ಸಂಭವಿಸಿದಾಗ ಘಟನೆಗೆ ಆತಂಕ, ಶೋಕ ವ್ಯಕ್ತಪಡಿಸುವುದು ಆಡಳಿತ ನಡೆಸುವವರ ಪ್ರಾಥಮಿಕ ಕರ್ತವ್ಯ. ಜೀವಗಳನ್ನು ಕಳೆದುಕೊಂಡ ಕುಟುಂಬಗಳಿಗೆ ಸಾಂತ್ವನ ಹೇಳುವುದು, ಪರಿಹಾರ ಒದಗಿಸುವುದು ಆದ್ಯತೆ ಕೆಲಸ. ಜೊತೆಗೆ, ಅಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದು ಮೂಲ ಕರ್ತವ್ಯ. ಅದನ್ನು ಈ ದೇಶದ ಪ್ರಧಾನಿಯಾಗಿರುವ ನರೇಂದ್ರ ಮೋದಿ ಅವರು ಅರಿತುಕೊಳ್ಳಬೇಕು. ಉಳಿದವರೂ ಪಾಲಿಸಬೇಕು.

ಜೊತೆಗೆ, ದುರಂತವು ‘ದೇವರ ಸಂದೇಶ’ವೆಂದು ರಾಜಕೀಯಕ್ಕೆ ಬಳಸಿಕೊಳ್ಳದೆ, ಘಟನೆಗೆ ಸಂಬಂಧಿಸಿದ ಸಂಸ್ಥೆ, ಅಧಿಕಾರಿಗಳು, ಗುತ್ತಿಗೆದಾರರು ಹಾಗೂ ಸರ್ಕಾರಗಳನ್ನು ಹೊಣೆಗಾರರನ್ನಾಗಿ ಮಾಡಿ, ತನಿಖೆ ನಡೆಸಬೇಕು. ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕು. ದುರಂತಗಳ ವಿಚಾರದಲ್ಲಿ ಎಂದಿಗೂ ಚರ್ಚೆಯನ್ನು ವಿಚಲಿತಗೊಳಿಸಬಾರದು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿವಾದಾತ್ಮಕ ಯೂಟ್ಯೂಬರ್ ಎಲ್ವಿಶ್ ಮನೆ ಮೇಲೆ ಗುಂಡಿನ ದಾಳಿ: ಎನ್‌ಕೌಂಟರ್ ಮಾಡಿ ಆರೋಪಿ ಬಂಧನ

ಬಲಪಂಥೀಯ, ವಿವಾದಾತ್ಮಕ ಯೂಟ್ಯೂಬರ್ ಮತ್ತು ಬಿಗ್ ಬಾಸ್ ವಿಜೇತ ಎಲ್ವಿಶ್ ಯಾದವ್‌...

ಗೇಮಿಂಗ್​ ಆ್ಯಪ್​ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ: ಚಿತ್ರದುರ್ಗ ಶಾಸಕ ವೀರೇಂದ್ರ ಮನೆ ಮೇಲೆ ಇಡಿ ದಾಳಿ

ಶುಕ್ರವಾರ(ಆಗಸ್ಟ್ 22) ಬೆಳ್ಳಂಬೆಳಗ್ಗೆ ಚಿತ್ರದುರ್ಗದ ಶಾಸಕ ಕೆಸಿ ವೀರೇಂದ್ರ ಪಪ್ಪಿ ಅವರ...

ಉತ್ತರಾಖಂಡ | ಕಪಾಳ ಮೋಕ್ಷ ಮಾಡಿದ ಶಿಕ್ಷಕನಿಗೆ ಗುಂಡು ಹಾರಿಸಿದ ವಿದ್ಯಾರ್ಥಿ

ತರಗತಿಯಲ್ಲಿ ಕಪಾಳ ಮೋಕ್ಷ ಮಾಡಿದ ಕಾರಣಕ್ಕೆ ಕುಪಿತಗೊಂಡ ವಿದ್ಯಾರ್ಥಿಯೊಬ್ಬ ತನ್ನ ಶಿಕ್ಷಕನ...

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

Download Eedina App Android / iOS

X