ಜೂನ್ 27ರಂದು ಸಂಸತ್ತಿನ ಉಭಯ ಸದನಗಳ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಾಡಿದ ಭಾಷಣದಲ್ಲಿ ಮಣಿಪುರ ಹಿಂಸಾಚಾರದ ವಿಚಾರವನ್ನು ಪ್ರಸ್ತಾಪ ಮಾಡದಿರುವುದನ್ನು ಮಣಿಪುರ ಪ್ರದೇಶ ಕಾಂಗ್ರೆಸ್ ಸಮಿತಿ (ಎಂಪಿಸಿಸಿ) ಖಂಡಿಸಿದೆ.
ಈ ಬಗ್ಗೆ ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿದ ಎಂಪಿಸಿಸಿ ಕಾರ್ಯಾಧ್ಯಕ್ಷ ಕೆ ದೇವಬ್ರತ, “ರಾಷ್ಟ್ರಪತಿಗಳು ತಮ್ಮ ಭಾಷಣದಲ್ಲಿ ಮಣಿಪುರ ವಿಚಾರವನ್ನು ಹೊರಗಿಟ್ಟಿರುವುದು ರಾಜ್ಯದ ಜನತೆಗೆ ಅವಮಾನ ತಂದಿದೆ” ಎಂದು ಹೇಳಿದ್ದಾರೆ.
“ರಾಷ್ಟ್ರಪತಿಯವರು ತಮ್ಮ ಭಾಷಣದಲ್ಲಿ ಮಣಿಪುರ ಹಿಂಸಾಚಾರವನ್ನು ಪ್ರಸ್ತಾಪಿಸುತ್ತಾರೆ ಎಂದು ನಾವು ಭಾವಿಸಿದ್ದೆವು. ಆದರೆ ಇಂತಹ ವಿಚಾರವನ್ನು ರಾಷ್ಟ್ರಪತಿ ಪ್ರಸ್ತಾಪಿಸದೆ ಇರಲು ಹೇಗೆ ಸಾಧ್ಯವಾಯಿತು” ಎಂದು ಪ್ರಶ್ನಿಸಿದ್ದಾರೆ.
ಇದನ್ನು ಓದಿದ್ದೀರಾ? ಅತಂತ್ರ ಸಂಸತ್ತು ಸೃಷ್ಟಿಯಾದರೆ ಸಂವಿಧಾನ ಎತ್ತಿ ಹಿಡಿಯಿರಿ: ರಾಷ್ಟ್ರಪತಿಗೆ 7 ಹೈಕೋರ್ಟ್ ನ್ಯಾಯಾಧೀಶರಿಂದ ಪತ್ರ
“ಮಣಿಪುರದಲ್ಲಿ ಮಾದಕವಸ್ತು ಭಯೋತ್ಪಾದನೆಯಿದೆ ಮತ್ತು ರಾಜ್ಯದ ವಿರುದ್ಧ ಯುದ್ಧ ಮಾಡುವ ಮೂಲಕ ವಿನಾಶವನ್ನು ಸೃಷ್ಟಿಸುತ್ತಿರುವ ಸಶಸ್ತ್ರ ಉಗ್ರಗಾಮಿಗಳ ಒಳಹರಿವು ಇದೆ. ಇದು ದೇಶವು ಎದುರಿಸುತ್ತಿರುವ ಅತ್ಯಂತ ಗಂಭೀರ ಬಿಕ್ಕಟ್ಟಾಗಿದೆ. ಆದರೆ ರಾಷ್ಟ್ರೀಯ ಸಮಸ್ಯೆ ಎಂದು ಪರಿಗಣಿಸಲಾದ ಇಂತಹ ಸಮಸ್ಯೆಯನ್ನು ರಾಷ್ಟ್ರಪತಿಗಳು ಹೇಗೆ ಭಾಷಣದಲ್ಲಿ ಬಿಟ್ಟಿದ್ದಾರೆ” ಎಂದು ಟೀಕಿಸಿದರು.
“ಭಾಷಣವನ್ನು (ರಾಷ್ಟ್ರಪತಿಗಳ) ಕೇಂದ್ರ ಸಚಿವ ಸಂಪುಟವು ಅನುಮೋದಿಸಿದೆ. ಹಾಗಿರುವಾಗ ಪ್ರಧಾನಿ ನರೇಂದ್ರ ಮೋದಿಯವರು ಮಣಿಪುರವನ್ನು ನಿರ್ಲಕ್ಷಿಸುವುದನ್ನು ಮುಂದುವರಿಸುತ್ತಾರೆಯೇ ಎಂದು ನಾವು ಕೇಳಲು ಬಯಸುತ್ತೇವೆ. ಇದು ಈ ವಿಚಾರವನ್ನು ದುರ್ಬಲಗೊಳಿಸುವ ಪಿತೂರಿಯೇ” ಎಂದು ಪ್ರಶ್ನಿಸಿದ್ದಾರೆ.
Manipur Rally For Territorial Integrity
Why can’t the centre and state stop the violence in Manipur immediately? Are there vested interests driving the violence endlessly? Why no mention of it in President’s address in the Parliament? https://t.co/vMpc4QrdCL
— Sarat Chandra (@SharatchandraL) June 29, 2024
ಮಣಿಪುರದಲ್ಲಿ ಕಳೆದ ವರ್ಷ ಮೇ ತಿಂಗಳಿನಿಂದ ಜನಾಂಗೀಯ ಹಿಂಸಾಚಾರ ಆರಂಭವಾಗಿದ್ದು ಒಂದು ವರ್ಷ ಕಳೆದರೂ ಅಲ್ಲಲ್ಲಿ ಘರ್ಷಣೆಗಳು ನಡೆಯುತ್ತಿದೆ. ಈ ಹಿಂಸಾಚಾರದಲ್ಲಿ 200ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಸಾವಿರಾರು ಜನರು ಮನೆ ಮಠ ಕಳೆದುಕೊಂಡು ನಿರಾಶ್ರಿತರ ಕೇಂದ್ರದಲ್ಲಿ ನೆಲೆಸಿದ್ದಾರೆ.