ಲೋಕಸಭೆ ಸೋಲಿನ ಆರೇ ತಿಂಗಳಲ್ಲಿ ಮಹಾರಾಷ್ಟ್ರವನ್ನು ಬಿಜೆಪಿ ಗೆದ್ದಿದ್ದು ಹೇಗೆ?; 6 ಕಾರಣಗಳಿವು

Date:

Advertisements

ಮಹಾರಾಷ್ಟ್ರದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ, ಶಿವಸೇನೆ (ಶಿಂಧೆ ಬಣ) ಹಾಗೂ ಎನ್‌ಸಿಪಿ (ಅಜಿತ್ ಬಣ)ದ ಮಹಾಯುತಿ ಮೈತ್ರಿ ಕೂಟವು ಬರೋಬ್ಬರಿ 220 ಸ್ಥಾನಗಳನ್ನು ಗೆದ್ದು, ಐತಿಹಾಸಿಕ ಗೆಲುವು ಸಾಧಿಸಿದೆ. ಈ ಹಿಂದೆ, ಹಿಂಭಾಗಿಲಿನಿಂದ ಸರ್ಕಾರ ರಚಿಸಿದ್ದ ಮಹಾಯುತಿ, ಈಗ ಚುನಾವಣೆಯಲ್ಲಿ ಗೆದ್ದು ಸರ್ಕಾರ ರಚನೆಗೆ ಸಿದ್ಧವಾಗಿದೆ. ಆದರೆ, ಕಾಂಗ್ರೆಸ್, ಶಿವಸೇನೆ (ಯುಬಿಟಿ) ಹಾಗೂ ಎನ್‌ಸಿಪಿ (ಶರದ್ ಬಣ)ದ ಮಹಾ ವಿಕಾಸ್ ಅಘಾಡಿ (ಎಂವಿಎ) ಮೈತ್ರಿಕೂಟ ಹೀನಾಯ ಸೋಲು ಕಂಡಿದೆ.

ಆರು ತಿಂಗಳ ಹಿಂದೆ ನಡೆದಿದ್ದ ಲೋಕಸಭಾ ಚುನಾವಣೆಯಲ್ಲಿ ಮಹಾರಾಷ್ಟ್ರದಲ್ಲಿ ಮಹಾಯುತಿ ಹೀನಾಯ ಫಲಿತಾಂಶ ಪಡೆದಿದ್ದು, ಭಾರೀ ಮುಖಭಂಗ ಅನುಭವಿಸಿತ್ತು. ಎಂವಿಎ ಭರ್ಜರಿ ಗೆಲುವು ಸಾಧಿಸಿ, ವಿಧಾನಸಭೆಯಲ್ಲೂ ಗೆಲ್ಲುತ್ತೇವೆಂಬ ವಿಶ್ವಾಸ ಹೊಂಗಿತ್ತು. ಆದರೆ, ಆರು ತಿಂಗಳಲ್ಲಿ ಮಹಾರಾಷ್ಟ್ರ ರಾಜಕೀಯ ಚಿತ್ರಣ ಬದಲಾಗಿದೆ. ಅಲ್ಲಿನ ಮತದಾರರು ಮತ್ತೆ ಮಹಾಯುತಿಗೆ ಮಣೆ ಹಾಕಿದ್ದಾರೆ. ಈ ಬದಲಾವಣೆಗೆ ಕಾರಣವೇನು?

ಮಹಾರಾಷ್ಟ್ರ ರಾಜಕೀಯದಲ್ಲಾದ ಈ ಶೀಘ್ರ ಬದಲಾವಣೆಗೆ ವಿಶ್ಲೇಷಕರು ಆರು ಕಾರಣಗಳನ್ನು ಪಟ್ಟಿ ಮಾಡಿದ್ದಾರೆ;

Advertisements
  1. ಮಹಿಳೆಯರು: ಲೋಕಸಭಾ ಚುನಾವಣೆಯಲ್ಲಿ ಹಿನ್ನಡೆ ಅನುಭಿವಿಸಿದ ಮಹಾಯುತಿ ಸರ್ಕಾರ, ಆನಂತರ ಮಹಿಳೆಯರನ್ನು ಗುರಿಯಾಗಿಸಿಕೊಂಡು ಕೆಲ ಯೋಜನೆಗಳನ್ನು ಜಾರಿಗೆ ತಂದಿತು. ಲಡ್ಕಿ ಬಹಿನ್ ಯೋಜನೆಯಡಿ ಮಹಿಳೆಯರಿಗೆ ಮಾಸಿಕ 1,500 ರೂ. ನೀಡಲು ಆರಂಭಿಸಿತು. ಜೊತೆಗೆ, 3 ಗ್ಯಾಸ್ ಸಿಲಿಂಡರ್‌ಗಳನ್ನು ನೀಡುವ ಅನ್ನಪೂರ್ಣ ಯೋಜನೆ, ಎಂಎಸ್‌ಆರ್‌ಟಿಸಿ ಬಸ್ ಪ್ರಯಾಣದಲ್ಲಿ ರಿಯಾಯಿತಿ, ವಿದ್ಯಾರ್ಥಿನಿಯರಿಗೆ ಪದವಿ ಶಿಕ್ಷಣದವರೆಗೆ ಉಚಿತ ಶಿಕ್ಷಣ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿತು. ಪ್ರತಿಪಕ್ಷಗಳು ಅಧಿಕಾರಕ್ಕೆ ಬಂದರೆ, ಈ ಎಲ್ಲ ಯೋಜನೆಗಳನ್ನು ನಿಲ್ಲಿಸುತ್ತದೆ ಎಂಬ ಅಭಿಪ್ರಾಯವನ್ನೂ ರೂಪಿಸಿತು.  ಇವುಗಳು ಮಹಿಳಾ ಮತದಾರರನ್ನು ಮಹಾಯುತಿಯತ್ತ ಸೆಳೆಯಿತು.
  2. ಮರಾಠರು: ಮರಾಠ ಮೀಸಲಾತಿಗಾಗಿ ಮನೋಜ್ ಜಾರಂಗೆ ನೇತೃತ್ವದಲ್ಲಿ  ನಡೆದ ಚಳುವಳಿ ಲೋಕಸಭಾ ಚುನಾವಣೆಯಲ್ಲಿ ಭಾರೀ ಸದ್ದು ಮಾಡಿತ್ತು. ವಿಪಕ್ಷಗಳ ಪರವಾಗಿ ಮತಗಳನ್ನು ಕ್ರೋಢೀಕರಿಸುವಲ್ಲಿ ಸಫಲವಾಗಿತ್ತು. ಆದರೆ, ವಿಧಾನಸಭಾ ಚುನಾವಣೆಯಲ್ಲಿ ಆ ಚಳುವಳಿಯ ಪ್ರಭಾವ ಕಡಿಮೆಯಾಯಿತು. ಮೀಸಲಾತಿ ಹೋರಾಟದಿಂದ ವಿಪಕ್ಷಗಳಿಗೆ ಮತ ತರಲು ಸಾಧ್ಯವಾಗಲಿಲ್ಲ. ಬದಲಾಗಿ, ಈ ಚುನಾವಣೆಯಲ್ಲಿ ಮರಾಠ ಸಮುದಾಯದ ಹೆಚ್ಚು ಮತಗಳು ಮಹಾಯುತಿಯತ್ತ ವಾಲಿದವು. ಮರಾಠ ಮತದಾರರು ಮಹಾಯುತಿಗೆ ಹೆಚ್ಚು ಮತ ಹಾಕಿದ್ದಾರೆ.
  3. ರೈತರು: ವಿದರ್ಭ ಮತ್ತು ಮರಾಠವಾಡದ ರೈತರು ಲೋಕಸಭಾ ಚುನಾವಣೆಯಲ್ಲಿ ಆಡಳಿತಾರೂಢ ಮಹಾಯುತಿಯ ವಿರುದ್ಧ ಮತ ಚಲಾಯಿಸಿದ್ದರು. ಹಣದುಬ್ಬರ, ಬರ, ಸೋಯಾಬೀನ್ ಮತ್ತು ಹತ್ತಿಗೆ ಎಂಎಸ್‌ಪಿ ಕೊಡದಿರುವುದು, ಈರುಳ್ಳಿ ರಫ್ತು ನಿಷೇಧದಿಂದ ಮಹಾಯುತಿ ವಿರುದ್ಧ ರೈತರು ಸಿಟ್ಟಾಗಿದ್ದರು. ಆದರೆ, ಲೋಕಸಭಾ ಚುನಾವಣೆಯ ನಂತರ ಬಿಜೆಪಿ ಮತ್ತು ಮಹಾಯುತಿ ತಮ್ಮ ನಿಲುವುಗಳನ್ನು ಪರಾಮರ್ಶಿಸಿದವು. ಈರುಳ್ಳಿ ರಫ್ತಿನ ಮೇಲಿನ ನಿಷೇಧವನ್ನು ತೆಗೆದುಹಾಕಿದವು, ಹತ್ತಿ ಮತ್ತು ಸೋಯಾಬೀನ್‌ಗೆ ಎಂಎಸ್‌ಪಿ ನೀಡಲಾರಂಭಿಸಿದವು, ನೀರಾವರಿ ಪಂಪ್‌ಗಳಿಗೆ ಉಚಿತ ವಿದ್ಯುತ್‌ ಒದಗಿಸುವ ‘ಬಲಿರಾಜ ವಿಜ್ ಸವ್ಲಾತ್’ ಯೋಜನೆಯನ್ನು ಘೋಷಿಸಿದವು. ಇದು, ರೈತರು ಮತ್ತೆ ಮಹಾಯುತ್ತಿಗೆ ಮತ ಚಲಾಯಿಸುವಂತೆ ಮಾಡುವಲ್ಲಿ ಯಶಸ್ವಿಯಾಯಿತು.
  4. ಹಿಂದುತ್ವ: ಬಿಜೆಪಿ ಹಿಂದುತ್ವದ ನಿರೂಪಣೆಯನ್ನು ಪ್ರಬಲವಾಗಿ ಪ್ರಚಾರ ಮಾಡಿತು. 2014 ಮತ್ತು 2019ರ ಪ್ರಚಾರಗಳಿಗೆ ಹೋಲಿಸಿದರೆ, ಈ ಬಾರಿ ಹಿಂದುತ್ವವಾದ ಮಹಾಯುತಿಗೆ ಹೆಚ್ಚು ಯಶಸ್ಸು ತಂದುಕೊಟ್ಟಿದೆ. ಎಂವಿಎ ವಿರುದ್ಧ ಮುಸ್ಲಿಂ ಓಲೈಕೆ ಮತ್ತು ಮತ ಜಿಹಾದ್ ಆರೋಪವನ್ನು ಮಹಾಯುತಿ ಪ್ರಬಲವಾಗಿ ಮಂಡಿಸಿತು. ಅಭಿಪ್ರಾಯ ರೂಪಿಸಿತು. ಇದು, ಎಂವಿಎ ವಿರುದ್ಧ ಮಹಾಯುತಿಗೆ ಹಿಂದು ಮತಗಳು ಹರಿದುಬರುವಂತೆ ಮಾಡುವಲ್ಲಿ ಸಫಲವಾಯಿತು.
  5. ಸಹಾನುಭೂತಿ – ಮತವಾಗಿ ಬದಲಾಗಲಿಲ್ಲ: ಶಿವಸೇನೆ ಮತ್ತು ಎನ್‌ಸಿಪಿಯನ್ನು ಒಡೆದು ಶಿಂಧೆ ಮತ್ತು ಅಜಿತ್ ಪವಾರ್ ಬಿಜೆಪಿ ಜೊತೆಗೂಡಿದರು. ಉದ್ಧವ್ ಮತ್ತು ಶರದ್ ಪವಾರ್‌ಗೆ ಮೋಸ ಮಾಡಿದರು ಎಂಬ ಸಹಾನುಭೂತಿ ಲೋಕಸಭಾ ಚುನಾವಣೆಯ ಸಮಯದಲ್ಲಿ ಕೆಲಸ ಮಾಡಿತ್ತು. ಆದರೆ, ಆ ಚುನಾವಣೆಯ ಬಳಿಕ ನಾನಾ ಯೋಜನೆಗಳ ಘೋಷಿಸಿದ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಜನಪ್ರಿಯತೆ ಹೆಚ್ಚಲಾರಂಭಿಸಿತು. ಶಿಂಧೆ ಪಕ್ಷವನ್ನು ಒಡೆದರು ಎಂಬ ಸಿಟ್ಟು ಮತ್ತು ಉದ್ಧವ್ ಮೇಲಿನ ಸಹಾನುಭೂತಿ ಕರಗಲಾರಂಭಿಸಿತು. ಜನಪರ ಯೋಜನೆಗಳು ಮತ್ತು ತಾವೇ ನಿಜವಾದ ಹಿಂದುತ್ವ ಪ್ರತಿಪಾದಕನೆಂದು ಶಿಂಧೆ ಪ್ರಚಾರ ಮಾಡಿಕೊಳ್ಳಲಾರಂಭಿಸಿದರು. ಉದ್ಧವ್, ಶರದ್ ಪವಾರ್ ಮೇಲಿನ ಸಹಾನುಭೂತಿ ಎಂವಿಎ ಪರವಾದ ಮತಗಳಾಗಿ ಪರಿವರ್ತನೆಯಾಗುವುದನ್ನು ಶಿಂಧೆ ಯಶಸ್ವಿಯಾಗಿ ತಡೆದರು.
  6. ಎಂವಿಎಯಲ್ಲಿ ಭರವಸೆ ಮತ್ತು ನಿರೂಪಣೆಗಳ ಕೊರತೆ: ರಾಜಕೀಯವಾಗಿ, ಮಹಾಯುತಿಯ ಉದ್ದೇಶಿತ ಯೋಜನೆಗಳೊಂದಿಗೆ ಜನಪ್ರಿಯತೆಯನ್ನು ಹೆಚ್ಚಿಸಿಕೊಂಡರೆ, ಆ ಜನಪ್ರಿಯತೆಯನ್ನು ಭೇದಿಸಿ, ಜನರನ್ನು ಸೆಳೆಯುವಲ್ಲಿ ಪ್ರತಿಪಕ್ಷಗಳು (ಎಂವಿಎ) ವಿಫಲವಾಗಿವೆ. ಆದರೆ, ಎಂವಿಎ ಅಧಿಕಾರಕ್ಕೆ ಬಂದರೆ ಜನಪರ ಯೋಜನೆಗಳು ರದ್ದಾಗುತ್ತವೆ ಎಂಬ ಮಹಾಯುತಿಯ ನಿರೂಪಣೆಯನ್ನು ಎದುರಿಸಲೂ ವಿಪಕ್ಷಗಳಿಗೆ ಸಾಧ್ಯವಾಗಲಿಲ್ಲ. ವಾಸ್ತವವಾಗಿ, ಎಂವಿಎ ಗೆದ್ದರೆ ಲಡ್ಕಿ ಬಹಿನ್ ಯೋಜನೆ ಅಡಿಯಲ್ಲಿ ಹೆಚ್ಚಿನ ಹಣ ನೀಡುವುದು ಸೇರಿದಂತೆ ರೈತರು ಮತ್ತು ಯುವಕಜನರಿಗೆ ನೀಡಿದ ಭರವಸೆಗಳನ್ನು ಜನಪ್ರಿಯಗೊಳಿಸುವಲ್ಲಿಯೂ ವಿಫಲವಾದವು.

ಮುಂದೇನು: ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಬಿಜೆಪಿಯ ದೇವೇಂದ್ರ ಫಡ್ನವಿಸ್ ಅಧಿಕಾರಕ್ಕೆ ಮರಳುತ್ತಾರಾ? ಅಥವಾ ಮತ್ತೆ ಶಿಂಧೆ ಅವರೇ ಮುಖ್ಯಮಂತ್ರಿಯಾಗುತ್ತಾರಾ? ಹೀನಾಯವಾಗಿ ಸೋತಿರುವ ಎಂವಿಎ ಮೈತ್ರಿ ಮುಂದುವರೆಯುತ್ತದೆಯೇ? ಮಹಾಯುತಿ ಮೈತ್ರಿಯಲ್ಲಿರುವ ಅಜಿತ್ ಪಾವಾರ್‌ ವಿರುದ್ಧ ಬಿಜೆಪಿ-ಆರ್‌ಎಸ್‌ಎಸ್‌ನ ಒಂದು ವಿಭಾಗಕ್ಕೆ ಭಾರೀ ಆಕ್ರೋಶವಿದೆ. ಅದಕ್ಕಾಗಿ, ಅಜಿತ್ ಅವರನ್ನು ಮಹಾಯುತಿಯಿಂದ ಹೊರಗಿಡಲಾಗುತ್ತದೆಯಾ? ಇನ್ನೂ ಹಲವಾರು ಪ್ರಶ್ನೆಗಳು ಮಹಾರಾಷ್ಟ್ರ ರಾಜಕೀಯದ ಸುತ್ತ ಚರ್ಚೆಯಾಗುತ್ತಿವೆ. ಏನಾಗಲಿದೆ ಎಂಬುದನ್ನು ಮಹಾ ನೆಲ ವಿವರಿಸಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

1 COMMENT

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

Download Eedina App Android / iOS

X