- ಟಿಎಂಸಿ ರಾಷ್ಟ್ರೀಯ ವಕ್ತಾರ ಸಾಕೇತ್ ಗೋಖಲೆ ಆರೋಪ
- ಮೋದಿ ಭಾರತದ 27 ರಾಜ್ಯಗಳನ್ನು ಏಕೆ ನಿರ್ಲಕ್ಷಿಸಿದ್ದಾರೆ?
ಕಳೆದ ವಾರ ನಾಲ್ಕು ದಿನ ಅಮೆರಿಕ ಪ್ರವಾಸದಲ್ಲಿದ್ದ ಪ್ರಧಾನಿ ನರೇಂದ್ರ ಮೋದಿಯವರು, ತಮ್ಮ ತವರು ರಾಜ್ಯ ಗುಜರಾತಿಗೇ ಹೆಚ್ಚು ಲಾಭವಾಗುವಂತೆ ಮಾಡಿದ್ದಾರೆ ಎಂಬ ಅಂಶ ಇದೀಗ ಬಹಿರಂಗಗೊಂಡಿದೆ.
ದೇಶದ ಪ್ರಧಾನಿ ಎಂಬ ನೆಲೆಯಲ್ಲಿ ಮೋದಿಯವರು ಅಮೆರಿಕ ಪ್ರವಾಸ ಮಾಡಿದ್ದರೂ, ಗುಜರಾತಿಗೇ ಹೆಚ್ಚು ಲಾಭವಾಗುವಂತೆ ಮಾಡಿದ್ದಾರೆ ಎಂಬ ಅಂಶವನ್ನು ಟಿಎಂಸಿ ರಾಷ್ಟ್ರೀಯ ವಕ್ತಾರ ಸಾಕೇತ್ ಗೋಖಲೆ ಟ್ವಿಟರ್‍ನಲ್ಲಿ ಬಹಿರಂಗಪಡಿಸಿದ್ದಾರೆ.
ಬುಧವಾರ ಸರಣಿ ಟ್ವೀಟ್ ಮಾಡಿರುವ ಸಾಕೇತ್ ಗೋಖಲೆ, ಒಂದೊಂದೇ ವಿವರಗಳನ್ನು ಬಹಿರಂಗಗೊಳಿಸಿದ್ದಾರೆ.
ಭಾರತದಲ್ಲಿ ಹೂಡಿಕೆಯನ್ನು ಬಯಸುತ್ತಿರುವ ಹಲವಾರು ಕಾರ್ಪೊರೇಟ್ ಸಂಸ್ಥೆಗಳ ಮುಖ್ಯಸ್ಥರು, ಮೋದಿ ಅಮೆರಿಕ ಭೇಟಿ ವೇಳೆ ನಡೆದಿದ್ದ ಔತಣಕೂಟದಲ್ಲಿ ಭಾಗವಹಿಸಿದ್ದರು. ಇದರಲ್ಲಿ ಗೂಗಲ್ ಸಿಇಓ ಸುಂದರ್ ಪಿಚೈ, ಮೈಕ್ರೋಸಾಫ್ಟ್ ಸಿಇಓ ಸತ್ಯಾ ನಾದೆಲ್ಲ ಸೇರಿದಂತೆ ಹಲವಾರು ಮಂದಿ ಭಾಗವಹಿಸಿದ್ದರು.
ಮೋದಿಯವರು ಗುಜರಾತಿಗೇ ಹೆಚ್ಚು ಲಾಭವಾಗುವಂತೆ ಮಾಡಿದ್ದಾರೆ ಎಂದಿರುವ ಟಿಎಂಸಿ ವಕ್ತಾರ, ಗೂಗಲ್ ಮತ್ತು ಮೈಕ್ರಾನ್ ಸಂಸ್ಥೆ ಕೂಡ ಗುಜರಾತಿನಲ್ಲಿ ಬೃಹತ್ ಹೂಡಿಕೆ ಮಾಡಿದೆ ಎಂದು ಸರಣಿ ಟ್ವೀಟ್ ಮಾಡಿದ್ದಾರೆ.
ಅಲ್ಲದೇ, ಗುಜರಾತ್‌ಗೆ ಮಾತ್ರ ವಿದೇಶಿ ಹೂಡಿಕೆಯನ್ನು ತರುತ್ತಿರುವ ಪ್ರಧಾನಿ ಮೋದಿ ಭಾರತದ 27 ರಾಜ್ಯಗಳನ್ನು ಏಕೆ ನಿರ್ಲಕ್ಷಿಸುತ್ತಿದ್ದಾರೆ? ಒಂಭತ್ತು ವರ್ಷಗಳಾದರೂ ಮೋದಿಯವರು ತಾವು ಭಾರತದ ಪ್ರಧಾನಿಯೇ ಹೊರತು ಗುಜರಾತಿನ ಪ್ರಧಾನಿ ಅಲ್ಲ ಎಂಬುದನ್ನು ಅರಿತುಕೊಂಡಿಲ್ಲವೇ? ಇತರ ರಾಜ್ಯಗಳ ಜನರು ಉದ್ಯೋಗಕ್ಕೆ ಅರ್ಹರಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಸಾಕೇತ್ ಗೋಖಲೆ ನೀಡಿರುವ ಎಲ್ಲ ವಿವರಗಳು ಇಲ್ಲಿವೆ.
ಗುಜರಾತ್‌ನ ಗಾಂಧಿನಗರದಲ್ಲಿರುವ ಗುಜರಾತ್ ಇಂಟರ್‌ನ್ಯಾಶನಲ್ ಫೈನಾನ್ಸ್ ಟೆಕ್-ಸಿಟಿಯಲ್ಲಿ ಜಾಗತಿಕ ಡಿಜಿಟಲ್ ಫಿನ್‌ಟೆಕ್ ಕಾರ್ಯಾಚರಣೆಯನ್ನು ಪ್ರಾರಂಭಿಸುವುದಾಗಿ ಗೂಗಲ್ ಘೋಷಿಸಿದೆ. ಜೂನ್ 3 ರಂದು, ಸಿಂಗಾಪುರ್ ಎಕ್ಸ್‌ಚೇಂಜ್ ಎಲ್ಲ ನಿಫ್ಟಿ ಉತ್ಪನ್ನ ವಹಿವಾಟುಗಳನ್ನು ಸಿಂಗಾಪುರದಿಂದ ಗುಜರಾತ್‌ನ ಟೆಕ್-ಸಿಟಿ ನಗರಕ್ಕೆ ಸ್ಥಳಾಂತರಿಸಿದೆ.
ಗುಜರಾತ್‌ನ ಅಹಮದಾಬಾದ್ ಜಿಲ್ಲೆಯ ಸಾನಂದ್‌ನಲ್ಲಿ ಮೈಕ್ರೋನ್ 825 ಮಿಲಿಯನ್ ಡಾಲರ್‌ಗಳನ್ನು ಸೌಲಭ್ಯದಲ್ಲಿ ಹೂಡಿಕೆ ಮಾಡುವುದಾಗಿ ಘೋಷಿಸಿದೆ.