ನನ್ನ ಮೇಲೆ ಅತ್ಯಾಚಾರವೆಸಗಿದ್ದ ಡೊನಾಲ್ಡ್ ಟ್ರಂಪ್; ಪತ್ರಕರ್ತೆ ಇ ಜೀನ್‌ ಕ್ಯಾರೊಲ್ ಗಂಭೀರ ಆರೋಪ

Date:

Advertisements
  • 1994 -1996 ಅವಧಿಯಲ್ಲಿ ಡ್ರಸ್ಸಿಂಗ್‌ ರೂಮ್‌ನಲ್ಲಿ ಅತ್ಯಾಚಾರವೆಸಗಿದ್ದಾರೆ ಎಂದು ಆರೋಪ
  • ಮ್ಯಾನ್ಹ್ಯಾಟನ್ ಫೆಡರಲ್ ಕೋರ್ಟ್ನಲ್ಲಿ ಪ್ರಕರಣ ದಾಖಲಿಸಿರುವ ಲೇಖಕಿ ಕ್ಯಾರೊಲ್

1990 ರ ದಶಕದಲ್ಲಿ ಡೊನಾಲ್ಡ್‌ ಟ್ರಂಪ್‌ ನನ್ನ ಮೇಲೆ ಅತ್ಯಾಚಾರವೆಸಗಿದ್ದರು ಎಂದು ಪತ್ರಕರ್ತೆ ಇ ಜೀನ್‌ ಕ್ಯಾರೊಲ್ ಆರೋಪಿಸಿದ್ದಾರೆ.

ಈ ಬಗ್ಗೆ ಮ್ಯಾನ್‌ಹ್ಯಾಟನ್ ಫೆಡರಲ್ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದ್ದು, ಟ್ರಂಪ್‌ ನನ್ನ ಮೇಲೆ 30 ವರ್ಷಗಳ ಹಿಂದೆ ಡ್ರೆಸ್ಸಿಂಗ್ ರೂಮ್‌ನಲ್ಲಿ ಅತ್ಯಾಚಾರವೆಸಗಿದ್ದಾರೆ ಎಂದು ಕೋರ್ಟ್‌ನಲ್ಲಿ ನಡೆದ ಎರಡನೇ ದಿನದ ವಿಚಾರಣೆಯ ಸಂದರ್ಭದಲ್ಲಿ ಕ್ಯಾರೊಲ್ ವಿವರವಾಗಿ ಸಾಕ್ಷ್ಯ ನೀಡಿದರು.

79 ವರ್ಷದ ಇ ಜೀನ್‌ ಕ್ಯಾರೊಲ್ ಪ್ರತಿಷ್ಠಿತ ಎಲ್ಲೆ ಮ್ಯಾಗಜಿನ್‌ನಲ್ಲಿ ಅಂಕಣಗಾರ್ತಿಯಾಗಿದ್ದರು. “ಸಾರ್ವಜನಿಕವಾಗಿ ಈ ವಿಷಯ ಬಹಿರಂಗಪಡಿಸಿದರೆ ಟ್ರಂಪ್‌ ತನ್ನನ್ನು ನಾಶಪಡಿಸುತ್ತಾರೆ ಎಂಬ ಭಯದಿಂದ ಮೂರು ದಶಕಗಳಿಂದ ಮೌನವಾಗಿರುವುದಾಗಿ ತಿಳಿಸಿರುವ ಕ್ಯಾರೊಲ್, ಅತ್ಯಾಚಾರದ ಬಗ್ಗೆ ದಾಖಲೆಗಳನ್ನು ನೇರವಾಗಿ ಹೊಂದಿಸಲು ತಾನು ಮೊಕದ್ದಮೆ ಹೂಡಿದ್ದೇನೆ ಎಂದು ತಿಳಿಸಿದ್ದಾರೆ.  

Advertisements

ಈ ಸುದ್ದಿ ಓದಿದ್ದೀರಾ?  ಜಾತಿ ಪದ್ಧತಿ ನಿಷೇಧ ಮಸೂದೆ ಅಂಗೀಕರಿಸಿದ ಕ್ಯಾಲಿಫೋರ್ನಿಯಾ; ವ್ಯಾಪಾರಿಗಳು ಮತ್ತು ದೇವಸ್ಥಾನ ಮಂಡಳಿಗಳಿಂದ ವಿರೋಧ

“1994 -1996ರ ಅವಧಿಯಲ್ಲಿ ಬಾರ್ಗ್‌ಡಾರ್ಫ್‌ ಗುಡ್‌ಮ್ಯಾನ್ ಡಿಪಾರ್ಟ್‌ಮೆಂಟ್‌ ಸ್ಟೋರ್‌ ಡ್ರಸ್ಸಿಂಗ್‌ ರೂಮ್‌ನಲ್ಲಿ ನನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ. ಆಗ ನಾನು ಓಡಿ ಹೋಗಲು ಪ್ರಯತ್ನಿಸಿದ್ದೆ. ಈ ಬಗ್ಗೆ ನಾನು ಬರೆದಾಗ ಯಾವುದೇ ರೀತಿಯ ಪ್ರಯೋಜನ ಉಂಟಾಗಲಿಲ್ಲ. ಟ್ರಂಪ್‌ನಿಂದ ನನ್ನ ಖ್ಯಾತಿ ಹಾಳಾಗಿದ್ದು, ಅದನ್ನು ಮತ್ತೆ ಪಡೆಯುವುದಕ್ಕಾಗಿ ನ್ಯಾಯಾಲಯಕ್ಕೆ ಪ್ರವೇಶಿಸಿದ್ದೇನೆ” ಎಂದು ಕ್ಯಾರೊಲ್ ತಮ್ಮ ವಕೀಲರು ಪ್ರಶ್ನಿಸುವ ಸಂದರ್ಭದಲ್ಲಿ ಉತ್ತರಿಸಿದ್ದಾರೆ.  

“ಟ್ರಂಪ್‌ ನನ್ನ ಆರೋಪವನ್ನು ವಂಚನೆ,ಸುಳ್ಳು,ಕುತಂತ್ರದ ಕೆಲಸ ಎಂದು ಸಾಮಾಜಿಕ ಜಾಲತಾಣವಾದ ಟ್ರೂತ್‌ನಲ್ಲಿ ಬರೆದುಕೊಂಡಿದ್ದಾರೆ. ನಾನು ಅಂತಹ ಕೆಳಮಟ್ಟದ ವ್ಯಕ್ತಿಯಲ್ಲ. ಸುಳ್ಳು ಹೇಳಿ ನನ್ನನ್ನು ನಾನು ಮಾರಿಕೊಳ್ಳುವುದಿಲ್ಲ” ಎಂದು ಕ್ಯಾರೊಲ್ ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಟ್ರಂಪ್ ಅತ್ಯಾಚಾರದ ಆರೋಪದ ಬಗ್ಗೆ ಹೇಳಿಕೆ ನೀಡುತ್ತಿರುವುದರ ಬಗ್ಗೆ ಎಚ್ಚರಿಕೆ ನೀಡಿದ ಅಮೆರಿಕದ ಜಿಲ್ಲಾ ನ್ಯಾಯಾಧೀಶ ಲೂಯಿಸ್ ಕಪ್ಲಾನ್, ‘ಸಾಮಾಜಿಕ ಜಾಲತಾಣದಲ್ಲಿ ಈ ಪ್ರಕರಣದ ಬಗ್ಗೆ ಇನ್ನೂ ಹೆಚ್ಚು ಚರ್ಚಿಸುತ್ತಿದ್ದರೆ ಟ್ರಂಪ್ ಅವರು ಹೆಚ್ಚಿನ ಕಾನೂನು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ‘ ಎಂದು ಹೇಳಿದ್ದಾರೆ.

ಇತ್ತೀಚೆಗೆ ಅನೈತಿಕ ಸಂಬಂಧದ ಬಗ್ಗೆ ಬಾಯಿ ಬಿಡದಂತೆ ನೀಲಿ ತಾರೆಯೊಬ್ಬರಿಗೆ ಹಣ ನೀಡಿದ ಆರೋಪವನ್ನು ಟ್ರಂಪ್ ಹೊತ್ತಿದ್ದರು. ಈ ಬಗ್ಗೆ ಕೂಡ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. 2024ರಲ್ಲಿ ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ಇರುವುದರಿಂದ ಡೊನಾಲ್ಡ್ ಟ್ರಂಪ್ ಅವರನ್ನು ಈ ಆರೋಪಗಳು ಸಂಕಷ್ಟಕ್ಕೆ ಸಿಲುಕಿಸಬಹುದು ಎಂದು ರಾಜಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಪಟ್ಟಣ ಪಂಚಾಯತ್ ಚುನಾವಣೆ: ಮೂರರಲ್ಲಿ ಕಾಂಗ್ರೆಸ್‌ಗೆ ಮೇಲುಗೈ; ಎರಡರಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಗೆ ಜಯ

ಕರ್ನಾಟಕದಲ್ಲಿ ಐದು ಪ್ರದೇಶಗಳು ತಾಲೂಕು ಸ್ಥಾನಕ್ಕೇರಿದ ಬಳಿಕ ರಚನೆಯಾದ ಪಟ್ಟಣ ಪಂಚಾಯಿತಿಗೆ...

2029ರ ಚುನಾವಣೆಯಲ್ಲಿ ರಾಹುಲ್ ಗಾಂಧಿ ಇಂಡಿಯಾ ಒಕ್ಕೂಟದ ಪ್ರಧಾನಿ ಅಭ್ಯರ್ಥಿ: ತೇಜಸ್ವಿ ಯಾದವ್

2029ರ ಲೋಕಸಭೆ ಚುನಾವಣೆಯಲ್ಲಿ ಸದ್ಯ ಲೋಕಸಭೆ ವಿಪಕ್ಷ ನಾಯಕರಾಗಿರುವ ರಾಹುಲ್ ಗಾಂಧಿ...

Download Eedina App Android / iOS

X