- ಸಚಿವನಾಗುವ ಬಯಕೆ ವ್ಯಕ್ತಪಡಿಸಿದ ಮಾಜಿ ಸಚಿವ
- ಸ್ಪೀಕರ್ ಸ್ಥಾನ ಬಹಳ ಜವಾಬ್ದಾರಿಯ ಜಾಗ ಬೇಡ
“ವಿಧಾನಸಭೆ ಸ್ಪೀಕರ್ ಸ್ಥಾನ ಬಹಳ ಜವಾಬ್ದಾರಿಯುತ ಜಾಗ. ಈ ಸ್ಥಾನಕ್ಕೆ ನಾನು ಅರ್ಹನಲ್ಲ” ಎನ್ನುವ ಮೂಲಕ ಸಿದ್ದರಾಮಯ್ಯ ಸಂಪುಟದ ಸದಸ್ಯನಾಗುವ ಬಯಕೆಯನ್ನು ಮಾಜಿ ಸಚಿವ ಆರ್ ವಿ ದೇಶಪಾಂಡೆ ಹೊರ ಹಾಕಿದ್ದಾರೆ.
ಗುರುವಾರ ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಿರಿಯ ನಾಯಕರಾದ ತಮ್ಮನ್ನು ಸ್ಪೀಕರ್ ಸ್ಥಾನಕ್ಕೆ ಪರಿಗಣಿಸುವ ಮಾತು ಕೇಳಿ ಬರುತ್ತಿದೆ ಎನ್ನುವ ಪ್ರಶ್ನೆಗೆ ಉತ್ತರಿಸುತ್ತಾ, “ನಾನು ಎಂಟು ಮಂದಿ ಸಿಎಂಗಳ ಜೊತೆ ಕೆಲಸ ಮಾಡಿದವನು, ನನಗೆ ಸಭಾಧ್ಯಕ್ಷರ ಸ್ಥಾನ ಬೇಡ. ಅದಕ್ಕೆ ಅದರದ್ದೇ ಆದ ಗೌರವವಿದೆ” ಎಂದು ಹೇಳಿದರು.
ಸಚಿವ ಸ್ಥಾನದ ನಿರ್ಣಯ ಹೈಕಮಾಂಡ್‌ಗೆ ಬಿಟ್ಟಿದ್ದು ಎಂದ ಆರ್.ವಿ ದೇಶಪಾಂಡೆ, ಪಕ್ಷ ಕೊಡುವ ಜವಾಬ್ದಾರಿ ನಿಭಾಯಿಸಲು ಸಿದ್ಧ ಎನ್ನುವುದನ್ನು ಒಲ್ಲದ ಮನಸ್ಸಿನಿಂದ ಹೇಳಿಕೊಂಡರು.
ಈ ಸುದ್ದಿ ಓದಿದ್ದೀರಾ? :ನಾನು ಪದವಿ ಆಕಾಂಕ್ಷಿಯಲ್ಲ; ಕೊಟ್ಟರೆ ಜವಾಬ್ದಾರಿ ನಿಭಾಯಿಸುವೆ: ಶೆಟ್ಟರ್
ಉಳಿದಂತೆ ಪೂರ್ವ ನಿಯೋಜನೆಯಂತೆ ಶನಿವಾರ ಮಧ್ಯಾಹ್ನ 12:30ಕ್ಕೆ ಸರಿಯಾಗಿ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಸಿಎಂ ಮತ್ತು ಡಿಸಿಎಂ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ. ಇದೇ ವೇಳೆ ಸಚಿವರಾಗಿ ಕೆಲ ಶಾಸಕರು ಸಹ ಪದಗ್ರಹಣ ಮಾಡಲಿದ್ದಾರೆ.
ಈ ಹಿನ್ನೆಲೆಯಲ್ಲಿ ಸಚಿವ ಸ್ಥಾನಕ್ಕಾಗಿ ಕಾಂಗ್ರೆಸ್ ಪಾಳಯದಲ್ಲಿ ಜೋರಾದ ಲಾಬಿ ನಡೆದಿದ್ದು ಅದೃಷ್ಟವಂತರಿಗೆ ಸಚಿವ ಸ್ಥಾನ ದೊರಕಲಿದೆ.