ಈ ಹಿಂದೆ ಎಡಪಂಥೀಯರ ‘ಎಕೋ ಚೇಂಬರ್‌’ನಲ್ಲಿದ್ದೆ: ಮೋದಿ ಪರವಾಗಿ ಒಲವು ತೋರಿದ ಶೆಹ್ಲಾ ರಶೀದ್‌ ಹೇಳಿಕೆ

Date:

Advertisements

ಜೆಎನ್‌ಯುವಿನ ವಿದ್ಯಾರ್ಥಿ ನಾಯಕಿಯಾಗಿದ್ದ ಕಾಶ್ಮೀರದ ಶೆಹ್ಲಾ ರಶೀದ್‌, ನರೇಂದ್ರ ಮೋದಿ ಹಾಗೂ ಬಿಜೆಪಿಯನ್ನು ಕಟುವಾಗಿ ಟೀಕಿಸಿ, ಬಲಪಂಥೀಯರಿಂದ ದೇಶದ್ರೋಹಿ, ‘ತುಕ್ಡೇ ತುಕ್ಡೇ ಗ್ಯಾಂಗ್’ ಸದಸ್ಯೆ ಎನ್ನಿಸಿಕೊಂಡಿದ್ದರು. ಆದರೆ ಈಗ ಅದೇ ಶೆಹ್ಲಾ ರಶೀದ್, ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್‌ ಶಾ ಅವರನ್ನು ಹೊಗಳುತ್ತಿದ್ದಾರೆ. ಆ ಮೂಲಕ ಸುದ್ದಿಯಾಗಿದ್ದಾರೆ.

ಎಎನ್‌ಐ(ANI) ಸುದ್ದಿ ಸಂಸ್ಥೆಯ ಸಂಪಾದಕಿ ಸ್ಮಿತಾ ಪ್ರಕಾಶ್‌ ಅವರ ‘ಪಾಡ್‌ಕಾಸ್ಟ್‌’ಗೆ ಶೆಹ್ಲಾ ರಶೀದ್‌ ಅವರು ಇತ್ತೀಚೆಗೆ ಸುಮಾರು ಎರಡೂವರೆ ಗಂಟೆಗಳ ಸಂದರ್ಶನ ನೀಡಿದ್ದು, ಹಲವಾರು ವಿಚಾರಗಳ ಬಗ್ಗೆ ಮಾತನಾಡುತ್ತಾ ಕೇಂದ್ರ ಸರ್ಕಾರವನ್ನು ಹಾಡಿ ಹೊಗಳಿದ್ದಾರೆ.

ಈ ಸಂದರ್ಶನದ ವೇಳೆ, ‘ನಾನು ಈ ಹಿಂದೆ ಎಡಪಂಥೀಯರ ಎಕೋ ಚೇಂಬರ್‌ ಒಳಗಿದ್ದೆ. ಅವರು ಕೋವಿಡ್‌ ಸಂದರ್ಭದಲ್ಲಿ ನಾನು ಲಾಕ್‌ ಡೌನ್‌ ವಿಷಯದಲ್ಲಿ ಕೇಂದ್ರವನ್ನು ಬೆಂಬಲಿಸಿದ್ದಕ್ಕಾಗಿ ನನ್ನ ಮೇಲೆ ಮುಗಿಬಿದ್ದಿದ್ದರು’ ಎಂದು ದೂರಿದ್ದಾರೆ.

Advertisements

ಮೋದಿ ಹಾಗೂ ಅಮಿತ್‌ ಶಾ ದೇಶವ್ಯಾಪಿ ಹಾಗೂ ಹೊರದೇಶಗಳಿಂದಲೂ ಸಾಕಷ್ಟು ವಿಮರ್ಶೆಗಳನ್ನು ಸಹಿಸಿಕೊಂಡಿದ್ದಾರೆ. ಅವರು ದೇಶಕ್ಕಾಗಿ ದುಡಿಯುತ್ತಿರುವುದನ್ನು ನಾವು ಗುರುತಿಸಬೇಕು. ಇಂದು ನಾವು ಬ್ರಿಟನ್ ಅನ್ನು ಹಿಂದಿಕ್ಕಿ ಆರ್ಥಿಕ ಶಕ್ತಿಯಾಗಿ ಬೆಳೆದಿರುವುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ ಎಂದು ಕೇಂದ್ರದ ಬಿಜೆಪಿ ಸರ್ಕಾರವನ್ನು ಶೆಹ್ಲಾ ರಶೀದ್ ಹಾಡಿ ಹೊಗಳಿದ್ದಾರೆ.

shehla rasheed

2020ರ ವೇಳೆಗೆ ಕೇವಲ ಟೀಕಿಸಲೇಬೇಕು ಎನ್ನುವ ಉದ್ದೇಶಕ್ಕಾಗಿ ಕೇಂದ್ರವನ್ನು ಟೀಕಿಸುತ್ತಿದ್ದೇವೆ ಎಂದು ನನನಿಸತೊಡಗಿತು. ನಾನು ಕೋವಿಡ್‌ ವಿಷಯದಲ್ಲಿ ಕೇಂದ್ರ ಸರ್ಕಾರದ ಪರವಾಗಿ ಮಾತನಾಡಿದಾಗ ನನ್ನ ಬಾಯಿ ಮುಚ್ಚಿಸಲು ನೋಡಿದರು. ಲಾಕ್‌ ಡೌನ್‌ ವಿಷಯದಲ್ಲಿ ಕೇಂದ್ರಕ್ಕೆ ಲಾಕ್‌ ಡೌನ್‌ ಮಾಡುವುದನ್ನು ಬಿಟ್ಟು ಬೇರೆ ಅಯ್ಕೆಯೇ ಇರಲಿಲ್ಲ. ಲಾಕ್‌ ಡೌನ್‌ ಹೇರದ ಅಮೆರಿಕದ ಸ್ಥಿತಿ ಏನಾಗಿತ್ತು ಎನ್ನುವುದು ನಮಗೆಲ್ಲ ತಿಳಿದಿದೆ ಎಂದು ಶೆಹ್ಲಾ ರಶೀದ್ ಹೇಳಿದ್ದಾರೆ.

ಕಲ್ಲು ತೂರಾಟಗಾರ ನಡೆಸುತ್ತಿದ್ದವರ ಬಗ್ಗೆ ನೀವು ಈ ಹಿಂದೆ ಸಹಾನುಭೂತಿ ಹೊಂದಿದ್ದೀರಾ ಎಂದು ಕೇಳಿದ ಪ್ರಶ್ನೆಗೆ, ‘2010 ರಲ್ಲಿ ಸಹಾನುಭೂತಿ ಹೊಂದಿದ್ದೆ. ಕಾಶ್ಮೀರ ಈಗ ಬದಲಾಗಿದೆ. 2010ರಲ್ಲಿದ್ದ ಪರಿಸ್ಥಿತಿ ಈಗ ಅಲ್ಲಿ ಇಲ್ಲ. ಕಾಶ್ಮೀರ ಗಾಝಾಪಟ್ಟಿ ಅಲ್ಲ, ಅದು ತುಂಬಾ ಬದಲಾಗಿದೆ. ಕಾಶ್ಮೀರದಲ್ಲಿ ಪ್ರಧಾನಿ ಮೋದಿ ಅವರು ಉತ್ತಮ ಕೆಲಸ ಮಾಡಿದ್ದಾರೆ. ಅಲ್ಲಿನ ಪರಿಸ್ಥಿತಿ ತುಂಬಾ ಸುಧಾರಿಸಿದೆ. ಅಲ್ಲಿನ ಜನ ತುಂಬಾ ಸಂತೋಷವಾಗಿ ಜೀವನ ನಡೆಸುತ್ತಿದ್ದಾರೆ. ಹಾಗಾಗಿಯೇ ಭಾರತ ಸರ್ಕಾರದ ನಡೆಯ ಪರವಾಗಿ ಮಾತನಾಡುತ್ತಿದ್ದೇನೆ. ಧನ್ಯವಾದ ಸಲ್ಲಿಸುತ್ತೇನೆ’ ಎಂದು ಶೆಹ್ಲಾ ರಶೀದ್ ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿನ ಬದಲಾವಣೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನೀತಿಗಳು ಕಾರಣ. ಅವರು ಅದಕ್ಕೆ ರಾಜಕೀಯ ಪರಿಹಾರವನ್ನು ನೀಡಿದ್ದಾರೆ. ಅದನ್ನು ನಾನು ಗಟ್ಟಿಯಾಗಿ ಹೇಳಲು ಬಯಸುತ್ತೇನೆ ಎಂದು ಶೆಹ್ಲಾ ತಿಳಿಸಿದ್ದಾರೆ.

ಮುಸ್ಲಿಮರ ವಿರುದ್ಧದ ತಾರತಮ್ಯದ ಕುರಿತು ಕೇಳಿದಾಗ ಅವರು, ‘ಭಾರತದಲ್ಲಿ ಮುಸ್ಲಿಮರು ಅಲ್ಪಸಂಖ್ಯಾತರಲ್ಲ. ಅವರು ಇಲ್ಲಿ ಎರಡನೇ ಅತಿ ದೊಡ್ಡ ಜನಸಂಖ್ಯೆ. ಇದನ್ನು ಹಲವು ಮುಸ್ಲಿಂ ನಾಯಕರು ಕೂಡ ಪ್ರತಿಪಾದಿಸಿದ್ದಾರೆ’ ಎಂದು ಅವರು ಹೇಳಿದ್ದಾರೆ.

 

View this post on Instagram

 

A post shared by Shehla Rashid Shora (@shehla_shora)

‘ದೇಶದಲ್ಲಿ ಕೋಮುವಾದ ಇದೆಯೇ ಎಂದು ಕೇಳಿದರೆ, ಹೌದು ಎನ್ನಬೇಕಾಗುತ್ತದೆ. ಎಪ್ಪತ್ತು ವರ್ಷಗಳ ಹಿಂದೆ ದೇಶ ವಿಭಜನೆಯಾಗಿದ್ದೇ ಧಾರ್ಮಿಕ ಆಧಾರದಲ್ಲಿ. 2014ರ ನಂತರ ಅಥವಾ ಬಿಜೆಪಿಯಿಂದ ಕೋಮುವಾದ ಇದೆಯೆನ್ನುವುದು ಸರಿಯಲ್ಲ. ಕೋಮುವಾದಕ್ಕೆ ದೀರ್ಘ ಇತಿಹಾಸವಿದೆ. ಅದು ಮುಂದೆಯೂ ಇರುತ್ತದೆ. ನಾವು ಅತಿಯಾದ ನಕಾರಾತ್ಮಕತೆಯನ್ನು ಆಚರಿಸಿದಷ್ಟು, ಸಕಾರಾತ್ಮಕತೆಯನ್ನು ಆಚರಿಸುವುದಿಲ್ಲ’ ಎಂದು ಅವರು ಹೇಳಿದರು.

ಭಾರತವು ಅತಿದೊಡ್ಡ ದೇಶವಾಗಿದ್ದು, ಈ ಹಿಂದೆಯೂ ಮುಸ್ಲಿಮರ ವಿರುದ್ಧ ಗುಂಪು ಹತ್ಯೆ ಮತ್ತು ದುರದೃಷ್ಟಕರ ಹೇಳಿಕೆಗಳನ್ನು ನೀಡಿದ ಘಟನೆಗಳು ನಡೆದಿವೆ ಎಂದು ಶೆಹ್ಲಾ ಹೇಳಿದರು.

‘ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶ್ರೀನಗರಕ್ಕೆ ಭೇಟಿ ನೀಡಿದಾಗ ಕಾಶ್ಮೀರಿಗಳಿಗೆ ಇದು ಅವರ ದೇಶ ಮತ್ತು ಅವರು ಎಲ್ಲಿ ಬೇಕಾದರೂ ವಾಸಿಸಬಹುದು ಮತ್ತು ಹೋಗಬಹುದು ಎಂದು ಹೇಳಿದ್ದಾರೆ. ಇದು ಅವರ ನಿಖರವಾದ ಮಾತುಗಳು. ಮತ್ತು ನಾವು ಒಂದು ಕ್ಷಣ ಯೋಚಿಸಬೇಕು. ನಾವು ಐತಿಹಾಸಿಕ ಕಾಲಘಟ್ಟದಲ್ಲಿ ಬದುಕುತ್ತಿದ್ದೇವೆ ಎನ್ನುವುದನ್ನು ಒಪ್ಪಿಕೊಳ್ಳಬೇಕು. ಇದೊಂದು ದೇಶದ ಇತಿಹಾಸದ ಪ್ರಮುಖ ಹಂತ. ನಮ್ಮನ್ನು ನಾವು ಅದೃಷ್ಟವಂತರೆಂದು ಪರಿಗಣಿಸಬೇಕು. ಏಕೆಂದರೆ ಇನ್ಯಾವುದೋ ದೇಶದಲ್ಲಿ ವಾಸಿಸುತ್ತಿಲ್ಲ. ನಾವು ಈ ದೇಶದಲ್ಲಿ ವಾಸಿಸುತ್ತಿರುವುದರ ಕುರಿತು ಹೆಮ್ಮೆ ಪಡಬೇಕು. ಏಕೆಂದರೆ ಇಲ್ಲಿ ಶಾಂತಿಯಿದೆ, ಅಭಿವೃದ್ಧಿಯಿದೆ ಮತ್ತು ನಾವು ನಮ್ಮ ಹಿಂದಿನ ವಸಾಹತುಶಾಹಿಗಳಾದ ಇಂಗ್ಲೆಂಡನ್ನು ಹಿಂದಿಕ್ಕಿ ಐದನೇ ಅತಿದೊಡ್ಡ ಆರ್ಥಿಕತೆಯಾಗಿ ಬೆಳೆದಿದ್ದೇವೆ’ ಎಂದು ಅವರು ಹೇಳಿದರು.

ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿಯನ್ನು ರಶೀದ್ ಹೊಗಳಿದ್ದು ಇದೇ ಮೊದಲಲ್ಲ. ಆಗಸ್ಟ್ 5, 2019ರಂದು ಜಮ್ಮು ಮತ್ತು ಕಾಶ್ಮೀರದ ಸ್ವಾಯತ್ತ ಸ್ಥಾನಮಾನವನ್ನು ತೆಗೆದು ಹಾಕಿ, ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದ ಮೋದಿ ಸರ್ಕಾರದ ನಿರ್ಧಾರದ ಬಗ್ಗೆ ಈ ವರ್ಷದ ಆಗಸ್ಟ್‌ನಲ್ಲಿ ತೀವ್ರವಾಗಿ ರಶೀದ್ ಅವರು ಟೀಕಿಸಿದ್ದರು. ಆದರೆ ಇದೀಗ ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ಶ್ಲಾಘಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

Download Eedina App Android / iOS

X