- ‘ಕನಕಪುರ ತಾಲ್ಲೂಕಿನ ಭೂಮಿ ಅಡಿ ಲೆಕ್ಕದಲ್ಲಿ ವ್ಯವಹಾರ ಆಗಲಿದೆ’
- ‘ಯಾರೋ ಹೆಸರು ಮಾಡಿಕೊಳ್ಳುವುದಕ್ಕೆ ರಾಮನಗರ ಜಿಲ್ಲೆ ಮಾಡಿದ್ದಾರೆ’
ವಿಜಯದಶಮಿ ದಿನ ಒಂದು ಮಾತು ಹೇಳುತ್ತಿದ್ದೇನೆ, ಕನಕಪುರ ಬೆಂಗಳೂರು ಜಿಲ್ಲೆಗೆ ಸೇರುತ್ತದೆ. ಇಲ್ಲಿನ ಭೂಮಿ ಅಡಿ ಲೆಕ್ಕದಲ್ಲಿ ವ್ಯವಹಾರ ಆಗಲಿದೆ, ಭೂಮಿ ಮಾರಬೇಡಿ. ನಾನೇನು ಮಾಡಬೇಕು ಅದನ್ನು ಮಾಡಿಯೇ ತೀರುತ್ತೇನೆ. ನನ್ನ ಮೇಲೆ ನಂಬಿಕೆ ಇಡಿ ಎಂದು ಡಿಸಿಎಂ ಡಿಕೆ ಶಿವಕುಮಾರ್ ಸಾರ್ವಜನಿಕವಾಗಿ ಹೇಳಿದರು.
ಕನಕಪುರ ತಾಲೂಕಿನ ಶಿವನಹಳ್ಳಿಯಲ್ಲಿ ವೀರಭದ್ರಸ್ವಾಮಿ ದೇವಸ್ಥಾನ ಶಿಲಾ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, “ಕನಕಪುರ ತಾಲೂಕನ್ನು ಬೆಂಗಳೂರು ಜಿಲ್ಲೆಗೆ ಸೇರಿಸುತ್ತೇನೆ. ಯಾರೋ ಹೆಸರು ಮಾಡಿಕೊಳ್ಳುವುದಕ್ಕೆ ರಾಮನಗರ ಜಿಲ್ಲೆ ಮಾಡಿದ್ದಾರೆ. ನಮ್ಮನ್ನು ರಾಮನಗರ ಜಿಲ್ಲೆ ಅಂತಾ ಮೂಲೆಗೆ ತಳ್ಳಬೇಡಿ. ಕನಕಪುರದವರು ಬೆಂಗಳೂರು ಜಿಲ್ಲೆಯವರು” ಎಂದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಗೆದ್ದ ಗ್ಯಾರಂಟಿಯನ್ನು ಗೆಲುವನ್ನಾಗಿ ಮಾಡಿಕೊಳ್ಳದ ಮೂರ್ಖರು
ರಾಮನಗರ ಜಿಲ್ಲೆಯ ಕನಕಪುರ ತಾಲೂಕು ಅರ್ಕಾವತಿ ನದಿ ದಂಡೆಯಲ್ಲಿದೆ. ದೇಶದಲ್ಲಿಯೇ ಅತೀ ಹೆಚ್ಚು ರೇಷ್ಮೆ ಉತ್ಪಾದಿಸುವ ಕನಕಪುರ ‘ರೇಷ್ಮೆ ಕಣಿವೆ’ ಎಂದೇ ಖ್ಯಾತಿ ಗಳಿಸಿದೆ.
ಗ್ರಾನೈಟ್ ಉತ್ಪಾದನೆಯಲ್ಲಿ ಸಹ ಕರ್ನಾಟಕದಲ್ಲಿ ಬಹಳ ಮುಂಚೂಣಿಯಲ್ಲಿದೆ. ಆದ್ದರಿಂದ ಕರ್ನಾಟಕದ ಗ್ರಾನೈಟ್ ರಾಜಧಾನಿ ಎಂದು ಪ್ರಸಿದ್ಧಿ ಪಡೆದಿದೆ. ಈ ಹಿಂದೆ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಸೇರಿತ್ತು. ಹಾಗೂ ಹಿಂದೆ ದೇಶದ ಅತಿ ದೊಡ್ಡ ಲೋಕಸಭಾ ಕ್ಷೇತ್ರವಾಗಿತ್ತು. 2007ರಲ್ಲಿ ರಾಮನಗರ ಜಿಲ್ಲೆಗೆ ಸೇರಿತು ಎಂದರು.