ಕೇರಳದಲ್ಲಿ ಕಾಂಗ್ರೆಸ್ ಹೈಕಮಾಂಡ್ ರಚನಾತ್ಮಾಕ ಬದಲಾವಣೆಯನ್ನು ಮಾಡಲಿದೆ ಎಂಬ ವರದಿಗಳ ನಡುವೆ, “ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ” ಕೆಪಿಸಿಸಿ ಅಧ್ಯಕ್ಷ ಕೆ. ಸುಧಾಕರನ್ ಬುಧವಾರ ಹೇಳಿದ್ದಾರೆ.
“ಎಐಸಿಸಿಯ ಯಾರೂ ಕೂಡಾ ನನಗೆ ರಾಜೀನಾಮೆ ನೀಡುವಂತೆ ಹೇಳಿಲ್ಲ. ಪಕ್ಷವನ್ನು ಪುನರ್ ರಚಿಸುವ ಮತ್ತು ಕೆಪಿಸಿಸಿ ಅಧ್ಯಕ್ಷರನ್ನು ಬದಲಾಯಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದು ಹೈಕಮಾಂಡ್‌ಗೆ ಬಿಟ್ಟದ್ದು” ಎಂದು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಶುಕ್ರವಾರದ ಮತದಾನ ದಿನ ಬದಲಿಸಲು ಚುನಾವಣಾ ಆಯೋಗಕ್ಕೆ ಕೇರಳ ಕಾಂಗ್ರೆಸ್ ಆಗ್ರಹ
“ಹೈಕಮಾಂಡ್ ನನ್ನ ಬಳಿ ರಾಜೀನಾಮೆ ನೀಡುವಂತೆ ತಿಳಿಸಿದರೆ, ನಾನು ನಿಷ್ಠಾವಂತ ಮತ್ತು ವಿಧೇಯ ಪಕ್ಷದ ಕಾರ್ಯಕರ್ತನಾಗಿ ಹೈಕಮಾಂಡ್ ಆಜ್ಞೆಯನ್ನು ಪಾಲಿಸುತ್ತೇನೆ” ಎಂದು ಹೇಳಿದರು.
“ಪಕ್ಷದಲ್ಲಿ ನನಗೆ ಯಾವುದೇ ಸಮಸ್ಯೆಯಿಲ್ಲ, ನನ್ನ ಕೆಲಸದಲ್ಲಿ ಸಂಪೂರ್ಣವಾಗಿ ತೃಪ್ತನಾಗಿದ್ದೇನೆ. ನನಗೆ ಯಾವುದೇ ದೂರುಗಳಿಲ್ಲ. ಪಕ್ಷವು ನನಗೆ ಅಧಿಕ ಪ್ರಮುಖ ಹುದ್ದೆಗಳನ್ನು ನೀಡಿದೆ” ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ಮಹಾರಾಷ್ಟ್ರ ಚುನಾವಣೆ | 2022ರಲ್ಲಿ ಶಿವಸೇನೆ ವಿಭಜನೆಗೆ ಬಿಜೆಪಿ ಹೈಕಮಾಂಡ್ ಒಪ್ಪಿತ್ತು; ಪೃಥ್ವಿರಾಜ್ ಚೌಹಾಣ್ ಆರೋಪ
“ನಾನು ನನ್ನ ಸ್ಥಾನದ ಬಗ್ಗೆ ಯಾವುದೇ ಭಯ ಹೊಂದಿಲ್ಲ. ಅಷ್ಟಕ್ಕೂ ನಾನು ಭಾವನಾತ್ಮಕ ವ್ಯಕ್ತಿಯಲ್ಲ” ಎಂದು ವರದದಿಯಾಗಿದೆ.
ಈ ವರ್ಷ ನಡೆಯಲಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಮತ್ತು 2026ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಎಐಸಿಸಿ ರಾಜ್ಯ ಘಟಕವನ್ನು ಪುನರ್ ರಚಿಸಲು ಯೋಜಿಸುತ್ತಿದೆ ಎಂದು ವರದಿಯಾಗಿದೆ.
