“ನನ್ನ ವಿರುದ್ಧ ಎಎಪಿ ಸುಳ್ಳು ಆರೋಪಗಳನ್ನು ಮಾಡುತ್ತಿದೆ. ನನ್ನ ಮೇಲಿನ ಎಎಪಿಯ ಆರೋಪಗಳ ವಿರುದ್ಧ ಆಮರಣಾಂತ ಉಪವಾಸ ಆರಂಭಿಸುತ್ತಿದ್ದೇನೆ. ನಾನು ಸತ್ತರೆ ಎಎಪಿಯೇ ಕಾರಣ” ಎಂದು ದೆಹಲಿಯ ಬಿಜೆಪಿ ನಾಯಕ ಶೆಹಜಾದ್ ಪೂನಾವಾಲಾ ಹೇಳಿದ್ದಾರೆ.
ತಾವು ಉಪವಾಸ ಆರಂಭಿಸಿರುವುದಾಗಿ ‘ಎಕ್ಸ್‘ನಲ್ಲಿ ಪೋಸ್ಟ್ ಮಾಡಿರುವ ಪೂನಾವಾಲಾ, “ಪ್ರೀತಿಯ ಸ್ನೇಹಿತರೇ, ನಾನು ರುತುರಾಜ್ ಝಾ ವಿರುದ್ಧ ಅಸಭ್ಯವಾಗಿ ಮಾತನಾಡಿದ್ದೇನೆ ಎಂದು ಎಎಪಿ ಆರೋಪಿಸಿದೆ. ತಿರುಚಿದ ವಿಡಿಯೋವನ್ನು ಹಂಚಿಕೊಂಡು ಅಪಪ್ರಚಾರ ಮಾಡುತ್ತಿದೆ. ಎಎಪಿ ನನ್ನ ವಿರುದ್ಧ ಸುಳ್ಳುಗಳನ್ನು ಹರಡುತ್ತಿದೆ. ತೇಜೋವಧೆ ಮಾಡಿದೆ. ನಾನು ಯಾರನ್ನಾದರೂ ನಿಂದಿಸಿದ್ದೇನೆ ಎಂಬುದನ್ನು ಎಎಪಿ ಸಾಬೀತುಮಾಡಬೇಕು. ಅಲ್ಲಿಯವರೆಗೆ ಆಮರಣಾಂತ ಉಪವಾಸ ಮಾಡುತ್ತೇನೆ. ನಾನು ಸತ್ತರೆ ಅದಕ್ಕೆ ಎಎಪಿ ಜವಾಬ್ದಾರಿ” ಎಂದಿದ್ದಾರೆ.
“ನಾನು ಮುಸ್ಲಿಂ ಎಂಬ ಕಾರಣಕ್ಕೆ ಎಎಪಿ ನನ್ನನ್ನು ಗುರಿ ಮಾಡಿಕೊಂಡಿದೆ. ಟಿವಿ ಚರ್ಚೆಯ ಸಮಯದಲ್ಲಿ ಸೆರೆಹಿಡಿದ ವಿಡಿಯೋವನ್ನು ಎಡಿಟ್ ಮಾಡಿ ಎಎಪಿ ಹಂಚಿಕೊಂಡಿದೆ. ಅದು ತಿರುಚಿದ ವಿಡಿಯೋ ಎಂಬುದಕ್ಕೆ ಚರ್ಚೆಯ ಸಮಯದಲ್ಲಿ ಹಾಜರಿದ್ದ ಪತ್ರಕರ್ತ ಮತ್ತು ನಿರೂಪಕರೇ ಸಾಕ್ಷಿ” ಎಂದು ಹೇಳಿದ್ದಾರೆ.
Dear friends,
— Shehzad Jai Hind (Modi Ka Parivar) (@Shehzad_Ind) January 14, 2025
If i die – @AamAadmiParty is solely responsible for it..
I am starting a fast unto death because of the lies spread against me by AAP and for my character assassination until AAP proves i abused anybody.
Shri @MediaHarshVT , Aishwarya Kapoor of Republic know the… pic.twitter.com/cFQYAcnSep
“ನಾನು ಎಎಪಿ ಕಚೇರಿ ಎದುರು ಉಪವಾಸ ಕೂರುತ್ತೇನೆ. ನನ್ನ ವಿರುದ್ದದ ಆರೋಪವನ್ನು ಎಎಪಿ ಸಾಬೀತು ಮಾಡಬೇಕು. ಇಲ್ಲವೆ, ಕ್ಷಮೆ ಕೇಳಬೇಕು” ಎಂದಿದ್ದಾರೆ.
ದೆಹಲಿಯಲ್ಲಿ ಫೆಬ್ರವರಿ 5ರಂದು ವಿಧಾನಸಭಾ ಚುನಾವಣೆ ನಡೆಯಲಿದೆ. ಆಡಳಿತಾರೂಢ ಎಎಪಿ 3ನೇ ಬಾರಿಗೆ ಅಧಿಕಾರ ಪಡೆಯಲು ಕಸರತ್ತು ನಡೆಸುತ್ತಿದೆ. ಎಎಪಿಯಿಂದ ಅಧಿಕಾರ ಕಿತ್ತುಕೊಳ್ಳಲು ಬಿಜೆಪಿ ಹವಣಿಸುತ್ತಿದೆ. ಎಎಪಿ ವಿರುದ್ಧ ಬಿಜೆಪಿ ನಾಯಕರು ದ್ವೇಷಪೂರಿತ ಭಾಷಣಗಳೊಂದಿಗೆ ಪ್ರಚಾರ ಮಾಡುತ್ತಿದ್ದಾರೆ. ಕಳೆದ 10 ವರ್ಷಗಳಲ್ಲಿ ತನ್ನ ನೆಲೆ ಕಳೆದುಕೊಂಡಿರುವ ಕಾಂಗ್ರೆಸ್, ಮರಳಿ ನೆಲೆ ಪಡೆಯಲು ಯತ್ನಿಸುತ್ತಿದೆ.