ದಕ್ಷಿಣ ಕನ್ನಡ ಜನರ ಕೈ ಕೊಯ್ದರೆ ರಕ್ತ ಕೆಂಪಿರಲ್ಲ, ಕೇಸರಿ ಇರುತ್ತೆ: ಮಾಳವಿಕ ಅವಿನಾಶ

Date:

Advertisements

ದಿನದಿಂದ ದಿನಕ್ಕೆ ಚುನಾವಣೆ ಬಿಸಿ ಏರಿಕೆಯಾಗುತ್ತಿದೆ. ಈ ಬಾರಿ ಅಧಿಕಾರದ ಚುಕ್ಕಾಣಿ ಹಿಡಿಯಬೇಕೆಂದು ಎರಡು ಪಕ್ಷಗಳು ತೀವ್ರ ಸೆಣಸಾಟ ನಡೆಸಿವೆ. ಅಬ್ಬರದ ಪ್ರಚಾರ ನಡೆಸಿವೆ. ದಕ್ಷಿಣ ಕನ್ನಡದ ಪುತ್ತೂರಿನಲ್ಲಿ ನಡೆದ ನಾರಿಶಕ್ತಿ ಮಹಿಳಾ ಸಮಾವೇಶದಲ್ಲಿ ಭಾಷಣ ಮಾಡಿದ ಬಿಜೆಪಿ ನಾಯಕಿ ಮಾಳವಿಕ ಅವಿನಾಶ, “ಇಲ್ಲಿಯ ಜನರ ರಕ್ತದ ಬಣ್ಣ ಕೆಂಪು ಅಲ್ಲ, ಕುಯ್ದರೇ ಕೇಸರಿ ರಕ್ತ ಬರುತ್ತೆ. ಇದು ನಮಗೆಲ್ಲ ಗೊತ್ತಿದೆ” ಎಂದು ಹೇಳಿದ್ದಾರೆ.

“ನಾನು ಇಲ್ಲಿ ಬಿಜೆಪಿ ಬಗ್ಗೆ, ಹಿಂದುತ್ವದ ಪಾಠ ಹೇಳಲು ಬಂದಿಲ್ಲ. ಆದರೆ, ಎಪ್ರಿಲ್ 26ರಂದು ಮದುವೆ ಇದೆ. ಮೋದಿ ಗೆಲ್ಲುತ್ತಾರೆ ಎಂದು ನಿರ್ಲಕ್ಷ್ಯ ಮಾಡಬೇಡಿ. ಮೋದಿಯವರು ಈ ದೇಶದ ಮಹಿಳೆಯರಿಗೆ ಶಕ್ತಿ ಕೊಟ್ಟಿದ್ದಾರೆ. ಮಹಿಳೆಯರ ಸಬಲೀಕರಣಕ್ಕಾಗಿ ಎಷ್ಟೆಲ್ಲ ಯೋಜನೆ ಮಾಡಿದ್ದಾರೆ. ಅದಕ್ಕಾಗಿ ನಾವು ಹಿಂತಿರುಗಿ ಕೊಡೋದು, ಒಂದು ಮತವಷ್ಟೇ. ಅದನ್ನು ತಪ್ಪದೆ ಮಾಡಬೇಕು” ಎಂದು ತಿಳಿಸಿದ್ದಾರೆ.

“ಮೋದಿಜಿ ಮತ್ತೊಮ್ಮೆ ಪ್ರಧಾನಿ ಆಗುವುದರಲ್ಲಿ ಸಂಶಯವಿಲ್ಲ. ಇನ್ನು ಬ್ರಿಜೇಶ್ ಚೌಟ ಅಭ್ಯರ್ಥಿ ಅಲ್ಲ, ನನ್ನ ಲೆಕ್ಕದಲ್ಲಿ ಅವರು ಲೋಕಸಭಾ ಸದಸ್ಯ. ಅವರನ್ನ ಎಷ್ಟು ಅಂತರದಲ್ಲಿ ಗೆಲ್ಲಿಸುತ್ತೇವೆ ಎಂಬ ಸವಾಲು ನಮ್ಮ ಮುಂದಿದೆಎಂದಿದ್ದಾರೆ.

“ಗರೀಬಿ ಹಠಾವೋ ಎಂದು ನಾವು ಹುಟ್ಟುವ ಮೊದಲೇ ಇಂದಿರಾ ಗಾಂಧಿ ಹೇಳಿದ್ದರು. ಆದರೆ, ಗರೀಬಿ ಹಠಾವೋ ಆಗಿಲ್ಲ. ಅದನ್ನು ಮಾಡಲು ಮೋದಿಯೇ ಬರಬೇಕಾಯಿತು. ಈಗ ಕಾಂಗ್ರೆಸ್ ಹಠಾವೋ ಮಾಡಲು ಶುರು ಮಾಡಿದ್ದಾರೆ. ಆ ಮೂಲಕ ಕಾಂಗ್ರೆಸಿಗರ ಭ್ರಷ್ಟಾಚಾರವನ್ನೂ ತೊಲಗಿಸುವ ಸಂಕಲ್ಪ ಮಾಡಿದ್ದಾರೆ” ಎಂದು ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ? ದ್ವಿತೀಯ ಪಿಯುಸಿ | ಪರೀಕ್ಷೆಯಲ್ಲಿ ಶೇ. 78 ರಷ್ಟು ಫಲಿತಾಂಶ ಗಳಿಸಿದ ಬಿಬಿಎಂಪಿ ಕಾಲೇಜುಗಳು

ಮೋದಿ ದೇಶಕ್ಕೆ ಕೊಟ್ಟಿದ್ದೇನು ಅನ್ನೋದು ನಮ್ಮೆಲ್ಲರ ಮನಸ್ಸಿನಲ್ಲಿರಬೇಕು. ದಿನಪೂರ್ತಿ ಎಚ್ಚರದಲ್ಲಿದ್ದು, ದೇಶದ ಒಳಿತಿಗಾಗಿ ದುಡಿಯುತ್ತಿದ್ದಾರೆ. ದೇಶದ ಅಭ್ಯುದಯವೇ ಅವರ ಗುರಿ. ಇಡೀ ದೇಶದ ಜನರು, ಪ್ರತಿ ಗ್ರಾಮವೂ ಅಭಿವೃದ್ಧಿಯಲ್ಲಿ ಜೋಡಣೆಯಾಗಬೇಕು ಅನ್ನುವ ದೃಷ್ಟಿಯಲ್ಲಿ ಕೆಲಸ ಮಾಡುತ್ತಿದ್ದಾರೆಎಂದಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

4 COMMENTS

  1. ರಾಜ್ಯದ ಜನರಿಗೂ ಗೊತ್ತಾಗಿಬಿಡಲಿ ಮಾಳವಿಕಾ ಅಕ್ಕನ ಮಾತಿಗೆ ಸಹಮತ ಇರುವ ದಕ್ಷಿಣ ಕನ್ನಡದವರು ಒಂದ್ಸಾರಿ ಕೊಯ್ದುಕೊಂಡು ರಕ್ತ ಕೆಂಪೋ ಕೇಸರಿನೋ ಜನ ನೋಡಿಯೇ ಬಿಡಲಿ,,,ಅಕ್ಕಾ ತಾನೂ ಸ್ವತಃ ಮಾಡಿ ತೋರಿಸಬಹುದು

  2. ಮೋದಿ ಮೋಡಿ ಮುಗೀತು ಇನ್ನು ಇವಳೆನು ಹೇಳುತ್ತಾಳೆ ಎಲ್ಲ ರಕ್ತವೂ ಒಂದೇ ಇರುತ್ತೆ ಅದು ಕೆಂಪು ಮಾತ್ರ ಕೇಸರಿ ಅವಳಲ್ಲಿಬೇಕು ಯಾಕಂದ್ರೆ ಅವಳು ಅಂಧಭಕ್ತಳು.ದಿನಪೂರ್ತಿ ದುಡಿದರೆ ಇಂದು ದೇಶ ಶೇ,83 ರಷ್ಟು ಬಡತನದಲ್ಲಿರುತ್ತಿಲಿಲ್ಲ.ನಿರುದ್ಯೋಗ ಸಮಸ್ಯೆನೂ ಇರುತ್ತಿರಲಿಲ್ಲ ಜಾತಿ ಧರ್ಮದ ಅಗತ್ಯವಿಲ್ಲ ನಮಗೆ ಬೇಕಾಗಿದ್ದು ಉದ್ಯೋಗ,ಬಡತನ ನಿವಾರಣೆ,ಪ್ರಜೆಗಳ ಆರೋಗ್ಯ,ದೇಶದ ಸಂಪನ್ಮೂಲ ಇವರ ದೊಂಬರಾಟವಲ್ಲ

  3. ಮಾಳವಿಕಾ ಮಣಿಪುರದಲ್ಲಿ ಸಾವಿರಾರು ಮಹಿಳೆಯರನ್ನು ಬತ್ತತಿಮಾಡಿ ಅವರ ಯೊನಿಯಲ್ಲಿ ಕೆಯುಹಾಕಿ ಹನದು ಕೂಮಿನ ಯುವಕರು ಅವರ ಮಲಿಗಳು ಕತ್ತಸಿ ಚಿತ್ರಹಿಂಸೆ ಮಾಡಿದ್ದು ಕೆಂದ್ರದ ಮೊಧಿ ನತ್ಯತ್ಪದ ಸರಕಾರ ಮತ್ತು ಮಣಿಪುರದ ಬಿಜಿಪಿ ಸರಕಾರ ಮಹಿಳೆಯಗೆ ಬತಲೇ ಮಾಡಿಸಿದು ನಿನ್ನ ಕೆಣಗೆ ಕಾಣಿಸಿಲಲ್ಲವೆ 2024 ಮೊಧಿ ಪ್ರದಾನ ಮಂತ್ರಿ ಆದರೆ ದಾಕ್ಷಣಭಾರತತ್ತದಲ್ಲಿ ಕೂಮಗಲಭೇ ಎಂಬಿಸೆ ಮಣಿಪುರದಲ್ಲಿ ಮಹಿಳೆಯರ ಬತ್ತಲೆ ಮೆರವಣೆಗೇ ನಡಿಯುದೆ ಮಾಳವಿಕಾ ಇದಕೆ ನಿನ್ನ ಹೊಣೆಗಾರರತಿ ಎಚ್ಚರ ತಂಗಿ !

  4. ಅಕ್ಕ ನೀನು ನಿನ್ನ ಕೈಯನ್ನು ಕೊಯ್ದು ಕೊಂಡು ಒಂದುಸಾರಿ ತೋರಿಸು ರಕ್ತ ಕೆಂಪೋ ಇಲ್ಲ ಕೇಸರಿನ ಗೊತ್ತಾಗುತ್ತದೆ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಾಂಗ್ರೆಸ್‌ನ ‘ಎಕ್ಸ್’ ಖಾತೆಯಲ್ಲಿ ಪ್ರಚೋದನಕಾರಿ ಪೋಸ್ಟ್ – ಆರೋಪ; ಎಫ್‌ಐಆರ್ ದಾಖಲು

ಮಹಾರಾಷ್ಟ್ರ ರಾಜ್ಯ ಕಾಂಗ್ರೆಸ್‌ನ ಅಧಿಕೃತ 'ಎಕ್ಸ್‌' ಖಾತೆಯಲ್ಲಿ ಆಕ್ಷೇಪಾರ್ಯ ಪೋಸ್ಟ್‌ ಮಾಡಲಾಗಿತ್ತು...

ಮಂಗಳೂರು ದಸರಾ: ಹುಲಿ ವೇಷ ನೃತ್ಯದ ಲಯಕ್ಕೆ ಹೆಮ್ಮೆಯಿಂದ ಹೆಜ್ಜೆ ಹಾಕಿದ ಮಹಿಳೆಯರು

ಮಂಗಳೂರು ದಸರಾದಲ್ಲಿ ಟೇಸ್ ನೃತ್ಯದ ಲಯವು ಒಂದು ಕಾಲದಲ್ಲಿ ಪುರುಷರದ್ದೇ ಆಗಿತ್ತು....

ಕೇರಳ ವಿಧಾನಸಭೆಯಲ್ಲಿ SIR ವಿರುದ್ಧ ಸರ್ವಾನುಮತದಿಂದ ನಿರ್ಣಯ ಅಂಗೀಕಾರ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ(SIR) ವಿರುದ್ಧ ಕೇರಳ ವಿಧಾನಸಭೆಯಲ್ಲಿ ನಿರ್ಣಯವು...

ದಾವಣಗೆರೆ | ಒಳಮೀಸಲಾತಿ ಆದೇಶ ಕಾನೂನಾಗಲು ಸುಗ್ರೀವಾಜ್ಞೆ ಜಾರಿಗೊಳಿಸಿ: ಮಾಜಿ ಸಚಿವ ಆಂಜನೇಯ

"ಒಳಮೀಸಲಾತಿ ಆದೇಶವು ಕೇವಲ ಸರ್ಕಾರಿ ಆದೇಶವಾಗಿದ್ದು, ಅದು ಕಾನೂನಿನ ಚೌಕಟ್ಟಿಗೆ ಬರಲು...

Download Eedina App Android / iOS

X