ಮಣಿಪುರದಲ್ಲಿ ಕಳೆದ ಒಂದು ವರ್ಷದಿಂದ ಜನಾಂಗೀಯ ಹಿಂಸಾಚಾರಗಳು ನಡೆಯುತ್ತಿದೆ. 200ಕ್ಕೂ ಅಧಿಕ ಮಂದಿ ಈ ಹಿಂಸಾಚಾರಕ್ಕೆ ಬಲಿಯಾಗಿದ್ದಾರೆ. ಕಳೆದ ವರ್ಷ ಪ್ರಾರಂಭವಾಗಿ ಹಿಂಸಾಚಾರಕ್ಕೆ ಈ ವರ್ಷದ ಅಂತ್ಯದಲ್ಲಿ ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಕ್ಷಮೆಯಾಚಿಸಿದ್ದಾರೆ.
“ನನ್ನನ್ನು ಕ್ಷಮಿಸಿ, ವಿಷಾದಿಸುತ್ತೇನೆ” ಎಂದು ಹೇಳಿರುವ ಮಣಿಪುರ ಸಿಎಂ, ಹೊಸ ವರ್ಷದಲ್ಲಿ ಎಲ್ಲವೂ ಸರಿಯಾಗುವ ಆಶಯ ವ್ಯಕ್ತಪಡಿಸಿದ್ದಾರೆ. 2025ರಲ್ಲಿ ರಾಜ್ಯವು ಸಹಜ ಸ್ಥಿತಿಗೆ ಮರಳುತ್ತದೆ ಎಂದು ಭರವಸೆ ಇದೆ ಎಂದಿದ್ದಾರೆ.
ಇದನ್ನು ಓದಿದ್ದೀರಾ? ಮಣಿಪುರ ಸಿಎಂ ನಿವಾಸಕ್ಕೆ ದಾಳಿ ಯತ್ನ; ಬಿರೇನ್ ಸಿಂಗ್ ಸರ್ಕಾರಕ್ಕೆ 24 ಗಂಟೆಗಳ ಅಂತಿಮ ಗಡುವು!
“ಇಡೀ ವರ್ಷ ಅತ್ಯಂತ ದುರದೃಷ್ಟಕರವಾಗಿತ್ತು. ಕಳೆದ ಮೇ 3ರಿಂದ ಇಂದಿನವರೆಗೆ ಏನಾಗುತ್ತಿದೆಯೋ ಆ ವಿಚಾರದಲ್ಲಿ ನಾನು ರಾಜ್ಯದ ಜನರಲ್ಲಿ ಕ್ಷಮೆಯಾಚಿಸುತ್ತೇನೆ. ಅನೇಕರು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿದ್ದಾರೆ. ಅನೇಕ ಜನರು ತಮ್ಮ ಮನೆಗಳನ್ನು ಕಳೆದುಕೊಂಡಿದ್ದಾರೆ. ಈ ಬಗ್ಗೆ ನನಗೆ ವಿಷಾದವಿದೆ, ನಾನು ಕ್ಷಮೆಯಾಚಿಸುತ್ತೇನೆ” ಎಂದು ತಿಳಿಸಿದ್ದಾರೆ.
“ಕಳೆದ ಮೂರ್ನಾಲ್ಕು ತಿಂಗಳಲ್ಲಿ ರಾಜ್ಯವು ಶಾಂತಿಯತ್ತ ಸಾಗುತ್ತಿದೆ ಎಂದು ನಾನು ಭಾವಿಸುತ್ತೇನೆ. 2025ರ ವೇಳೆಗೆ ರಾಜ್ಯವು ಸಾಮಾನ್ಯ ಸ್ಥಿತಿಗೆ ಮರಳುತ್ತದೆ ಎಂದು ನಾನು ನಂಬುತ್ತೇನೆ” ಎಂದು ಮುಖ್ಯಮಂತ್ರಿ ಹೇಳಿದರು.
ಇದನ್ನು ಓದಿದ್ದೀರಾ? ಮಣಿಪುರ | ಮತ್ತೆ ಮತ್ತೆ ಭುಗಿಲೇಳುತ್ತಿರುವ ಹಿಂಸಾಚಾರ; 356 ವಿಧಿ ಜಾರಿ ಅನಿವಾರ್ಯ
“ಹಿಂದಿನ ತಪ್ಪುಗಳನ್ನು ಕ್ಷಮಿಸಬೇಕು, ಮರೆತುಬಿಡಬೇಕು ಎಂದು ರಾಜ್ಯದ ಎಲ್ಲಾ ಸಮುದಾಯಗಳಿಗೆ ನಾನು ಮನವಿ ಮಾಡಲು ಬಯಸುತ್ತೇನೆ. ನಾವು ಶಾಂತಿಯುತ ಮತ್ತು ಸಮೃದ್ಧ ಮಣಿಪುರದ ಕಡೆಗೆ ಹೊಸ ಜೀವನವನ್ನು ಪ್ರಾರಂಭಿಸಬೇಕು. ಮಣಿಪುರದ ಎಲ್ಲಾ 35 ಬುಡಕಟ್ಟು ಜನಾಂಗದವರು ಸಾಮರಸ್ಯದಿಂದ ಬದುಕಬೇಕು” ಎಂದು ಮನವಿ ಮಾಡಿದರು.
Held a press briefing at my Secretariat.
— N. Biren Singh (@NBirenSingh) December 31, 2024
On the eve of a new year, I reflect on the progress we've made together in 2024 and the challenges we’ve overcome. As we step into 2025, I reaffirm our commitment to building a stronger, more inclusive state. pic.twitter.com/nspjCL1FaI
ಮಣಿಪುರದಲ್ಲಿ ಕಳೆದ ವರ್ಷ (2023) ಮೇ ತಿಂಗಳಿನಲ್ಲಿ ಹಿಂಸಾಚಾರ ಆರಂಭವಾಗಿದ್ದು 200ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಆದರೆ ಈವರೆಗೂ ಪ್ರಧಾನಿ ನರೇಂದ್ರ ಮೋದಿ ಮಣಿಪುರಕ್ಕೆ ಒಂದು ಬಾರಿಯೂ ಭೇಟಿ ನೀಡಿಲ್ಲ. ಇದರಿಂದಾಗಿ ನಿರಂತರವಾಗಿ ವಿಪಕ್ಷಗಳ ವಾಗ್ದಾಳಿಗೆ ಒಳಗಾಗಿದ್ದಾರೆ.

ಮನುಷ್ಯರನ್ನು ಮನುಷ್ಯತ್ವವನ್ನು ಜಾತಿ ಧರ್ಮ ದೇವರ ದೃಷ್ಟಿಯಿಂದ ನೋಡುವ ಅಮಾನವೀಯ ಅನಾಗರಿಕ ಕ್ರೂರಿ ಮನಸ್ಥಿತಿಯ ಮನುಷ್ಯರಲ್ಲದವರು,,, ಎಷ್ಟೋ ಯುವಕ ಯುವತಿಯರು ಭಯದಿಂದ ರಾಜ್ಯ ಬಿಟ್ಟು ಇತರೆ ರಾಜ್ಯಗಳಲ್ಲಿ ಹೋಟೆಲ್ ಮನೆಗೆಲಸ ಮಾಡಿಕೊಂಡು ಜೀವನ ಮಾಡುವರು,, ಇವರು ಅಧಿಕಾರದಲ್ಲಿ ಇರುವುದಾದರೂ ಯಾರಿಗಾಗಿ ಪಕ್ಪಕ್ಕಾಗಿಯೇ,, ಶಿಸ್ತು ಸಂಸ್ಕಾರ ಸಂಪ್ರದಾಯ ಸಂಸ್ಕೃತಿ ಏನೆಲ್ಲಾ ಪುಂಗಿ ಊರೆಲ್ಲಾ ಊದಿಕೊಂಡು ಓಡಾಡುತ್ತಾರೆ,,ಯಾವ ದೇಶದ ಸಂಸ್ಕಾರ ಇದೆ ಇವ್ರಿಗೆ,, ಗಂಟಲು ಹರಕೊಂಡು ಒದರುವ ಜುಮ್ಲಾ ವ್ಯಾಪಾರಿಗಳು ಮಣಿಪುರ ಕಾಣುತ್ತಿವೆ,,, ಇಂಥವರಿಂದ ಈ ದೇಶಕ್ಕೆ ಮುಕ್ತಿ ಎಂದು