ಕಾಂಗ್ರೆಸ್ ಸರ್ಕಾರದ ಬಹು ನಿರೀಕ್ಷಿತ ಐದು ಗ್ಯಾರಂಟಿ ಯೋಜನೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಶುಕ್ರವಾರ ಜಾರಿ ಮಾಡಿದರು.
ಶುಕ್ರವಾರ ವಿಧಾನಸೌಧದಲ್ಲಿ ನಡೆದ ವಿಶೇಷ ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ, ಐದು ಗ್ಯಾರಂಟಿ ಯೋಜನೆ ಅನುಷ್ಠಾನ ಮಾಡುತ್ತಿದ್ದೇವೆ ಎಂದು ಯೋಜನೆಗಳ ಷರತ್ತು, ನಿಯಮಗಳ ಬಗ್ಗೆ ಸಿಎಂ ಸಿದ್ದರಾಮಯ್ಯ ವಿವರಿಸಿದರು.
ಮಹಿಳೆಯರಿಗೆ ಉಚಿತ ಪ್ರಯಾಣ
- ಜೂನ್ 11ರಿಂದ ಕರ್ನಾಟದ ಎಲ್ಲ ಮಹಿಳೆಯರಿಗೆ ರಾಜ್ಯಾದ್ಯಂತ ಉಚಿತ ಪ್ರಯಾಣ
- ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಸೇರಿ ಎಲ್ಲ ನಿಗಮಗಳಲ್ಲೂ ಉಚಿತ ಪ್ರಯಾಣ
- ಮಹಿಳೆ, ಹೆಣ್ಣುಮಕ್ಕಳು, ವಿದ್ಯಾರ್ಥಿನಿಯರು, ಮಂಗಳಮುಖಿಯರು ಎಲ್ಲರಿಗೂ ಕರ್ನಾಟಕ ಮೂಲೆ ಮೂಲೆಗೂ ಉಚಿತ ಪ್ರಯಾಣ
- ಎಸಿ, ಲಗ್ಜುರಿ ಹಾಗೂ ರಾಜಹಂಸ ಬಸ್‌ಗಳನ್ನು ಹೊರತುಪಡಿಸಿ ಉಳಿದ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ
- ಒಂದು ಬಸ್‌ನಲ್ಲಿ ಶೇ.50 ರಷ್ಟು ಆಸನ ಗಂಡಸರಿಗೆ ಮೀಸಲು
ಗೃಹಜ್ಯೋತಿ ಯೋಜನೆ
- ಜುಲೈ 1ರಂದು ಗೃಹಜ್ಯೋತಿ ಯೋಜನೆ ಆರಂಭ
- 12 ತಿಂಗಳ ವಿದ್ಯುತ್ ಬಳಕೆಯ ಸರಾಸರಿ ಪಡೆದು, ಅದರ ಮೇಲೆ ಶೇ.10 ರಷ್ಟು ವಿದ್ಯುತ್ ಉಚಿತ.
- 200 ಯೂನಿಟ್ ಒಳಗಿದ್ದರೆ ಸಂಪೂರ್ಣ ಉಚಿತ
- ಜುಲೈ 1ರೊಳಗೆ ಇರುವ ಎಲ್ಲ ಬಾಕಿ ಮೊತ್ತಗಳನ್ನು ಗ್ರಾಹಕರು ಕಟ್ಟಬೇಕು
ಗೃಹಲಕ್ಷ್ಮಿ ಯೋಜನೆ
- ಪ್ರತಿ ತಿಂಗಳು ಮನೆಯ ಯಜಮಾನಿಗೆ 2 ಸಾವಿರ ರೂಪಾಯಿ
- ಆಗಸ್ಟ್ 15ರಂದು ಯೋಜನೆ ಜಾರಿ
- ಜೂನ್ 15ರಿಂದ ಜುಲೈ 15ರವರೆಗೂ ಅರ್ಜಿ ಸಲ್ಲಿಸಲು ಅವಕಾಶ
- ಅಕೌಂಟ್ ಮತ್ತು ಆಧಾರ್ ಕಾರ್ಡ್ ಸಲ್ಲಿಸುವ ನಿಯಮ
- ಎಪಿಎಲ್, ಬಿಪಿಎಲ್ ಕಾರ್ಡ್ ಹೊಂದಿರುವ ಮನೆಯ ಯಜಮಾನಿಗೆ ಪ್ರತಿ ತಿಂಗಳು 2000 ಹಣ
- ವಿಧವಾ ವೇತನ, ಅಂಗವೀಕಲ ವೇತನ, ವೃದ್ಧಾಪ್ಯ ವೇತನ ಪಡೆಯುವ ಮಹಿಳೆಯರಿಗೂ ಪ್ರತ್ಯೇಕವಾಗಿ 2000 ಹಣ
ಯುವನಿಧಿ ಯೋಜನೆ
- 2022-23 ನೇ ಸಾಲಿನ ಪದವೀಧರರಿಗೆ 3 ಸಾವಿರ, ಡಿಪ್ಲೊಮಾದವರಿಗೆ 1,500 ಸಾವಿರ ರೂ.
- 24 ತಿಂಗಳು ‘ಯುವನಿಧಿ’ ನೀಡುತ್ತೇವೆ. ಈ ಅವಧಿಯೊಳೆಗೆ ಯಾರಾದರೂ ಸರ್ಕಾರಿ ಮತ್ತು ಖಾಸಗಿ ಕಂಪನಿಗಳಿಗೆ ಸೇರಿದರೆ ಅವರಿಗೆ ನೀಡುವುದಿಲ್ಲ.
- ಇದಕ್ಕೆ ಅರ್ಜಿ ಸಲ್ಲಿಸುವುದು ಕಡ್ಡಾಯ
10 ಕೆಜಿ ಉಚಿತ ಅಕ್ಕಿ
- ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್‌ದಾರರಿಗೆ ತಲಾ 10 ಕೆಜಿ ಅಕ್ಕಿ ಉಚಿತ
- ಜುಲೈ 1ರಿಂದ ಜಾರಿ