ದೇವರು, ದೇಶದ ಹೆಸರಲ್ಲಿ ಸಮಾಜಕ್ಕೆ ಸಮೂಹ ಸನ್ನಿ ಹಿಡಿದಿದೆ : ಪತ್ರಕರ್ತ ಹರ್ಷಕುಮಾರ್ ಕುಗ್ವೆ

Date:

Advertisements

“ಸಮೂಹ ಸನ್ನಿಯ ಕಾಲವಿದು. ದೇವರ ಹೆಸರಲ್ಲಿ, ದೇಶದ ಹೆಸರಲ್ಲಿ ಸಮಾಜಕ್ಕೆ ಸಮೂಹ ಸನ್ನಿ ಹಿಡಿದಿದೆ.
ಇಂತಹ ಸಂದರ್ಭದಲ್ಲಿ ಈ ಸಮಾವೇಶ ನಡೆಯುತ್ತಿದೆ. ಸಮೂಹ ಸನ್ನಿಗೆ ವಿರುದ್ಧವಾಗಿ, ಸಂವಿಧಾನ ಪ್ರಜ್ಞೆಯನ್ನು ಮೂಡಿಸಲು, ಸಮೂಹ ಪ್ರಜ್ಞೆಯನ್ನು ತುಂಬಲು ಈ ಕಾರ್ಯಕ್ರಮ ಅಗತ್ಯವಾಗಿದೆ” ಎಂದು ಪತ್ರಕರ್ತ ಹರ್ಷಕುಮಾರ್‌ ಕುಗ್ವೆ ಹೇಳಿದರು.

ರಾಜ್ಯ ಸರ್ಕಾರ ಆಯೋಜಿಸಿರುವ ಎರಡು ದಿನಗಳ ಸಂವಿಧಾನ ಮತ್ತು ರಾಷ್ಟ್ರೀಯ ಏಕತಾ ಸಮಾವೇಶ, ಭಾರತದ ಸಂವಿಧಾನ ರಚನೆಯ ಅಮೃತ ಮಹೋತ್ಸವ ಸಮಾರಂಭದಲ್ಲಿ ʼಒಕ್ಕೂಟ ವ್ಯವಸ್ಥೆಯಲ್ಲಿನ ಅಂತರಗಳ ಸಮತೋಲನಾ ಆಯಾಮಗಳುʼ ಗೋಷ್ಠಿಯಲ್ಲಿ ಅವರು ಮಾತನಾಡಿದರು

ಫೆಡರಲ್ ಸಿಸ್ಟಮ್‌ಗೂ ಒಕ್ಕೂಟ ಎನ್ನುತ್ತೇವೆ, ಯೂನಿಯನ್ ಸಿಸ್ಟಮ್ ಎಂಬುದಕ್ಕೂ ಒಕ್ಕೂಟ ಎಂದು ಕರೆಯುತ್ತೇವೆ. ಆದರೆ, ಇದು ತಪ್ಪು ಪದಬಳಕೆ. ಇದಕ್ಕೆ ಪರ್ಯಾಯ ಪದ ಬಳಕೆ ಬಳಸಬೇಕು. ಇದನ್ನು ಸಂಯುಕ್ತ ವ್ಯವಸ್ಥೆ ಎಂದು ಕರೆಯಬಹುದೇನೋ ಎಂದು ಅವರು ಹೇಳಿದರು.

Advertisements

“ಈ ದೇಶಭಕ್ತರು ಹೇಗೆ ಎಂದರೆ ದೊಡ್ಡ ದೊಡ್ಡ ಮಾತುಗಳನ್ನು ದೇಶದ ಬಗ್ಗೆ ಆಡುತ್ತಾರೆ. ಪಕ್ಕದಲ್ಲಿ ಕಷ್ಟದಲ್ಲಿದ್ದವನಿಗೆ ಇವರು ಕಣ್ಣೆತ್ತಿಯೂ ನೋಡಲ್ಲ ಎಂದಿದ್ದರು ಬಾಬಾ ಸಾಹೇಬರು. ಜಾತಿ ರಿಪಬ್ಲಿಕ್ ಮಾಡಿಕೊಂಡಾಗ ಒಂದು ರಾಷ್ಟ್ರವಾಗಲು ಸಾಧ್ಯವೇ? ನಾವು ಭಾವನಾತ್ಮಕವಾಗಿ ಒಂದಾಗಿರಲು ಸಾಧ್ಯವಿಲ್ಲ ಎಂಬುದು ಬಾಬಾ ಸಾಹೇಬರ ನಿಲುವು ಆಗಿತ್ತು. ಆದರೆ ಅದೇ ಬಾಬಾ ಸಾಹೇಬರು, ಯೂನಿಟರಿ ಸಿಸ್ಟಮ್ ಅನ್ನು ಸಂವಿಧಾನದಲ್ಲಿ ತರುತ್ತಾರೆ. ಒಂದು ಸಂವಿಧಾನದ ಅಡಿ ಇವರನ್ನು ಒಟ್ಟಿಗೆ ತರದಿದ್ದರೆ ಹರಿದು ಹಂಚಿಹೋಗುತ್ತಾರೆಂಬ ನಿಲುವು ಅವರದ್ದಾಗಿತ್ತು. ಅಂದಿನ ಪರಿಸ್ಥಿತಿ ಹಾಗೆ ಇತ್ತು” ಎಂದರು.

“2012ರಲ್ಲಿದ್ದ ಸೆಸ್, ಸರ್ಚಾರ್ಜ್ 10% ಆದರೆ, ಈಗ 19%ರಷ್ಟಿದೆ. ಸುಮಾರು 75ರಷ್ಟು ಉತ್ತರ ಭಾರತದ ರಾಜ್ಯಗಳಿಗೆ ಹೋಗಿದೆ. ವರ್ಟಿಕಲ್, ಹಾರಿಜಾಂಟಲ್ ಡೆವಲ್ಯೂಷನ್ ಎರಡಲ್ಲೂ ಅನ್ಯಾಯವಾಗಿದೆ. ಒಂದು ದೇಶ, ಒಂದು ಚುನಾವಣೆ, ಒಬ್ಬ ಮೋದಿ ಎಂಬಲ್ಲಿಗೆ ಈ ದೇಶ ಹೋಗುತ್ತಿದೆ” ಎಂದು ವಿಷಾದ ವ್ಯಕ್ತಪಡಿಸಿದರು.

ಇಡೀ ರಾಜ್ಯಲ್ಲಿ ಇದು ಸಂಚಲನ ಮೂಡಿಸಿದೆ: ಮಾವಳ್ಳಿ ಶಂಕರ್‌
“ಈ ಕಾರ್ಯಕ್ರಮ ಇಡೀ ರಾಜ್ಯದಲ್ಲಿ ಸಂಚಲನ ಮೂಡಿಸಿದೆ. ಆಜಾದಿ ಕಾ ಅಮೃತ ಮಹೋತ್ಸವವನ್ನು ಆಚರಿಸುತ್ತಿದ್ದೇವೆ. ಈ ಸಂದರ್ಭದಲ್ಲಿ ಸಂವಿಧಾನ ಅರಿವು ಯಾವ ಪ್ರಮಾಣದಲ್ಲಿದೆ ಎಂದು ನಾವು ಗಮನಿಸಿದಾಗ, ಬಾಬಾ ಸಾಹೇಬರು ಬರೆದಿದ್ದಾರೆ ಎಂಬ ಕಾರಣಕ್ಕೋ ಏನೋ ಸಂವಿಧಾನಕ್ಕೂ ಕಳಂಕವನ್ನು ಹಚ್ಚಿದ್ದಾರೆ” ಎಂದು ಸಾಮಾಜಿಕ ಚಿಂತಕ ಮಾವಳ್ಳಿ ಶಂಕರ್‌ ಹೇಳಿದರು.

ಸಂವಿಧಾನ ಎಸ್ಸಿ ಎಸ್ಟಿಗಳಿಗೆ ಸೇರಿದ್ದು ಎಂಬ ಮಾನಸಿಕ ರೋಗ ಮೇಲ್ಜಾತಿಗಳಲ್ಲಿ ಇದೆ. ಸಾಕ್ಷರತೆಯ ಪ್ರಮಾಣದಲ್ಲಿ ದೇಶ ಮುಂದಿದೆ. 80 ಪರ್ಸೆಂಟ್‌ವರೆಗೆ ನಾವು ಸಾಕ್ಷರತೆಯನ್ನು ಪಡೆದಿದ್ದೇವೆ. ಆದರೆ ಸಂವಿಧಾನದ ಸಾರಕ್ಷತೆಯನ್ನು ಪಡೆಯಬೇಕಿದೆ. ಸಂವಿಧಾನದ ಕುರಿತು ಇರುವ ಅನಕ್ಷರತೆಯನ್ನು ಹೋಗಲಾಡಿಸಬೇಕಿದೆ.

ಮಾವಳ್ಳಿ ೧

ಮೂನಾಲ್ಕು ವರ್ಷಗಳ ಹಿಂದೆ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳು “ದೇಶ ಗಂಡಾಂತರದಲ್ಲಿದೆ” ಎಂದಿದ್ದರು. ದೇಶದ ಜನ ಅದನ್ನು ಕೇಳಿಸಿಕೊಳ್ಳುವ ಸ್ಥಿತಿಯಲ್ಲಿ ಇರಲಿಲ್ಲ. ಈಗಲೂ ಇಲ್ಲ. ಈ ಒಕ್ಕೂಟ ವ್ಯವಸ್ಥೆಯನ್ನು ಛಿದ್ರಗೊಳಿಸುವ ಶಕ್ತಿಗಳೇ ಬಲಗೊಳ್ಳುತ್ತಿದೆ” ಎಂದರು.

“ಅಲ್ಪಸಂಖ್ಯಾತ ಸಮುದಾಯಗಳು, ತಳ ಸಮುದಾಯಗಳು ತಮ್ಮ ಪಾಲುದಾರಿಕೆಯನ್ನು ಕೇಳುವಾಗ ಅದು ಕಮ್ಯುನಲಿಸಂ ಆಗುತ್ತದೆ. ಜಾತಿವಾದ ಆಗುತ್ತದೆ. ಮೇಲು ವರ್ಗಗಳು, ಮೇಲು ಜಾತಿಗಳು ಇಡೀ ಅಧಿಕಾರವನ್ನು ತಮ್ಮದಾಗಿಸಿಕೊಳ್ಳುವ ಸಂದರ್ಭದಲ್ಲಿ ಅದನ್ನು ರಾಷ್ಟ್ರೀಯವಾದ ಎಂದು ಕರೆಯುತ್ತಾರೆ ಎಂದು ಬಾಬಾ ಸಾಹೇಬರು ಹೇಳಿದ್ದರು. ನಮ್ಮ ದೇಶ ಪ್ರಜಾಪ್ರಭುತ್ವದ ತೊಟ್ಟಿಲು ಎನ್ನುತ್ತೇವೆ. ನಿಜಕ್ಕೂ ಈ ದೇಶ ಆ ದಿಕ್ಕಿನಲ್ಲಿ ಸಾಗುತ್ತಿದೆಯಾ” ಎಂದು ಅವರು ಪ್ರಶ್ನಿಸಿದರು.

ನಾವೀಗ ಸಂವಿಧಾನದ ಅವಕಾಶಗಳ ಮೂಲಕವೇ ಮಾತನಾಡಬೇಕಾಗುತ್ತದೆ. ನೀಟ್, ಎನ್ಇಪಿ ಬಂದಾಗ ಅದನ್ನು ವಿರೋಧಿಸಿದ ತಮಿಳುನಾಡು ನಡೆ ಮಾದರಿಯಾಗಬೇಕು. ಆ ಹಿನ್ನೆಲೆಯಲ್ಲಿ ಕೇಂದ್ರ ಈ ನಡವಳಿಕೆಗಳ ವಿರುದ್ಧ ವಿರೋಧಿಸಬೇಕು. ರಾಜ್ಯ ಸರ್ಕಾರಗಳಿಗಿರುವ ಹಕ್ಕುಗಳನ್ನು ಬಳಸಿಕೊಂಡೇ ಹೋರಾಟ ಮಾಡಬೇಕಿದೆ ಎಂದು ಹೇಳಿದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬ್ರಹ್ಮಾವರ | ಮಹೇಶ್ ಶೆಟ್ಟಿ ತಿಮರೋಡಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ವಿರುದ್ಧ ಅವಹೇಳನಾಕಾರಿ ಹೇಳಿಕೆ...

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

ಒಳಮೀಸಲಾತಿ | ಅಲೆಮಾರಿ ಸಮುದಾಯಗಳಿಗೆ ಸರ್ಕಾರದಿಂದ ನ್ಯಾಯ ಸಿಗಲಿ: ಬರಗೂರು ರಾಮಚಂದ್ರಪ್ಪ

ರಾಜ್ಯ ಸರ್ಕಾರವು ಜಾರಿಗೊಳಿಸಿರುವ ಒಳಮೀಸಲಾತಿಯಲ್ಲಿ ಅಲೆಮಾರಿ ಸಮುದಾಯಗಳಿಗೆ ನ್ಯಾಯ ಸಿಗಬೇಕು ಎಂದು...

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

Download Eedina App Android / iOS

X