ಅಧಿವೇಶನ | ಎಸ್ಸಿ, ಎಸ್ಟಿ ವ್ಯಕ್ತಿಗಳು ಕೈಗೊಳ್ಳುವ ಟೆಂಡರ್‌ ಕಾಮಗಾರಿಗಳ ಮೊತ್ತ 1 ಕೋಟಿ ರೂ.ಗೆ ಹೆಚ್ಚಳ

Date:

Advertisements
  • ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮಕ್ಕೆ ತಿದ್ದುಪಡಿ
  • ಮುಂಗಡವಾಗಿ ಟೆಂಡರ್‌ ಹಣ ನೀಡಲು ಶಾಸಕ ಶಿವಲಿಂಗೇಗೌಡ ಸಲಹೆ

ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮಕ್ಕೆ ತಿದ್ದುಪಡಿ ತಂದು, ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳಿಗೆ ಸೇರಿದ ವ್ಯಕ್ತಿಗಳಿಗೆ ಟೆಂಡರ್‌ ಕಾಮಗಾರಿಗಳ ಮೊತ್ತ 50 ಲಕ್ಷ ರೂ.ದಿಂದ 1 ಕೋಟಿ ರೂ.ಗೆ ಹೆಚ್ಚಳ ಮಾಡುತ್ತಿದ್ದೇವೆ ಎಂದು ಕಾನೂನು ಸಚಿವ ಎಚ್‌ ಕೆ ಪಾಟೀಲ್‌ ತಿಳಿಸಿದರು.

10ನೇ ದಿನದ ವಿಧಾನಸಭಾ ಅಧಿವೇಶನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ ತಿದ್ದುಪಡಿ ವಿಧೇಯಕ ಮಂಡಿಸಿ ಮಾತನಾಡಿದರು.

“ಸಾರ್ವಜನಿಕ ಸಂಗ್ರಹದಲ್ಲಿ ಪಾರದರ್ಶಕತೆ ಅಧಿನಿಯಮವನ್ನು ಪರಿಣಾಮಕಾರಿಯಾಗಿ ಜಾರಿ ಮಾಡಲು ಸರ್ಕಾರ ಉದ್ದೇಶಿಸಿದೆ. 2016 ತಿದ್ದುಪಡಿ ಮಾಡಲಾಗಿತ್ತು. ಹಾಗೆಯೇ 2018ರಲ್ಲೂ ತಿದ್ದುಪಡಿ ತರಲಾಗಿತ್ತು. ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದಾಗ ಈ ಹಣದ ಮೊತ್ತ ಹೆಚ್ಚಿಸುವ ಬಗ್ಗೆ ಚರ್ಚೆಯಾಗಿತ್ತು. ನಮ್ಮ ಸರ್ಕಾರ ಈಗ ಎಸ್ಸಿ, ಎಸ್ಟಿ ವರ್ಗಗಳಿಗೆ ಕೈಗೊಳ್ಳುವ ಟೆಂಡರ್‌ ಮೊತ್ತವನ್ನು 50 ಲಕ್ಷದಿಂದ 1 ಕೋಟಿಗೆ ಹೆಚ್ಚಿಸಿದೆ” ಎಂದರು.

Advertisements

ವಿರೋಧ ಪಕ್ಷದ ಸದಸ್ಯ ಬಸವರಾಜ ಬೊಮ್ಮಾಯಿ ಅವರು ಸಾರ್ವಜನಿಕ ಸಂಗ್ರಹದಲ್ಲಿ ಪಾರದರ್ಶಕತೆ ಅಧಿನಿಯಮ ತಿದ್ದುಪಡಿ ಸ್ವಾಗತಿಸಿ, “ನಮ್ಮ ಸರ್ಕಾರದ ಬಜೆಟ್‌ನಲ್ಲಿ ಇದನ್ನು ಘೋಷಿಸಿದ್ದೆವು. ಎಸ್ಸಿ ಎಸ್ಟಿಗಳಿಗೆ ಮೀಸಲಾಗಿದ್ದ 50 ಲಕ್ಷ ದಿಂದ 1 ಕೋಟಿಗೆ ಕಾಮಗಾರಿ ಮೊತ್ತವನ್ನು ಹೆಚ್ಚಿಸಿರುವುದನ್ನು ಸ್ವಾಗತಿಸುತ್ತೇವೆ” ಎಂದರು.

ಈ ಸುದ್ದಿ ಓದಿದ್ದೀರಾ? ಮತ್ತೆ ಮೇಲೆದ್ದ ಸೌಜನ್ಯ ಅತ್ಯಾಚಾರ-ಕೊಲೆ ಪ್ರಕರಣ: ಮುಖ್ಯಮಂತ್ರಿ ಹೊಗಳಿ ಪತ್ರ ಬರೆದ ವೀರೇಂದ್ರ ಹೆಗ್ಗಡೆ

ಆರಗ ಜ್ಞಾನೇಂದ್ರ ಮಾತನಾಡಿ, “ಈ ಬಿಲ್‌ಅನ್ನು ಸ್ವಾಗತಿಸುತ್ತೇನೆ. ಇಲ್ಲಿ ಲೋಪದೋಷಗಳು ಇವೆ. ಎಸ್ಸಿ ಎಸ್ಟಿಗಳ ಹೆಸರಲ್ಲಿ ಜನರಲ್‌ ಸಮುದಾಯದವರು ಗುತ್ತಿಗೆ ತೆಗೆದುಕೊಂಡು ಅವರಿಗೆ ಪರ್ಸೆಂಟೇಜ್‌ ಕೊಡುತ್ತಾರೆ. ಇದು ನಿಲ್ಲಬೇಕು. ತಳಸಮುದಾಯದ ವ್ಯಕ್ತಿಗಳು ಮುಂದೆ ಬರಬೇಕು ಎಂದರೆ ಪ್ರಾಮಾಣಿಕವಾಗಿ ಅದೇ ಸಮುದಾಯದ ವ್ಯಕ್ತಿಗಳಿಗೆ ಈ ಕಾಮಗಾರಿಗಳ ಕೆಲಸ ಸಿಗಬೇಕು” ಎಂದರು.

ಶಿವಲಿಂಗೇಗೌಡ ಮಾತನಾಡಿ, “ಸ್ವಯಂ ಉದ್ಯೋಗ ಕಂಡುಹಿಡಿಯಲು ಎಸ್ಸಿ ಎಸ್ಟಿ ಅವರಿಗೆ 50 ಲಕ್ಷದಿಂದ 1 ಕೋಟಿಗೆ ಹೆಚ್ಚಿಸಿರುವುದು ಸ್ವಾಗತಾರ್ಹ. ಆದ್ರೆ ತಳಮಟ್ಟದಲ್ಲಿ ಎಸ್ಸಿ ಎಸ್ಟಿ ವ್ಯಕ್ತಿಗಳು ನಿರ್ವಹಿಸಬೇಕಾದ ಕೆಲಸಗಳನ್ನು ಬೇರೆಯವರು ನಿರ್ವಹಿಸುತ್ತಾರೆ. ಅದಕ್ಕೆ ಕಾರಣ ಬಂಡವಾಳದ ಕೊರತೆ. ಹೀಗಾಗಿ ಮುಂಗಡ ಹಣ ನೀಡಿದರೆ ಆ ಸಮುದಾಯದ ವ್ವಕ್ತಿಗಳೇ ಕಾಮಗಾರಿ ನಿರ್ವಹಿಸಲು ಮುಂದೆ ಬರುತ್ತಾರೆ. ಸರ್ಕಾರ ಈ ಬಗ್ಗೆ ಯೋಚಿಸಿದ್ರೆ ಒಳ್ಳೆಯದು” ಎಂದು ಸಲಹೆ ನೀಡಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X