“ನಿರ್ಗಮಿಸುತ್ತಿರುವ ಪ್ರಧಾನಿ ಸೋಲಿನ ವಾಸ್ತವ ತಿಳಿಯುತ್ತಿದ್ದಂತೆ, ಹೆಚ್ಚು ಭ್ರಮೆಯಲ್ಲಿದ್ದಾರೆ. ಅದಕ್ಕೆ ತನ್ನ ಜನ್ಮ ಜೈವಿಕವಾಗಿ ಆಗಿಲ್ಲ, ಭಗವಂತನೇ ಅವರನ್ನು ಕಳಿಸಿದ್ದು ಎಂದು ಘೋಷಿಸಿದ್ದಾರೆ. ಬಹುಶಃ ಮುಂದೊಂದು ದಿನ ತನ್ನನ್ನು ತಾನು ದೇವಮಾನವನೆಂದು ಭಾವಿಸಿಕೊಳ್ಳಬಹುದು” ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.
ಲೋಕಸಭೆ ಚುನಾವಣೆಯ ಆರನೇ ಮತ್ತು ಅಂತಿಮ ಹಂತದ ಮತದಾನ ಶನಿವಾರ ಮುಕ್ತಾಯಗೊಂಡಿದ್ದು, ಈಗಾಗಲೇ ಇಂಡಿಯಾ ಒಕ್ಕೂಟ 272 ಸ್ಥಾನಗಳ ಅರ್ಧದಾರಿಯ ಗಡಿ ದಾಟಿದೆ ಎಂದು ಎಕ್ಸ್ ಪೋಸ್ಟ್ ಮೂಲಕ ಕಾಂಗ್ರೆಸ್ ಹೇಳಿದೆ.
With six phases of the elections now concluded, voting for 486 seats is over. As the outgoing PM starts figuring out his retirement plans, here’s the round-up of the campaign for the 2024 Lok Sabha Elections:
1. The BJP’s fate is all but sealed. It has become clear that they are…
— Jairam Ramesh (@Jairam_Ramesh) May 25, 2024
ಹಾಗೆಯೇ ಜೂನ್ 4ರ ನಂತರ ಪ್ರತಿಪಕ್ಷಗಳ ಮೈತ್ರಿಕೂಟ ಇಂಡಿಯಾ ಬ್ಲಾಕ್ ಸರ್ಕಾರ ರಚಿಸಲು ಸ್ಪಷ್ಟ ಜನಾದೇಶವನ್ನು ಪಡೆಯಲಿದೆ ಎಂದು ಕಾಂಗ್ರೆಸ್ ಪಕ್ಷವು ವಿಶ್ವಾಸ ವ್ಯಕ್ತಪಡಿಸಿದೆ.
ಇದನ್ನು ಓದಿದ್ದೀರಾ? ‘ನಾನು ಜೈವಿಕವಾಗಿ ಜನಿಸಿಲ್ಲ, ಪರಮಾತ್ಮನೇ ನನ್ನನ್ನು ಕಳುಹಿಸಿದ್ದು’ ಎಂದ ಪ್ರಧಾನಿ ಮೋದಿ!
ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, “ಆರು ಹಂತದ ಚುನಾವಣೆ ಮುಗಿದಿದ್ದು, 486 ಸ್ಥಾನಗಳಿಗೆ ಮತದಾನ ಮುಗಿದಿದೆ. ಪ್ರಧಾನಿ ತಮ್ಮ ನಿವೃತ್ತಿ ಯೋಜನೆಯ ಲೆಕ್ಕಾಚಾರ ಪ್ರಾರಂಭಿಸುತ್ತಿರುವಾಗ 2024ರ ಲೋಕಸಭಾ ಚುನಾವಣೆಯ ಪ್ರಚಾರದ ರೌಂಡ್ ಅಪ್ ಇಲ್ಲಿದೆ” ಎಂದು ಉಲ್ಲೇಖಿಸಿದ್ದಾರೆ.
“ಬಿಜೆಪಿಯ ಭವಿಷ್ಯ ಮುದ್ರೆಯೊತ್ತಿದೆ. ದಕ್ಷಿಣದಲ್ಲಿ ಸಂಪೂರ್ಣವಾಗಿ ಸ್ವಚ್ಛವಾಗಲಿದೆ. ಉತ್ತರ, ಪಶ್ಚಿಮ, ಪೂರ್ವದಲ್ಲಿ ಅರ್ಧಕ್ಕೆ ಇಳಿಯಲಿದೆ ಎಂಬುವುದು ಸ್ಪಷ್ಟವಾಗಿದೆ” ಎಂದಿದ್ದಾರೆ.
ಇದನ್ನು ಓದಿದ್ದೀರಾ? ಮೋದಿ ಸುಳ್ಳುಗಳು | ಯಾರನ್ನೂ ವಿಶೇಷ ಪ್ರಜೆಗಳೆಂದು ಒಪ್ಪಿಕೊಳ್ಳದೆ, ಎಲ್ಲರನ್ನೂ ಸಮಾನಾಗಿ ಕಾಣುತ್ತಾರೆಯೇ ಮೋದಿ?
“ಇಂಡಿಯಾ ಒಕ್ಕೂಟವು ಹಂತ 1ರಿಂದ ಬಲಗೊಳ್ಳುತ್ತಿದೆ. ಮಹಾರಾಷ್ಟ್ರ, ಯುಪಿ, ಬಿಹಾರ ಮತ್ತು ಈಗ ದೆಹಲಿಯಲ್ಲಿ ಮತದಾನದ ನಂತರ, ಉತ್ತಮ ಬೆಳವಣಿಗೆ ಕಂಡುಬಂದಿದೆ. ಇಂಡಿಯಾ ಒಕ್ಕೂಟ ಈಗಾಗಲೇ 272 ಸ್ಥಾನಗಳ ಅರ್ಧದಾರಿಯ ಗಡಿಯನ್ನು ದಾಟಿದೆ. ಒಟ್ಟು 350ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯುವ ಹಾದಿಯಲ್ಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
“ಪ್ರಧಾನಿ ತಮ್ಮ ನಿವೃತ್ತಿ ಯೋಜಿಸಲು ಹೆಚ್ಚುವರಿ ಸಮಯವನ್ನು ಹೊಂದಿದ್ದಾರೆ. ಹರಿಯಾಣ ಮತ್ತು ಪಂಜಾಬ್ನಲ್ಲಿ ಪ್ರಚಾರ ಮಾಡಲು ಸಾಧ್ಯವಿಲ್ಲ. ನಾಯಕರನ್ನು ಜನರು ಹಳ್ಳಿಗಳಿಂದ ಓಡಿಸುತ್ತಿದ್ದಾರೆ. ರೈತ ವಿರೋಧಿ ನಡೆಯ ಬಗ್ಗೆ ರೈತರ ಕೋಪ ಮತ್ತು ಭ್ರಮನಿರಸನವು ಬಹಳ ಸ್ಪಷ್ಟವಾಗಿದೆ” ಎಂದಿದ್ದಾರೆ.