ಅಮೆರಿಕದ FBI ನಿರ್ದೇಶಕರಾಗಿ ಭಾರತ ಮೂಲದ ಕಾಶ್‌ ಪಟೇಲ್ ನೇಮಕ

Date:

Advertisements

ಅಮೆರಿಕದ ತನಿಖಾ ಸಂಸ್ಥೆ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್(ಎಫ್​ಬಿಐ) ನಿರ್ದೇಶಕರನ್ನಾಗಿ ಭಾರತ ಮೂಲದ ಕಾಶ್ ಪಟೇಲ್ ಅವರನ್ನು ನೇಮಕ ಮಾಡಲಾಗಿದೆ. ಇದು ಅಮೆರಿಕದ ಅತ್ಯುನ್ನತ ತನಿಖಾ ಸಂಸ್ಥೆಯಾಗಿದ್ದು, ಕಾಶ್ ಪಟೇಲ್‌ ಅವರು ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡವರು ಎನ್ನಲಾಗಿದೆ.

ಕಾಶ್ ಪಟೇಲ್ ಅವರ ನೇಮಕವನ್ನು ಅಮೆರಿಕ ಸೆನೆಟ್ 51-49 ಮತಗಳಿಂದ ಅನುಮೋದಿಸಿತು. ಎಫ್​ಬಿಐನ 9ನೇ ನಿರ್ದೇಶಕರಾಗಿ ಕಾಶ್‌ ಪಟೇಲ್‌ ಅವರನ್ನು ನೇಮಕಗೊಳಿಸಿ ಅಧ್ಯಕ್ಷ ಟ್ರಂಪ್‌ ಅವರು ಸಹಿ ಹಾಕಿದ್ದಾರೆ ಎಂದು ಯುಎಸ್‌ ಸೆನೆಟ್‌ ಖಚಿತಪಡಿಸಿದೆ.

ಕಾಶ್ ಪಟೇಲ್ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡುವ ಮೂಲಕ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ʼಎಫ್​ಬಿಐನ 9ನೇ ನಿರ್ದೇಶಕರನ್ನಾಗಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ತುಂಬಾ ಸಂತೋಷವಾಗಿದೆ. ನನ್ನ ಮೇಲಿಟ್ಟಿರುವ ನಿಮ್ಮ ನಂಬಿಕೆಗೆ ಧನ್ಯವಾದಗಳು. ಅಮೆರಿಕದ ಜನರಿಗೆ ಪಾರದರ್ಶಕ, ಜವಾಬ್ದಾರಿಯುತ ಮತ್ತು ನ್ಯಾಯಕ್ಕೆ ಬದ್ಧವಾಗಿರುವ ಎಫ್‌ಬಿಐ ಅಗತ್ಯವಿದೆ’ ಎಂದು ಕಾಶ್ ಪೋಸ್ಟ್​ ಮಾಡಿದ್ದಾರೆ.

Advertisements
GkRQ9PTXEAApL29

ಯಾರು ಈ ಕಾಶ್ ಪಟೇಲ್? 

ಕಾಶ್ ಪಟೇಲ್ ಭಾರತ ಮೂಲದ ಅಮೇರಿಕನ್ ಪ್ರಜೆ, ಅವರು ನ್ಯೂಯಾರ್ಕ್‌ನ ಹ್ಯಾಗರ್ಡನ್ ನಗರದ ನಿವಾಸಿ. ಕಾಶ್ ಪಟೇಲ್ ಅವರ ಪೋಷಕರು ಗುಜರಾತ್‌ನವರು. ಅವರ ಕುಟುಂಬ 1970 ರ ದಶಕದ ಆರಂಭದಲ್ಲಿ ವಿದೇಶಕ್ಕೆ ಸ್ಥಳಾಂತರಗೊಂಡಿತು. ಮೊದಲು ಅವರು ಉಗಾಂಡಾದಲ್ಲಿ ವಾಸಿಸುತ್ತಿದ್ದರು. ಅದಾದ ನಂತರ, ಜನಾಂಗೀಯ ತಾರತಮ್ಯದಿಂದಾಗಿ, ಅವರು ಉಗಾಂಡಾವನ್ನು ತೊರೆದು ಕೆನಡಾದಲ್ಲಿ ನೆಲೆಸಿದರು.

ಅವರ ತಂದೆಗೆ ವಿಮಾನಯಾನ ಸಂಸ್ಥೆಯಲ್ಲಿ ಹಣಕಾಸು ಅಧಿಕಾರಿಯಾಗಿ ಕೆಲಸ ಸಿಕ್ಕ ನಂತರ ಅವರ ಕುಟುಂಬ ಅಮೆರಿಕಕ್ಕೆ ಸ್ಥಳಾಂತರಗೊಂಡಿತು. ಕಾಶ್ ಪಟೇಲ್ ಇನ್ನೂ ಅವಿವಾಹಿತ ಎಂದು ಹೇಳಲಾಗುತ್ತದೆ. ಅವರು ಡೊನಾಲ್ಡ್ ಟ್ರಂಪ್ ಅವರ ಆಪ್ತ ಮಿತ್ರ ಎಂದು ಹೇಳಲಾಗುತ್ತದೆ. ಅವರು ರಿಚ್ಮಂಡ್ ವಿಶ್ವವಿದ್ಯಾಲಯದಿಂದ ಇತಿಹಾಸ ಮತ್ತು ಕ್ರಿಮಿನಲ್ ಜಸ್ಟೀಸ್ ಅಧ್ಯಯನ ಮಾಡಿದರು.

ಇದನ್ನು ಓದಿದ್ದೀರಾ?: ಅಮೆರಿಕಗೆ ತಿರುಗುಬಾಣವಾದ ಯುಎಸ್‌ಏಡ್‌ ಎಂಬ ಗುಪ್ತ ಕಾರ್ಯಸೂಚಿ!

ಕಾಶ್ ಪಟೇಲ್ ಅವರಿಗೆ ಡೊನಾಲ್ಡ್ ಟ್ರಂಪ್ ಅವರ ಮೊದಲ ಅವಧಿಯಲ್ಲಿ ಪ್ರಮುಖ ಜವಾಬ್ದಾರಿಗಳನ್ನು ನೀಡಲಾಯಿತು. ನಂತರ ಅವರು ಐಸಿಸ್, ಅಲ್-ಬಾಗ್ದಾದಿ ಮತ್ತು ಖಾಸಿಮ್ ಅಲ್-ರಿಮಿಯಂತಹ ಅಲ್-ಖೈದಾ ನಾಯಕರನ್ನು ನಿರ್ಮೂಲನೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಕಾಶ್ ಪಟೇಲ್ ಟ್ರಂಪ್ ಕಣ್ಣಿಗೆ ಬಿದ್ದಿದ್ದು ಇಲ್ಲಿಂದಲೇ. ಅಮೆರಿಕದ ಒತ್ತೆಯಾಳುಗಳನ್ನು ದೇಶಕ್ಕೆ ಮರಳಿ ಕರೆತರುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದರು.

ಇದಲ್ಲದೆ, ಕಾಶ್ ಪಟೇಲ್ ಗುಪ್ತಚರ ಕುರಿತ ಸದನದ ಶಾಶ್ವತ ಆಯ್ಕೆ ಸಮಿತಿಯ ರಾಷ್ಟ್ರೀಯ ಭದ್ರತಾ ಸಲಹೆಗಾರ ಮತ್ತು ಹಿರಿಯ ಸಲಹೆಗಾರರಾಗಿಯೂ ಕೆಲಸ ಮಾಡಿದ್ದಾರೆ. ಕಾಶ್ ಪಟೇಲ್ ಅಮೆರಿಕದ ರಾಜ್ಯ ಮತ್ತು ಫೆಡರಲ್ ನ್ಯಾಯಾಲಯಗಳಲ್ಲಿ ಕೊಲೆ, ಕಳ್ಳಸಾಗಣೆ ಮುಂತಾದ ಪ್ರಕರಣಗಳನ್ನು ನಿಭಾಯಿಸಿದ್ದಾರೆ. ಅವರು ಟ್ರಂಪ್ ಅವರ ದೊಡ್ಡ ಅಭಿಮಾನಿ. ಅವರು ಟ್ರಂಪ್‌ಗಾಗಿ ಏನು ಬೇಕಾದರೂ ಮಾಡುವ ವ್ಯಕ್ತಿ ಎಂದೇ ಪರಿಗಣಿಸಲ್ಪಟ್ಟವರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ನಟಿಗೆ ಕಿರುಕುಳ ಆರೋಪ: ಕೇರಳ ಯುವ ಕಾಂಗ್ರೆಸ್ ಅಧ್ಯಕ್ಷನ ಹುದ್ದೆ ತೊರೆದ ರಾಹುಲ್ ಮಾಂಕೂಟತ್ತಿಲ್

ಕೇರಳದ ರಾಜಕೀಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿರುವ ಅಶ್ಲೀಲ ಸಂದೇಶ ಹಾಗೂ ದುರ್ವರ್ತನೆ...

ನ್ಯಾಯದೇಗುಲಗಳಿಗೆ ಬಲು ಇಕ್ಕಟ್ಟಾದ ಬಾಗಿಲುಗಳ ಕಟ್ಟಿದ್ದೇವೆ- ಸಿಜೆಐ

‘ಹೈಕೋರ್ಟ್ ಜಡ್ಜ್ ಗಳ ಪೈಕಿ ಮೊಂಡರು, ಹಟಮಾರಿಗಳು, ಜಂಭದ ಕೋಳಿಗಳಿದ್ದಾರೆ...ಇನ್ನು ಕೆಲವರ...

ಈದಿನ ವಿಶೇಷ | ಧರ್ಮಸ್ಥಳ: ಉತ್ತರ ನೀಡಿದ ಗೃಹ ಸಚಿವರು; ಈಗಲೂ ಉಳಿದ ಹಲವು ಪ್ರಶ್ನೆಗಳು

ಸದನದಲ್ಲಿ ನಿಂತು ಷಡ್ಯಂತ್ರ ಎನ್ನುವವರಿಗೆ, ಎಸ್‌ಐಟಿ ರಚನೆಯಾಗಿದ್ದೇಕೆ? ಕಾನೂನು ಏನು ಹೇಳುತ್ತೆ?...

Download Eedina App Android / iOS

X