2023ರಲ್ಲಿ ಬೀಫ್ ರಫ್ತುದಾರರ ಪೈಕಿ ಭಾರತ ಮತ್ತೊಂದು ಪ್ರಮುಖ ರಫ್ತು ದೇಶವಾಗಿ ಹೊರ ಹೊಮ್ಮಿರುವುದಾಗಿ ಅಂಕಿ-ಅಂಶಗಳ ವಿವರಗಳನ್ನು ವರದಿ ಮಾಡುವ Statista ಎಂಬ ಅಂತಾರಾಷ್ಟ್ರೀಯ ವೆಬ್‌ಸೈಟ್ ವರದಿ ಮಾಡಿದೆ.
ಈ ಅಂಕಿ-ಅಂಶಗಳನ್ನು ಉಲ್ಲೇಖಿಸಿರುವ ‘ದಿ ವೈರ್’ ವೆಬ್‌ಸೈಟ್, “ನೀರು ಕೋಣದ ಮಾಂಸವನ್ನು ರಫ್ತು ಮಾಡುವ ದೇಶಗಳ ಪೈಕಿ ಮೊದಲನೇ ಸ್ಥಾನವನ್ನು ಬ್ರೆಝಿಲ್ ಪಡೆದಿದೆ. ಭಾರತ ಎರಡನೇ ಸ್ಥಾನದಲ್ಲಿದ್ದು, ಭಾರತದ ನಂತರದ ಸ್ಥಾನದಲ್ಲಿ ಅಮೆರಿಕಾ ಮತ್ತು ಆಸ್ಟ್ರೇಲಿಯಾ ದೇಶಗಳಿವೆ” ಎಂದು ತಿಳಿಸಿದೆ.
“ಅತೀ ಹೆಚ್ಚು ಬೀಫ್ ಉತ್ಪಾದನೆಯಲ್ಲಿ ಅಮೆರಿಕಾ ಅಗ್ರ ಕ್ರಮಾಂಕದಲ್ಲಿದ್ದು ಅದು ಉತ್ಪಾದಿಸುವ ಬಹುತೇಕ ಬೀಫ್ ಅನ್ನು ದೇಶೀಯ ಬಳಕೆಗೇ ಮಾರಾಟ ಮಾಡುತ್ತದೆ” ಎಂದು ವರದಿ ತಿಳಿಸಿದೆ.
2023ರ ಎಪ್ರಿಲ್ ವರೆಗೆ ಭಾರತವು 14.75 ಲಕ್ಷ ಟನ್‌ಗಳಷ್ಟು ಬೀಫ್ ರಫ್ತು ಮಾಡಿದೆ. ಇಷ್ಟು ಬೃಹತ್ ಪ್ರಮಾಣದಲ್ಲಿ ಬೀಫ್ ರಫ್ತು ಮಾಡಿ ಜಗತ್ತಲ್ಲೇ 2ನೇಕ್ಕೇರಿದೆ. ಜಗತ್ತಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಬೀಫ್ ರಫ್ತು ಮಾಡುವ ದೇಶ ಬ್ರೆಝಿಲ್ 2023ರ ಎಪ್ರಿಲ್ ವೇಳೆಗೆ 30 ಲಕ್ಷ ಟನ್ ಗಳಷ್ಟು ಬೀಫ್ ರಫ್ತು ಮಾಡಿತ್ತು. 14 ಲಕ್ಷದ 22 ಸಾವಿರ ಟನ್ ಬೀಫ್ ರಫ್ತು ಮಾಡುವ ಮೂಲಕ ಅಮೆರಿಕ ಮೂರನೆ ಸ್ಥಾನದಲ್ಲಿದ್ದರೆ, 14 ಲಕ್ಷ ಟನ್ ರಫ್ತು ಮಾಡಿರುವ ಆಸ್ಟ್ರೇಲಿಯಾ 4ನೆ ಸ್ಥಾನದಲ್ಲಿದೆ. ಭಾರತವು 2022ರಲ್ಲಿ 11 ಲಕ್ಷದ 75 ಸಾವಿರ ಟನ್ ಗಳಷ್ಟು ಬೀಫ್ ರಫ್ತು ಮಾಡಿತ್ತು ಎಂದು ಅಮೆರಿಕದ ಕೃಷಿ ಇಲಾಖೆ ನೀಡಿದ ವರದಿಯಲ್ಲಿರುವ ಅಂಕಿ ಅಂಶಗಳನ್ನು Statista ತಿಳಿಸಿವೆ.
ಪರಿಸರ ಮತ್ತು ಮಾನವ ಹಕ್ಕು ಗುಂಪಾದ ಗ್ಲೋಬಲ್ ವಿಟೈಸ್ ನಡೆಸಿರುವ ತನಿಖೆಯ ಪ್ರಕಾರ, ಬ್ರೆಝಿಲ್ ನ ಸೆರಾಡೊ ಪ್ರಸ್ಥ ಭೂಮಿಯಲ್ಲಿನ ಅಕ್ರಮ ಅರಣ್ಯ ನಾಶದೊಂದಿಗೆ ವಿಶ್ವದ ಮೂರು ಪ್ರಮುಖ ಬೀಫ್ ಉತ್ಪಾದನಾ ಸಂಸ್ಥೆಗಳು ಸಂಬಂಧ ಹೊಂದಿವೆ ಎಂಬ ಸಂಗತಿ ಬಯಲಾಗಿತ್ತು.
ಈ ತನಿಖೆಯಲ್ಲಿ ಜೆಬಿಎಸ್, ಮಿನರ್ವ ಹಾಗೂ ಮಾರ್ಫಿಗ್ ಸಂಸ್ಥೆಗಳು ಅಕ್ರಮ ಅರಣ್ಯ.ಶದಲ್ಲಿ ಭಾಗಿಯಾಗಿವೆ ಎಂದು ಹೇಳಲಾಗಿತ್ತು. ಆದರೆ, ಆ ಎಲ್ಲ ಸಂಸ್ಥೆಗಳೂ ಯಾವುದೇ ಅಕ್ರಮದ ಆರೋಪವನ್ನು ಅಲ್ಲಗಳೆದಿದ್ದವು. ಸೆರಾಡೊದ ಸಣ್ಣ ಪ್ರಮಾಣದ ವಿಸ್ತರಣೆಯಾದ ಮ್ಯಾಟೊ ಗ್ರಾಸೊ ಸ್ಥಿತಿಯ ಬಗ್ಗೆ ಈ ತನಿಖೆಯು ಗಮನ ಹರಿಸಿತ್ತು. ಈ ಮೂರು ಸಂಸ್ಥೆಗಳ ಒಡೆತನದ ಜಾನುವಾರುಗಳಿಗಾಗಿ ನಡೆದಿದ್ದ ಅರಣ್ಯ ನಾಶದ ಸಂದರ್ಭದಲ್ಲಿ ಮರಗಳನ್ನು ಕತ್ತರಿಸಲು ಯಾವುದೇ ಪರವಾನಗಿ ಇರಲಿಲ್ಲ ಹಾಗೂ ಅದು ಅಕ್ರಮವಾಗಿತ್ತು ಎಂಬುದು ಈ ತನಿಖೆಯಲ್ಲಿ ಪತ್ತೆಯಾಗಿತ್ತು.
ಇದನ್ನು ಓದಿದ್ದೀರಾ? ಬೆಂಗಳೂರು ಚಲನಚಿತ್ರೋತ್ಸವ | ‘ಜೀವಮಾನ ಸಾಧನೆ ಪ್ರಶಸ್ತಿ’ಗೆ ಖ್ಯಾತ ನಿರ್ದೇಶಕ ಎಂ.ಎಸ್.ಸತ್ಯು ಆಯ್ಕೆ
ಕಿರು ಮತ್ತು ಸಣ್ಣ ವ್ಯವಹಾರಗಳಿಗಾಗಿ ಡಿಸೆಂಬರ್ 30, 2024ರಿಂದ ಜೂನ್ 30, 2025ರವರೆಗೆ ಯೂರೋಪ್ ಒಕ್ಕೂಟದಲ್ಲಿ ಜಾರಿಯಾಗಿರುವ ಯೂರೋಪ್ ಒಕ್ಕೂಟ ಅರಣ್ಯ ನಾಶ ನಿಯಮಗಳು ಕಾನೂನನ್ನು ಪಾಲಿಸುವಂತೆ ಬೀಫ್ ಉತ್ಪಾದನಾ ಸಂಸ್ಥೆಗಳಿಗೆ ನೀಡಿರುವ ಗಡುವಿನ ಬೆನ್ನಿಗೇ ಈ ಸುದ್ದಿಯು ಹೊರ ಬಂದಿದೆ. ಈ ಅಂಕಿ ಅಂಶಗಳನ್ನು Statista ಮಾ.1ರಂದು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.
