ಭಾರತ ಮತ್ತು ಸೌದಿ ಅರೇಬಿಯಾ ಭಾನುವಾರ ದ್ವಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕಿದ್ದು, ಅದರ ಅಡಿಯಲ್ಲಿ 2024ರಲ್ಲಿ ಮುಸ್ಲಿಮರ ಪವಿತ್ರ ಹಜ್ ಯಾತ್ರೆಗಾಗಿ 1,75,025 ಭಾರತೀಯ ಹಜ್ ಯಾತ್ರಿಕರಿಗೆ ಸೌದಿ ಅರೇಬಿಯಾ ಅವಕಾಶ ಕಲ್ಪಿಸಿದೆ.
ಹಾಗೂ ವಿದೇಶಾಂಗ ವ್ಯವಹಾರಗಳ ರಾಜ್ಯ ಖಾತೆ ಸಚಿವ ವಿ ಮುರಳೀಧರನ್ ಅವರು ಸೌದಿ ಅರೇಬಿಯಾದ ಹಜ್ ಮತ್ತು ಉಮ್ರಾ ಸಚಿವ ಡಾ. ತೌಫಿಕ್ ಬಿನ್ ಫೌಜಾನ್ ಜೊತೆಗೆ ಜಿದ್ದಾದಲ್ಲಿ ದ್ವಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕಿದರು.
ಅಧಿಕೃತ ಹೇಳಿಕೆಯ ಪ್ರಕಾರ, 2024ಕ್ಕೆ ಭಾರತದ ಒಟ್ಟು 1,75,025 ಯಾತ್ರಾರ್ಥಿಗಳಿಗೆ ಕೋಟಾ ಅಂತಿಮಗೊಳಿಸಲಾಗಿದೆ. ಇವುಗಳ ಪೈಕಿ 1,40,020 ಆಸನಗಳನ್ನು ಹಜ್ ಸಮಿತಿ ಹಾಗೂ 35,005 ಯಾತ್ರಾರ್ಥಿಗಳಿಗೆ ಖಾಸಗಿ ನಿರ್ವಾಹಕರ ಮೂಲಕ ಯಾತ್ರೆ ಕೈಗೊಳ್ಳಲು ಅನುಮತಿ ನೀಡಲಾಗಿದೆ.
“ಭಾರತ ಮತ್ತು ಸೌದಿ ಅರೇಬಿಯಾ ನಡುವಿನ ದ್ವಿಪಕ್ಷೀಯ ಹಜ್ ಒಪ್ಪಂದಕ್ಕೆ ಸಹಿ ಹಾಕಿರುವುದಕ್ಕೆ ಸಂತೋಷವಾಗಿದೆ. ಸೌದಿ ಅರೇಬಿಯಾ ಹಾಗೂ ಭಾರತದ ಆಸಕ್ತಿಯ ವಿಷಯಗಳ ಬಗ್ಗೆ ಹಜ್ ಮತ್ತು ಉಮ್ರಾ ವ್ಯವಹಾರಗಳ ಸೌದಿ ಸಚಿವರ ಜೊತೆಗೆ ಚರ್ಚಿಸಲಾಯಿತು” ಎಂದು ಸಚಿವೆ ಸ್ಮೃತಿ ಇರಾನಿ ಎಕ್ಸ್‌ನಲ್ಲಿ ತಿಳಿಸಿದ್ದಾರೆ.
Pleased to announce the formalisation of the Bilateral Haj Agreement 2024 between India and Saudi Arabia.
I, along with Hon’ble MoS for External Affairs, Shri @MOS_MEA, presided over the signing. Also engaged in productive discussions on matters of mutual interest with… pic.twitter.com/xU6eIlnzHB
— Smriti Z Irani (@smritiirani) January 7, 2024
ಕಳೆದ ವರ್ಷ ವು ಹಜ್ ಯಾತ್ರೆಯ ನಿಯಮದಲ್ಲಿ ಕೆಲ ಬದಲಾವಣೆ ತಂದಿತ್ತು. ಅದರ ಪ್ರಕಾರ, ಮಹಿಳೆಯರು ಯಾವುದೇ ಪುರುಷ ರಕ್ಷಕನಿಲ್ಲದೆ ಹಜ್ ಯಾತ್ರೆ ಮಾಡಲು ಅವಕಾಶ ಕಲ್ಪಿಸಿಕೊಟ್ಟಿತ್ತು. ಈ ವಿಚಾರವನ್ನು ಟ್ವೀಟ್‌ನಲ್ಲಿ ಉಲ್ಲೇಖಿಸಿರುವ ಸಚಿವೆ ಇರಾನಿ, “”ಮಹಿಳೆಯರ ಭಾಗವಹಿಸುವಿಕೆಯನ್ನು ಉತ್ತೇಜಿಸುವ ನಮ್ಮ ಪ್ರಸ್ತಾಪವು ನಮ್ಮ ಬದ್ಧತೆಯನ್ನು ಮತ್ತಷ್ಟು ಒತ್ತಿ ಹೇಳುತ್ತದೆ” ಎಂದು ತಿಳಿಸಿದ್ದಾರೆ.
ಸೌದಿಯೊಂದಿಗಿನ ಮಾತುಕತೆಯ ವೇಳೆ ಎಲ್ಲ ಯಾತ್ರಿಕರ ಸಮಗ್ರ ಯೋಗಕ್ಷೇಮವನ್ನು ಖಾತ್ರಿಪಡಿಸುವ, ವೈದ್ಯಕೀಯ ಸೌಲಭ್ಯಗಳ ವರ್ಧನೆಯ ಯೋಜನೆಗಳನ್ನು ಚರ್ಚೆಗಳು ಒಳಗೊಂಡಿತ್ತು ಎಂದು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವೆ ಸ್ಮೃತಿ ಇರಾನಿ ತಿಳಿಸಿದ್ದಾರೆ.
#WATCH | Minority Affairs minister Smriti Irani accompanied by MoS MEA V Muraleedharan has signed the Bilateral Haj Agreement 2024 with Dr. Tawfiq bin Fawzan Al-Rabiah, Minister of Hajj and Umrah, Kingdom of Saudi Arabia (KSA)
A total quota of 1,75,025 pilgrims from India has… pic.twitter.com/qRi4ZhJpmv
— ANI (@ANI) January 8, 2024
ಇರಾನಿ ಮತ್ತು ಮುರಳೀಧರನ್ ಜೆದ್ದಾದ ಕಿಂಗ್ ಅಬ್ದುಲ್ ಅಝೀಝ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹಜ್ ಟರ್ಮಿನಲ್‌ಗೆ ಭೇಟಿ ನೀಡಿ, ಯಾತ್ರಾರ್ಥಿಗಳಿಗೆ ಒದಗಿಸಲಾಗುತ್ತಿರುವ ಸೇವೆಗಳನ್ನು ಸೌದಿಯ ನಿಯೋಗದೊಂದಿಗೆ ಪರಿಶೀಲಿಸಿದರು.
ಇರಾನಿ ಮತ್ತು ಮುರಳೀಧರನ್ ಎರಡು ದಿನಗಳ ಭೇಟಿಗಾಗಿ ಭಾನುವಾರ ಸೌದಿಗೆ ತೆರಳಿದ್ದಾರೆ. ಜೆದ್ದಾ ವಿಮಾನ ನಿಲ್ದಾಣದಲ್ಲಿ ರಾಯಭಾರಿ ಡಾ. ಸುಹೇಲ್ ಖಾನ್, ಕಾನ್ಸುಲ್ ಜನರಲ್ ಮೊಹಮ್ಮದ್ ಶಾಹಿದ್ ಮತ್ತು ಸೌದಿ ಹಜ್ ಮತ್ತು ಉಮ್ರಾ ಸಚಿವಾಲಯದ ಅಧಿಕಾರಿಗಳು ಉಪಸ್ಥಿತರಿದ್ದು, ಸ್ವಾಗತಿಸಿದರು.
Visited King Abdulaziz International Airport’s Haj Terminal in Jeddah @KAIAirport today to assess ground support systems and coordination between Saudi authorities and the Indian consulate.
Explored ways to enhance logistics and monitoring mechanisms for a seamless Haj… pic.twitter.com/geL0blsw10
— Smriti Z Irani (@smritiirani) January 7, 2024