ಇಡೀ ದೇಶ, ಭಾರತೀಯ ಸೇನೆ, ಯೋಧರು ಪ್ರಧಾನಿ ನರೇಂದ್ರ ಮೋದಿ ಅವರ ಪಾದಕ್ಕೆ ನಮಸ್ಕರಿಸುತ್ತದೆ ಎಂದು ಮಧ್ಯಪ್ರದೇಶದ ಉಪಮುಖ್ಯಮಂತ್ರಿ ಜಗದೀಶ್ ದೇವ್ಡಾ ಅವರು ವಿವಾದಾತ್ಮಕವಾಗಿ ಹೇಳಿಕೆ ನೀಡಿದ್ದಾರೆ. ಜಗದೀಶ್ ದೇವ್ಡಾ ಭಾರತೀಯ ಸೇನೆಯ ಪಾತ್ರವನ್ನು ದುರ್ಬಲಗೊಳಿಸುತ್ತಿದ್ದಾರೆ ಎಂದು ವಿಪಕ್ಷಗಳು ದೂರಿದೆ.
ಜಬಲ್ಪುರದಲ್ಲಿ ನಡೆದ ನಾಗರಿಕ ರಕ್ಷಣಾ ಸ್ವಯಂಸೇವಕರ ತರಬೇತಿ ಕಾರ್ಯಕ್ರಮದ ಸಂದರ್ಭದಲ್ಲಿ, ಪಹಲ್ಗಾಮ್ ಭಯೋತ್ಪಾದಕಾ ದಾಳಿಗೆ ಪ್ರತೀಕಾರವಾಗಿ ನಡೆಸಿದ ಆಪರೇಷನ್ ಸಿಂಧೂರ ಕ್ರಮದ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಮಾತ್ರ ಶ್ಲಾಘಿಸಿದರು. ಸೇನೆ, ಯೋಧರು ಪ್ರಧಾನಿ ಪಾದಕ್ಕೆ ನಮಸ್ಕರಿಸುತ್ತದೆ” ಎಂದು ಹೇಳಿದ್ದಾರೆ. ಈ ಹೇಳಿಕೆಯು ತೀವ್ರ ಟೀಕೆಗೆ ಗುರಿಯಾಗಿದೆ.
ಇದನ್ನು ಓದಿದ್ದೀರಾ? ಉಗ್ರರಿಗೆ ಪಾಠ ಕಲಿಸಲು ಅವರ ಸಹೋದರಿಯನ್ನೇ ಕಳುಹಿಸಿದ್ದೆವು: ಸಚಿವ ವಿಜಯ್ ಶಾ ವಿವಾದಾತ್ಮಕ ಹೇಳಿಕೆ
“ನಮ್ಮ ಸಹೋದರಿಯರ ಸಿಂಧೂರವನ್ನು ಅಳಿಸಿಹಾಕಿದ ಭಯೋತ್ಪಾದಕರು, ಅವರಿಗೆ ಆಶ್ರಯ ನೀಡುವವರನ್ನು ಬೇರುಸಹಿತ ನಿರ್ಮೂಲನೆ ಮಾಡುವವರೆಗೆ ನಾವು ವಿಶ್ರಾಂತಿ ಪಡೆಯುವುದಿಲ್ಲ. ಈ ವಿಚಾರದಲ್ಲಿ ನಾವು ಪ್ರಧಾನಿ ಮೋದಿ ಅವರಿಗೆ ಧನ್ಯವಾದ ತಿಳಿಸಬೇಕು. ಇಡೀ ದೇಶ ಮತ್ತು ನಮ್ಮ ಸೇನೆ ಪಿಎಂ ಮೋದಿ ಪಾದಗಳಿಗೆ ನಮಸ್ಕರಿಸುತ್ತಿದೆ. ಮೋದಿ ಅವರು ನೀಡಿದ ಸೂಕ್ತ ಉತ್ತರವನ್ನು ಎಷ್ಟು ಹೊಗಳಿದರೂ ಸಾಲದು” ಎಂದು ಹೇಳಿದರು.
ಭಾರತೀಯ ಸೇನೆಯು ಪ್ರಧಾನಿಯ ಮುಂದೆ ತಲೆಬಾಗುತ್ತದೆ ಎಂಬ ಹೇಳಿಕೆ ಈಗ ತೀವ್ರ ವಿವಾದಕ್ಕೆ ಕಾರಣವಾಗಿದೆ. ಈ ಹೇಳಿಕೆಯು ಯೋಧರ ತ್ಯಾಗಕ್ಕೆ ಬೆಲೆಯೇ ಇಲ್ಲದಂತೆ ಮಾಡುತ್ತದೆ. ಭಾರತೀಯ ಸೇನೆಗೆ ಇರುವ ಗೌರವವನ್ನು ತಗ್ಗಿಸಲಾಗುತ್ತಿದೆ” ಎಂದು ವಿಪಕ್ಷಗಳು ಆರೋಪಿಸಿದೆ.
“इस देश की सेना और सैनिक प्रधानमंत्री मोदी के चरणों में नतमस्तक हैं”
— Supriya Shrinate (@SupriyaShrinate) May 16, 2025
~ मध्यप्रदेश BJP के उपमुख्यमंत्री जगदीश देवड़ा
यह सेना के शौर्य पराक्रम का घोर अपमान है. माफ़ी से काम नहीं चलेगा
इस आदमी को तो आपको बर्खास्त करना ही पड़ेगा मोदी जी – घटिया, बेहद घटिया घिनौनी सोच है यह pic.twitter.com/j15xMzGB6s
ದೇವ್ಡಾ ಹೇಳಿಕೆಯನ್ನು ಕಾಂಗ್ರೆಸ್ ತೀವ್ರವಾಗಿ ಟೀಕಿಸಿದೆ. “ತುಂಬಾ ಕೀಳಾದ ಮತ್ತು ನಾಚಿಕೆಗೇಡಿನ” ಹೇಳಿಕೆ ಎಂದು ಹೇಳಿದೆ. “ಇದು ಸೇನೆಯ ಶೌರ್ಯ ಮತ್ತು ಧೈರ್ಯಕ್ಕೆ ಮಾಡಿದ ಅವಮಾನ. ಇಂದು ಇಡೀ ದೇಶ ಸೇನೆಯ ಮುಂದೆ ತಲೆಬಾಗುತ್ತಿರುವಾಗ, ಬಿಜೆಪಿ ನಾಯಕರು ನಮ್ಮ ಧೈರ್ಯಶಾಲಿ ಸೇನೆಯ ಬಗ್ಗೆ ತಮ್ಮ ಕೀಳು ಭಾವನೆಯನ್ನು ವ್ಯಕ್ತಪಡಿಸುತ್ತಿದ್ದಾರೆ” ಎಂದು ದೂರಿದೆ.
ಈ ವಿವಾದಾತ್ಮಿಕ ಹೇಳಿಕೆ ನೀಡಿದ ದೇವ್ಡಾ ರಾಜೀನಾಮೆ ನೀಡಬೇಕು ಮತ್ತು ಬಿಜೆಪಿಯು ಅಧಿಕೃತವಾಗಿ ಕ್ಷಮೆಯಾಚಿಸಬೇಕು ಎಂದು ವಿರೋಧ ಪಕ್ಷಗಳು ಆಗ್ರಹಿಸಿದೆ.
