ಭಾರತದ ಮೊದಲ ಭಯೋತ್ಪಾದಕ ನಾಥೂರಾಮ್ ಗೋಡ್ಸೆ. ಆತನಿಂದಾಗಿ ದೇಶಕ್ಕೆ ಭಯೋತ್ಪಾದನೆ ಪ್ರವೇಶಿಸಿದೆ ಎಂಧು ಕಾಂಗ್ರೆಸ್ ನಾಯಕ ಬಿಕೆ ಹರಿಪ್ರಸಾದ್ ಹೇಳಿದ್ದಾರೆ.
ಗಾಂಧಿ ಹುತಾತ್ಮದ ದಿನದ ಅಗಂವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ಪ್ರಪಂಚದಾದ್ಯಂತ 144 ದೇಶಗಳು ಮಹಾತ್ಮ ಗಾಂಧಿ ಜನ್ಮ ದಿನಾಚರಣೆ ಆಚರಿಸುತ್ತವೆ. ಗಾಂಧಿ ಒಂದೇ ಒಂದು ಗುಂಡು ಹಾರಿಸದೆ, ದೇಶಕ್ಕೆ ಸ್ವಾತಂತ್ರ್ಯ ತಂದರು. ಗಾಂಧಿ ಸರ್ವಧರ್ಮ ಸಮಭಾವ ಸಿದ್ಧಾಂತ ಹೊಂದಿದ್ದರು. ಅದಕ್ಕಾಗಿ ಅವರು ತಮ್ಮ ಪ್ರಾಣವನ್ನೇ ಕಳೆದುಕೊಂಡರು” ಎಂದು ತಿಳಿಸಿದರು.
“ಗಾಂಧಿ ಅವರನ್ನು ಕೊಂದ ನಾಥೂರಾಮ್ ಗೋಡ್ಸೆ ಈ ದೇಶದ ಮೊದಲ ಭಯೋತ್ಪಾದಕ. ಹಿಂದು ಧರ್ಮದ ಮೇಲೆ ನಂಬಿಕೆಯಿಟ್ಟಿದ್ದ ಗಾಂಧಿಯನ್ನು ಕೊಂದವನನ್ನು ಏನೆಂದು ಕರೆಯಬೇಕು. ದೇಶದಲ್ಲಿ ಭಯ, ಬೇಧ – ಪಕ್ಷಪಾತದ ವಾತಾವರಣ ಸೃಷ್ಟಿಸಿರುವ ಉಗ್ರ ಬಲಪಂಥಿಯರನ್ನು ನಾವು ಎದುರಿಸಲು ಗಾಂಧಿ ಒಂದೇ ಮಂತ್ರ ಬಳಸಿಕೊಳ್ಳಬೇಕು” ಎಂದರು.
“ಗಾಂಧಿ ಹುಟ್ಟಿದ ಗುಜರಾತ್‌ನ ಪೋರಬಂದರ್ 1991ರಲ್ಲಿ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದ ಬಳಿಕ ಮಾಫಿಯಾ ನಿಯಂತ್ರಣ ಒಳಪಟ್ಟಿದೆ. ವಾಟ್ಸ್ಆ್ಯಪ್ ಯುನಿವರ್ಸಿಟಿಯಲ್ಲಿ ಗಾಂಧಿ ವಿರುದ್ಧ ಅಪಪ್ರಚಾರ ನಡೆಯುತ್ತಿದೆ. ಗಾಂಧಿ ಬದಲಾವಣೆ ತರಲು ತಮ್ಮ ಹೋರಾಟ ನಡೆಸಿದ್ದರು. ಹಿಂದು-ಮುಸ್ಲಿಮರಿಗೆ ಏಕತೆಯ ಸಂದೇಶ ನೀಡಿದ್ದರು” ಎಂದು ವಿವರಿಸಿದರು.