ಕಾಂಗ್ರೆಸ್ ಸರ್ಕಾರವು ನೆರೆಯ ರಾಜ್ಯಗಳಿಂದ ಅಕ್ಕಿ ತರುವ ಉದ್ದೇಶ ನೋಡಿದರೆ ಅದರಲ್ಲಿ ಕಮಿಷನ್‌ಗಾಗಿ ಎಂಬ ಅನುಮಾನ ಮೂಡುತ್ತಿದೆ. ಅಷ್ಟು ಪ್ರೀತಿ ಇದ್ದರೆ ರಾಜ್ಯದ ರೈತರಿಂದಲೇ ಅಕ್ಕಿ ಖರೀದಿಸಬಹುದಲ್ಲ ಎಂದು ಬಿಜೆಪಿ ಉಪಾಧ್ಯಕ್ಷ ಮತ್ತು ಶಾಸಕ ಬಿ ವೈ ವಿಜಯೇಂದ್ರ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, “ಕರ್ನಾಟಕದ ರೈತರ ಬಳಿ ಉತ್ತಮ ಗುಣಮಟ್ಟದ ಅಕ್ಕಿ ಸಿಗುತ್ತದೆ. ಅದನ್ನೇ ಖರೀದಿಸಿ ಕೊಟ್ಟರೆ ನಮ್ಮ ರೈತರಿಗೂ ಅನುಕೂಲವಾಗಲಿದೆ. ಅದನ್ನು ಬಿಟ್ಟು ಬೇರೆ ರಾಜ್ಯಗಳಿಂದ ಅಕ್ಕಿ ತರುವ ಉದ್ದೇಶವೇನು? ಕಮಿಷನ್ ಹೊಡೆಯುವುದಲ್ಲದೇ ಬೇರೇನೂ ಇಲ್ಲ” ಎಂದು ವಾಗ್ದಾಳಿ ನಡೆಸಿದ್ದಾರೆ.
“ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈಗ ವಾಸ್ತವ ಅರಿವಾಗುತ್ತಿದೆ. ಯಾವ ಗ್ಯಾರಂಟಿಗಳನ್ನೂ ಅನುಷ್ಠಾನ ಮಾಡಲಾಗದೇ ಜನರ ಕೈಗೆಟುಕದೇ ಇರಲು ಇಲ್ಲ ಸಲ್ಲದ ಷರತ್ತು ಹಾಕುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಲಾಗದೇ ಒದ್ದಾಡುತ್ತಿದ್ದಾರೆ” ಎಂದು ಟೀಕಿಸಿದ್ದಾರೆ.
ಕಾಂಗ್ರೆಸ್ ಗ್ಯಾರಂಟಿಗಳು ರಾಜ್ಯವನ್ನು ಅರಾಜಕತೆಯತ್ತ ದೂಡುವ ಅಪಾಯವಿದೆ. ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಲ್ಲಿ ವಿಫಲವಾದ ಸರ್ಕಾರ ಜನರ ಗಮನ ಬೇರೆಡೆ ಸೆಳೆಯಲು ಮತಾಂತರ ನಿಷೇಧ ಕಾಯ್ದೆ, ಎಪಿಎಂಸಿ ಕಾಯ್ದೆ ರದ್ದು ಮಾಡಲು ಮುಂದಾಗಿದೆ” ಎಂದು ಆರೋಪಿಸಿದ್ದಾರೆ.
ಹೌದ ವಿಜಯೇಂದ್ರ ಅವರೇ, ಹಾಗಾದ್ರೆ ನಿಮ್ಮ ತಂದೆಯವರಿಗೆ ಮತ್ತು ಮೋದಿ ಅವರಿಗೆ ಹೇಳಿ ಕೇಂದ್ರದಿಂದ ಹೆಚ್ಚುವರಿ ಅಕ್ಕಿಯನ್ನು ರಾಜ್ಯ ಸರ್ಕಾರದಿಂದ ಪ್ರತಿ ಕೆಜಿ ಅಕ್ಕಿಗೆ 36 ರೂಪಾಯಿ ಹಣ ಪಡೆದು ನೀಡುವಂತೆ ಮನವಿ ಮಾಡಿ. ಅದನ್ನು ಬಿಟ್ಟು ಈರೀತಿ ಬಾಯಿಗೆ ಬಂದದ್ದನ್ನೆಲ್ಲ ಮಾತನಾಡಿ ಈಗ ನಿಮ್ಮ ಬಳಿ ಉಳಿದಿರುವ ಅಲ್ಪ ಸ್ವಲ್ಪ ಗೌರವವನ್ನು ಕಳೆದು ಕೊಳ್ಳಬೇಡಿ!
ನಿಮ್ಮ ತಲೆಯಿಂದ ಕಮಿಶನ್ ಇನ್ನೂ ಇಳಿದಿಲ.