ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿದ ‘ಗೃಹಲಕ್ಷ್ಮಿ’ ಯೋಜನೆ ಕಾರ್ಯಕ್ರಮಕ್ಕೆ ಮುಸ್ಲಿಂ ಮಹಿಳೆಯರು ಮಾತ್ರ ಹಾಜರಾಗಿದ್ದರು ಎಂಬ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ಈ ಪೋಸ್ಟ್‌ನಲ್ಲಿ, ಕರ್ನಾಟಕದಲ್ಲಿ ಗೃಹಲಕ್ಷ್ಮಿ ಯೋಜನೆಯಡಿ ಮುಸ್ಲಿಂ ಮಹಿಳೆಯರು ಮಾತ್ರ ಪ್ರಯೋಜನ ಪಡೆಯುತ್ತಿದ್ದಾರೆ ಎಂದೂ ಆರೋಪಿಸಲಾಗಿದೆ. ಆ ಪೋಸ್ಟ್‌ನಲ್ಲಿ ಹೇಳಿರುವುದು ಸತ್ಯವೇ ನೋಡೋಣ.

ಪ್ರತಿಪಾದನೆ: ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಗೃಹಲಕ್ಷ್ಮಿ ಯೋಜನೆಯಿಂದ ಕೇವಲ ಮುಸ್ಲಿಂ ಮಹಿಳೆಯರು ಮಾತ್ರ ಪ್ರಯೋಜನ ಪಡೆಯುತ್ತಿದ್ದಾರೆ.
ಸತ್ಯ: ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ನೀಡಲಾದ ಅಂತ್ಯೋದಯ, ಬಿಪಿಎಲ್ ಮತ್ತು ಎಪಿಎಲ್ ಪಡಿತರ ಚೀಟಿಗಳಲ್ಲಿ ಕುಟುಂಬದ ಮುಖ್ಯಸ್ಥರೆಂದು ನಮೂದಿಸಲಾದ ಎಲ್ಲ ಮಹಿಳೆಯರು 'ಗೃಹಲಕ್ಷ್ಮಿ' ಯೋಜನೆಗೆ ಅರ್ಹರು ಎಂದು ಕರ್ನಾಟಕ ಸರ್ಕಾರ ಸ್ಪಷ್ಟವಾಗಿ ಹೇಳಿದೆ. ಗೃಹಲಕ್ಷ್ಮಿ ಯೋಜನೆಯ ಲಾಭ ಪಡೆಯಲು ಎಲ್ಲ ಧರ್ಮದ ಮಹಿಳೆಯರು ಈ ಯೋಜನೆಗೆ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಗೃಹಲಕ್ಷ್ಮಿ ಯೋಜನೆಗೆ ಮುಸ್ಲಿಂ ಮಹಿಳೆಯರು ಮಾತ್ರ ಫಲಾನುಭವಿಗಳು ಎಂದು ಉದ್ದೇಶಪೂರ್ವಕ ಸುಳ್ಳನ್ನು ಹರಿಬಿಡಲಾಗಿದೆ.
ಮುಸ್ಲಿಂ ಮಹಿಳೆಯರು ಮಾತ್ರವೇ ಇರುವ ಕಾರ್ಯಕ್ರಮವೊಂದರ ಫೋಟೋವನ್ನು ಹಂಚಿಕೊಂಡು, ಗೃಹಲಕ್ಷ್ಮಿ ಯೋಜನೆ ಉದ್ಘಾಟನೆಯಲ್ಲಿ ಮುಸ್ಲಿಂ ಮಹಿಳೆಯರು ಮಾತ್ರವೇ ಇದ್ದಾರೆ. ಈ ಯೋಜನೆಯನ್ನು ಮುಸ್ಲಿಂ ಮಹಿಳೆಯರಿಗಾಗಿ ಮಾತ್ರವೇ ಜಾರಿಗೆ ತರಲಾಗಿದೆ ಎಂಬ ಹೇಳಿಕೆಗಳೊಂದಿಗೆ ಹಲವಾರು ಪೋಸ್ಟ್‌ಗಳು ವೈರಲ್ ಆಗಿವೆ. ಅದರಲ್ಲೂ ಪಕ್ಕದ ರಾಜ್ಯ ಆಂಧ್ರಪ್ರದೇಶದಲ್ಲಿ ಈ ಪೋಸ್ಟ್‌ಗಳು ಹೆಚ್ಚು ವೈರಲ್ ಅಗಿವೆ.

ಆ ಬಗ್ಗೆ ಪರಿಶೀಲಿಸಿದಾಗ, ಮೈಸೂರಿನಲ್ಲಿ 2023ರ ಆಗಸ್ಟ್ 30ರಂದು ನಡೆದ ಗೃಹಲಕ್ಷ್ಮಿ ಯೋಜನೆಯ ಚಾಲನಾ ಕಾರ್ಯಕ್ರಮವನ್ನು ಲೈವ್‌ನಲ್ಲಿ ವೀಕ್ಷಿಸಲು ರಾಜ್ಯದ ನಾನಾ ಭಾಗಗಳಲ್ಲಿ ಸಭೆಗಳನ್ನು ಏರ್ಪಡಿಸಲಾಗಿತ್ತು. ಅಂತೆಯೇ, ಮುಸ್ಲಿಂ ಸಮುದಾಯವೂ ಸಭೆಯನ್ನು ಆಯೋಜಿಸಿತ್ತು. ಆ ಸಭೆಯ ಫೋಟೋವನ್ನು ‘ಗೃಹಲಕ್ಷ್ಮಿ’ ಯೋಜನೆ ಮುಸ್ಲಿಂ ಮಹಿಳೆಯರಿಗೆ ಮಾತ್ರವೆಂಬ ಸುಳ್ಳು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ.
ಅಗತ್ಯ ವಸ್ತುಗಳ ಬೆಲೆಯೇರಿಕೆಯಿಂದ ನೊಂದಿರುವ ನಾಡಿನ ನನ್ನ ತಾಯಂದಿರ, ಅಕ್ಕ ತಂಗಿಯರ ಆರ್ಥಿಕ ಹೊರೆಯನ್ನು ತುಸು ತಗ್ಗಿಸಿ, ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ನೆರವಾಗುವ ದೃಷ್ಟಿಯಿಂದ ನಾವು ಘೋಷಣೆ ಮಾಡಿರುವ ಗೃಹಲಕ್ಷ್ಮಿ ಯೋಜನೆಯ ಅರ್ಜಿ ಸಲ್ಲಿಕೆ ಪ್ರಕ್ರಿಯೆಗೆ ಇಂದು ಚಾಲನೆ ನೀಡಿದ್ದೇನೆ.
— Siddaramaiah (@siddaramaiah) July 19, 2023
ಅರ್ಹ ಫಲಾನುಭವಿಗಳು ತಪ್ಪದೇ ಅರ್ಜಿ ಸಲ್ಲಿಸುವ ಮೂಲಕ… pic.twitter.com/NbvU4buUKt
ಗೃಹಲಕ್ಷ್ಮಿ ಯೋಜನೆಯ ಜಾಲನಾ ಕಾರ್ಯಕ್ರಮದ ವೀಕ್ಷಣೆಗಾಗಿ ಮುಸ್ಲಿಮರು ಸೇರಿದಂತೆ ಇತರ ಧರ್ಮಗಳ ಮಹಿಳೆಯರು ಭಾಗವಹಿಸುವ ವೀಡಿಯೊಗಳು ಮತ್ತು ಫೋಟೋಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕಾಣಬಹುದು. ವಿವಿಧ ಧರ್ಮಗಳ ಮಹಿಳೆಯರು ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ಪ್ರಯೋಜನ ಪಡೆಯಲು 2023 ಜುಲೈ ತಿಂಗಳಿನಿಂದಲೂ ಅರ್ಜಿ ಸಲ್ಲಿಸಿದ್ದಾರೆ.

ಗೃಹಲಕ್ಷ್ಮಿ ಯೋಜನೆಯಡಿ ಕರ್ನಾಟಕ ಸರ್ಕಾರವು ಕುಟುಂಬದ ಒಡತಿಗೆ ಮಾಸಿಕ ರೂ. 2000 ಒದಗಿಸುತ್ತದೆ. ರಾಜ್ಯಾದ್ಯಂತ 1.28 ಕೋಟಿ ಅರ್ಹ ಮಹಿಳೆಯರು ಈ ಯೋಜನೆಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ಕರ್ನಾಟಕ ಸರ್ಕಾರ ಜುಲೈನಲ್ಲಿ ಪ್ರಕಟಿಸಿತ್ತು.
ಅಂದಹಾಗೆ, ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಾಗಿ ಮುಸ್ಲಿಂ ಮಹಿಳೆಯರನ್ನು ಮಾತ್ರ ಆಯ್ಕೆ ಮಾಡಲಾಗುವುದು ಎಂದು ಕರ್ನಾಟಕ ಸರ್ಕಾರ ಎಲ್ಲಿಯೂ ಹೇಳಿಲ್ಲ. ಎಲ್ಲ ಮತಗಳ ಮಹಿಳೆಯರೂ ಈ ಯೋಜನೆಗೆ ಅರ್ಹರಾಗಿದ್ದಾರೆ.