ಭ್ರಷ್ಟಾಚಾರ ನಿಗ್ರಹಕ್ಕೆ ಸಾಂಸ್ಥಿಕ ಬದಲಾವಣೆಯೊಂದೇ ದಾರಿಯೇ?

Date:

Advertisements
ಬಸವರಾಜ ರಾಯರೆಡ್ಡಿ ಅವರು ಸಿದ್ದರಾಮಯ್ಯ ಅವರ ವಿಶ್ವಾಸದಿಂದಲೋ ಅಥವಾ ಡ್ಯಾಮೇಜ್‌ ಕಂಟ್ರೋಲ್‌ಗೆ ಏನೋ "ಸಿದ್ದರಾಮಯ್ಯ ಅವರು ಭ್ರಷ್ಟಾಚಾರ ತಡೆಗೆ ಕೆಲಸ ಮಾಡುತ್ತಿದ್ದಾರೆ" ಎನ್ನುವ ಅರ್ಥದಲ್ಲಿ ಸ್ಪಷ್ಟನೆ ನೀಡಿದ್ದಾರೆ. ಕರ್ನಾಟಕದಲ್ಲಿ ಅಪಾರ ಪ್ರಮಾಣದಲ್ಲಿ ಭ್ರಷ್ಟಾಚಾರ ಇರುವುದು ಮತ್ತು ಅದು ನಿರಂತರವಾಗಿ ಏರಿಕೆಯಾಗುತ್ತಿರುವುದು ವಾಸ್ತವ.

ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಅವರು ಭ್ರಷ್ಟಾಚಾರ ವ್ಯವಸ್ಥೆ ಬಗ್ಗೆ ಮಾತನಾಡಿರುವ ಸಂಗತಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. “ಕರ್ನಾಟಕ ಭ್ರಷ್ಟಾಚಾರದಲ್ಲಿ ನಂಬರ್ 1” ಎಂದು ಸ್ವತಃ ರಾಯರೆಡ್ಡಿ ಅವರೇ ಒಪ್ಪಿಕೊಂಡಿದ್ದಾರೆ ಎಂದು ಪ್ರತಿಪಕ್ಷಗಳ ನಾಯಕರು ಆರೋಪಿಸಿ ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸುತ್ತಿದ್ದಾರೆ.

ಅತ್ತ ರಾಯರೆಡ್ಡಿ ತಮ್ಮ ಮಾತಿನ ಬಗ್ಗೆ ಸ್ಪಷ್ಟನೆ ನೀಡಿ, “ಕರ್ನಾಟಕ ಭ್ರಷ್ಟಾಚಾರದಲ್ಲಿ ನಂಬರ್ 1 ಎಂದು ನಾನು ಯಾವತ್ತೂ ಹೇಳಿಲ್ಲ. ಜೊತೆಗೆ ಸಿದ್ದರಾಮಯ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ ಅಂತನೂ ಹೇಳಿಲ್ಲ. ಭ್ರಷ್ಟಾಚಾರ ವ್ಯವಸ್ಥೆಯಲ್ಲಿ ಹಾಸುಹೊಕ್ಕಿದೆ, ಅದನ್ನು ಶುಚಿಗೊಳಿಸಬೇಕಿದೆ. ಸಿದ್ದರಾಮಯ್ಯ ಅವರು ಆ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕೊಪ್ಪಳದಲ್ಲಿ ನಡೆದ ಪ್ರಾದೇಶಿಕ ಅಸಮತೋಲನ ಪರಿಹಾರ ಸಮಿತಿ ಸಭೆಯಲ್ಲಿ ಹೇಳಿರುವೆ. ನನ್ನ ಹೇಳಿಕೆಯನ್ನು ಮಾಧ್ಯಮಗಳು ಮತ್ತು ವಿರೋಧ ಪಕ್ಷದವರು ತಪ್ಪು ಅರ್ಥ ಬರುವಂತೆ ಬಿಂಬಿಸುತ್ತಿದ್ದಾರೆ” ಎಂದಿದ್ದಾರೆ.

ಕರ್ನಾಟಕ ಭ್ರಷ್ಟಾಚಾರದಲ್ಲಿ ನಂಬರ್ 1 ಹೌದೋ ಅಲ್ವೋ ಎನ್ನುವುದು ಬೇರೆ ಪ್ರಶ್ನೆ. ಆದರೆ, ಕರ್ನಾಟಕದಲ್ಲಿ ಅಪಾರ ಪ್ರಮಾಣದಲ್ಲಿ ಭ್ರಷ್ಟಾಚಾರ ಇರುವುದು ಮತ್ತು ಅದು ನಿರಂತರವಾಗಿ ಏರಿಕೆಯಾಗುತ್ತಿರುವುದು ವಾಸ್ತವ.

Advertisements

ಈ ದೇಶದಲ್ಲಿ ಅತೀ ಹೆಚ್ಚು ಚುನಾವಣೆ ಖರ್ಚು ಮಾಡುವ ರಾಜ್ಯಗಳ ಪೈಕಿ ಇತ್ತೀಚಿನವರೆಗೂ ಕರ್ನಾಟಕವೇ ಮೊದಲ ಸ್ಥಾನದಲ್ಲಿ ಗುರುತಿಸಿಕೊಂಡಿತ್ತು. ಈಗ ತೆಲಂಗಾಣ ಕರ್ನಾಟಕವನ್ನು ಹಿಂದಿಕ್ಕಿದೆ. ಒಂದೊಂದು ಮತಕ್ಕೂ ಇಂತಿಷ್ಟು ಹಣ ಎಂದು ಖರ್ಚು ಮಾಡುವುದರಲ್ಲಿ ಕರ್ನಾಟಕ ಮುಂಚೂಣಿಯಲ್ಲಿರುವ ರಾಜ್ಯ. ಇಲ್ಲಿಯ ಒಬ್ಬ ಎಮ್‌ಎಲ್‌ಎ ಮಾಡುವ ಖರ್ಚಿಗೆ ಹೋಲಿಸಿಕೊಂಡರೆ ಉತ್ತರ ಪ್ರದೇಶ ಮತ್ತು ಬಿಹಾರ್‌ ರಾಜ್ಯದಲ್ಲಿ ಒಬ್ಬ ಎಂಪಿ ತನ್ನ ಇಡೀ ಜಿಲ್ಲೆಗೆ ಖರ್ಚು ಮಾಡುತ್ತಾರೆ.

ದಕ್ಷಿಣ ಭಾರತದ ರಾಜ್ಯಗಳು ಶ್ರೀಮಂತ ಎಂಬ ಕಾರಣಕ್ಕೆ ಪ್ರತಿ ಮತಕ್ಕೂ ಹೀಗೆ ಹಣ ಹಂಚುತ್ತಾರೆ ಎಂದರೆ ಆ ದುಡ್ಡು ಎಲ್ಲಿಂದ ಬರುತ್ತದೆ? ಸರ್ಕಾರಿ ನೇಮಕಾತಿ, ಕಾಮಗಾರಿ ಕೆಲಸ, ಖರೀದಿ ವ್ಯವಹಾರ, ವರ್ಗಾವಣೆ ದಂಧೆ, ಗಣಿಗಾರಿಕೆ, ಅರಣ್ಯ ಸೇರಿ ನೈಸರ್ಗಿಕ ಸಂಪನ್ಮೂಲಗಳಿಂದ ಜನಪ್ರತಿನಿಧಿಗಳು ದುಡ್ಡು ಹೊಡೆಯುತ್ತಾರೆ. ಸರ್ಕಾರಿ ನೇಮಕಾತಿ ಮತ್ತು ವರ್ಗಾವಣೆಯಲ್ಲಿ ದುಡ್ಡು ಕೊಟ್ಟು ಬಂದವರು ಅದನ್ನು ಮರಳಿ ಸಂಪಾದಿಸಲು ಜನಸಾಮಾನ್ಯರಿಂದ ಲೂಟಿಗೆ ಇಳಿಯುತ್ತಾರೆ. ಇದೆಲ್ಲದರ ಪರಿಣಾಮ ರಾಜ್ಯದ ಬೊಕ್ಕಸಕ್ಕೆ ಹೊರೆಯಾಗಿ, ರಾಜ್ಯ ಹಿಂದುಳಿಯಲು ಕಾರಣವಾಗುತ್ತದೆ. ಈ ವ್ಯವಸ್ಥೆ ಕೇವಲ ರಾಜ್ಯದ್ದಷ್ಟೇ ಅಲ್ಲ. ಎಲ್ಲ ರಾಜ್ಯಗಳಲ್ಲೂ ಇದೆ. ಹಾಗೆಯೇ ಕೇಂದ್ರ ಸರ್ಕಾರದಲ್ಲೂ ಇದೆ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಅತ್ಯಾಚಾರ ಯತ್ನ ಮಾಮೂಲು ಸಂಗತಿಯೇ ಗೃಹಸಚಿವರೇ?

ದೇಶದಲ್ಲಿ ಭ್ರಷ್ಟಾಚಾರ ವಿರುದ್ಧ ಧ್ವನಿ ಎತ್ತಿ ದೆಹಲಿಯಲ್ಲಿ ಆಳ್ವಿಕೆಗೆ ಬಂದಂತಹ ಆಮ್‌ ಆದ್ಮಿ ಸುತ್ತಲೂ ಈಗ ಭ್ರಷ್ಟಾಚಾರ ಆರೋಪ ಸುತ್ತಿಕೊಂಡಿದೆ. ಭ್ರಷ್ಟಾಚಾರವನ್ನು ಮುಂದೆ ಮಾಡಿ ಒಳ್ಳೆಯ ಜನರನ್ನು ಮಟ್ಟ ಹಾಕುವ ಚಮತ್ಕಾರಿಕೆ ದೇಶ ಮತ್ತು ಜಗತ್ತಿನಲ್ಲಿ ಹೆಚ್ಚು ಕಂಡುಬರುತ್ತಿದೆ. ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರು ಯುಪಿಎ ಸರ್ಕಾರದ ಅವಧಿಯ ಭ್ರಷ್ಟಾಚಾರವನ್ನು ದೇಶದಾದ್ಯಂತ ಮುಂದುಮಾಡಿ, ಮಾಧ್ಯಮಗಳ ಸಹಕಾರದಿಂದ ಪ್ರಧಾನಿ ಪಟ್ಟಕ್ಕೆ ಬಂದರು. ಆದರೆ ಮುಂದೆ ಮೋದಿ ಮಾಡಿದ್ದೇನು?

ಸಾಂಸ್ಥಿಕ ಭ್ರಷ್ಟಾಚಾರದಲ್ಲಿ ಈಗ ಪ್ರಧಾನಿ ಮೋದಿ ಮುಳುಗೆದ್ದಿದ್ದಾರೆ. ಚುನಾವಣಾ ಬಾಂಡ್‌ ಭ್ರಷ್ಟಾಚಾರ, ಪಿಎಂ ಕೇರ್ಸ್‌ ಎಂಬ ಭ್ರಷ್ಟಾಚಾರ ಮೋದಿಗೆ ಅಂಟಿದ ಗಂಭೀರ ಪ್ರಕರಣಗಳು. ಇಂಥವರು ಪುಂಖಾನುಪುಂಖವಾಗಿ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿರುವುದು ದುರಂತ.

ಭ್ರಷ್ಟಚಾರ ಎಂಬುದು ಸಂಕೀರ್ಣವಾದ ರಾಜಕೀಯ ವಿದ್ಯಮಾನವಾಗಿ ಜಗತ್ತಿನಲ್ಲೆಡೆ ನಡೆಯುತ್ತಿದೆ. ಭಾರತದಲ್ಲೂ ನಡೆಯುತ್ತಿದೆ ಹಾಗೂ ಕರ್ನಾಟಕದಲ್ಲೂ ನಡೆಯುತ್ತಿದೆ. ಹಾಗಾದರೆ ಇದಕ್ಕೆಲ್ಲ ಪರಿಹಾರವೇನು? ಭ್ರಷ್ಟಾಚಾರ ನಿಗ್ರಹಕ್ಕೆ ಸಾಂಸ್ಥಿಕವಾದ ಮತ್ತು ರಾಚನಿಕವಾದ ಬದಲಾವಣೆಗಳನ್ನು ತರಬೇಕು. ಇದನ್ನೆಲ್ಲ ಕೆಟಿಪಿಪಿ ಕಾಯ್ದೆ ಮೂಲಕ ಬದಲಾವಣೆ ತರಬಹುದು. ಇದಲ್ಲದೆ ಗುತ್ತಿಗೆದಾರರಿಗೆ ಬಿಲ್‌ ಮಾಡಬೇಕಾದರೆ ಟೋಕನ್‌ ವ್ಯವಸ್ಥೆ ಇರಬೇಕು. ಹೀಗೆ ನಾನಾ ವಿಧಾನಗಳ ಮೂಲಕ ಭ್ರಷ್ಟಾಚಾರ ನಿಗ್ರಹಿಸಲು ಸಾಧ್ಯವಿದೆ.

ಸಿಎಂ ಸಿದ್ದರಾಮಯ್ಯ ಅವರ ಮೇಲೆ ಭ್ರಷ್ಟಾಚಾರದ ಆರೋಪ ಬಂದಿರುವುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಆದರೆ, ಅವರ ಮೇಲೆ ಏನೇ ಆರೋಪಗಳು ಬಂದಿದ್ದರೂ ಎಲ್ಲೂ ಕಾಣಸಿಗುವುದಿಲ್ಲ. ಕಳೆದ ಬಿಜೆಪಿ ಅವಧಿಯಲ್ಲಿ ಗುತ್ತಿಗೆದಾರರ ಸಂಘದಿಂದ ಕೇಳಿಬಂದ 40% ಕಮಿಷನ್‌ ಆರೋಪ ರಾಜ್ಯಕ್ಕೆ ಮತ್ತಷ್ಟು ಕಳಂಕ ಅಂಟಿಕೊಂಡಿತು. ಭ್ರಷ್ಟಾಚಾರ, ಗಣಿಗಾರಿಕೆ ಅಕ್ರಮದಲ್ಲಿ ಜೈಲು ಕಂಡ ಬಂದ ನಾಯಕರೂ ಇನ್ನೂ ರಾಜಕೀಯಲದಲ್ಲಿ ಸಕ್ರಿಯರಾಗಿಯೇ ಇದ್ದಾರೆ.

ಬಸವರಾಜ ರಾಯರೆಡ್ಡಿ ಅವರು ಸಿದ್ದರಾಮಯ್ಯ ಅವರ ವಿಶ್ವಾಸದಿಂದಲೋ ಅಥವಾ ಡ್ಯಾಮೇಜ್‌ ಕಂಟ್ರೋಲ್‌ಗೆ ಏನೋ “ಸಿದ್ದರಾಮಯ್ಯ ಅವರು ಭ್ರಷ್ಟಾಚಾರ ತಡೆಗೆ ಕೆಲಸ ಮಾಡುತ್ತಿದ್ದಾರೆ” ಎನ್ನುವ ಅರ್ಥದಲ್ಲಿ ಸ್ಪಷ್ಟನೆ ನೀಡಿದ್ದಾರೆ. ಆದರೆ ವಾಸ್ತವದಲ್ಲಿ ಭ್ರಷ್ಟಾಚಾರವನ್ನು ತಡೆಯಲು ಸಾಧ್ಯವಿಲ್ಲ ಎಂಬುದು ಸಿದ್ದರಾಮಯ್ಯ ಅವರಿಗೂ ಗೊತ್ತು. ಬಹುತೇಕರು ಈ ವಿಚಾರದಲ್ಲಿ ಕೈ ಚೆಲ್ಲಿ ಕುಳಿತಿದ್ದಾರೆ. ದುಡ್ಡು ಖರ್ಚು ಮಾಡಿಯೇ ಅಧಿಕಾರಕ್ಕೆ ಬರುವ ವ್ಯವಸ್ಥೆ ತೊಲಗುವವರೆಗೂ ಭ್ರಷ್ಟಾಚಾರ ಜೊತೆ ಜೊತೆಯಾಗಿಯೇ ಹೆಜ್ಜೆ ಹಾಕುತ್ತಿರುತ್ತದೆ ಎಂಬುದು ಸತ್ಯ. ಇದರ ಮಧ್ಯೆ ಭ್ರಷ್ಟಾಚಾರ ಇದ್ದರೂ ಅದರ ಜೊತೆ ಎಷ್ಟು ಬೇಕು ಅಷ್ಟು ಹೊಂದಿಕೊಂಡು ಒಳ್ಳೆಯ ಕೆಲಸ ಮಾಡುವವರೂ ಇದ್ದಾರೆ. ಇನ್ನೊಂದಿಷ್ಟು ಜನ ಇನ್ನೊಂದು ರೀತಿಯಲ್ಲಿ ಯೋಚಿಸುತ್ತಾರೆ.

ದೇಶದಲ್ಲಿ ನಿರುದ್ಯೋಗ ಸಮಸ್ಯೆ ದಿನೇ ದಿನೆ ಹೆಚ್ಚುತ್ತಿದೆ. ಇದರ ಜವಾಬ್ದಾರಿ ಹೊರಬೇಕಾದ ಪ್ರಧಾನಿ ಮೋದಿ ಅವರು ಅಂಬಾನಿ ಮತ್ತು ಅದಾನಿಗಳ ಸಂಪತ್ತು ಹೆಚ್ಚಿಸಲು ಶ್ರಮಿಸುತ್ತಿದ್ದಾರೆ ಎನ್ನುವ ಗಂಭೀರ ಆರೋಪಗಳನ್ನು ಎದುರಿಸುತ್ತಿದ್ದಾರೆ. ಕೇಂದ್ರ ಗೃಹ ಮಂತ್ರಿ ಅಮಿತ್‌ ಶಾ ಇದಕ್ಕೆಲ್ಲ ಬೆನ್ನೆಲುಬಾಗಿ ಭ್ರಷ್ಟಾಚಾರವನ್ನು ಪ್ರೋತ್ಸಾಹಿಸುತ್ತಿದ್ದಾರೆ. ಭ್ರಷ್ಟಾಚಾರ ಇದೆ ಎಂದು ಒಪ್ಪಿಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹ ಸುಮ್ಮನೇ ಕೂರುವ ಕಾಲ ಇದಲ್ಲ. ಭ್ರಷ್ಟಾಚಾರ ತಡೆಗೆ ಸಾಂಸ್ಥಿಕವಾಗಿ ದಿಟ್ಟ ಬದಲಾವಣೆಗಳನ್ನು ಇನ್ನಾದರೂ ತರಲು ಸಿದ್ದರಾಮಯ್ಯ ಶ್ರಮಿಸಲಿ. ಕೇಂದ್ರ ಸರ್ಕಾರವೂ ದಿಟ್ಟ ಹೆಜ್ಜೆ ಇಡಲಿ.

WhatsApp Image 2023 04 01 at 3.53.40 PM e1680350106945
+ posts

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್‌1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಶರಣು ಚಕ್ರಸಾಲಿ
ಶರಣು ಚಕ್ರಸಾಲಿ
ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್‌1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪಟ್ಟಣ ಪಂಚಾಯತ್ ಚುನಾವಣೆ: ಮೂರರಲ್ಲಿ ಕಾಂಗ್ರೆಸ್‌ಗೆ ಮೇಲುಗೈ; ಎರಡರಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಗೆ ಜಯ

ಕರ್ನಾಟಕದಲ್ಲಿ ಐದು ಪ್ರದೇಶಗಳು ತಾಲೂಕು ಸ್ಥಾನಕ್ಕೇರಿದ ಬಳಿಕ ರಚನೆಯಾದ ಪಟ್ಟಣ ಪಂಚಾಯಿತಿಗೆ...

ಅಲೆಮಾರಿಗಳಿಗೆ ಅನ್ಯಾಯ; ಸರ್ಕಾರದ ವಿರುದ್ಧ ಭುಗಿಲೆದ್ದ ಜನಾಕ್ರೋಶ

ಮೀಸಲು ಹಂಚಿಕೆಯ ವಿವರಗಳು ಸ್ಪಷ್ಟವಾಗುತ್ತಿದ್ದಂತೆ ಸಂಭ್ರಮದ ಮನೆಯಲ್ಲಿ ಸಾವಿನ ಸೂತಕ ಆವರಿಸತೊಡಗಿತು....

2029ರ ಚುನಾವಣೆಯಲ್ಲಿ ರಾಹುಲ್ ಗಾಂಧಿ ಇಂಡಿಯಾ ಒಕ್ಕೂಟದ ಪ್ರಧಾನಿ ಅಭ್ಯರ್ಥಿ: ತೇಜಸ್ವಿ ಯಾದವ್

2029ರ ಲೋಕಸಭೆ ಚುನಾವಣೆಯಲ್ಲಿ ಸದ್ಯ ಲೋಕಸಭೆ ವಿಪಕ್ಷ ನಾಯಕರಾಗಿರುವ ರಾಹುಲ್ ಗಾಂಧಿ...

Download Eedina App Android / iOS

X