ಇಸ್ರೇಲ್ ‘ಆತ್ಮ ರಕ್ಷಣೆ’ಯ ವ್ಯಾಪ್ತಿ ಮೀರಿ ವರ್ತಿಸುತ್ತಿದೆ: ಚೀನಾ

Date:

Advertisements

ಗಾಜಾದಲ್ಲಿ ಇಸ್ರೇಲ್‌ನ ಧೋರಣೆ ಮತ್ತು ಕ್ರಮಗಳು ‘ಆತ್ಮ ರಕ್ಷಣೆ’ಯ ವ್ಯಾಪ್ತಿ ಮೀರಿ ಹೋಗಿವೆ. ಇಸ್ರೇಲಿ ಸರ್ಕಾರವು ‘ಗಾಜಾದ ಜನರನ್ನು ಸಾಮೂಹಿಕವಾಗಿ ಶಿಕ್ಷಿಸುತ್ತಿರುವುದನ್ನು ನಿಲ್ಲಿಸಬೇಕು’ ಎಂದು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಹೇಳಿದ್ದಾರೆ.

ಶನಿವಾರ ಸೌದಿ ಅರೇಬಿಯಾದ ವಿದೇಶಾಂಗ ಸಚಿವ ಪ್ರಿನ್ಸ್ ಫೈಸಲ್ ಬಿನ್ ಫರ್ಹಾನ್ ಅವರಿಗೆ ಕರೆ ಮಾಡಿ ವಾಂಗ್ ಅವರು ಮಾತನಾಡಿದ್ದಾರೆ. “ಗಾಜಾದಲ್ಲಿ ಹಮಾಸ್ ವಿರುದ್ಧ ಇಸ್ರೇಲ್ ಮತ್ತಷ್ಟು ಆಕ್ರಮಣಕ್ಕೆ ಸಜ್ಜಾಗುತ್ತಿರುವುದು ಕಂಡುಬಂದಿದೆ” ಎಂದು ಅವರು ಹೇಳಿದ್ದಾರೆ.

ಸೌದಿ ಅರೇಬಿಯಾ ಮತ್ತು ಹಮಾಸ್ ಬೆಂಬಲಿಗ ರಾಷ್ಟ್ರ ಇರಾನ್ ನಡುವೆ ಮಾರ್ಚ್‌ನಲ್ಲಿ ಸಂಬಂಧಗಳನ್ನು ಮರುಸ್ಥಾಪಿಸುವಲ್ಲಿ ಚೀನಾ ಮಧ್ಯವರ್ತಿಯಾಗಿ ಸ್ಥಾನ ಪಡೆದಿದೆ.

Advertisements

“ಇಸ್ರೇಲ್‌ನ ಕ್ರಮಗಳು ಆತ್ಮರಕ್ಷಣೆಯ ವ್ಯಾಪ್ತಿಯನ್ನು ಮೀರಿವೆ. ಅಂತರಾಷ್ಟ್ರೀಯ ಸಮುದಾಯ ಮತ್ತು ಯುಎನ್ ಸೆಕ್ರೆಟರಿ ಜನರಲ್  ಕರೆಗಳನ್ನು ಇಸ್ರೇಲ್‌ ಶ್ರದ್ಧೆಯಿಂದ ಆಲಿಸಬೇಕು. ಗಾಜಾದ ಜನರ ಸಾಮೂಹಿಕ ಶಿಕ್ಷೆಯನ್ನು ನಿಲ್ಲಿಸಬೇಕು” ಎಂದು ವಾಂಗ್ ಹೇಳಿದ್ದಾರೆ.

ಗಾಜಾದ ಜನನಿಬಿಡ ಎನ್‌ಕ್ಲೇವ್‌ನ ಉತ್ತರ ಭಾಗದಲ್ಲಿ 10 ಲಕ್ಷಕ್ಕೂ ಹೆಚ್ಚು ಮಂದಿ ಇದ್ದಾರೆ. ಅವರೆಲ್ಲರಿಗೂ ನಿರೀಕ್ಷಿತ ದಾಳಿಯ ಕಾರಣಕ್ಕಾಗಿ ಅಲ್ಲಿಂದ ಪಲಾಯನ ಮಾಡಲು ಆದೇಶಿಸಲಾಗಿದೆ. ಆದರೆ, ಇಸ್ರೇಲ್‌ ನಿರ್ಮಿಸಿರುವ ಬೇಲಿ, ರಸ್ತೆಗಳ ನಾಶದ ಕಾರಣಕ್ಕಾಗಿ ಜನರು ಎಲ್ಲಿಯೂ ಹೋಗಲಾಗದೆ ಅಲ್ಲಿಯೇ ಸಿಲುಕಿಕೊಂಡಿದ್ದಾರೆ. ಹೊರ ಹೋಗಲು ಹರಸಾಹಸ ಪಡುತ್ತಿದ್ದಾರೆ.

23 ಲಕ್ಷಕ್ಕೂ ಹೆಚ್ಚು ಜನರು ವಾಸಿಸುತ್ತಿರುವ ಗಾಜಾ ಪ್ರದೇಶವು 2006ರಿಂದ ಭೂಮಿ, ವಾಯು ಮತ್ತು ಸಮುದ್ರ ಮಾರ್ಗಗಳ ದಿಗ್ಬಂಧನದಲ್ಲಿದೆ.

ಗಾಜಾ ಪಟ್ಟಿಯಲ್ಲಿ ಇಸ್ರೇಲ್‌ ನಿರ್ಮಿಸಿರುವ ಭದ್ರವಾದ ಬೇಲಿಯನ್ನು ಭೇದಿಸಿ ಹಮಾಸ್‌ ಹೋರಾಟಗಾರರು ಇಸ್ರೇಲ್‌ ವಿರುದ್ಧ ಸಮರಕ್ಕಿಳಿದಿದ್ದಾರೆ. ಗಾಜಾ ಪಟ್ಟಿಯ ಮೇಲೆ ಇಸ್ರೇಲ್‌ ಆತ್ಮ ರಕ್ಷಣೆಯ ಹೆಸರಿನಲ್ಲಿ ಪ್ರತಿಕಾರದ ಬಾಂಬ್‌ ದಾಳಿ ನಡೆಸುತ್ತಿದೆ. ಸಾವಿರಾರು ಮಂದಿ ಸಾವನ್ನಪ್ಪಿದ್ದಾರೆ.

“ಪರಿಸ್ಥಿತಿ ಉಲ್ಬಣಗೊಳ್ಳುವ ಯಾವುದೇ ಕ್ರಮಗಳನ್ನು ಎರಡೂ ಕಡೆಯವರು ತೆಗೆದುಕೊಳ್ಳಬಾರದು. ಸಾಧ್ಯವಾದಷ್ಟು ಬೇಗ ಮಾತುಕತೆಗೆ ಬರಬೇಕು” ಎಂದು ವಾಂಗ್ ಹೇಳಿದ್ದಾರೆ.

ವಾಂಗ್ ಅವರು ಯುಎಸ್‌ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಅವರೊಂದಿಗೆ ಶನಿವಾರ ಪೋನ್‌ ಕರೆಯಲ್ಲಿ ಮಾತನಾಡಿದ್ದಾರೆ.  “ಶಾಂತಿ ಮತ್ತು ಒಮ್ಮತವನ್ನು ತರಲು ಸಾಧ್ಯವಾದಷ್ಟು ಬೇಗ ಅಂತರರಾಷ್ಟ್ರೀಯ ಶಾಂತಿ ಸಭೆಯನ್ನು ಕರೆಯಬೇಕು” ಎಂದು ವಾಂಗ್‌ ಒತ್ತಾಯಿಸಿದ್ದಾರೆ.

ಇಸ್ರೇಲ್-ಹಮಾಸ್ ಸಂಘರ್ಷದಲ್ಲಿ ಕದನ ವಿರಾಮಕ್ಕೆ ಒತ್ತಾಯಿಸಲು ಮತ್ತು ಶಾಂತಿ ಮಾತುಕತೆಗೆ ಕರೆಯಲು ಚೀನಾದ ವಿಶೇಷ ರಾಯಭಾರಿ ಝೈ ಜುನ್ ಮುಂದಿನ ವಾರ ಮಧ್ಯಪ್ರಾಚ್ಯಕ್ಕೆ ಭೇಟಿ ನೀಡಲಿದ್ದಾರೆ ಎಂದು ವರದಿಯಾಘಿದೆ.

“ಕದನ ವಿರಾಮಕ್ಕಾಗಿ ಎಲ್ಲರೊಂದಿಗೆ ಸಮನ್ವಯ ಸಾಧಿಸಲು, ನಾಗರಿಕರನ್ನು ರಕ್ಷಿಸಲು, ಪರಿಸ್ಥಿತಿಯನ್ನು ಸುಗಮಗೊಳಿಸಲು ಮತ್ತು ಶಾಂತಿ ಮಾತುಕತೆಗಳನ್ನು ನಡೆಸಲು ಮುಂದಿನ ವಾರ ಮಧ್ಯಪ್ರಾಚ್ಯಕ್ಕೆ ಝೈ ಜುನ್ ಭೇಟಿ ನೀಡಲಿದ್ದಾರೆ” ಎಂದು ಚೀನಾದ ಸಿಸಿಟಿವಿ ತನ್ನ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಪೋಸ್ಟ್‌ ಮಾಡಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪಟ್ಟಣ ಪಂಚಾಯತ್ ಚುನಾವಣೆ: ಮೂರರಲ್ಲಿ ಕಾಂಗ್ರೆಸ್‌ಗೆ ಮೇಲುಗೈ; ಎರಡರಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಗೆ ಜಯ

ಕರ್ನಾಟಕದಲ್ಲಿ ಐದು ಪ್ರದೇಶಗಳು ತಾಲೂಕು ಸ್ಥಾನಕ್ಕೇರಿದ ಬಳಿಕ ರಚನೆಯಾದ ಪಟ್ಟಣ ಪಂಚಾಯಿತಿಗೆ...

2029ರ ಚುನಾವಣೆಯಲ್ಲಿ ರಾಹುಲ್ ಗಾಂಧಿ ಇಂಡಿಯಾ ಒಕ್ಕೂಟದ ಪ್ರಧಾನಿ ಅಭ್ಯರ್ಥಿ: ತೇಜಸ್ವಿ ಯಾದವ್

2029ರ ಲೋಕಸಭೆ ಚುನಾವಣೆಯಲ್ಲಿ ಸದ್ಯ ಲೋಕಸಭೆ ವಿಪಕ್ಷ ನಾಯಕರಾಗಿರುವ ರಾಹುಲ್ ಗಾಂಧಿ...

ಸಾರ್ವಜನಿಕ ಸಭೆಯಲ್ಲಿ ದೆಹಲಿ ಸಿಎಂ ರೇಖಾ ಗುಪ್ತಾ ಮೇಲೆ ಹಲ್ಲೆ; ಆಸ್ಪತ್ರೆಗೆ ದಾಖಲು

ಬುಧವಾರ(ಆಗಸ್ಟ್ 20) ಬೆಳಿಗ್ಗೆ ತಮ್ಮ ನಿವಾಸದಲ್ಲಿ ನಡೆದ ಸಾರ್ವಜನಿಕ ವಿಚಾರಣೆಯ ಸಂದರ್ಭದಲ್ಲಿ...

Download Eedina App Android / iOS

X