ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಮೈತ್ರಿಕೂಟದ ಸರ್ಕಾರದಲ್ಲಿ ನೂತನ ನಾಗರಿಕ ವಿಮಾನ ಯಾನ ಸಚಿವರಾಗಿ ಆಯ್ಕೆಯಾಗಿರುವ ಕಿಂಜರಾಪು ರಾಮ್ ಮೋಹನ್ ನಾಯ್ಡು ಇಂದು ಸಚಿವಾಲಯದ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು.
With the blessing of my father late. Shri Yerran Naidu, My leaders @ncbn garu, @narendramodi ji, & people of Sklm, I took charge as the Minister of Civil Aviation. I intend to make indian aviation sector one of the global leaders in this tenure with a motive of “Ease of Flying”. pic.twitter.com/7ZmhZ6OrVn
— Ram Mohan Naidu Kinjarapu (@RamMNK) June 13, 2024
ಆ ಬಳಿಕ ಪಿಟಿಐ ಸುದ್ದಿ ಸಂಸ್ಥೆಯ ಪ್ರತಿನಿಧಿಯು, “ಕಳೆದ ಕೆಲವು ವರ್ಷಗಳಿಂದ ದರ ಏರಿಕೆಯಾಗಿರುವುದರಿಂದ ಜನಸಾಮಾನ್ಯರು ವಿಮಾನ ಪ್ರಯಾಣದಿಂದ ದೂರ ಸರಿಯುತ್ತಿದ್ದಾರೆ. ಈ ಬಗ್ಗೆ ಏನಾದರೂ ನಿಮ್ಮ ಅವಧಿಯಲ್ಲಿ ಕ್ರಮ ತೆಗೆದುಕೊಳ್ಳುತ್ತೀರಾ?” ಎಂದು ಕೇಳಿದ್ದಕ್ಕೆ ಉತ್ತರಿಸಿದ ರಾಮ್ ಮೋಹನ್ ನಾಯ್ಡು, “ಹೌದು. ಕಳೆದ ಕೆಲವು ವರ್ಷಗಳಿಂದ ಇದನ್ನು ಗಮನಿಸುತ್ತಿದ್ದೇನೆ. ಇದು ನನಗೆ ಒಂದು ಪ್ರಮುಖ ವಿಷಯವಾಗಿದೆ. ಹಾಗಾಗಿ, ಜನಸಾಮಾನ್ಯರಿಗೆ ಕೈಗಟಕುವ ದರದಲ್ಲಿ ವಿಮಾನ ಪ್ರಯಾಣಕ್ಕೆ ಆದ್ಯತೆ ನೀಡುತ್ತೇನೆ” ಎಂದು ತಿಳಿಸಿದ್ದಾರೆ.
“ನನಗೆ ನಾಗರಿಕ ವಿಮಾನಯಾನ ಸಚಿವ ಸ್ಥಾನ ಎಂದು ಘೋಷಿಸಿದ ಸಮಯದಿಂದಲೂ ಇದು ನನಗೆ ಒಂದು ಪ್ರಮುಖ ವಿಷಯವಾಗಿದೆ. ನಾನು ಎಲ್ಲಿಗೆ ಹೋದರೂ ದರ ಏರಿಕೆಯ ಬಗ್ಗೆ ಕೇಳುತ್ತಲೇ ಇದ್ದೇನೆ. ಕಳೆದ ಕೆಲವು ವರ್ಷಗಳಿಂದ ಅದರಲ್ಲೂ ವಿಶೇಷವಾಗಿ ಕೋವಿಡ್ ನಂತರ ಬೆಲೆಗಳು ಹಲವು ಕಾರಣದಿಂದಾಗಿ ಏರಿಕೆಯಾಗಿದೆ ಎಂದು ಜನರು ಉಲ್ಲೇಖಿಸುತ್ತಿದ್ದಾರೆ. ಹಾಗಾಗಿ, ಬೆಲೆ ಏರಿಕೆಯ ಬಗ್ಗೆ ನನಗೆ ಸಂಪೂರ್ಣ ತಿಳುವಳಿಕೆ ಬೇಕಿದೆ” ಎಂದು ಹೇಳಿದರು.
VIDEO | Here’s what Civil Aviation Minister Kinjarapu Rammohan Naidu (@RamMNK) said on the issue of flight ticket price after taking charge of the ministry.
“That’s an important issue striking me since the time I have been announced as Civil Aviation Minister. Wherever I go,… pic.twitter.com/mOPRwvOzWv
— Press Trust of India (@PTI_News) June 13, 2024
“ವಿಮಾನ ಪ್ರಯಾಣದ ದರ ಏರಿಕೆಯ ಬಗ್ಗೆ ನಾನು ಖಂಡಿತವಾಗಿಯೂ ಷೇರುದಾರರದೊಂದಿಗೆ ಪರಿಶೀಲನಾ ಸಭೆಗಳನ್ನು ನಡೆಸಲಿದ್ದೇನೆ. ಏಕೆಂದರೆ ದರ ಏರಿಕೆಯು ಸಾಮಾನ್ಯ ಜನರಿಗೆ ಸವಾಲಾಗಿದೆ. ಸಾಮಾನ್ಯ ಜನರಿಗೆ ವಿಮಾನ ಪ್ರಯಾಣದ ದರವನ್ನು ನಾವು ಕೈಗೆಟುಕುವವರೆಗೆ ಮಾಡದಿದ್ದರೆ ಪ್ರಯಾಣಕ್ಕೆ ಆದ್ಯತೆ ನೀಡಲು ಸಾಧ್ಯವಿಲ್ಲ. ಜನರಿಗೆ ಕೈಗಟಕುವ ದರದಲ್ಲಿ ವಿಮಾನ ಪ್ರಯಾಣಕ್ಕೆ ಆದ್ಯತೆ ನೀಡಲು ಶ್ರಮಿಸುತ್ತೇನೆ” ಎಂದು ಎನ್ಡಿಎಯ ಮೈತ್ರಿಕೂಟದ ಭಾಗವಾಗಿರುವ ಟಿಡಿಪಿ ಪಕ್ಷದ ಸಂಸದರೂ ಆಗಿರುವ ನೂತನ ನಾಗರಿಕ ವಿಮಾನ ಯಾನ ಸಚಿವ ರಾಮಮೋಹನ್ ನಾಯ್ಡು ಭರವಸೆ ನೀಡಿದ್ದಾರೆ.
