ಪೌರತ್ವ ತಿದ್ದುಪಡಿ ಕಾನೂನು, ಏಕರೂಪ ನಾಗರಿಕ ಸಂಹಿತೆ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿಗೆ ವಿರೋಧ ಸೇರಿದಂತೆ ಜಾರ್ಖಂಡ್‌ನ ಆಡಳಿತಾರೂಢ ಜಾರ್ಖಂಡ್ ಮುಕ್ತಿ ಮೋರ್ಚಾ(ಜೆಎಂಎಂ) ಪಕ್ಷವು ರಾಜ್ಯದಲ್ಲಿ 50 ಅಂಶಗಳ ನಿರ್ಣಯವನ್ನು ಕೈಗೊಂಡಿದೆ.
ಜಾರ್ಖಂಡ್‌ನ ಡುಮ್ಮಾದ ಗಾಂಧಿ ಮೈದಾನದಲ್ಲಿ ರವಿವಾರ ಆಯೋಜಿಸಿದ್ದ ಪಕ್ಷದ 46ನೇ ಸಂಸ್ಥಾಪಕ ದಿನಾಚರಣೆ ಸಮಾರಂಭದಲ್ಲಿ ಈ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ. ‘ಸಿಎಎ, ಎನ್‌ಆರ್‌ಸಿ, ಯುಸಿಸಿಯನ್ನು ರಾಜ್ಯದಲ್ಲಿ ಸಂಪೂರ್ಣವಾಗಿ ತಿರಸ್ಕರಿಸಬೇಕು’ ಎಂದು ನಿರ್ಣಯದಲ್ಲಿ ಹೇಳಲಾಗಿದೆ.
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್, ‘ಕೇಂದ್ರ ಬಜೆಟ್‌ನಲ್ಲಿ ರಾಜ್ಯದ ಜನತೆಗೆ ಮೋಸ ಮಾಡಲಾಗಿದೆ. ಜಾರ್ಖಂಡ್‌ನ ನಿವಾಸಿಗಳು ತಮ್ಮ ಕಾಲಿನ ಮೇಲೆ ನಿಲ್ಲುವುದನ್ನು ಊಳಿಗಮಾನ್ಯ ಮನಸ್ಥಿತಿ ಹೊಂದಿರುವ ಕೆಲವರು ಬಯಸುವುದಿಲ್ಲ” ಎಂದು ಕಿಡಿಕಾರಿದ್ದಾರೆ.
बाबा तिलका माझी, भगवान बिरसा मुंडा, सिदो-कान्हू, चांद-भैरव, फूलो-झानो, पोटो हो, टाना भगत, नीलांबर-पीतांबर, शेख भिखारी जैसे कई वीरों की क्रांतिकारी भूमि है झारखण्ड।
— Hemant Soren (@HemantSorenJMM) February 3, 2025
देश के निर्माण में झारखण्ड ने हमेशा अपना महत्वपूर्ण योगदान दिया है मगर हमें हमेशा अपने हक-अधिकार के लिए लड़ाई लड़नी… pic.twitter.com/C9WSAB3c2L
“ಖನಿಜ ಸಂಪನ್ಮೂಲಗಳ ಮೂಲಕ ದೇಶದ ಬೊಕ್ಕಸಕ್ಕೆ ಹೆಚ್ಚಿನ ಕೊಡುಗೆ ನೀಡಿದರೂ ಜಾರ್ಖಂಡ್ ಅತ್ಯಂತ ಹಿಂದುಳಿದ ರಾಜ್ಯವಾಗಿದೆ. ನಾವು ಬಹಳಷ್ಟು ಕೊಡುಗೆ ನೀಡುತ್ತೇವೆ. ಆದರೆ ನಾವು ಏನನ್ನೂ ಪಡೆಯುವುದಿಲ್ಲ. ಕೇಂದ್ರವು ಎಲ್ಲ ರಾಜ್ಯಗಳನ್ನು ಸಮಾನವಾಗಿ ನೋಡಬೇಕು. ನಮ್ಮ ಹಕ್ಕುಗಳಿಗಾಗಿ ನಾವು ಹೋರಾಡಬೇಕಾಗಿದೆ” ಎಂದು ಅವರು ಹೇಳಿದ್ದಾರೆ.
