ಪ್ರಸಕ್ತ ನಡೆಯುತ್ತಿರುವ 2024ರ ಲೋಕಸಭಾ ಚುನಾವಣೆಯ 7ನೇ ಹಾಗೂ ಅಂತಿಮ ಹಂತದ ಮತದಾನ ಶನಿವಾರ (ಜೂನ್ 1) ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಒಟ್ಟು 904 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಅಂತಿಮ ಹಂತದಲ್ಲಿ ಒಟ್ಟು ಏಳು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶ ಚಂಡೀಗಢ ಸೇರಿದಂತೆ 57 ಲೋಕಸಭಾ ಕ್ಷೇತ್ರಗಳಿಗೆ ಮತದಾನ ಪ್ರಕ್ರಿಯೆ ನಡೆಯಲಿದೆ.
ಉತ್ತರ ಪ್ರದೇಶದ ವಾರಣಾಸಿ ಕ್ಷೇತ್ರದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಸ್ಪರ್ಧಿಸುತ್ತಿದ್ದು, ಗೆದ್ದು ಮೂರನೇ ಬಾರಿಗೆ ಅಧಿಕಾರ ಹಿಡಿಯಲಿದ್ದಾರೆಯೇ ಅಥವಾ ಅಧಿಕಾರ ಕಳೆದುಕೊಳ್ಳಲಿದ್ದಾರೆಯೇ ಎಂಬುದನ್ನು ಜೂನ್ 4ರವರೆಗೆ ಕಾಯಬೇಕಿದೆ.
हो गयी पूरी तैयारी सातवें चरण में आपकी बारी! ✨ #GeneralElections2024 के #Phase7 के लिए #Chandigarh तैयार है
मतदान केंद्रों के लिए रवाना होते हुए पोलिंग पार्टी की कुछ झलकियां
📸: @ceochandigarh#ChunavKaParv #DeshKaGarv #Elections2024 #LokSabhaElections2024 pic.twitter.com/aFnvE8yJSS
— Election Commission of India (@ECISVEEP) May 31, 2024
ಪಂಜಾಬ್‌ನ 13 ಕ್ಷೇತ್ರ, ಹಿಮಾಚಲ ಪ್ರದೇಶದ 4, ಉತ್ತರ ಪ್ರದೇಶದ 13, ಪಶ್ಚಿಮ ಬಂಗಾಳದ 9, ಬಿಹಾರದ 8 ಹಾಗೂ ಒಡಿಶಾದ 6, ಜಾರ್ಖಂಡ್‌ನ 3 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಇದರೊಂದಿಗೆ ಒಡಿಶಾದ 42 ಮತ್ತು ಹಿಮಾಚಲ ಪ್ರದೇಶದ ಆರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಮತದಾನವೂ ಜೂನ್ 1ರಂದೇ ನಡೆಯಲಿದೆ.
ಪ್ರಮುಖ ಅಭ್ಯರ್ಥಿಗಳು ಕಣದಲ್ಲಿ
ಅಂತಿಮ ಹಂತದಲ್ಲಿ ಪ್ರಧಾನಿ ಮೋದಿ ಸೇರಿದಂತೆ ಕೇಂದ್ರ ಸಚಿವ ಅನುರಾಗ್ ಠಾಕೂರ್, ಮಮತಾ ಬ್ಯಾನರ್ಜಿ ಸಂಬಂಧಿ ಅಭಿಷೇಕ್ ಬ್ಯಾನರ್ಜಿ, ಲಾಲು ಪ್ರಸಾದ್ ಯಾದವ್ ಪುತ್ರಿ ಮಿಸಾ ಭಾರ್ತಿ, ನಟಿ ಕಂಗನಾ ರಣಾವತ್ ಸೇರಿದಂತೆ 904 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಒಟ್ಟು 10.06 ಕೋಟಿ ಮತದಾರರು ಈ 57 ಕ್ಷೇತ್ರಗಳ ಭವಿಷ್ಯ ನಿರ್ಧರಿಸಲಿದ್ದಾರೆ. ಇವರಲ್ಲಿ 5.24 ಕೋಟಿ ಪುರುಷರು ಹಾಗೂ 4.82 ಕೋಟಿ ಮಹಿಳೆಯರು ಮತ್ತು 3,574 ಲಿಂಗತ್ವ ಅಲ್ಪಸಂಖ್ಯಾತರು ಮತ ಚಲಾಯಿಸಲಿದ್ದಾರೆ. 1.09 ಲಕ್ಷ ಮತಗಟ್ಟೆಗಳಿಗೆ ಮತಗಟ್ಟೆ ಅಧಿಕಾರಿಗಳು ವಿದ್ಯುನ್ಮಾನ ಮತಯಂತ್ರಗಳನ್ನು ಹೊತ್ತು ಈಗಾಗಲೇ ತಲುಪಿದ್ದಾರೆ.
“Indomitable Spirit !!”
Our polling officials go the extra mile so that you don’t have to. Visit your polling station to cast your vote. #YouAreTheOne🫵#ChunavKaParv #DeshKaGarv #LokSabhaElections2024 #Phase7 #GeneralElections2024 pic.twitter.com/44ar3D55Nn
— Election Commission of India (@ECISVEEP) May 31, 2024
ಏ. 19ರಿಂದ ಆರಂಭವಾದ ಒಟ್ಟು ಏಳು ಹಂತಗಳ 2024ರ ಲೋಕಸಭಾ ಚುನಾವಣೆಗೆ ಶನಿವಾರ ನಡೆಯುವ 7ನೇ ಹಂತದ ಮತದಾನದೊಂದಿಗೆ ತೆರೆ ಬೀಳಲಿದೆ.
543 ಸದಸ್ಯರ ಲೋಕಸಭೆಯಲ್ಲಿ ಅತಿ ಹೆಚ್ಚು ಅಂದರೆ 80 ಲೋಕಸಭಾ ಕ್ಷೇತ್ರದ ಪ್ರಾತಿನಿಧ್ಯವನ್ನು ಹೊಂದಿರುವ ಉತ್ತರ ಪ್ರದೇಶ, 42 ಸ್ಥಾನ ಹೊಂದಿರುವ ಪಶ್ಚಿಮ ಬಂಗಾಳ, 40 ಕ್ಷೇತ್ರಗಳಿರುವ ಬಿಹಾರ ಸೇರಿ ಈ ಮೂರೂ ರಾಜ್ಯಗಳಲ್ಲಿ ಎಲ್ಲ ಏಳು ಹಂತಗಳಲ್ಲಿಯೂ ಕೂಡ ಮತದಾನ ನಡೆದಂತಾಗಲಿದೆ. ಜೂನ್ 4ರಂದು ಮತ ಎಣಿಕೆ ನಡೆಯುವ ಮೂಲಕ ಮತದಾರರ ಆಯ್ಕೆ ಯಾರು ಎಂಬುದು ನಿರ್ಧಾರವಾಗಲಿದೆ.
ಈ ಬಾರಿ ಚುನಾವಣೆಯ ಮೊದಲ ಆರು ಹಂತಗಳಲ್ಲಿ ಕ್ರಮವಾಗಿ ಶೇ. 66.14, ಶೇ 66.71, ಶೇ.65.68, ಶೇ 69.16, ಶೇ 62.2 ಹಾಗೂ ಶೇ 63.36ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ. ಕೊನೆಯ ಹಂತದಲ್ಲಿ ಎಷ್ಟು ಶೇಕಡಾ ಮತದಾನ ನಡೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಈವರೆಗೂ ನಡೆದಿರುವ ಆರು ಹಂತಗಳ ಮತದಾನದಲ್ಲಿ 28 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶ ಸೇರಿ 486 ಕ್ಷೇತ್ರಗಳ ಮತದಾನ ಪೂರ್ಣಗೊಂಡಿದೆ. ಇವುಗಳೊಂದಿಗೆ ಆಂಧ್ರಪ್ರದೇಶ, ಅರುಣಾಚಲ ಪ್ರದೇಶ ಹಾಗೂ ಸಿಕ್ಕಿಂ ವಿಧಾನಸಭೆಗೂ ಮತದಾನ ಪೂರ್ಣಗೊಂಡಿದೆ. ಇವುಗಳ ಮತ ಎಣಿಕೆಯೂ ಕೂಡ ಜೂನ್ 4ರಂದೇ ನಡೆಯಲಿದೆ.
Ban on Exit Poll🚫
Time Period 👇
7.00 AM – 19 April 2024
To
6.30 PM – 1 June 2024#ChunavKaParv #DeshKaGarv #ECI#LokSabhaElections2024 pic.twitter.com/kxn8KCY9jt— Election Commission of India (@ECISVEEP) May 31, 2024
ಸಂಜೆ 6.30ರ ನಂತರ ಎಕ್ಸಿಟ್ ಪೋಲ್(EXIT POLL)
ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಜೂನ್ 1ರಂದು ಸಂಜೆ 6.30ರ ನಂತರ ಚುನಾವಣೋತ್ತರ ಮತಗಟ್ಟೆ ಸಮೀಕ್ಷೆ(EXIT POLL)ಯನ್ನು ಮಾಧ್ಯಮಗಳು ಪ್ರಸಾರ ಮಾಡಬಹುದಾಗಿದೆ. ಅದಕ್ಕೂ ಮೊದಲು ಪ್ರಕಟಿಸುವಂತಿಲ್ಲ ಎಂದು ಚುನಾವಣಾ ಆಯೋಗ ಕಟ್ಟುನಿಟ್ಟಿನ ಸೂಚನೆ ನೀಡಿದೆ.
