ಕಲಬುರಗಿ ಲೋಕಸಭಾ ಕ್ಷೇತ್ರ | ಬಿಸಿಲೂರಲ್ಲಿ ಏರಿದೆ ಚುನಾವಣಾ ಕಾವು

Date:

Advertisements

ಕಲಬುರಗಿ ಜಿಲ್ಲೆ ಕರ್ನಾಟಕ ರಾಜ್ಯದ ಉತ್ತರ ಭಾಗದಲ್ಲಿದೆ. ಕಲಬುರಗಿ ಕರ್ನಾಟಕದ ಎರಡನೇ ಅತಿ ದೊಡ್ಡ ಜಿಲ್ಲೆ. ಈ ಜಿಲ್ಲೆಯ ದಾಖಲಿತ ಇತಿಹಾಸವು ಕ್ರಿ.ಶ. 6ನೇ ಶತಮಾನದಷ್ಟು ಹಿಂದಿನದು ರಾಜ್ಯದಲ್ಲಿ ಹೆಚ್ಚು ಕುತೂಹಲ ಮೂಡಿಸಿರುವ ಕ್ಷೇತ್ರಗಳ ಪೈಕಿ ಕಲಬುರಗಿ ಕೂಡ ಒಂದು. ಕಲಬುರಗಿಗೆ ತೊಗರಿ ಕಣಜ ಎಂದು ಕರೆಯಲಾಗುತ್ತದೆ. ಕೃಷ್ಣಾ ಮತ್ತು ಭೀಮಾ ನದಿಗಳು ಇಲ್ಲಿನ ಕೃಷಿ ಮತ್ತು ಕುಡಿಯುವ ನೀರಿಗೆ ಇರುವ ಮೂಲಗಳು. ಇದು ಸಾಂಸ್ಕೃತಿಕ, ಪರಂಪರೆ ಮತ್ತು ವಾಸ್ತುಶಿಲ್ಪದ ಬುದ್ಧ, ಬಸವ, ಸೂಫಿ, ಸಂತರ ನಾಡು ಸೌಹಾರ್ದತೆಗೆ ಹೆಸರುವಾಸಿಯಾಗಿದೆ. ಸದ್ಯ ಕೇಂದ್ರ ಚುನಾವಣಾ ಆಯೋಗ ಕಲಬುರಗಿ ಲೋಕಸಭೆ ಕ್ಷೇತ್ರದ ಚುನಾವಣೆಗೆ ದಿನಾಂಕ ಘೋಷಣೆ ಮಾಡಿದೆ.

ಪ್ರೇಕ್ಷಣೀಯ ತಾಣಗಳು
ಬುದ್ಧ ವಿಹಾರ, ಶರಣ ಬಸವೇಶ್ವರ ದೇವಸ್ಥಾನ, ಖ್ವಾಜಾ ಬಂದೇ ನವಾಜ ದರ್ಗಾ, ಬಹಮನಿ ಕೋಟೆ, ರಾಷ್ಟ್ರಕೋಟರ ಕೋಟೆ, ಚಿತ್ತಾಪುರ ನಾಗಾವಿ ಎಲ್ಲಮ್ಮ ದೇವಸ್ಥಾನ, 60 ಗಂಬದ ಗುಡಿ, ಚೋರ್ ಗುಮಜ್, ಮುಂತಾದ ಪ್ರೇಕ್ಷಣೀಯ ಸ್ಥಳಗಳು ಇಲ್ಲಿವೆ.

ರಾಷ್ಟ್ರಕೂಟರು, ಚಾಲುಕ್ಯರು, ಕಳಚೂರಿ ಅರಸರು, ದೇವಗಿರಿಯ ಯಾದವರು, ದ್ವಾರಸಮುದ್ರದ ಹೊಯ್ಸಳರು, ವಾರಂಗಲ್ಲಿನ ಕಾಕತೀಯರು, ಬಹಮನಿ ಸುಲ್ತಾನರು, ಮೊಘಲರು ಹೀಗೆ ಇತಿಹಾಸದಲ್ಲಿ ಅನೇಕ ರಾಜ್ಯರ ಆಳ್ವಿಕೆಗೆ ಒಳಪಟ್ಟ ಗುಲ್ಬರ್ಗಾ, ಸ್ವಾತಂತ್ರ್ಯ ನಂತರವೂ ಹೈದರಾಬಾದ್ ಸಂಸ್ಥಾನದ ಅಧೀನದಲ್ಲಿತ್ತು. 1948ರ ಸೆಪ್ಟೆಂಬರ್‌ನಲ್ಲಿ ಭಾರತ ಗಣರಾಜ್ಯಕ್ಕೆ ಸೇರ್ಪಡೆಯಾಯಿತು.

Advertisements

ಕಲಬುರಗಿ ವಿಶೇಷ

  • ಕಲಬುರಗಿಯಲ್ಲಿ (ಕಲಬುರ್ಗಿಯಲ್ಲಿ) ಸನ್ನತಿ ಎಂಬ ಸ್ಥಳವಿದೆ.
  • ಕಲಬುರಗಿಯಲ್ಲಿ ಭೀಮ ಮತ್ತು ಕೃಷ್ಣಾ ನದಿಯು ಹರಿಯುತಿದೆ.
  • ಸನ್ನತಿಯು ಭೀಮಾ ನದಿಯ ದಂಡೆಯ ಮೇಲಿದೆ.
  • ಸನ್ನತಿಯಲ್ಲಿ ಬೌದ್ದರ ಸ್ಮಾರಕಗಳು ಇವೆ.
  • ಸನ್ನತಿಯಲ್ಲಿ ಮೌರ್ಯ ಅರಸ ಅಶೋಕನ ಶಾಸನಗಳಿವೆ.
  • ಕರ್ನಾಟಕದಲ್ಲಿ ಅತೀ ಹೆಚ್ಚು ಸುಣ್ಣದ ಕಲ್ಲಿನ ನಿಕ್ಷೇಪವನ್ನು ಹೊಂದಿದೆ.
  • ಕರ್ನಾಟಕದಲ್ಲಿ ಅತೀ ಹೆಚ್ಚು ತೊಗರಿ ಬೆಳೆಯುವ ಜಿಲ್ಲೆಯಾಗಿದೆ.
  • ಕರ್ನಾಟಕದಲ್ಲಿ ಪ್ರತಿ ಕುಟುಂಬದ ಬ್ಯಾಂಕ್ ಖಾತೆ ಹೊಂದಿದ ಮೊದಲ ಜಿಲ್ಲೆ.
  • ಬಹಮನಿ ಸುಲ್ತಾನರ ಮೊದಲ ರಾಜಧಾನಿ ಆಗಿತ್ತು.
  • 85 ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿದೆ
  • ಕರ್ನಾಟಕದಲ್ಲಿ ಅತೀ ಹೆಚ್ಚು ಸಿಮೆಂಟ್ ಉತ್ಪಾದನೆ ಮಾಡುವ ಜಿಲ್ಲೆ ಕಲಬುರಗಿ.
  • ಕಲಬುರಗಿ ಜಿಲ್ಲೆಯ ಚಿಂಚೋಳ್ಳಿಯಲ್ಲಿ ಹೊಸ ಭೂಕಂಪನ ಮಾಪನ ಕೇಂದ್ರ ಸ್ಥಾಪಿಸಲಾಗಿದೆ.
  • ಮರೆತುರು ಎಂಬಲ್ಲಿ ವಿಜ್ಞಾನೇಶ್ವರ ಸ್ಮಾರಕವಿದೆ.
  • ದಕ್ಷಿಣ ಭಾರತದ ಎರಡನೇ ಅತೀ ದೊಡ್ಡ ಮಸೀದಿ ಮತ್ತು ಕರ್ನಾಟಕದ ಅತೀ ದೊಡ್ಡ ಮಸೀದಿ ಎಂದು ಕರೆಸಿಕೊಂಡ ಜಾಮೀ ಮಸೀದಿ ಕಲಬುರಗಿ ಜಿಲ್ಲೆಯಲ್ಲಿದೆ.
ಜಾಮೀ ಮಸೀದಿ
ಜಾಮೀ ಮಸೀದಿ
  • ಕಲಬುರಗಿಯಲ್ಲಿ ಹೈಕೋರ್ಟನ ಸಂಚಾರಿ ಪೀಠವನ್ನು 2008 ಜುಲೈ 5 ರಂದು ಸ್ಥಾಪಿಸಿದ್ದಾರೆ.
  • ಕರ್ನಾಟಕದಲ್ಲಿ ಮೊದಲು ದೂರದರ್ಶನ ಬಂದಿದ್ದು ಕಲಬುರಗಿ ಜಿಲ್ಲೆಯಲ್ಲಿ

ತೊಗರಿ ಕಣಜ
ಇಲ್ಲಿರುವ ಎರಡು ಮುಖ್ಯ ನದಿಗಳೆ೦ದರೆ ಕೃಷ್ಣಾ ಮತ್ತು ಭೀಮಾ. ಕೃಷ್ಣಾ ಮೇಲ್ದಂಡೆ ಯೋಜನೆ ಇಲ್ಲಿನ ಕೃಷಿ ಯೋಜನೆಗಳಲ್ಲಿ ಮುಖ್ಯವಾದದ್ದು. ಕೃಷಿಯ ದೃಷ್ಟಿಯಿ೦ದ, ಕಲಬುರಗಿ ಜಿಲ್ಲೆಯ ಮಣ್ಣು ಕಪ್ಪು ಮಣ್ಣಾಗಿದ್ದು ಇಲ್ಲಿನ ಮುಖ್ಯ ಬೆಳೆಗಳು ಜೋಳ, ತೊಗರಿ, ನೆಲಗಡಲೆ, ಅಕ್ಕಿ ಮತ್ತು ಬೇಳೆಗಳು. ಈ ಜಿಲ್ಲೆಯನ್ನು ತೊಗರಿ ಕಣಜ ಎಂದೇ ಕರೆಯುತ್ತಾರೆ

ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರ ಕಲಬುರಗಿಯಲ್ಲಿ ಮೇ 7ರಂದು ಮತದಾನ ನಡೆಯಲ್ಲಿದ್ದು ಜೂನ್ 4ರಂದು ಮತ ಎಣಿಕೆ ನಡೆಯಲಿದೆ. ಇದಕ್ಕಾಗಿ ಪಕ್ಷಗಳು ಭರ್ಜರಿ ತಯಾರಿ ನಡೆಸಿವೆ. ಬಿಜೆಪಿಯಿಂದ ಈಗಾಗಲೇ ಡಾ.ಉಮೇಶ್ ಜಾದವ್ ಅವರಿಗೆ ಎರಡನೇ ಬಾರಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ. ಕಾಂಗ್ರೆಸ್‌ನಿಂದ ಡಾ. ರಾಧಾಕೃಷ್ಣ ಅವರು ಅಭ್ಯರ್ಥಿಯಾಗಿದ್ದಾರೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ತವರು ಕಲಬುರಗಿ ಸ್ವಾತಂತ್ರ್ಯ ನಂತರದಲ್ಲಿ ನಾಲ್ಕು ದಶಕಗಳ ಕಾಲ ಕಾಂಗ್ರೆಸ್ ತೆಕ್ಕೆಯಲ್ಲಿತ್ತು. 1996ರಲ್ಲಿ ಅಭೇದ್ಯ ಕೋಟೆ ಎನಿಸಿದ್ದ ಕ್ಷೇತ್ರದಲ್ಲಿ ಕಾಂಗ್ರೆಸ್ ಪಾರುಪತ್ಯಕ್ಕೆ ಬ್ರೇಕ್ ಹಾಕಿದ್ದು ಜನತಾದಳದ ಖಮರುಲ್ ಇಸ್ಲಾಂ.

ಇದಾದ ಬಳಿಕ ಒಮ್ಮೆ ಬಿಜೆಪಿ ಕೂಡ ಕ್ಷೇತ್ರದಲ್ಲಿ ಜಯ ಸಾಧಿಸಿದೆ. ಮತ್ತೆ ಈ ಕ್ಷೇತ್ರ ಎರಡು ದಶಕಗಳ ಕಾಲ ಕಾಂಗ್ರೆಸ್‌ ಕೈ ಸೇರಿತು. ಈಗ ಬಿಜೆಪಿ ಹಿಡಿತಕ್ಕೆ ಸಿಕ್ಕಿದೆ. ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಧರಂ ಸಿಂಗ್ ಮತ್ತು ವೀರೇಂದ್ರ ಪಾಟೀಲ್ ಕೂಡ ಈ ಕ್ಷೇತ್ರದಿಂದಲೇ ಲೋಕಸಭೆಗೆ ಆಯ್ಕೆಯಾಗಿದ್ದರು. ಎಂ. ಯಶವಂತಪ್ಪ, ಬಿ.ಜಿ. ಜವಳಿ, ಇಕ್ಬಾಲ್ ಅಹಮ್ಮದ್ ಸರಡಗಿ ಮತ್ತು ಮಲ್ಲಿಕಾರ್ಜುನ ಖರ್ಗೆ ಈ ಕ್ಷೇತ್ರದಿಂದ ಸಂಸತ್ ಪ್ರವೇಶಿಸಿದ್ದಾರೆ.

ವಿಧಾನಸಭೆ ಕ್ಷೇತ್ರಗಳು

ಕಲಬುರಗಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಅಫಜಲಪೂರ, ಜೇವರ್ಗಿ, ಚಿತ್ತಾಪೂರ(SC) ಕಲಬುರಗಿ ದಕ್ಷಿಣ, ಕಲಬುರಗಿ ಉತ್ತರ, ಕಲಬುರಗಿ ಗ್ರಾಮಾಂತರ(SC),ಸೇಡಂ ಮತ್ತು ಗುರುಮಿಠಕಲ್ ವಿಧಾನ ಕ್ಷೇತ್ರಗಳು ಬರುತ್ತವೆ. ಆದರೆ ಜಿಲ್ಲೆಯ ಆಳಂದ ಮತ್ತು ಚಿಂಚೋಳಿ ವಿಧಾನಸಭಾ ಕ್ಷೇತ್ರಗಳು ಬೀದರ್ ಲೋಕಸಭಾ ಕ್ಷೇತ್ರಕ್ಕೆ ಒಳಪಡುತ್ತವೆ.

ಮತದಾರರ ಸಂಖ್ಯೆ

2024 ಲೋಕಸಭಾ ಚುನಾವಣೆ ಕ್ಷೇತ್ರದ ಒಟ್ಟು ಮತದರರು 22,68,944 ಮತದಾರರು ಮತ್ತು ಚಲಾಯಿಸಲು ಅರ್ಹರಿದ್ದಾರೆ. 11,43,159 ಪುರುಷರು ಮತ್ತು 11,25,463 ಮಹಿಳೆಯರು, ಇತರೆ 322 ಸೇರಿ ಕ್ಷೇತ್ರದಲ್ಲಿ ಲಿಂಗಾಯತರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿರುವ ಲಿಂಗಾಯತರು ನಿರ್ಣಾಯಕರಾಗಿದ್ದಾರೆ. ಜೊತೆಗೆ ಮುಸ್ಲಿಂ, ಪ.ಜಾತಿ, ಪ.ಪಂಗಡ, ಲಂಬಾಣಿ, ಕಬ್ಬಲಿಗ, ಕುರುಬ ಸಮುದಾಯ ಸೇರಿದಂತೆ ಇತರೆ ಸಮುದಾಯದ ಮತದಾರರಿದ್ದಾರೆ.

ಏಪ್ರಿಲ್ 12ರಂದು ಚುನಾವಣಾ ಅಧಿಸೂಚನೆ ಹೊರಡಿಸಲಾಗುತ್ತದೆ. ಏಪ್ರಿಲ್ 19ರ ವರೆಗೆ ನಾಮಪತ್ರ ಸಲ್ಲಿಸಲು ಅವಕಾಶವಿದ್ದು, ಏಪ್ರಿಲ್ 20ಕ್ಕೆ ನಾಮಪತ್ರ ಪರಿಶೀಲನಾ ಕಾರ್ಯ ನಡೆಯಲಿದೆ. ಏಪ್ರಿಲ್ 22ಕ್ಕೆ ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದೆ. ಮೇ 7ಕ್ಕೆ ಮತದಾನ ಮತ್ತು ಜೂನ್ 4ಕ್ಕೆ ಮತ ಎಣಿಕೆ ನಡೆದು ಅಂದೇ ಫಲಿತಾಂಶ ಹೊರಬೀಳಲಿದೆ. ಒಟ್ಟಾರೆಯಾಗಿ ಜೂನ್ 6 ರೊಳಗೆ ಎಲ್ಲಾ ಚುನಾವಣಾ ಪ್ರಕ್ರಿಯೆ ಮುಗಿಯಲಿದೆ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ತಿಳಿಸಿದ್ದಾರೆ.

ಖರ್ಗೆ 1
ಮಲ್ಲಿಕಾರ್ಜುನ ಖರ್ಗೆ ಮತ್ತು ಡಾ ಉಮೇಶ್‌ ಜಾಧವ್

2019ರ ಲೋಕಸಭಾ ಚುನಾವಣೆ

ಕಲಬುರಗಿ ಕರ್ನಾಟಕ ಲೋಕಸಭಾ ಕ್ಷೇತ್ರವು ಭಾರತದ ರಾಜಕಾರಣದಲ್ಲಿ ಹೆಸರುವಾಸಿಯಾದ ರಾಜಕೀಯ ಶಕ್ತಿ ಕೇಂದ್ರವಾಗಿದೆ. ಕಲಬುರಗಿ ವೈವಿಧ್ಯಮಯ ಜನಸಮುದಾಯವನ್ನು ಪ್ರತಿಬಿಂಬಿಸುತ್ತದೆ ಮತ್ತು ಕರ್ನಾಟಕ ನಿರ್ಣಾಯಕ ಕ್ಷೇತ್ರವಾಗಿ ಉಳಿದಿದೆ. ಈ ಕ್ಷೇತ್ರದಲ್ಲಿ 2019 ವರ್ಷದಲ್ಲಿ 60.89 ಮತದಾನವಾಗಿದೆ. ಈಗ 2024 ನಲ್ಲಿ, ಮತದಾರರು ತಮ್ಮ ಮತದ ಶಕ್ತಿಯನ್ನು ತೋರಿಸಲು ಇನ್ನಷ್ಟು ಉತ್ಸುಕರಾಗಿದ್ದಾರೆ.

ಕ್ಷೇತ್ರ : ಕಲಬುರಗಿ

ಅಸೆಂಬ್ಲಿ ಕ್ಷೇತ್ರಗಳ ಸಂಖ್ಯೆ : 08

ಕಳೆದ ಲೋಕಸಭಾ ಚುನಾವಣೆ 2019ರಲ್ಲಿ ಮತದಾರರ ಸಂಖ್ಯೆ =19,00,000 ಲಕ್ಷ

ಸ್ಪರ್ಧಿ: ಡಾ.ಉಮೇಶ ಜಾದವ್-ಬಿಜೆಪಿ

ಪಡೆದ ಮತಗಳು : 6,20,192

ಸ್ಪರ್ಧಿ : ಮಲ್ಲಿಕಾರ್ಜುನ ಖರ್ಗೆ-ಕಾಂಗ್ರೆಸ್‌

ಪಡೆದ ಮತಗಳು : 5,24,740 ಮತಗಳು

ಮತದ ಅಂತರ : 95,452

ಒಟ್ಟು ಚಲಾವಣೆಯಾದ ಮತ : 11,89,361

ಬಿಜೆಪಿ ಸ್ಪರ್ಧಿ ಡಾ.ಉಮೇಶ ಜಾಧವ

2019ರ ಲೋಕಸಭಾ ಚುನಾವಣೆಯಲ್ಲಿ ಮೋದಿ ಅಲೆಯಿಂದ ಕಾಂಗ್ರೆಸ್ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ವಿರುದ್ಧ ಸ್ಪರ್ಧಿಸಿ 95,452 ಮತಗಳ ಅಂತರದಿಂದ ಗೆಲುವು ಸಾಧಿಸಿ ಸಂಸದರಾಗಿ ಆಯ್ಕೆಯಾಗಿದ್ದ ಡಾ.ಉಮೇಶ ಜಾಧವ ಅವರಿಗೆ ಮತ್ತೆ ಬಿಜೆಪಿ ಟಿಕೆಟ್ ಘೋಷಿಸಿದೆ. ವೃತ್ತಿಯಲ್ಲಿ ವೈದ್ಯರಾಗಿರುವ ಡಾ.ಉಮೇಶ ಜಾಧವ ಅವರು ಸಂಸದರಾದ ಮೇಲೆ ಕಾಣೆಯಾಗಿದ್ದಾರೆ. ಹಳ್ಳಿ ಜನರಿಗೆ ಸಂಸದ ಯಾರೆಂದೇ ಗೊತ್ತಿಲ್ಲ ಎಂದು ವಿವಿಧ ಹಳ್ಳಿಯ ಗ್ರಾಮಸ್ಥರು ಹೇಳುತ್ತಾರೆ.

ಅಭಿವೃದ್ಧಿ ಕೆಲಸಗಳಂತು ಮಾಡೇ ಇಲ್ಲ

ಸಂಸದ ಡಾ.ಜಾಧವ್‌ ತಾನು ದಲಿತ ಎಂಬುವುದೇ ಮರೆತಿದ್ದಾರೆ. ಇನ್ನು ಸಂಸತ್‌ನಲ್ಲಿ ದಲಿತರ ಪರವಾಗಿ ಧ್ವನಿ ಎತ್ತಿದು ನೋಡೇ ಇಲ್ಲ ಎಂದು ದಲಿತ ಮುಖಂಡ ಮರೆಪ್ಪ ಹಳ್ಳಿ ದಲಿತ ಸಂಘರ್ಷ ಸಮಿತಿ ಸಂಘಟನಾ ರಾಜ್ಯ ಸಂಚಾಲಕರು ತಿಳಿಸಿದರು.

ಆದರೆ, ಬಿಜೆಪಿ ಪಕ್ಷದಿಂದ ಎರಡನೇ ಬಾರಿಗೆ ಸ್ಪರ್ಧಿಸಲು ಟಿಕೆಟ್‌ ಪಡೆದುಕೊಂಡಿದ್ದಾರೆ ಈ ಬಾರಿ ಮೋದಿ ಮಾಡಿರುವ ಚುನಾವಣಾ ಬಾಂಡ್‌ ಹಗರಣದ ಹಲವು ಅಂಶಗಳು ಬಹಿರಂಗಗೊಂಡಿವೆ. ಆರೋಗ್ಯ ಸಂಸ್ಥೆಗಳೂ ಸೇರಿದಂತೆ ಪ್ರಮುಖ 21 ಕಂಪನಿಗಳು, ತಮ್ಮ ಮೇಲೆ ನಡೆದ ತನಿಖಾ ಸಂಸ್ಥೆಗಳ ದಾಳಿಯ ಬಳಿಕ ಬಾಂಡ್‌ಗಳನ್ನಹ ಖರೀದಿಸಿವೆ, ಈ ಎಲ್ಲ ಬಾಂಡ್‌ಗಳು ತನಿಖಾ ಸಂಸ್ಥೆಗಳನ್ನು ತನ್ನ ಕಪಿಮುಷ್ಠಯಲ್ಲಿ ಇಟ್ಟುಕೊಂಡಿರುವ ಕೇಂದ್ರದ ಆಡಳಿತಾರೂಢ ಬಿಜೆಪಿ ಪಾಲಾಗಿವೆ ಎಂದು ಚರ್ಚೆಯಾಗುತ್ತಿದೆ
ಇಡಿ/ಐಟಿ/ಸಿಬಿಐ ದಾಳಿ ಬಳಿಕ ಬಾಂಡ್ ಖರೀದಿಸಿದ ಕಂಪನಿಗಳ ಪಟ್ಟಿಗಳ ಬಹಿರಂಗದ ಬಳಿಕ ಜನರು ಮತ್ತೆ  ಗೆಲ್ಲಿಸುತ್ತಾರಾ ಜಾಧವ್ ಅವರನ್ನ ಕಾದು ನೋಡಬೇಕಿದೆ.

ಕಲಬುರಗಿ ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿಯಾಗಿ ರಾಧಾಕೃಷ್ಣ ಟಿಕೆಟ್

ಶಿಕ್ಷಣ ಸಂಸ್ಥೆಗಳನ್ನೂ ನಿರ್ವಹಿಸುತ್ತಿರುವ ಉದ್ಯಮಿ ಡಾ. ರಾಧಾಕೃಷ್ಣ ದೊಡ್ಡಮನಿ ಕಲಬುರಗಿ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕಿಳ್ಳಿಯಲ್ಲಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಸ್ಪರ್ಧಿಸಿದರೆ ಭರ್ಜರಿ ಗೆಲುವು ಖಚಿತ ಎಂಬುದು ಖರ್ಗೆ ಅಭಿಮಾನಿಗಳ ನಂಬಿಕೆಯಾಗಿದೆ. ಖರ್ಗೆ ಅವರು ಲೋಕಸಭಾ ಅಭ್ಯರ್ಥಿಯಾಗಿ ನಿಲ್ಲಬೇಕು ಎಂಬುವುದು ಅಭಿಮಾನಿಗಳ ಅಭಿಲಾಷೆ ಆಗಿತ್ತು. ಹಿಂದೆ 1972 ಮತ್ತು 2004ರ ನಡುವೆ ಖರ್ಗೆ ಅವರು ಸತತವಾಗಿ ಪ್ರತಿನಿಧಿಸುತ್ತಿದ್ದ ಗುರಮಿಠಕಲ್ ವಿಧಾನಸಭಾ ಕ್ಷೇತ್ರದಲ್ಲಿ ರಾಧಾಕೃಷ್ಣ ಅವರು  ಜನಪ್ರಿಯರಾಗಿದ್ದಾರೆ ಎಂದು ಹೇಳಲಾಗುತ್ತದೆ.

ಡಾ ರಾಧಾಕೃಷ್ಣ
ಡಾ ರಾಧಾಕೃಷ್ಣ ದೊಡ್ಡಮನಿ

ಕಲಬುರಗಿ ಸಮಸ್ಯೆ
ಉದ್ಯಮದ ದೃಷ್ಟಿಯಿ೦ದ ಕಲಬುರಗಿ ಹಿಂದುಳಿದ ಜಿಲ್ಲೆ. ಶಹಾಬಾದ್, ವಾಡಿ, ಮಲಖೇಡ್ ಗಳಲ್ಲಿ ಸಿಮೆಂಟ್ ಉದ್ಯಮಗಳಿವೆ. ಜಿಲ್ಲೆಯಾದ್ಯಂತ ದಾಲ್ ಮಿಲ್ ಗಳು ಇವೆ. ಆದರೆ ಹಳೆಯ ತಂತ್ರಜ್ಞಾನ ಮತ್ತು ಪದ್ದತಿಯನ್ನು ಬಳಸುತ್ತಿರುವುದರಿಂದ ಅನೇಕ ದಾಲ್‌ಮಿಲ್‌ಗಳು ನಷ್ಟದಲ್ಲಿವೆ. ನೌಕರರ ಸಮಸ್ಯೆಯಿಂದಾಗಿ ಹಲವಾರು ಉದ್ಯಮಗಳು ಬಂದಾಗಿವೆ. ಖಾಸಗಿ ಕ್ಷೇತ್ರದ ಎಂಜಿನಿಯರಿಂಗ್, ವೈದಕೀಯ, ನರ್ಸಿಂಗ್, ಪಾಲಿಟೆಕ್ನಿಕ್ ಕಾಲೇಜು, ಮ್ಯಾನೇಜ್ ಮೆಂಟ್ ಕಾಲೇಜುಗಳು ಮತ್ತು ಕಾನ್ವೆಂಟ್ ಶಾಲೆಗಳಿವೆ. ರಾಜ್ಯ ಸರ್ಕಾರ, ಕಲಬುರಗಿಯಲ್ಲಿ ಐಟಿ ಪಾರ್ಕ್ ಸ್ಥಾಪಿಸುವುದಾಗಿ ಹೇಳಿದೆ. ಕಲಬುರಗಿ-ಬೀದರ್ ರೈಲು ಮಾರ್ಗವಾದರೆ, ಬೆಂಗಳೂರು-ದೆಹಲಿ ಪ್ರಯಾಣದಲ್ಲಿ ಹಲವಾರು ಗಂಟೆಗಳ ಉಳಿತಾಯವಾಗುವುದು ಮತ್ತು ಕಲಬುರಗಿ-ಬೀದರ ಅಭಿವೃದ್ಧಿಯಾಗುವುದು. ಆದರೆ ಕಳೆದ ಐದು ದಶಕಗಳಿಂದ ಈ ಬೇಡಿಕೆ ಹಾಗೆಯೇ ಉಳಿದಿದೆ.

ಗೀತಾ ಹೊಸಮನಿ
ಗೀತಾ ಹೊಸಮನಿ
+ posts

ಯಾದಗಿರಿ, ಕಲಬುರಗಿ ಜಿಲ್ಲಾ ಸಂಯೋಜಕರು, NCCಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ(NRAI ಫೈರಿಂಗ್ ವಿಭಾಗ) ವಿಜೇತೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಗೀತಾ ಹೊಸಮನಿ
ಗೀತಾ ಹೊಸಮನಿ
ಯಾದಗಿರಿ, ಕಲಬುರಗಿ ಜಿಲ್ಲಾ ಸಂಯೋಜಕರು, NCCಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ(NRAI ಫೈರಿಂಗ್ ವಿಭಾಗ) ವಿಜೇತೆ.

1 COMMENT

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

2029ರ ಚುನಾವಣೆಯಲ್ಲಿ ರಾಹುಲ್ ಗಾಂಧಿ ಇಂಡಿಯಾ ಒಕ್ಕೂಟದ ಪ್ರಧಾನಿ ಅಭ್ಯರ್ಥಿ: ತೇಜಸ್ವಿ ಯಾದವ್

2029ರ ಲೋಕಸಭೆ ಚುನಾವಣೆಯಲ್ಲಿ ಸದ್ಯ ಲೋಕಸಭೆ ವಿಪಕ್ಷ ನಾಯಕರಾಗಿರುವ ರಾಹುಲ್ ಗಾಂಧಿ...

ಸಾರ್ವಜನಿಕ ಸಭೆಯಲ್ಲಿ ದೆಹಲಿ ಸಿಎಂ ರೇಖಾ ಗುಪ್ತಾ ಮೇಲೆ ಹಲ್ಲೆ; ಆಸ್ಪತ್ರೆಗೆ ದಾಖಲು

ಬುಧವಾರ(ಆಗಸ್ಟ್ 20) ಬೆಳಿಗ್ಗೆ ತಮ್ಮ ನಿವಾಸದಲ್ಲಿ ನಡೆದ ಸಾರ್ವಜನಿಕ ವಿಚಾರಣೆಯ ಸಂದರ್ಭದಲ್ಲಿ...

ಅರಸು ಪತ್ರಕರ್ತರನ್ನು ಹಚ್ಚಿಕೊಳ್ಳಲೂ ಇಲ್ಲ, ಓಲೈಸಲೂ ಇಲ್ಲ: ಕಲ್ಲೆ ಶಿವೋತ್ತಮರಾವ್

2025-26ನೇ ಸಾಲಿನ ಡಿ.ದೇವರಾಜ ಅರಸು ಪ್ರಶಸ್ತಿಗೆ ಹಿರಿಯ ಪತ್ರಕರ್ತ ಕಲ್ಲೆ ಶಿವೋತ್ತಮರಾವ್...

ದಾವಣಗೆರೆ | ಕೆ.ಎನ್‌. ರಾಜಣ್ಣ, ನಾಗೇಂದ್ರರ ಮರಳಿ ಸಂಪುಟ ಸೇರ್ಪಡೆಗೆ ವಾಲ್ಮೀಕಿ ಸಮಾಜ ಆಗ್ರಹ

"ಇತ್ತೀಚೆಗೆ ಚುನಾವಣೆ ಆಯೋಗದ ವಿರುದ್ಧ ಕಾಂಗ್ರೆಸ್ ಆರೋಪಕ್ಕೆ ವ್ಯತಿರಿಕ್ತ ಹೇಳಿಕೆ ನೀಡಿ...

Download Eedina App Android / iOS

X