ಮಂಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ನಟಿ ಕಂಗನಾ ರಣಾವತ್ ಅವರಿಗೆ ಸ್ಥಳೀಯ ಜನರು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಸೋಮವಾರ ಲಾಹೌಲ್ ಮತ್ತು ಸ್ಪಿತಿಯ ಕಾಜಾದಲ್ಲಿ ಕಪ್ಪು ಬಾವುಟ ಪ್ರದರ್ಶಿಸಿದರು. ನಟಿಯ ವಾಹನದ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ ಎಂದು ಹಿಮಾಚಲ ಪ್ರದೇಶ ಬಿಜೆಪಿ ಆರೋಪಿಸಿದೆ.
BIG BREAKING ⚡
Kangana Ranaut welcomed with black flags & ‘Kangana Go Back’ slogans by locals in Lahaul & Spiti
This is the BIGGEST EXIT POLL 🔥🔥🔥#INDIASarkarComingSoon #Phase5 pic.twitter.com/N3acGaTmJD
— Ankit Mayank (@mr_mayank) May 20, 2024
ಕಾಂಗ್ರೆಸ್ ಕಾರ್ಯಕರ್ತರು ಕಂಗನಾ ವಿರುದ್ಧ”ಕಂಗನಾ, ಗೋ ಬ್ಯಾಕ್, ಕಂಗನಾ ವಂಗನಾ ನಹಿಂ ಚಲೇಗಿ” (ಕಂಗನಾ ಹಿಂದಿರುಗಿ ಹೋಗಿ, ಕಂಗನಾ ವಂಗನಾ ಇಲ್ಲಿ ನಡೆಯಲ್ಲ) ಎಂದು ಘೋಷಣೆಗಳನ್ನು ಕೂಗಿದ್ದಾರೆ.
ಇದನ್ನು ಓದಿದ್ದೀರಾ? ತೇಜಸ್ವಿ ಸೂರ್ಯ ಒಬ್ಬ ಗೂಂಡಾ, ಮೀನು ತಿನ್ನುತ್ತಾನೆ ಎಂದ ಕಂಗನಾ ರನೌತ್: ವಿಡಿಯೋ ವೈರಲ್
ಪ್ರಮುಖವಾಗಿ ಸ್ಥಳೀಯರು ಕಳೆದ ವರ್ಷ ಏಪ್ರಿಲ್‌ನಲ್ಲಿ ಟಿಬೆಟಿಯನ್ ಆಧ್ಯಾತ್ಮಿಕ ನಾಯಕ ದಲೈ ಲಾಮಾ ಅವರ ಬಗ್ಗೆ ಕಂಗನಾ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಿಮಾಚಲ ಪ್ರದೇಶ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಜೈ ರಾಮ್ ಠಾಕೂರ್, ರಣಾವತ್ ಅವರೊಂದಿಗೆ ಬಿಜೆಪಿ ಪರ ಪ್ರಚಾರ ಮಾಡಲು ಕಾಜಾಗೆ ತೆರಳಿದ್ದರು.
ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಯ ಸಭೆಗೆ ಅಡ್ಡಿಪಡಿಸಲು ಪ್ರಯತ್ನಿಸಿದ್ದಾರೆ ಮತ್ತು ವಾಹನಗಳ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.